ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹುಡುಗಾಟಿಕೆ ಇಷ್ಟಪಡುವ ರಾಶಿಚಕ್ರಗಳಿವು; ಈ 5 ರಾಶಿಯವರ ಮಗುವಿನಂಥ ಮನಸು ಎಲ್ಲರಿಗೂ ಇಷ್ಟವಾಗುತ್ತೆ

ಹುಡುಗಾಟಿಕೆ ಇಷ್ಟಪಡುವ ರಾಶಿಚಕ್ರಗಳಿವು; ಈ 5 ರಾಶಿಯವರ ಮಗುವಿನಂಥ ಮನಸು ಎಲ್ಲರಿಗೂ ಇಷ್ಟವಾಗುತ್ತೆ

ಪ್ರತಿಯೊಂದು ರಾಶಿಯವರದ್ದು ಒಂದೊಂದು ವಿಶೇಷ ಗುಣಗಳಿರುತ್ತವೆ. ಕೆಲವೊಂದು ರಾಶಿಯವರು ಪುಟ್ಟ ಮಕ್ಕಳಂತಾಡುತ್ತಾರೆ. ಆ ರಾಶಿಯವರಿಗೆ ತಮ್ಮದೇ ಆದ ಭಿನ್ನ ಪ್ರಪಂಚವಿರುತ್ತದೆ.

 ಈ 5 ರಾಶಿಯವರ ಮಗುವಿನಂಥ ಮನಸು ಎಲ್ಲರಿಗೂ ಇಷ್ಟವಾಗುತ್ತೆ
ಈ 5 ರಾಶಿಯವರ ಮಗುವಿನಂಥ ಮನಸು ಎಲ್ಲರಿಗೂ ಇಷ್ಟವಾಗುತ್ತೆ (Pexels)

ಜ್ಯೋತಿಷ್ಯವು ವ್ಯಕ್ತಿಗಳ ವ್ಯಕ್ತಿತ್ವ, ನಡೆ ನುಡಿ ಎಲ್ಲವನ್ನೂ ನಿಖರವಾಗಿ ವ್ಯಾಖ್ಯಾನಿಸುತ್ತದೆ. ಅವರವರ ರಾಶಿಚಕ್ರಕ್ಕೆ ಅನುಗುಣವಾಗಿ ಯಾರು ಯಾವ ರೀತಿಯ ಸ್ವಭಾವ ಹೊಂದಿದ್ದಾರೆ ಎಂಬುದನ್ನು ಹೇಳಬಹುದು. ರಾಶಿಚಕ್ರದ ಕೆಲವು ಚಿಹ್ನೆಗಳ ವ್ಯಕ್ತಿಗಳು ಮಕ್ಕಳಂಥಾ ಮನಸ್ಸಿನವರು. ಸದಾ ಹುಡುಗಾಟಿಕೆಯನ್ನು ಇಷ್ಟಪಡುವ ಕೆಲವು ವ್ಯಕ್ತಿಗಳಿಗೆ ವಯಸ್ಸಿನ ಅಡ್ಡಿ ಇಲ್ಲ. ಯಾವುದೇ ವಯಸ್ಸಿನಲ್ಲೂ ಅವರು ಲವಲವಿಕೆಯಿಂದ ಇರುತ್ತಾರೆ. ರಾಶಿಚಕ್ರದ ಕೆಲವು ಚಿಹ್ನೆಗಳು ತಮ್ಮ ಒಳಗಿನ ಮಗುವನ್ನು ಎಂದಿಗೂ ಸಾಯಲು ಬಿಡುವುದಿಲ್ಲ ಎಂಬುದೇ ವಾಸ್ತವ. ಸದಾ ಮಗುವಿನಂತೆ ನಗುತ್ತಿರಲು ಇಷ್ಟಪಡುತ್ತಾರೆ. ಅಂಥಾ ರಾಶಿಗಳತ್ತ ಬೆಳಕು ಚೆಲ್ಲೋಣ.

ಹುಡುಗಾಟಿಕೆಯ ರಾಶಿಚಕ್ರ ಚಿಹ್ನೆಗಳು

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರು ವಯಸ್ಕರಿಗೆ ಇಷ್ಟವಾಗದ ರೀತಿ ವರ್ತಿಸುತ್ತಾರೆ. ಇವರು ಸುಳ್ಳುಗಳನ್ನು ಮನವರಿಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಇವರು ತಮ್ಮ ವಾದ, ಜಗಳಗಳನ್ನು ಕೂಡಾ ಎಂಜಾಯ್‌ ಮಾಡ್ತಾರೆ. ಇವರು ಯಾವುದರ ಬಗ್ಗೆಯೂ ಹೆಚ್ಚು ಗಂಭೀರವಾಗಿ ಯೋಚಿಸುವುದಿಲ್ಲ. ಜೀವನವನ್ನು ಬಂದಂತೆ ಸ್ವೀಕರಿಸುತ್ತಾರೆ. ಎಲ್ಲವೂ ಅಂತಿಮವಾಗಿ ತಾನಾಗಿಯೇ ಕೆಲಸ ಮಾಡುತ್ತದೆ ಎಂದು ಅವರು ಭಾವಿಸುತ್ತಾರೆ.

ತುಲಾ ರಾಶಿ

ತುಲಾ ರಾಶಿಯವರಿಗೆ ಎಲ್ಲರ ಪ್ರೀತಿಪಾತ್ರರಾಗಬೇಕೆಂಬ ಆಸೆ. ಅವರು ಸುಳ್ಳು ಹೇಳುತ್ತಾರೆ, ಮನವಿ ಮಾಡುತ್ತಾರೆ, ಅಳುತ್ತಾರೆ ಮತ್ತು ನಿಮ್ಮ ಗಮನವನ್ನು ಸೆಳೆಯಲು ಭಿನ್ನ ತಂತ್ರ ಮಾಡುತ್ತಾರೆ. ನಿಮ್ಮ ಸಂಪೂರ್ಣ ಗಮನ ಸೆಳೆಯುವವರೆಗೆ ಅವರು ಸುಮ್ಮನಿರುವುದಿಲ್ಲ. ಇವರು ಇಷ್ಟಪಡುವ ಅಥವಾ ಕಾಳಜಿವಹಿಸುವ ಯಾರಾದರೂ ಅವರನ್ನು ಬಿಟ್ಟು ಬೇರೊಬ್ಬರನ್ನು ಆಯ್ಕೆ ಮಾಡಿದಾಗ ತುಲಾ ರಾಶಿಯವರು ಕೋಪಿಸುತ್ತಾರೆ. ಯಾರನ್ನಾದರೂ ತಮ್ಮತ್ತ ಸೆಳೆಯಬೇಕೆಂದರೆ ಎಲ್ಲಾ ತಂತ್ರಗಳನ್ನು ಬಳಸುತ್ತಾರೆ.

ಮೀನ ರಾಶಿ

ಮೀನ ರಾಶಿಯವರು ಸದಾ ಮೋಡಗಳ ಮರೆಯಲ್ಲಿ ತೇಲಾಡುತ್ತಿರುತ್ತಾರೆ. ಹೆಚ್ಚಿನ ಸಮಯ, ಅವರು ವಾಸ್ತವದಿಂದ ಸಂಪೂರ್ಣವಾಗಿ ದೂರವಿರುತ್ತಾರೆ. ಏಕೆಂದರೆ ಅವರಿಗೆ ಕಾಲ್ಪನಿಕ ಜಗತ್ತಿನಲ್ಲಿರಲು ಹೆಚ್ಚು ಇಷ್ಟವಾಗುತ್ತದೆ. ಅವರು ತಮ್ಮ ಯೋಚನೆಯ ಹೊರತಾದ ನೈಜ ಪ್ರಪಂಚವನ್ನು ಕಠಿಣ ಮತ್ತು ಕಳೆ ಇಲ್ಲದ ಜಗತ್ತಾಗಿ ಪರಿಗಣಿಸುತ್ತಾರೆ. ನೈಜ ಪ್ರಪಂಚದ ಕುರಿತು ತಿಳಿಯಲು ಅವರು ಎಂದಿಗೂ ಸಮಯ ವ್ಯಯಿಸುವುದಿಲ್ಲ. ಹೀಗಾಗಿ ಅಪ್ರಬುದ್ಧತೆ ಎಂಬುದು ಅವರಿಗೆ ಸ್ವಾಭಾವಿಕವಾಗಿ ಬರುತ್ತದೆ.

ಮೇಷ ರಾಶಿ

ಮೇಷ ರಾಶಿಯವರು ಆಗಾಗ “ನೀವು ಮಕ್ಕಳಂತೆ ಆಡುತ್ತೀರಿ” ಎಂಬ ಮಾತುಗಳನ್ನು ಕೇಳುತ್ತಾ ಇರುತ್ತಾರೆ. ದುಡುಕು ಸ್ವಭಾವದ ಇವರು ತುಂಬಾ ಬೇಗ ಕೋಪಿಸಿಕೊಳ್ಳುತ್ತಾರೆ. ಅವರ ನಡೆ ನುಡಿ ಪುಟ್ಟ ಮಗುವಿನಂತೆ ಇರುತ್ತದೆ. ಸಣ್ಣ ಸಣ್ಣ ವಿಷಯಕ್ಕೂ ಬೇಗನೆ ಬೇಸರಗೊಳ್ಳುತ್ತಾರೆ. ಕೆಲವೊಂದು ಗೊಂದಲ ಮತ್ತು ಕಿರಿಕಿರಿಯುಂಟುಮಾಡುವ ವಿಷಯಗಳು ಅವರದೇ ಯೋಚನೆಯಂತೆ ನಡೆಯದಿದ್ದರೆ ತೀವ್ರ ಕೋಪಗೊಳ್ಳುತ್ತಾರೆ. ಹಾಸ್ಯ ಇಷ್ಟಪಡುತ್ತಾರೆ. ಮೇಷ ರಾಶಿಯಯರ ವಿಶೇಷ ಸ್ವಭಾವವೆಂದರೆ, ಅವರು ಅಪಕ್ವರಾಗಿರುವುದು ಅವರಿಗೆ ಚೆನ್ನಾಗಿ ತಿಳಿದಿದ್ದರೂ ಅವರು ಬದಲಾಗಲು ಇಷ್ಟಪಡುವುದಿಲ್ಲ.

ಮಿಥುನ ರಾಶಿ

ಇವರು ಕೂಡಾ ಮಕ್ಕಳಂತಾಡುತ್ತಾರೆ. ಕೋಪಗೊಂಡಾಗ ಮುಖವನ್ನು ಸಿಂಡರಿಸಿಕೊಳ್ಳುತ್ತಾರೆ. ಯಾವುದೇ ಸಮರ್ಥನೆ ಇಲ್ಲದೆಯೂ ಭಾವುಕರಾಗುತ್ತಾರೆ. ಪ್ರತಿಯೊಂದರಲ್ಲೂ ತಮಾಷೆ ನೋಡುತ್ತಾರೆ. ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನಿಮಗೇನಾದರೂ ಮಿಥುನ ರಾಶಿಯ ಸ್ನೇಹಿತರಿದ್ದರೆ ಅವರಿಗೆ ನೀವು ಸ್ನೇಹಿತರಿಗಿಂತ ಹೆಚ್ಚಾಗಿ ಶಿಶುಪಾಲಕರಾಗಿರಬೇಕಾಗುತ್ತದೆ.

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.