ಹೆಬ್ಬೆರಳಿನಲ್ಲಿ ಈ ಗುರುತುಗಳಿದ್ದರೆ ನೀವೇ ಅದೃಷ್ಟವಂತರು; ಕೆಲಸ ಕಾರ್ಯಗಳು ಸುಲಭವಾಗಿ ಮುಗಿಯುತ್ತವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹೆಬ್ಬೆರಳಿನಲ್ಲಿ ಈ ಗುರುತುಗಳಿದ್ದರೆ ನೀವೇ ಅದೃಷ್ಟವಂತರು; ಕೆಲಸ ಕಾರ್ಯಗಳು ಸುಲಭವಾಗಿ ಮುಗಿಯುತ್ತವೆ

ಹೆಬ್ಬೆರಳಿನಲ್ಲಿ ಈ ಗುರುತುಗಳಿದ್ದರೆ ನೀವೇ ಅದೃಷ್ಟವಂತರು; ಕೆಲಸ ಕಾರ್ಯಗಳು ಸುಲಭವಾಗಿ ಮುಗಿಯುತ್ತವೆ

ಅಂಗೈಯಲ್ಲಿರುವ ಪ್ರತಿಯೊಂದು ರೇಖೆಯೂ ವ್ಯಕ್ತಿಯ ಜೀವನದ ಬಗ್ಗೆ ಹೇಳುತ್ತದೆ ಎಂದು ಹಸ್ತಸಾಮುದ್ರಿಕ ಶಾಸ್ತ್ರ ಹೇಳುತ್ತದೆ. ಅಂಗೈಯಲ್ಲಿರುವ ಕೆಲವೊಂದು ರೇಖೆಗಳು ನಿಮ್ಮ ಗುಣಗಳ ಬಗ್ಗೆ ತಿಳಿಸುತ್ತವೆ. (ಬರಹ: ಎಚ್ ಸತೀಶ್, ಜ್ಯೋತಿಷಿ)

ಹೆಬ್ಬೆರಳಿನಲ್ಲಿರುವ ಕೆಲವು ಗುರುತುಗಳು ನಿಮ್ಮ ಗುಣಗಳ ಬಗ್ಗೆ ಹೇಳುತ್ತವೆ. ಅದರ ವಿವರ ಇಲ್ಲಿದೆ
ಹೆಬ್ಬೆರಳಿನಲ್ಲಿರುವ ಕೆಲವು ಗುರುತುಗಳು ನಿಮ್ಮ ಗುಣಗಳ ಬಗ್ಗೆ ಹೇಳುತ್ತವೆ. ಅದರ ವಿವರ ಇಲ್ಲಿದೆ

ಹೆಬ್ಬೆರಳಿನ ತುದಿಯಲ್ಲಿ ಇಕ್ಕಳ ಕತ್ತರಿ ಅಥವಾ ಎರಡು ಚೂಪಾದ ವಸ್ತುಗಳು ಕಂಡು ಬರುತ್ತದೆ. ಇಂತಹವರು ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಬಲ್ಲರು. ಬೇರೆಯವರು ಮಾಡುವ ತಪ್ಪುಗಳನ್ನಲ್ಲದೆ ಸ್ವತಃ ಇವರು ಮಾಡುವ ತಪ್ಪುಗಳನ್ನು ಮನ್ನಿಸುವುದಿಲ್ಲ. ತಪ್ಪುಗಳೇ ಆಗದಂತೆ ನಡೆಯುವ ಗುಣವಿರುತ್ತದೆ. ಆಕಸ್ಮಿಕವಾಗಿ ನಡೆಯುವ ತಪ್ಪನ್ನು ಸರಿಪಡಿಸಿಕೊಂಡು ಜೀವನದಲ್ಲಿ ಮತ್ತು ಕೆಲಸ ಕಾರ್ಯಗಳಲ್ಲಿ ಮುಂದುವರೆಯುತ್ತಾರೆ. ಇವರಲ್ಲಿನ ಉತ್ಸಾಹವು ಬೇರೆಯವರಿಗೆ ಮಾದರಿಯಾಗುತ್ತದೆ. ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ಗುಣವಿರುವುದಿಲ್ಲ. ತಮ್ಮ ಇಚ್ಛೆಯಂತೆ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವ ಆತುರ ಇವರಿಗೆ ಇರುತ್ತದೆ. ಆದರೆ ಇವರ ಕೆಲಸ ಕಾರ್ಯಗಳು ಸುಲಭವಾಗಿ ಮುಗಿಯುತ್ತವೆ.

ಪ್ರತಿಯೊಬ್ಬರೂ ನಿಮ್ಮೊಂದಿಗೆ ಪ್ರೀತಿ ವಿಶ್ವಾಸವನ್ನು ಬೆಳೆಸುವ ಅವಕಾಶವನ್ನು ಎದುರು ನೋಡುತ್ತಾರೆ. ನಿಮ್ಮ ತೀರ್ಮಾನಗಳನ್ನು ಬದಲಿಸಲು ಯಾರಿಗೂ ಸಾಧ್ಯವಾಗುವುದಿಲ್ಲ. ಆತ್ಮವಿಶ್ವಾಸ ಮತ್ತು ಧೈರ್ಯವು ಕೆಲಸ ಕಾರ್ಯಗಳಲ್ಲಿ ತೊಡಗಲು ಉತ್ತೇಜಿಸುತ್ತದೆ. ನಿಮ್ಮಲ್ಲಿ ಕ್ರೀಡಾ ಮನೋಭಾವನೆ ಇರುತ್ತದೆ. ಆದರೆ ಸೋಲುವ ವೇಳೆಯಲ್ಲಿಯೂ ಗೆಲುವಿನ ಹಾದಿಯಲ್ಲಿ ಸಾಗುತ್ತಾರೆ. ಚಿಕ್ಕವಯಸ್ಸಿನಲ್ಲಿಯೇ ಇವರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನ ದೊರೆಯುತ್ತದೆ. ಜನಪ್ರಿಯತೆಯ ವ್ಯಕ್ತಿಯಾಗಿ ಬಾಳುತ್ತಾರೆ. ಯಾವುದೇ ಕಷ್ಟಕರ ಸನ್ನಿವೇಶದಲ್ಲಿಯೂ ಜಾಣತನದಿಂದ ಪಾರಾಗುವ ಗುಣವು ಇವರಲ್ಲಿ ಕಂಡು ಬರುತ್ತದೆ.

ಕೋಪ ಬಂದಾಗ ಮಾತನಾಡದೆ ಮೌನವಾಗುತ್ತಾರೆ

ಹೆಬ್ಬೆರಳಿನ ತುದಿಯಲ್ಲಿ ಇಕ್ಕಳ ಕತ್ತರಿ ಅಥವಾ ಎರಡು ಚೂಪಾದ ವಸ್ತುಗಳಂತಹ ಚಿಹ್ನೆಗಳನ್ನು ಹೊಂದಿರುವವರು ಸಣ್ಣಪುಟ್ಟ ವಿಚಾರಗಳಲ್ಲಿಯೂ ಹೆಚ್ಚಿನ ಆಸಕ್ತಿಯನ್ನು ತೋರುತ್ತಾರೆ. ವಿಶ್ರಾಂತಿ ಇಲ್ಲದೆ ದುಡಿಯಲು ಸಿದ್ದರಿರುತ್ತಾರೆ. ಉದ್ಯೋಗದಲ್ಲಿ ಇವರಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ಸ್ವಂತ ಉದ್ದಿಮೆ ಇದ್ದಲ್ಲಿ ಕೆಲಸಕಾರ್ಯಗಳು ಶೀಘ್ರಗತಿಯಲ್ಲಿ ನಡೆಯಲಿವೆ. ಕೋಪವೂ ಬೇಗನೆ ಬರುತ್ತದೆ. ಆದರೆ ಕೋಪ ಬಂದಾಗ ಮಾತನಾಡದೆ ಮೌನವಾಗುತ್ತಾರೆ. ಇದರಿಂದ ಯಾರಿಗೂ ತೊಂದರೆ ಉಂಟಾಗುವುದಿಲ್ಲ. ಆತುರದ ಗುಣವಿದ್ದರೂ ದುಡುಕುನಿಂದ ವರ್ತಿಸುವುದಿಲ್ಲ. ಸದಾಕಾಲ ಹೊಸ ರೀತಿಯ ಯೋಜನೆಗಳ ಬಗ್ಗೆ ಯೋಚಿಸುತ್ತಾರೆ. ನಿರಾಸೆಯನ್ನು ಇಷ್ಟಪಡದೆ ಆಗದ ಕೆಲಸವನ್ನು ದೂರ ಮಾಡುತ್ತಾರೆ. ಶಾಸ್ತ್ರದ ಸಂಪ್ರದಾಯಗಳ ಬಗ್ಗೆ ಆಸಕ್ತಿ ಇರುತ್ತದೆ.

ಧಾರ್ಮಿಕ ಚಟುವಟಿಕೆಗಳಲ್ಲಿ ಕ್ರಿಯಾಶಾಲಿಯಾಗಿ ಭಾಗವಹಿಸುವಿರಿ. ನಿಮ್ಮಲ್ಲಿನ ಸೇವಾ ಮನೋಭಾವನೆಗೆ ಎಲ್ಲರೂ ಗೌರವ ನೀಡುತ್ತಾರೆ. ದಾಂಪತ್ಯ ಜೀವನ ಶಾಂತಿ ನೆಮ್ಮದಿಯಿಂದ ಕೂಡಿರುತ್ತದೆ. ಹಣಕಾಸಿನ ವಿಚಾರದಲ್ಲಿ ಮಾತ್ರ ಉದ್ವೇಗದಿಂದ ನಡೆದುಕೊಳ್ಳುವರು. ಕುಟುಂಬಕ್ಕೆ ಸಂಬಂಧಿಸದೆ ಇರುವವರನ್ನು ಸಹ ವಿಶೇಷ ಗೌರವದಿಂದ ಕಾಣುವರು. ಸಂಗಾತಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುತ್ತಾರೆ. ಸೌಮ್ಯವಾದ ಗುಣವುಳ್ಳ ಜನರ ಜೊತೆ ಪಾಲುಗಾರಿಕೆಯ ವ್ಯಾಪಾರ ವ್ಯವಹಾರವನ್ನು ಆರಂಭಿಸುವರು. ವಿವಾಹದ ಬಗ್ಗೆ ಹೆಚ್ಚಿನ ಆಸಕ್ತಿ ಇರುವುದಿಲ್ಲ. ವಿವಾಹಾನಂತರ ಸಂಗಾತಿಯನ್ನು ಗೌರವಿಸುತ್ತಾರೆ.

ಅನಾವಶ್ಯಕವಾದ ಖರ್ಚು ವೆಚ್ಚಗಳು ಇರುತ್ತವೆ

ಬೇರೆಯವರಿಂದ ತಪ್ಪುಗಳಾದಾಗ ರಾಜಿ ಮಾಡಿಕೊಳ್ಳದೆ ಅವರಿಂದ ದೂರವಾಗುವರು. ಇವರ ಮನಸ್ಸಿನಲ್ಲಿ ದೊಡ್ಡಮಟ್ಟದ ಆಸೆ ಆಕಾಂಕ್ಷೆಗಳು ಮನೆ ಮಾಡಿರುತ್ತವೆ. ಅದನ್ನು ಕಾರ್ಯ ರೂಪಕ್ಕೆ ತರಲು ಯಶಸ್ವಿಯಾಗುವರು. ಉತ್ತಮ ಆದಾಯ ವಿರುತ್ತದೆ. ಆದರೆ ಅನಾವಶ್ಯಕವಾದ ಖರ್ಚು ವೆಚ್ಚಗಳು ಇರುತ್ತವೆ. ಆದರೂ ಬುದ್ಧಿವಂತಿಕೆಯಿಂದ ಹಣವನ್ನು ಉಳಿಸುವರು. ದುಡುಕುತನದಿಂದ ಹೆಚ್ಚಿನ ಹಣವನ್ನು ವ್ಯಾಪಾರ ವ್ಯವಹಾರಗಳಲ್ಲಿ ಹೂಡುವರು. ಇದರಿಂದ ಹಣಕಾಸಿನ ಕೊರತೆ ಕಂಡು ಬರುತ್ತದೆ. ನಂಬಿದವರಿಗೆ ಮೋಸ ಮಾಡುವುದಿಲ್ಲ. ನಿರಾಸೆಯ ಜೀವನವನ್ನು ನಡೆಸಲು ಇಷ್ಟಪಡುವುದಿಲ್ಲ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುತ್ತಾರೆ.

ಸಹನಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುವರು. ಪಾಲುಗಾರಿಕೆಯ ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರಿಕೆ ಇರಬೇಕು. ಚಿಕ್ಕ ವಯಸ್ಸಿನಲ್ಲಿ ನಾಯಕತ್ವದ ಗುಣವಿರುತ್ತದೆ. ಆವಿಷ್ಕಾರ ಮನೋಭಾವನೆ ಇರುತ್ತದೆ. ಸಣ್ಣ ಪುಟ್ಟ ಪ್ರವಾಸಗಳನ್ನು ಇಷ್ಟಪಡುತ್ತಾರೆ. ನಿಮ್ಮ ಮನದ ವಿಚಾರವನ್ನು ಬೇರೆಯವರಿಗೆ ತಿಳಿಸುವುದಿಲ್ಲ. ಗೆಲ್ಲುವವರನ್ನು ಕಂಡರೆ ಸಂತೋಷವಿರುತ್ತದೆ. ಉಪದೇಶ ಮಾಡುವಲ್ಲಿ ಮೊದಲಿಗರು. ಇವರ ಮಾತನ್ನು ಬೇರೆಯವರು ಕೇಳುವುದಿಲ್ಲ. ಕೇವಲ ಆಯ್ದ ವ್ಯಕ್ತಿಗಳ ಜೊತೆಯಲ್ಲಿ ಮಾತ್ರ ಸ್ನೇಹ ಸಂಬಂಧ ಬೆಳೆಸುವಿರಿ. ಆರೋಗ್ಯವನ್ನು ಉಳಿಸಿಕೊಳ್ಳಲು ದೈಹಿಕ ವ್ಯಾಯಾಮವನ್ನು ಆರಂಭಿಸುತ್ತಾರೆ. ಇವರನ್ನು ಅನುಸರಿಸುವುದು ಅಷ್ಟು ಸುಲಭವಲ್ಲ.

(ಬರಹ: ಎಚ್ ಸತೀಶ್, ಜ್ಯೋತಿಷಿ)

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.