ಮೀನ ರಾಶಿ ಭವಿಷ್ಯ ಜುಲೈ 18: ಅಧಿಕ ರಕ್ತದೊತ್ತಡ ಇರುವವರಿಗೆ ಮುನ್ನೆಚರಿಕೆ ಅಗತ್ಯ, ಯಶಸ್ವಿಯಾಗಲು ಕೆಲಸದಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೀನ ರಾಶಿ ಭವಿಷ್ಯ ಜುಲೈ 18: ಅಧಿಕ ರಕ್ತದೊತ್ತಡ ಇರುವವರಿಗೆ ಮುನ್ನೆಚರಿಕೆ ಅಗತ್ಯ, ಯಶಸ್ವಿಯಾಗಲು ಕೆಲಸದಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ

ಮೀನ ರಾಶಿ ಭವಿಷ್ಯ ಜುಲೈ 18: ಅಧಿಕ ರಕ್ತದೊತ್ತಡ ಇರುವವರಿಗೆ ಮುನ್ನೆಚರಿಕೆ ಅಗತ್ಯ, ಯಶಸ್ವಿಯಾಗಲು ಕೆಲಸದಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ

Pisces Daily Horoscope July 18, 2024: ರಾಶಿ ಚಕ್ರಗಳ ಪೈಕಿ ಕೊನೆಯದ್ದು ಮೀನ ರಾಶಿ. 12 ನೇ ರಾಶಿಚಕ್ರದಲ್ಲಿ ಚಂದ್ರ ಸಾಗುವ ಸಮಯದಲ್ಲಿ ಜನಿಸಿದವರ ರಾಶಿಚಕ್ರ ಇದು. ಜುಲೈ 18ರ ಮೀನ ರಾಶಿ ಭವಿಷ್ಯದ ಪ್ರಕಾರ, ಇಂದು ನೀವು ಕಂಪನಿಗಾಗಿ ಹೆಚ್ಚಿನ ಸಮಯ ದುಡಿಯಬೇಕಾಗುತ್ತದೆ. ಹೂಡಿಕೆ ಮಾಡಲು ಇದು ಉತ್ತಮ ಸಮಯ.

ಮೀನ ರಾಶಿ ಭವಿಷ್ಯ ಜುಲೈ 18: ಅಧಿಕ ರಕ್ತದೊತ್ತಡ ಇರುವವರಿಗೆ ಮುನ್ನೆಚರಿಕೆ ಅಗತ್ಯ, ಯಶಸ್ವಿಯಾಗಲು ಕೆಲಸದಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ
ಮೀನ ರಾಶಿ ಭವಿಷ್ಯ ಜುಲೈ 18: ಅಧಿಕ ರಕ್ತದೊತ್ತಡ ಇರುವವರಿಗೆ ಮುನ್ನೆಚರಿಕೆ ಅಗತ್ಯ, ಯಶಸ್ವಿಯಾಗಲು ಕೆಲಸದಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ

ಮೀನ ರಾಶಿ ಭವಿಷ್ಯ ಜುಲೈ 18: ಇಂದು ನಿಮ್ಮ ಪ್ರೀತಿಯ ಜೀವನದಲ್ಲಿ ಕೆಲವು ಏರಿಳಿತ ಉಂಟಾಗಬಹುದು. ಆದ್ದರಿಂದ ನೀವು ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯವನ್ನು ಕಳೆಯಬೇಕು. ನಿಮ್ಮ ಭಾವನೆಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ವೃತ್ತಿಪರ ಜೀವನದಲ್ಲಿ ನಿಮಗೆ ಹೆಚ್ಚಿನ ಪ್ರಯತ್ನ ಅಗತ್ಯ. ಕಂಪನಿಯ ಪ್ರಗತಿಗೆ ನೀವು ಕೊಡುಗೆ ನೀಡಬೇಕು. ಇಂದು ಆರೋಗ್ಯ ಉತ್ತಮವಾಗಿರುತ್ತದೆ. ಆರ್ಥಿಕ ಲಾಭವಿದೆ.

ಮೀನ ರಾಶಿಯವರ ಪ್ರೇಮ ಭವಿಷ್ಯ

ಇಂದು ಪ್ರಾಯೋಗಿಕವಾಗಿ ಯೋಚಿಸಬೇಕು, ಆದರೆ ನೀವು ಒಟ್ಟಿಗೆ ಸಮಯ ಕಳೆಯುವಾಗ, ಕಳೆದುಹೋದ ನಿಮ್ಮ ಹಳೆಯ ವಿಚಾರಗಳನ್ನು ಮಧ್ಯೆ ತರಬೇಡಿ. ನಿಮ್ಮ ಜೀವನದಲ್ಲಿ ಮೂರನೇ ವ್ಯಕ್ತಿ ಬರದಂತೆ ಪ್ರಯತ್ನಿಸಿ. ಮನೆಯ ಹಿರಿಯರ ಬಳಿ ಹೇಳಿ ಸಮಸ್ಯೆ ಬಗೆಹರಿಸಿಕೊಳ್ಳಿ. ಮೀನ ರಾಶಿಯ ಕೆಲವು ವಿವಾಹಿತ ದಂಪತಿ ನಡುವೆ ಬಿರುಕು ಉಂಟಾಗಬಹುದು.

ಮೀನ ರಾಶಿಯ ಇಂದಿನ ವೃತ್ತಿ ಭವಿಷ್ಯ

ಇಂದು ನೀವು ಕೆಲಸದ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ನೀವು ಯಶಸ್ವಿಯಾಗಲು ಹೆಚ್ಚಿನ ಪರಿಶ್ರಮ ಅಗತ್ಯ. ಗ್ರಾಹಕರ ಜೊತೆ ಕೆಲಸ ನಿರ್ವಹಿಸುವಾಗ ಮಾರಾಟಗಾರರು ತಾಳ್ಮೆಯಿಂದಿರಬೇಕು. ಇಂದು ಹೊಸ ಕೆಲಸಗಳನ್ನು ಪ್ರಾರಂಭಿಸಲು ಉತ್ತಮ ಸಮಯ. ಪಾಲುದಾರರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಿ.

ಮೀನ ರಾಶಿಯ ಆರ್ಥಿಕ ಭವಿಷ್ಯ

ನೀವು ಇಂದು ಹಣಕಾಸಿನ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ಇಂದು ಉತ್ತಮ ಹಣಕಾಸಿನ ಪರಿಸ್ಥಿತಿ ಇದ್ದರೂ ಕೂಡಾ ಬಹಳ ಜಾಗರೂಕತೆಯಿಂದ ಹಣವನ್ನು ಖರ್ಚು ಮಾಡಿ. ಇದು ಹೂಡಿಕೆಗೆ ಉತ್ತಮ ಸಮಯ. ಆಸ್ತಿಯಲ್ಲಿಯೂ ಹೂಡಿಕೆ ಮಾಡಬಹುದು. ಸಹೋದರ ಅಥವಾ ಸಹೋದರಿಗೆ ಹಣದ ಅಗತ್ಯವಿದ್ದರೆ, ಸಹಾಯ ಮಾಡಿ. ಇದರಿಂದ ನಿಮ್ಮ ಸಂಪತ್ತು ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಮೀನ ರಾಶಿಯ ಕೆಲವರು ಇಂದು ಹಣಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಮನೆಯನ್ನು ನವೀಕರಿಸಲು ಇದು ಉತ್ತಮ ಸಮಯ.

ಮೀನ ಇಂದಿನ ಆರೋಗ್ಯ ಭವಿಷ್ಯ

ನಿಮ್ಮ ಆರೋಗ್ಯ ಇಂದು ಉತ್ತಮವಾಗಿರುತ್ತದೆ. ನೀವು ಕಚೇರಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಕಚೇರಿಯ ಒತ್ತಡವನ್ನು ಮನೆಗೆ ತರಬೇಡಿ. ಉತ್ತಮ ಆಹಾರ ಸೇವಿಸಬೇಕು. ಇದು ನಿಮ್ಮನ್ನು ಅತಿಯಾದ ಆರೋಗ್ಯ ಸಮಸ್ಯೆಗಳಿಂದ ಪಾರು ಮಾಡಬಹುದು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಬಹುದು.

ಮೀನ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ಮೀನ ರಾಶಿಯ ಅಧಿಪತಿ: ಗುರು, ಮೀನ ರಾಶಿಯವರಿಗೆ ಶುಭ ದಿನಾಂಕಗಳು: 1,3,4 ಮತ್ತು9, ಮೀನ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಮಂಗಳವಾರ ಮತ್ತು ಗುರುವಾರ, ಮೀನ ರಾಶಿಯವರಿಗೆ ಶುಭ ವರ್ಣ: ಕೆಂಪು, ಹಳದಿ ಮತ್ತು ರೋಸ್, ಮೀನ ರಾಶಿಯವರಿಗೆ ಅಶುಭ ವರ್ಣ: ನೀಲಿ, ಮೀನ ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ಮೀನ ರಾಶಿಯವರಿಗೆ ಶುಭ ತಿಂಗಳು: ಡಿಸೆಂಬರ್ 15ರಿಂದ ಜನವರಿ 14, ಮೀನ ರಾಶಿಯವರಿಗೆ ಶುಭ ಹರಳು: ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ಮೀನ ರಾಶಿಯವರಿಗೆ ಶುಭ ರಾಶಿ: ಕಟಕ, ವೃಶ್ಚಿಕ ಮತ್ತು ಮೀನ, ಮೀನ ರಾಶಿಯವರಿಗೆ ಅಶುಭ ರಾಶಿ: ಕನ್ಯಾ, ಕುಂಭ, ವೃಷಭ ಮತ್ತು ತುಲಾ.

ಮೀನ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1) ಇಂದ್ರಾಕ್ಷಿ ಸ್ತೋತ್ರ: ಪ್ರತಿದಿನ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೆಲಸ-ಕಾರ್ಯಗಳಿಗೆ ಎದುರಾಗುವ ಅಡ್ಡಿ, ಆತಂಕಗಳು ದೂರವಾಗಲಿವೆ. ಋಣಾತ್ಮಕ ಶಕ್ತಿಯು ಮನೆ ಮತ್ತು ಮನದಿಂದ ದೂರವಾಗುವುದು.

2) ಈ ದಾನಗಳಿಂದ ಶುಭ ಫಲ: ಎಳ್ಳು ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ಹಣದ ತೊಂದರೆ ಕಡಿಮೆ ಆಗಲಿದೆ.

3) ದೇವಾಲಯ ಮತ್ತು ದೇವರ ಪೂಜೆ: ಶ್ರೀ ವಿಷ್ಣು ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಅನುಕೂಲಗಳು ದೊರೆಯಲಿವೆ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು ಮತ್ತು ಕೇಸರಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.