ಅಕ್ಟೋಬರ್ ತಿಂಗಳ ಭವಿಷ್ಯ: ವಾಹನ ಖರೀದಿಸುವ ಕನಸು ನನಸಾಗುತ್ತೆ, ಅವಿವಾಹಿತರಿಗೆ ಸಿಹಿ ಸುದ್ದಿ ಇರುತ್ತೆ-october horoscope 2024 astrology prediction for aries to pisces kundali news in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅಕ್ಟೋಬರ್ ತಿಂಗಳ ಭವಿಷ್ಯ: ವಾಹನ ಖರೀದಿಸುವ ಕನಸು ನನಸಾಗುತ್ತೆ, ಅವಿವಾಹಿತರಿಗೆ ಸಿಹಿ ಸುದ್ದಿ ಇರುತ್ತೆ

ಅಕ್ಟೋಬರ್ ತಿಂಗಳ ಭವಿಷ್ಯ: ವಾಹನ ಖರೀದಿಸುವ ಕನಸು ನನಸಾಗುತ್ತೆ, ಅವಿವಾಹಿತರಿಗೆ ಸಿಹಿ ಸುದ್ದಿ ಇರುತ್ತೆ

ಅಕ್ಟೋಬರ್ ತಿಂಗಳು ಭವಿಷ್ಯ 2024: ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಈ ತಿಂಗಳ ಜ್ಯೋತಿಷ್ಯ ಭವಿಷ್ಯದಲ್ಲಿ ಉತ್ತಮ ಫಲಗಳಿವೆ. ಆದರೆ ಕೆಲವೇ ಕೆಲವು ರಾಶಿಯವರಿಗೆ ಮಾತ್ರ ಸವಾಲುಗಳಿರುತ್ತವೆ. ಮೇಷದಿಂದ ಮೀನದವರಿಗೆ ಎಲ್ಲಾ ರಾಶಿಯವರಿಗೆ ಅಕ್ಟೋಬರ್ ತಿಂಗಳ ಭವಿಷ್ಯ ಇಲ್ಲಿದೆ.

ದ್ವಾದಶ ರಾಶಿಗಳ 2024ರ ಅಕ್ಟೋಬರ್ ತಿಂಗಳ ಭವಿಷ್ಯ
ದ್ವಾದಶ ರಾಶಿಗಳ 2024ರ ಅಕ್ಟೋಬರ್ ತಿಂಗಳ ಭವಿಷ್ಯ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ಅಕ್ಟೋಬರ್‌ನಲ್ಲಿ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ಅಕ್ಟೋಬರ್ ತಿಂಗಳ ಭವಿಷ್ಯ ಹೀಗಿದೆ.

ಮೇಷ ರಾಶಿ
ಅಕ್ಟೋಬರ್ ತಿಂಗಳಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ, ಆದರೆ ಹೂಡಿಕೆಗಳ ಬಗ್ಗೆ ಜಾಗರೂಕರಾಗಿರಬೇಕು. ರಿಯಲ್ ಎಸ್ಟೇಟ್, ಕಾರು ಖರೀದಿಗಳು ಅಥವಾ ಸ್ಟಾಕ್‌ಗಳನ್ನು ಒಳಗೂಂಡ ಯಾವುದೇ ಇತರ ನಿರ್ಧಾರಕ್ಕೆ ಬಂದಾಗ, ಎಲ್ಲಾ ದಾಖಲೆಗಳು ಮತ್ತು ಒಪ್ಪಂದಗಳನ್ನು ಎಚ್ಚರಿಕೆಯಿಂದ ಪರಿಶಿಲೀಸಿ. ಅವಿವಾಹಿತರಿಗೆ ಸಿಹಿ ಸುದ್ದಿ ಇರುತ್ತೆ, ಕೆಲವರಿಗೆ ಮದುವೆ ನಿಶ್ಚಯವಾಗುತ್ತೆ. ನಿಮ್ಮ ಜೀವನದಲ್ಲಿ ಸ್ವೀಕರಿಸುವುದನ್ನು ಕಲಿಯಿರಿ. ನಿಮ್ಮ ವೃತ್ತಿಜೀವನದಲ್ಲಿ ಹೊಸ ಬಾಗಿಲು ತೆರೆಯುತ್ತೆ.

ವೃಷಭ ರಾಶಿ
ಕೆಲಸದಲ್ಲಿ ತುಂಬಾ ಶ್ರಮವನ್ನು ಹಾಕುತ್ತೀರಿ, ತಿಂಗಳ ಕೊನೆಯಲ್ಲಿ ಕೆಲವು ಉದ್ಯೋಗಾವಕಾಶಗಳು ಹೊರಹೊಮ್ಮುವುದನ್ನು ನೀಡುತ್ತೀರಿ. ಉದ್ಯೋಗದಲ್ಲಿರುವವರಿಗೆ ಅಕ್ಟೋಬರ್ ತಿಂಗಳಲ್ಲಿ ಸ್ವಲ್ಪ ಒತ್ತಡ ಜಾಸ್ತಿ ಇರುತ್ತೆ. ನಿಮ್ಮ ವಿಶ್ವಾಸಾರ್ಹತೆ ಮತ್ತು ಕೌಶಲ್ಯ ಪ್ರದರ್ಶಿಸಲು ಉತ್ತಮ ಸಮಯ, ಏಕೆಂದರೆ ನಿಮ್ಮ ಕೆಲಸದ ಹೊರೆಯನ್ನು ನೀವು ಹೇಗೆ ನಿರ್ವಹಿಸುತ್ತೀರಿ ಎಂಬುದನ್ನು ಮೇಲ್ವಿಚಾರಕರು ಗಮನಿಸುತ್ತಾರೆ. ಸಂಬಂಧಗಳು ಸಣ್ಣ ಸಮಸ್ಯೆಗಳು ಇರುತ್ತವೆ. ಕುಟುಂಬದ ಸಂತೋಷಕ್ಕಾಗಿ ಪ್ರಯತ್ನಿಸುತ್ತೀರಿ.

ಮಿಥುನ ರಾಶಿ

ಈ ತಿಂಗಳು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ಮನೆ ಅಥವಾ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತೀರಿ. ಅಗತ್ಯವಾದ ಸಂಶೋಧನೆ ಮಾಡುತ್ತೀರಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಈ ತಿಂಗಳು ನಿಮಗೆ ಅಪಾಯಕಾರಿಯಾಗಬಹುದು, ಆದ್ದರಿಂದ ಎಚ್ಚರಿಕೆಯಿಂದ ಹೆಜ್ಜೆ ಹಾಕಿ. ಕುಟುಂಬ ಸಂಬಂಧಗಳು ಉತ್ತಮವಾಗಿರುತ್ತವೆ. ಮಕ್ಕಳು ಅಥವಾ ಇತರ ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ. ಪೋಷಕರು ಮತ್ತು ಒಡಹುಟ್ಟಿದವರೊಂದಿಗೆ ಸಂಬಂಧ ಸುಧಾರಿಸುತ್ತೆ.

ಕಟಕ ರಾಶಿ

ವೃತ್ತಿಜೀವನದ ದೃಷ್ಟಿಕೋನದಿಂದ, ಈ ತಿಂಗಳು ಸ್ವಲ್ಪ ಸವಾಲುಗಳು ಎದುರಾಗುತ್ತವೆ. ವೈಯಕ್ತಿಕ ಸಮಸ್ಯೆಗಳನ್ನು ಎದುರಿಸಲು ಹೆಚ್ಚು ಒಲವು ತೋರುತ್ತೀರಿ. ಒತ್ತಡದ ಕೆಲಸಗಳಿಗಿಂತ ಸಮಂಜಸವಾದ ಕೆಲಸದ ಸಮಯವನ್ನು ಒದಗಿಸುವ ಉದ್ಯೋಗಗಳನ್ನು ಹುಡುಕಿ. ತಂಡದ ಕೆಲಸವು ಪ್ರಯೋಜನಕಾರಿಯಾಗುವುದರಿಂದ ಅಧೀನ ಅಧಿಕಾರಿಗಳೊಂದಿಗೆ ಸಂಬಂಧಗಳನ್ನು ಸುಧಾರಿಸುವತ್ತ ಗಮನ ಹರಿಸಿ. ಅವಿವಾಹಿತರು ಹೊಸ ವ್ಯಕ್ತಿಗಳನ್ನು ಭೇಟಿ ಮಾಡುತ್ತಾರೆ.

ಸಿಂಹ ರಾಶಿ

ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು, ಸಂದರ್ಶನಗಳಿಗೆ ಹಾಜರಾಗಲು ಮತ್ತು ಹೊಸ ಸಂಪರ್ಕಗಳನ್ನು ಮಾಡಲು ಉತ್ತಮ ಸಮಯ. ಈ ಸಮಯದಲ್ಲಿ ನೀವು ತೆಗೆದುಕೊಳ್ಳು ನಿರ್ಧಾರಗಳು ಭವಿಷ್ಯದಲ್ಲಿ ಉತ್ತಮ ವೃತ್ತಿಜೀವನದ ನಿರೀಕ್ಷೆಗಳಿಗೆ ಕಾರಣವಾಗಬಹುದು. ಈಗಾಗಲೇ ಕೆಲಸ ಮಾಡುವವರಿಗೆ, ಹೊಸ ಜ್ಞಾನವನ್ನು, ವಿಶೇಷವಾಗಿ ತಾಂತ್ರಿಕ ಕೌಶಲ್ಯಗಳನ್ನು ಪಡೆಯಲು ಉತ್ತಮ ಸಮಯ. ಆಳವಾದ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಬಂಧವನ್ನು ಬೆಳೆಸಲು ಬದ್ಧರಾಗಿರುವವರಿಗೆ ಅಕ್ಟೋಬರ್ ಉತ್ತಮ ಸಮಯ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತೆ.

ಕನ್ಯಾ ರಾಶಿ

ಕೆಲಸಕ್ಕೆ ನಿಮ್ಮ ರಚನಾತ್ಮಕ ವಿಧಾನವು ಹೊಸ ಉದ್ಯೋಗದಾತರನ್ನು ಆಕರ್ಷಿಸುತ್ತದೆ. ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ ಕೆಲವು ವಿಷಯಗಳನ್ನು ಖಚಿತಪಡಿಸಿಕೊಳ್ಳಬೇಕು. ಹೊಸ ಕಾರ್ಯಗಳೊಂದಿಗೆ ನಿಮ್ಮ ಅತಿಯಾಗಿ ಹೊರೆಯನ್ನು ಮಾಡಿಕೊಳ್ಳಬೇಡಿ. ಅನಗತ್ಯ ವಿಷಯಗಳಿಗೆ ಹಣವನ್ನು ಖರ್ಚು ಮಾಡುತ್ತೀರಿ, ಈ ಬಗ್ಗೆ ಎಚ್ಚರಿಕೆ ಅಗತ್ಯವಾಗಿದೆ. ದೀರ್ಘಾವಧಿಯಲ್ಲಿ ಮೌಲ್ಯವನ್ನು ಹೆಚ್ಚಿಸುವ ವಿಷಯಗಳಲ್ಲಿ ಹೂಡಿಕೆ ಮಾಡಿ.

ತುಲಾ ರಾಶಿ

ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳಲು ಈ ತಿಂಗಳಲ್ಲಿ ಹಲವು ಹೊಸ ಯೋಜನೆಗಳನ್ನು ರೂಪಿಸುತ್ತೀರಿ. ಕಾರು ಖರೀದಿಸಲು ಅಥವಾ ದೊಡ್ಡ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಮುಂದುವರಿಯುವ ಮೊದಲು ಪರಿಶೀಲನೆ ಮಾಡಿ. ನೀವು ಕೆಲಸದ ಮೂಲಕ ಬೆಳಕಿಗೆ ಬರುತ್ತೀರಿ. ನಿಮ್ಮ ಸಾಧನೆಯನ್ನು ಗುರುತಿಸಲಾಗುತ್ತದೆ. ನಿಮ್ಮ ಪತ್ನಿ ನಿಮ್ಮ ವೈಯಕ್ತಿಕ ಅಭಿವೃದ್ಧಿಯ ಗುರಿಗಳ ಸಾಧನೆಗೆ ಬೆಂಬಲವಾಗಿ ನಿಲ್ಲುತ್ತಾರೆ. ದಂಪತಿ ನಡುವೆ ಹೊಂದಾಣಿಕೆ ಇರುತ್ತದೆ. ಸಂಗಾತಿ ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ.

ವಶ್ಚಿಕ ರಾಶಿ
ಪ್ರಸ್ತುತ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಯೋಚಿಸುತ್ತೀರಿ. ವೈಯಕ್ತಿಕ ಕೆಲಸಗಳ ಯಶಸ್ಸು ಕಾಣಲು ಅಕ್ಟೋಬರ್ ಉತ್ತಮ ತಿಂಗಳು. ಬಹುಮಾನಕ್ಕಿಂತ ಸಿದ್ಧತೆಯ ಮೇಲೆ ಗಮನ ಕೇಂದ್ರೀಕರಿಸಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ನಿಮ್ಮ ಆರ್ಥಿಕ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಿ. ಅವಿವಾಹಿತರಿಗೆ ಮನೆಯಲ್ಲಿ ಸಂಬಂಧಗಳನ್ನು ನೋಡುತ್ತಾರೆ. ಕೆಲವರಿಗೆ ಮದುವೆ ನಿಶ್ಚಯವಾಗುತ್ತೆ. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತೀರಿ.

ಧನು ರಾಶಿ
ಅಕ್ಟೋಬರ್ ತಿಂಗಳು ನಿಮಗೆ ಬೆಳೆಯಲು ಹೊಸ ಅವಕಾಶನ್ನು ನೀಡುತ್ತೆ. ವೃತ್ತಿಜೀವನಕ್ಕೆ ಸಂಬಂಧಿಸಿದ ಗುಂಪು ಚಟುವಟಿಕೆಗಳಲ್ಲಿ ಭಾಗವಹಿಸಲು ಇದು ಉತ್ತಮ ಸಮಯ. ತಂಡದ ಗುರಿಗಳೊಂದಿಗೆ ನಿಮ್ಮ ವೈಯಕ್ತಿಕ ಗುರಿಗಳನ್ನು ನಿರ್ವಹಿಸುವುದು ಪ್ರಾಥಮಿಕ ಸವಾಲಾಗಿದೆ. ವ್ಯವಹಾರದಲ್ಲಿ ಪಾಲುದಾರಿಕೆ ಕೂಡ ಈ ತಿಂಗಳು ಅನುಕೂಲಕರವಾಗಬಹುದು. ದಾಂಪತ್ಯ ಜೀವನದಲ್ಲಿ ಸಣ್ಣ ಸಮಸ್ಯೆಗಳಿರುತ್ತವೆ. ಕುಟುಂಬದಲ್ಲಿ ಸಂತೋಷ ನೆಲೆಸಲು ಪ್ರಯತ್ನಿಸುತ್ತೀರಿ. ಯೋಚಿಸಿ ನಿರ್ಧಾರಗಳನ್ನು ಕೈಗೊಳ್ಳಿ. ಆರ್ಥಿಕ ಲಾಭಗಳಿರುತ್ತವೆ. ಒತ್ತಡ ಕಡಿಮೆ ಮಾಡಲು ಪ್ರಯತ್ನಿಸುತ್ತೀರಿ.

ಮಕರ ರಾಶಿ

ಜವಾಬ್ದಾರಿ ತೆಗೆದುಕೊಳ್ಳಲು, ನಿಮ್ಮ ಬದ್ಧತೆಯನ್ನು ಸಾಬೀತುಪಡಿಸಲು ಉತ್ತಮ ಸಮಯ. ಉದ್ಯೋಗ ಸಂದರ್ಶನಕ್ಕೆ ಹೋದಾಗ ಅಥವಾ ಉದ್ಯೋಗಕ್ಕಾಗಿ ಯಾರನ್ನಾದರೂ ಸಂಪರ್ಕಿಸಲು ಪ್ರಯತ್ನಿಸಿದಾಗ ನೀವು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುವ ಸಾಧ್ಯತೆಯಿದೆ. ಅವಿವಾಹಿತರಿಗೆ ಮನೆಯಲ್ಲಿ ಸಂಬಂಧಗಳನ್ನು ನೋಡುವ ಕಾರ್ಯ ಮತ್ತೆ ಮುಂದುವರಿಯುತ್ತೆ. ತಂದೆೆಯೊಂದಿಗೆ ಜಗಳ ಮಾಡಿಕೊಳ್ಳಬೇಡಿ. ತಾಳ್ಮೆಯಿಂದಿರಿ. ಜವಾಬ್ದಾರಿಯುತ ಮತ್ತು ಪ್ರಬುದ್ಧರೊಂದಿಗೆ ಇರಲು ಒಲವು ತೋರುವ ಸಮಯ ಇದು. ನಿಮ್ಮ ಗುರಿಗಳು ಮತ್ತು ಭವಿಷ್ಯದ ಬಗ್ಗೆ ಯೋಚಿಸುತ್ತೀರಿ.

ಕುಂಭ ರಾಶಿ
ಹೊಸ ಜ್ಞಾನವನ್ನು ಪಡೆದುಕೊಳ್ಳುವ ಅಗತ್ಯವಿರುವ ಕಾರ್ಯಗಳನ್ನು ಮಾಡುತ್ತೀರಿ. ಹಣಕಾಸಿನ ವಿಷಯಕ್ಕೆ ಬಂದಾಗ ಅಕ್ಟೋಬರ್ ಸುರಕ್ಷಿತವಾದ ತಿಂಗಳು. ಈ ತಿಂಗಳು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲು ಸಹಕಾರಿಯಾಗಿದೆ. ರಜಾದಿನವನ್ನು ಯೋಜಿಸುತ್ತೀರಿ. ನಿಮ್ಮ ಯೋಜನೆಗಳನ್ನು ಚರ್ಚಿಸುತ್ತೀರಿ. ತಿಂಗಳ ಮಧ್ಯದಲ್ಲಿ ನೀವು ಪ್ರೀತಿಯಲ್ಲಿ ಅದೃಷ್ಟಶಾಲಿಯಾಗುತ್ತೀರಿ.

ಮೀನ ರಾಶಿ

ಈ ತಿಂಗಳು ನಿಮಗೆ ಪ್ರಯೋಜನಕಾರಿಯಾಗಿರುತ್ತೆ. ಅಕ್ಟೋಬರ್ ತಿಂಗಳಲ್ಲಿ ಕೆಲವು ಕ್ಷೇತ್ರಗಳಲ್ಲಿ ಸಮಸ್ಯೆಗಳು ಇರುತ್ತದೆ. ಕೆಲಸಕ್ಕೆ ತುಂಬಾ ಬೇಗ ಹೋಗಲು ಪ್ರಯತ್ನಿಸಬೇಡಿ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದ ಭಾವನಾತ್ಮಕ ಅಂಶದ ಮೇಲೆ ಕೆಲಸ ಮಾಡುತ್ತೀರಿ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತೆ. ಕೆಲವೊಂದು ಏರಿಳಿತಗಳನ್ನು ಎದುರಿಸುತ್ತೀರಿ. ಸ್ನೇಹಿತರೊಂದಿಗೆ ಸಮಯ ಕಳೆಯುತ್ತೀರಿ. ಸಂತೋಷದ ಕೂಟಗಳಲ್ಲಿ ಭಾಗವಹಿಸುತ್ತೀರಿ. ಈ ತಿಂಗಳು ಒಟ್ಟಾರೆಯಾಗಿ ಖುಷಿಯಿಂದ ಕಳೆಯುತ್ತೀರಿ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.