ಕನ್ನಡ ಸುದ್ದಿ  /  Astrology  /  Papamochani Ekadashi 2024 Things To Not Do In Ekadashi Worship Of Lord Vishnu Lakshmidevi Rsm

Papamochani Ekadashi 2024: ಪಾಪಮೋಚನಿ ಏಕಾದಶಿಯಂದು ಈ ತಪ್ಪುಗಳನ್ನು ಮಾಡಬೇಡಿ; ಇಲ್ಲದಿದ್ದರೆ ಆರ್ಥಿಕ ಸಂಕಷ್ಟ ಖಚಿತ

Papamochani Ekadashi 2024: ದೇವರ ಪೂಜೆ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಏಪ್ರಿಲ್‌ 5ರಂದು ಪಾಪವಿಮೋಚನಿ ಏಕಾದಶಿ ಇದೆ. ಈ ದಿನ ಭಕ್ತರು ತಮ್ಮ ಪಾಪಗಳನ್ನು ಕಳೆದುಕೊಳ್ಳಲು ಉಪವಾಸ ಮಾಡಿ ವಿಷ್ಣುವನ್ನು ಪೂಜಿಸುತ್ತಾರೆ. ಈ ದಿನ ಭಕ್ತರು ಈ 5 ತಪ್ಪುಗಳನ್ನು ಮಾಡಬಾರದು.

ಪಾಪವಿಮೋಚನಿ ಏಕಾದಶಿ 2024
ಪಾಪವಿಮೋಚನಿ ಏಕಾದಶಿ 2024

ಪಾಪಮೋಚನಿ ಏಕಾದಶಿ 2024: ಭಕ್ತರು ವಿಷ್ಣುವನ್ನು ಆರಾಧಿಸುವ ಪಾಪಮೋಚನಿ ಏಕಾದಶಿಯನ್ನು ಏಪ್ರಿಲ್‌ 5 ರಂದು ಆಚರಿಸಲಾಗುತ್ತಿದೆ. ಭಕ್ತರು ತಾವು ಮಾಡಿದ ಪಾಪ, ಕರ್ಮದಿಂದ ಮುಕ್ತಿ ಹೊಂದಲು ವಿಷ್ಣುವನ್ನು ಪ್ರಾರ್ಥಿಸಿ ಏಕಾದಶಿಯಂದು ಉಪವಾಸ ಮಾಡುತ್ತಾರೆ. ಇದನ್ನು ಪಾಪಮೋಚನಿ ಏಕಾದಶಿ ಎಂದು ಕರೆಯಲಾಗುತ್ತದೆ.

ಸನಾತನ ಧರ್ಮದಲ್ಲಿ ಪಾಪಮೋಚನಿ ಏಕಾದಶಿಗೆ ಅಪಾರ ಧಾರ್ಮಿಕ ಮಹತ್ವವಿದೆ. ಭಕ್ತರು ಈ ವಿಷೇ ದಿನದಂದು ಉಪವಾಸ ಆಚರಿಸುತ್ತಾರೆ ಮತ್ತು ದ್ವಾದಶಿ ತಿಥಿಯಂದು ಪಾರಣ ಮಾಡುತ್ತಾರೆ. ಕೆಲವರು ಮನೆಯಲ್ಲೇ ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾದರೆ ಇನ್ನೂ ಕೆಲವು ಭಕ್ತರು ವಿಷ್ಣು ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ತಿಂಗಳಿಗೆ ಎರಡು ಬಾರಿ ಏಕಾದಶಿ ಬರುತ್ತದೆ. ಒಂದು ಕೃಷ್ಣ ಪಕ್ಷ ಮತ್ತು ಇನ್ನೊಂದು ಶುಕ್ಲ ಪಕ್ಷ ಏಕಾದಶಿ. ಪಾಪಮೋಚನಿ ಏಕಾದಶಿಯಂದು ಭಕ್ತರು ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಇಲ್ಲದಿದ್ದರೆ ನೀವು ವಿಷ್ಣುವಿನ ಕೋಪಕ್ಕೆ ಗುರಿಯಾಗಬಹುದು. ಇದರಿಂದ ನಾನಾ ಸಮಸ್ಯೆಗಳು ತಲೆದೋರಬಹುದು. ಆದ್ದರಿಂದ ನೀವು ಉಪವಾಸವಿರಲಿ ಅಥವಾ ಇಲ್ಲದಿರಲಿ ಈ ಏಕಾದಶಿಯಂದು ಈ ಕೆಲಸಗಳನ್ನು ಮಾಡಬೇಡಿ.

ಪಾಪಮೋಚನಿ ಏಕಾದಶಿಯಂದು ಏನು ಮಾಡಬಾರದು?

  • ಪಾಪಮೋಚನಿ ಏಕಾದಶಿಯಂದು ಅನ್ನವನ್ನು ಸೇವಿಸಬಾರದು. ಈ ದಿನ ಅನ್ನವನ್ನು ಸೇವಿಸುವುದರಿಂದ ದುರಾದೃಷ್ಟ ಬರುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಈ ದಿನ ಆದಷ್ಟೂ ರವೆ ಉಪ್ಪಿಟ್ಟು, ಅವಲಕ್ಕಿ, ಹಣ್ಣು, ಹಂಫಲುಗಳನ್ನು ಸೇವಿಸಲು ಪ್ರಯತ್ನಿಸಿ.
  • ತುಳಸಿ ಎಲೆಗಳು ವಿಷ್ಣುವಿಗೆ ಬಹಳ ಇಷ್ಟ. ಅದಿಲ್ಲದೆ ಇಲ್ಲದೆ ಭಗವಂತನಿಗೆ ಪೂಜೆ ಮಾಡಲಾಗುವುದಿಲ್ಲ. ಆದ್ದರಿಂದ ಪಾಪಮೋಚನಿ ಏಕಾದಶಿ ದಿನ ತುಳಸಿ ಎಲೆಗಳನ್ನು ಕೀಳಬಾರದು. ಹೀಗೆ ಮಾಡಿದರೆ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ.
  • ಧಾರ್ಮಿಕ ನಂಬಿಕೆಗಳ ಪ್ರಕಾರ, ಯಾವುದೇ ಶುಭ ಸಂದರ್ಭದಲ್ಲಿ ಅಥವಾ ಪೂಜೆಯ ಸಮಯದಲ್ಲಿ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಆದ್ದರಿಂದ ಪಾಪಮೋಚನಿ ಏಕಾದಶಿಯ ದಿನದಂದು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ. ಭಗವಾನ್ ವಿಷ್ಣುವಿನ ಅನುಗ್ರಹವನ್ನು ಪಡೆಯಲು, ಈ ದಿನ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಮಂಗಳಕರ.
  • ಪಾಪಮೋಚಿನಿ ಏಕಾದಶಿಯಂದು ಧೂಮಪಾನ, ಮದ್ಯಪಾನ ಮಾಡಬಾರದು. ಅಲ್ಲದೆ ಮಾಂಸಾಹಾರ ಕೂಡಾ ತ್ಯಜಿಸಬೇಕು.
  • ಈ ದಿನ ಯಾರನ್ನೂ ನೋಯಿಸಬೇಡಿ. ಅನಾವಶ್ಯಕವಾಗಿ ಮತೊಬ್ಬರ ವೈಯಕ್ತಿಕ ವಿಚಾರಗಳಿಗೆ ತಲೆ ಹಾಕುವುದು, ಜಗಳ ಮಾಡುವುದು, ವಾದ ಮಾಡುವುದು, ಸುಳ್ಳು ಹೇಳುವುದು, ಅವಮಾನ ಮಾಡುವುದನ್ನು ಮಾಡಬೇಡಿ. ಏಕಾದಶಿಯಂದು ಮಾತ್ರವಲ್ಲ ಇತರ ಯಾವುದೇ ದಿನಗಳಲ್ಲಿ ಕೂಡಾ ನೀವು ಈ ರೀತಿ ಮಾಡಬಾರದು.
  • ದೇವರ ಪೂಜೆಗೆ ನಿರ್ದಿಷ್ಟ ನಿಯಮಳಿವೆ. ನೀವು ನಿಯಮಾನುಸಾರ ಪೂಜೆ, ಪುನಸ್ಕಾರಗಳಲ್ಲಿ ಭಾಗಿಯಾದರೆ ದೇವರು ನಿಮಗೆ ಒಲಿಯುತ್ತಾನೆ. ಇಲ್ಲದಿದ್ದರೆ ನೀವು ಜೀವನದಲ್ಲಿ ಇನ್ನಷ್ಟು ಪಾಪ, ಕರ್ಮಗಳನ್ನು ಮಾಡಿದಂತಾಗುತ್ತದೆ. ನಿಮ್ಮ ಪಾಪಗಳು ಕಳೆಯುವುದಕ್ಕಿಂತ ಹೆಚ್ಚಾಗುತ್ತದೆ.

ಇದನ್ನೂ ಓದಿ: 60 ಸಂವತ್ಸರಗಳ ಹೆಸರುಗಳು ಏನನ್ನು ಸಂಕೇತಿಸುತ್ತದೆ; ಇವುಗಳ ಅರ್ಥವೇನು? ಇಲ್ಲಿದೆ ಮಾಹಿತಿ

ಮುಂಬರುವ ಏಕಾದಶಿ ಹೆಸರು, ದಿನಾಂಕ

ಏಪ್ರಿಲ್ 19, 2024 - ಕಾಮದ ಏಕಾದಶಿ
ಮೇ 4, 2024 - ವರುತಿನಿ ಏಕಾದಶಿ
ಮೇ 19, 2024 - ಮೋಹಿನಿ ಏಕಾದಶಿ
ಜೂನ್ 2, 2024 - ಅಪರ ಏಕಾದಶಿ
ಜೂನ್ 18, 2024 - ನಿರ್ಜಲ ಏಕಾದಶಿ
ಜುಲೈ 2, 2024 - ಯೋಗಿನಿ ಏಕಾದಶಿ
ಜುಲೈ 17, 2024 - ದೇವಶಯನಿ ಏಕಾದಶಿ
ಜುಲೈ 21, 2024 - ಕಾಮಿಕಾ ಏಕಾದಶಿ
ಆಗಸ್ಟ್ 16, 2024 - ಶ್ರವಣ ಪುತ್ರಾದ ಏಕಾದಶಿ
ಆಗಸ್ಟ್ 29, 2024 - ಅಜ ಏಕಾದಶಿ
ಸೆಪ್ಟೆಂಬರ್ 14, 2024 - ಪಾರ್ಶ್ವ ಏಕಾದಶಿ
ಸೆಪ್ಟೆಂಬರ್ 28, 2024 - ಇಂದಿರಾ ಏಕಾದಶಿ
ಅಕ್ಟೋಬರ್ 13, 2024 - ಪಾಪಂಕುಶ ಏಕಾದಶಿ
ಅಕ್ಟೋಬರ್ 28, 2024 - ರಾಮ ಏಕಾದಶಿ
ನವೆಂಬರ್ 12, 2024 - ದೇವುತ್ಥಾನ ಏಕಾದಶಿ
ನವೆಂಬರ್ 26, 2024 - ಉತ್ಪನ್ನ ಏಕಾದಶಿ
ಡಿಸೆಂಬರ್ 11, 2024 - ಮೋಕ್ಷದ ಏಕಾದಶಿ
ಡಿಸೆಂಬರ್ 26, 2024 - ಸಫಲ ಏಕಾದಶಿ