Palmistry: ಅಂಗೈ ಮೇಲೆ ಕಮಲದ ಚಿಹ್ನೆ ಇದೆಯಾ ನೋಡಿ ಒಮ್ಮೆ, ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಇದೇನು ಹೇಳುತ್ತೆ ನೋಡೋಣ
Lotus Sign On Palm: ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಹಸ್ತದ ಮೇಲಿನ ರೇಖೆಗಳು, ಚಿಹ್ನೆಗಳಿಗೆ ಅವುಗಳದ್ಧೇ ಆದ ಮಹತ್ವ ಇದೆ. ಅಂದ ಹಾಗೆ, ಅಂಗೈ ಮೇಲೆ ಕಮಲದ ಚಿಹ್ನೆ ಇದೆಯಾ ನೋಡಿ ಒಮ್ಮೆ, ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಇದೇನು ಹೇಳುತ್ತೆ ಅಂತ ನೋಡೋಣ.
Lotus Sign On Palm: ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಅಂಗೈನಲ್ಲಿ ಕಂಡುಬರುವ ಚಿಹ್ನೆಗಳಿಗೆ ಅವುಗಳದ್ದೇ ಅದ ವಿಶೇಷ ಮಹತ್ವ ಮತ್ತು ಫಲಗಳಿವೆ. ಪ್ರತಿಯೊಬ್ಬರ ಅಂಗೈ ಮೇಲೂ ಅನೇಕ ಚಿಹ್ನೆಗಳು ಅಥವಾ ಗುರುತುಗಳು ಕಂಡುಬರುತ್ತವೆ. ಇವೆಲ್ಲವೂ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆಯಾದರೂ, ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಅವುಗಳ ಕುರಿತಾದ ವಿವರಣೆ ಇದೆ. ಈ ಗುರುತುಗಳು ವಿಭಿನ್ನ ಫಲಗಳನ್ನು ನೀಡುವಂಥವಾಗಿದ್ದು, ಕೆಲವು ಚಿಹ್ನೆಗಳು ಅತ್ಯಂತ ಅದೃಷ್ಟದವು ಎಂದು ಪರಿಗಣಿಸಲಾಗುತ್ತದೆ. ಇನ್ನು ಕೆಲವು ಕೆಟ್ಟ ಫಲ ಉಂಟುಮಾಡುವ ಚಿಹ್ನೆಗಳೂ ಇವೆ. ಇಲ್ಲಿ ಅದೃಷ್ಟದ ಚಿಹ್ನೆಗಳ ವಿಶೇಷವಾಗಿ ಕಮಲದ ಚಿಹ್ನೆಯ ಕುರಿತು ತಿಳಿಯೋಣ.
ಅಂಗೈ ಮೇಲೆ ಕಮಲದ ಚಿಹ್ನೆ ಇದೆಯಾ ನೋಡಿ ಒಮ್ಮೆ
ಅಂಗೈಯಲ್ಲಿ ಕಮಲದ ಚಿಹ್ನೆ ಇದೆಯಾ? ನೋಡ್ಕೊಂಡ್ರಾ, ಅಂಗೈಯಲ್ಲಿ ಕಮಲದ ನಿಶಾನೆ ಅಥವಾ ಚಿಹ್ನೆ ಇರುವುದು ಶುಭ. ಈ ಚಿಹ್ನೆಯು ಮಹಾವಿಷ್ಣುವಿನ ಸಂಕೇತ. ಅಂಗೈಯಲ್ಲಿ ಈ ಚಿಹ್ನೆ ಕಂಡುಬಂದರೆ ಅಂತಹ ವ್ಯಕ್ತಿಗೆ ವಿಷ್ಣು ಯೋಗ ಇದೆ ಎಂದು ನಂಬಲಾಗುತ್ತದೆ. ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿ ತನ್ನ ಅಂಗೈ ಮೇಲೆ ಕಮಲದ ಗುರುತು ಹೊಂದಿದ್ದರೆ, ಅಂತಹ ವ್ಯಕ್ತಿಯು ವಿಷ್ಣು ದೇವರ ಕೃಪೆಗೆ ಪಾತ್ರನಾಗಿದ್ದು, ಆಶೀರ್ವದಿಸಲ್ಪಟ್ಟಿದ್ದಾನೆ ಎಂದು ನಂಬಲಾಗುತ್ತದೆ. ಅಂತಹ ವ್ಯಕ್ತಿಗಳನ್ನು ಭಾರಿ ಅದೃಷ್ಟವಂತರು ಮತ್ತು ಶ್ರೀಮಂತರು ಎಂದು ಪರಿಗಣಿಸಲಾಗುತ್ತದೆ. ಅವರು ಸಂಪತ್ತು ಮತ್ತು ಸಮೃದ್ಧಿಯ ಮಾಲೀಕರಾಗುವರು ಎಂಬುದು ನಂಬಿಕೆ. ಅಂಗೈ ಮೇಲೆ ಕಮಲದ ಚಿಹ್ನೆ ಇರುವಂಥವರು ಉತ್ತಮ ವಾಗ್ಮಿಗಳಾಗಿದ್ದು, ಅವರಲ್ಲಿ ಉತ್ತಮ ನಾಯಕತ್ವದ ಗುಣವನ್ನೂ ಕಾಣಬಹುದು ಎಂದು ಶಾಸ್ತ್ರ ಹೇಳುತ್ತದೆ. ಅಷ್ಟೇ ಅಲ್ಲ, ಅಂಗೈ ಮೇಲಿನ ಕಮಲದ ಚಿಹ್ನೆಯು ರಾಜಲಕ್ಷ್ಮಿ ಯೋಗದ ಅಂಶವೆಂದು ಪರಿಗಣಿಸಲಾಗುತ್ತದೆ.
ಅಂಗೈ ಮೇಲೆ ಕಮಲದ ಚಿಹ್ನೆ ಎಲ್ಲಿದ್ದರೆ ಒಳ್ಳೆಯದು
ಅಂಗೈ ಮೇಲೆ ಎಲ್ಲಿ ಬೇಕಾದರೂ ಕಮಲದ ಗುರುತು ಕಂಡುಬರಬಹುದು. ಅದು ಇಂಥದ್ದೇ ಜಾಗದಲ್ಲಿ ಇರಬೇಕು ಎಂಬ ಅಂಶವೇನೂ ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಇಲ್ಲ ಎನ್ನುತ್ತಾರೆ ಪರಿಣತರು. ಗಮನಿಸಬೇಕಾದ ಅಂಶ ಎಂದರೆ, ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಈ ಕಮಲದ ಚಿಹ್ನೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಕಮಲದ ಚಿಹ್ನೆಯು ಹೆಚ್ಚಾಗಿ ಹೃದಯ ರೇಖೆಯಲ್ಲಿ ಕಂಡುಬರುತ್ತದೆ. ಹೃದಯ ರೇಖೆಯ ಮಧ್ಯದಲ್ಲಿ ಅಥವಾ ಕೊನೆಯಲ್ಲಿ ಕಮಲದ ಚಿಹ್ನೆಯನ್ನು ಕಾಣಬಹುದು.
ಅದೃಷ್ಟದ ರೇಖೆಯ ಮೇಲೆ ಕೂಡ ಕಮಲದ ಗುರುತು ಮೂಡಬಹುದು. ಹಾಗೆ ಮೂಡಿದರೆ ಅದು ಬಹಳ ವಿಶೇಷ ಎಂದು ಜ್ಯೋತಿಷಿಗಳು, ವಿಶೇಷವಾಗಿ ಹಸ್ತ ಸಾಮುದ್ರಿಕಾ ತಜ್ಞರು ಪರಿಗಣಿಸುತ್ತಾರೆ. ಅದೃಷ್ಟದ ರೇಖೆಯಲ್ಲಿ ಕಮಲದ ಗುರುತು ರಚನೆಯು ಯಶಸ್ಸಿನ ಸೂಚಕವೆಂದು ಪರಿಗಣಿಸಲಾಗಿದೆ. ಈ ಜನರು ಬಡ ಕುಟುಂಬದಲ್ಲಿ ಜನಿಸಿದರೂ, ಅವರು ತಮ್ಮ ಶ್ರಮ ಮತ್ತು ಕಾರ್ಯಗಳ ಆಧಾರದ ಮೇಲೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಸಾಧಿಸುತ್ತಾರೆ ಎಂದು ಹೇಳಲಾಗುತ್ತದೆ.
ಗಮನಿಸಿ: ಈ ಲೇಖನದಲ್ಲಿರುವ ಮಾಹಿತಿಯನ್ನು ನಂಬಬೇಕೆ ಅಥವಾ ಬೇಡವೇ ಎಂಬುದು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಸರಳವಾಗಿ ಹೇಳಬೇಕು ಎಂದರೆ ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಖರ ಫಲಗಳನ್ನು ಅರಿಯವುದಕ್ಕಾಗಿ ನಿಮ್ಮ ನಂಬಿಕೆಯ ಜ್ಯೋತಿಷ್ಯ ಪರಿಣತರು, ಹಸ್ತ ಸಾಮುದ್ರಿಕಾ ತಜ್ಞರನ್ನು ಭೇಟಿ ಮಾಡಬಹುದು. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ವಿಭಾಗ