ಮೀನ ರಾಶಿ ಭವಿಷ್ಯ ಆಗಸ್ಟ್‌ 14: ಅನಗತ್ಯ ಖರ್ಚು ಮಾಡಬೇಡಿ, ಸಂಗಾತಿಯೊಂದಿಗೆ ಹೊಂದಾಣಿಕೆ ಮುಖ್ಯ-pisces daily horoscope today august 14 2024 predictions meena rashi dina bhavishya love relationship finance smk ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೀನ ರಾಶಿ ಭವಿಷ್ಯ ಆಗಸ್ಟ್‌ 14: ಅನಗತ್ಯ ಖರ್ಚು ಮಾಡಬೇಡಿ, ಸಂಗಾತಿಯೊಂದಿಗೆ ಹೊಂದಾಣಿಕೆ ಮುಖ್ಯ

ಮೀನ ರಾಶಿ ಭವಿಷ್ಯ ಆಗಸ್ಟ್‌ 14: ಅನಗತ್ಯ ಖರ್ಚು ಮಾಡಬೇಡಿ, ಸಂಗಾತಿಯೊಂದಿಗೆ ಹೊಂದಾಣಿಕೆ ಮುಖ್ಯ

Pisces Daily Horoscope August 14, 2024: ರಾಶಿ ಚಕ್ರಗಳ ಪೈಕಿ ಕೊನೆಯದ್ದು ಮೀನರಾಶಿ. 12ನೇರಾಶಿಚಕ್ರದಲ್ಲಿ ಚಂದ್ರ ಸಾಗುವ ಸಮಯದಲ್ಲಿ ಜನಿಸಿದವರ ರಾಶಿಚಕ್ರ ಇದು. ಆಗಸ್ಟ್‌ 8ರಮೀನ ರಾಶಿಭವಿಷ್ಯದ ಪ್ರಕಾರ ಈ ದಿನ ತುಂಬಾ ಉತ್ತಮವಾದ ದಿನ. ನೀವು ಮಾಡಬೇಕು ಎಂದು ಮುಂದೂಡಿದ ಕೆಲಸ ಇಂದು ನೆರವೇರಲಿದೆ.

ಮೀನ ರಾಶಿ ಭವಿಷ್ಯ ಆಗಸ್ಟ್‌ 14:
ಮೀನ ರಾಶಿ ಭವಿಷ್ಯ ಆಗಸ್ಟ್‌ 14:

ಮೀನ ರಾಶಿ ದಿನಭವಿಷ್ಯ ಆಗಸ್ಟ್‌ 14: ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯುವ ಮೂಲ ಪ್ರೇಮಿಯೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಕೆಲಸದಲ್ಲಿನ ಶಿಸ್ತು ನಿಮ್ಮ ವೃತ್ತಿ ಜೀವನದ ಯಶಸ್ಸಿಗೆ ಕಾರಣವಾಗಲಿದೆ. ಸಣ್ಣಪುಟ್ಟ ವೈದ್ಯಕೀಯ ಸಮಸ್ಯೆಗಳು ಬರಬಹುದು. ಒಟ್ಟಾರೆ ಇಂದು ನಿಮಗೆ ಉತ್ತಮ ದಿನ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ಮೀನ ರಾಶಿ ಪ್ರೇಮ ಭವಿಷ್ಯ (Pisces Love Horoscope): ಇಂದು ನಿಮಗೆ ನಿಮ್ಮ ಪ್ರೇಮ ಜೀವನದಲ್ಲಿ ಹೊಂದಾಣಿಕೆ ಮಾಡಿಕೊಂಡು ಸಾಗುವುದು ಮುಖ್ಯವಾಗುತ್ತದೆ. ನಿಮ್ಮ ಸಂಗಾತಿಗೆ ತಾನು ಒಂಟಿ ಎಂದು ಯಾವಾಗಲೂ ಅನಿಸುವಂತೆ ಮಾಡಬೇಡಿ. ನೀವು ಕಡಿಮೆ ಮಾತನಾಡಿ ನಿಮ್ಮ ಸಂಗಾತಿ ಯಾವ ವಿಚಾರವನ್ನು ಹೇಳುತ್ತಾರೆ ಎಂದು ನೀವೇ ಸ್ವತಃ ಆಲಿಸಿ. ಅಥವಾ ನೀವು ಇದುವರೆಗೂ ಒಂಟಿಯಾಗಿದ್ದರೆ ಇನ್ನು ಮುಂದೆ ಪ್ರೇಮದಲ್ಲಿ ಬೀಳು ಅವಕಾಶ ಹೆಚ್ಚಿದೆ. ಪಾರದರ್ಶಕವಾಗಿರುವುದು ಬಂಧಗಳನ್ನು ಬಲಪಡಿಸುತ್ತದೆ. ಹಾಗಾಗಿ ಯಾವುದೇ ಮುಚ್ಚಮರೆ ಮಾಡಬೇಡಿ.

ಮೀನ ರಾಶಿ ವೃತ್ತಿ ಭವಿಷ್ಯ (Pisces Professional Horoscope): ಹೊಸ ಅವಕಾಶ ನಿಮ್ಮನ್ನರಸಿ ಬರಲಿದೆ. ಹೊಸ ಕೌಶಲ್ಯಗಳನ್ನು ಕಲಿಯಲು ಅಥವಾ ವಿಭಿನ್ನ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ನೀವು ರೆಡಿ ಆಗಿರುವುದು ಮುಖ್ಯ. ನಿಮ್ಮ ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳನ್ನು ಮೇಲಧಿಕಾರಿಗಳು ಗಮನಿಸುತ್ತಾರೆ. ಸಹೋದ್ಯೋಗಿಗಳೊಂದಿಗೆ ನಿಮ್ಮ ವಿಚಾರವನ್ನು ಹಂಚಿಕೊಂಡು ಅವರ ಅಭಿಪ್ರಾಯವನ್ನು ಪಡೆದುಕೊಳ್ಳಿ. ನಿಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಸಮಯ ಇದೀಗ ಬಂದಿದೆ. ನಿಮ್ಮ ವೃತ್ತಿಜೀವನದಲ್ಲಿ ಗಮನಾರ್ಹ ದಾಪುಗಾಲುಗಳನ್ನು ಇಡುಲು ರೆಡಿಯಾಗಿ.

ಮೀನ ರಾಶಿ ಹಣಕಾಸು ಭವಿಷ್ಯ (Pisces Money Horoscope): ಆರ್ಥಿಕವಾಗಿ, ಇಂದು ನೀವೊಮ್ಮೆ ಎಲ್ಲವನ್ನೂ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ. ಅಂದರೆ ನಿಮ್ಮದೇ ಹಣ ಎಷ್ಟು ಖರ್ಚಾಗಿದೆ? ಎಷ್ಟು ಉಳಿದುಕೊಂಡಿದೆ ಎಂದು ಒಮ್ಮೆ ಪರಿಶೀಲನೆ ಮಾಡಿ. ನೀವು ಹೊಸದಾಗಿ ಏನನ್ನಾದರೂ ಮಾಡಲು ಹೊರಟಿದ್ದರೆ ಒಬ್ಬರೇ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ. ವಿಶ್ವಾಸಾರ್ಹ ಸಲಹೆಗಾರರಿಂದ ಸಲಹೆ ಪಡೆಯಿರಿ. ದೀರ್ಘಕಾಲೀನ ಆರ್ಥಿಕ ಭದ್ರತೆ ಮತ್ತು ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಯೋಜನೆ ಅಗತ್ಯವಿದೆ.

ಮೀನ ರಾಶಿ ಆರೋಗ್ಯ ಭವಿಷ್ಯ (Pisces Health Horoscope): ಇಂದು ನಿಮ್ಮ ಒಟ್ಟಾರೆ ಯೋಗಕ್ಷೇಮದತ್ತ ಗಮನಹರಿಸಿ. ಒತ್ತಡವನ್ನು ನಿರ್ವಹಿಸಲು ಧ್ಯಾನ ಅಥವಾ ವ್ಯಾಯಾಮ ಮಾಡಿ. ಒಂದು ಸಣ್ಣ ನಡಿಗೆ ಕೂಡ ನಿಮ್ಮ ಮನಸ್ಥಿತಿ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಬಹುದು. ನಿಮ್ಮ ದೇಹದ ಅಗತ್ಯಗಳನ್ನು ಪೂರೈಸಲು ನೀವು ಸಾಕಷ್ಟು ನೀರು ಕುಡಿಯಬೇಕು ಮತ್ತು ಆಹಾರ ಸೇವನೆ ಮಾಡಬೇಕು. ಅಗತ್ಯವಿದ್ದರೆ ವಿಶ್ರಾಂತಿ ಪಡೆಯಿರಿ. ಸ್ವಯಂ-ಆರೈಕೆಗೆ ಆದ್ಯತೆ ನೀಡುವುದರಿಂದ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಮೀನ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ಮೀನ ರಾಶಿಯ ಅಧಿಪತಿ: ಗುರು, ಮೀನ ರಾಶಿಯವರಿಗೆ ಶುಭ ದಿನಾಂಕಗಳು: 1,3,4 ಮತ್ತು9, ಮೀನ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಮಂಗಳವಾರ ಮತ್ತು ಗುರುವಾರ, ಮೀನ ರಾಶಿಯವರಿಗೆ ಶುಭ ವರ್ಣ: ಕೆಂಪು, ಹಳದಿ ಮತ್ತು ರೋಸ್, ಮೀನ ರಾಶಿಯವರಿಗೆ ಅಶುಭ ವರ್ಣ: ನೀಲಿ, ಮೀನ ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ಮೀನ ರಾಶಿಯವರಿಗೆ ಶುಭ ತಿಂಗಳು: ಡಿಸೆಂಬರ್ 15ರಿಂದ ಜನವರಿ 14, ಮೀನ ರಾಶಿಯವರಿಗೆ ಶುಭ ಹರಳು: ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ಮೀನ ರಾಶಿಯವರಿಗೆ ಶುಭ ರಾಶಿ: ಕಟಕ, ವೃಶ್ಚಿಕ ಮತ್ತು ಮೀನ, ಮೀನ ರಾಶಿಯವರಿಗೆ ಅಶುಭ ರಾಶಿ: ಕನ್ಯಾ, ಕುಂಭ, ವೃಷಭ ಮತ್ತು ತುಲಾ.

ಮೀನ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1) ಇಂದ್ರಾಕ್ಷಿ ಸ್ತೋತ್ರ: ಪ್ರತಿದಿನ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೆಲಸ-ಕಾರ್ಯಗಳಿಗೆ ಎದುರಾಗುವ ಅಡ್ಡಿ, ಆತಂಕಗಳು ದೂರವಾಗಲಿವೆ. ಋಣಾತ್ಮಕ ಶಕ್ತಿಯು ಮನೆ ಮತ್ತು ಮನದಿಂದ ದೂರವಾಗುವುದು.

2) ಈ ದಾನಗಳಿಂದ ಶುಭ ಫಲ: ಎಳ್ಳು ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ಹಣದ ತೊಂದರೆ ಕಡಿಮೆ ಆಗಲಿದೆ.

3) ದೇವಾಲಯ ಮತ್ತು ದೇವರ ಪೂಜೆ: ಶ್ರೀ ವಿಷ್ಣು ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಅನುಕೂಲಗಳು ದೊರೆಯಲಿವೆ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು ಮತ್ತು ಕೇಸರಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.