ಮೀನ ರಾಶಿ ಭವಿಷ್ಯ ಆಗಸ್ಟ್‌ 21: ಆತ್ಮವಿಶ್ವಾಸ ಮುಖ್ಯ, ನೀವು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಅನುಮಾನ ಬೇಡ-pisces daily horoscope today august 21 2024 predictions kumbha rashi dina bhavishya love relations money smk ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೀನ ರಾಶಿ ಭವಿಷ್ಯ ಆಗಸ್ಟ್‌ 21: ಆತ್ಮವಿಶ್ವಾಸ ಮುಖ್ಯ, ನೀವು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಅನುಮಾನ ಬೇಡ

ಮೀನ ರಾಶಿ ಭವಿಷ್ಯ ಆಗಸ್ಟ್‌ 21: ಆತ್ಮವಿಶ್ವಾಸ ಮುಖ್ಯ, ನೀವು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಅನುಮಾನ ಬೇಡ

Pisces Daily Horoscope 20 August 2024: ರಾಶಿ ಚಕ್ರಗಳ ಪೈಕಿ ಕೊನೆಯದ್ದು ಮೀನ ರಾಶಿ. 12 ನೇ ರಾಶಿಚಕ್ರದಲ್ಲಿ ಚಂದ್ರ ಸಾಗುವ ಸಮಯದಲ್ಲಿ ಜನಿಸಿದವರ ರಾಶಿಚಕ್ರ ಇದು. ಈ ದಿನ ಮೀನ ರಾಶಿಯವರಿಗೆ ಯಾವ ರೀತಿ ಫಲಗಳು ದೊರೆಯಲಿವೆ ನೋಡೋಣ.

ಮೀನ ರಾಶಿ ಭವಿಷ್ಯ ಆಗಸ್ಟ್‌ 21
ಮೀನ ರಾಶಿ ಭವಿಷ್ಯ ಆಗಸ್ಟ್‌ 21

ಮೀನ ರಾಶಿ ದಿನ ಭವಿಷ್ಯ ಆಗಸ್ಟ್‌ 21: ಪ್ರೀತಿಯ ವಿಷಯಗಳಲ್ಲಿ ಪ್ರಾಮಾಣಿಕತೆ ಕಾಪಾಡಿಕೊಳ್ಳುವುದು ಮುಖ್ಯ. ಇಂದು ಪರಸ್ಪರ ಸಾಧ್ಯವಾದಷ್ಟು ಒಟ್ಟಿಗೆ ಸಮಯ ಕಳೆಯಿರಿ. ಎಲ್ಲಾ ಕೆಲಸದ ಸವಾಲುಗಳನ್ನು ಸಕಾರಾತ್ಮಕ ಮನೋಭಾವದಿಂದ ನಿಭಾಯಿಸಿ. ಹಣಕಾಸಿನ ವಿಚಾರದಲ್ಲಿ ದಿನ ಉತ್ತಮವಾಗಿರುತ್ತದೆ. ಯಾವುದೇ ಪ್ರಮುಖ ವೈದ್ಯಕೀಯ ಸಮಸ್ಯೆಯು ದಿನದ ಮೇಲೆ ಪರಿಣಾಮ ಬೀರುವುದಿಲ್ಲ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ಮೀನ ರಾಶಿಯ ಪ್ರೇಮ ಜೀವನ (Pisces Love Horoscope): ಇಂದು ನೀವು ನಿಮ್ಮ ಸಂಗಾತಿಯನ್ನು ಭೇಟಿಯಾದಾಗ ಮನಬಿಚ್ಚಿ ಮಾತನಾಡಿ. ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ಹೀಗೆ ಮಾಡುವುದರಿಂದ ನೀವಿಬ್ಬರು ಹತ್ತಿರವಾಗಲು ಸಾಧ್ಯವಾಗುತ್ತದೆ. ಮೀನ ರಾಶಿಯವರು ಯಾವಾಗಲೂ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಇರುತ್ತಾರೆ. ಇದೇ ಅವರನ್ನು ಕಾಯುತ್ತದೆ. ತುಂಬಾ ಭಾವನಾತ್ಮಕ ಸಂಬಂಧದಲ್ಲಿ ಸಿಕ್ಕಿ ಅದನ್ನು ಉಳಿಸಿಕೊಳ್ಳಲು ನೀವು ಹಾತೊರೆಯುತ್ತಾ ಇರುತ್ತೀರ. ನಿಮ್ಮ ಈ ಅನುಭವ ನಿಮಗೆ ಸಂತೋಷ ನೀಡಬಹುದು.

ಮೀನ ರಾಶಿ ಉದ್ಯೋಗ ಭವಿಷ್ಯ (Pisces Professional Horoscope): ನಿಮ್ಮ ವೃತ್ತಿಪರ ಜೀವನದಲ್ಲಿ, ಹೊಂದಿಕೊಳ್ಳುವಿಕೆ ಇಂದು ತುಂಬಾ ಮುಖ್ಯ. ನೀವು ಅನಿರೀಕ್ಷಿತ ಬದಲಾವಣೆಗಳು ಅಥವಾ ಸವಾಲುಗಳನ್ನು ಎದುರಿಸಬಹುದು. ಆದರೆ ನೀವು ಬದಲಾವಣೆ ತಂದುಕೊಳ್ಳುವುದಕ್ಕಿಂತ ಮೊದಲು ಒಮ್ಮೆ ಸತ್ಯವನ್ನು ಆಲೋಚಿಸಿ ನೋಡಿ. ನಿಮ್ಮ ಸಾಮರ್ಥ್ಯವು ನಿಮಗೇ ಒಮ್ಮೆ ತಿಳಿಯುತ್ತದೆ. ಆದ್ದರಿಂದ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ಇತರರನ್ನು ಕೇಳಲು ಹಿಂಜರಿಯಬೇಡಿ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿಮ್ಮನ್ನೇ ನೀವು ನಂಬಿ.

ಮೀನ ರಾಶಿ ಆರ್ಥಿಕ ಭವಿಷ್ಯ (Pisces Money Horoscope): ಆರ್ಥಿಕವಾಗಿ ಇಂದು ನಿಮಗೆ ಮಿಶ್ರಫಲ. ಇತ್ತ ಲಾಭವೂ ಅತ್ತ ನಷ್ಟವೂ ಎರಡೂ ಆಗುತ್ತದೆ. ಯಾವುದಕ್ಕೂ ನೀವು ಬೇಸರ ಪಡುವ ಅಗತ್ಯವಿಲ್ಲ. ಹಣಕಾಸಿನ ಬೆಳವಣಿಗೆಗೆ ಅವಕಾಶಗಳು ಸಹ ನಿಮಗೆ ಒದಗಿ ಬರುತ್ತದೆ. ನಿಮ್ಮ ಬಜೆಟ್ ಮೇಲೆ ಕಣ್ಣಿಡಿ. ಅಗತ್ಯವಿಲ್ಲದ ವಸ್ತುಗಳನ್ನು ಖರೀದಿ ಮಾಡಬೇಡಿ. ಈ ರೀತಿ ಮಾಡುವುದರಿಂದ ಅನವಶ್ಯಕ ಖರ್ಚಾಗುತ್ತದೆ. ಏನೇ ಖರೀದಿ ಮಾಡುವಾಗಲೂ ಎರಡು ಬಾರಿ ಆಲೋಚನೆ ಮಾಡಿ ಆ ನಂತರ ನಿರ್ಧಾರ ತೆಗೆದುಕೊಳ್ಳಿ. ಆದರೆ ಇಂದಿನ ಮಟ್ಟಿಗೆ ನಿಮ್ಮ ನಿರ್ಧಾರ ಸರಿಯಾಗೇ ಇರುತ್ತದೆ.

ಮೀನ ರಾಶಿ ಆರೋಗ್ಯ ಭವಿಷ್ಯ (Pisces Health Horoscope):

ನಿಮ್ಮ ಭಾವನಾತ್ಮಕ ಮತ್ತು ದೈಹಿಕ ಯೋಗಕ್ಷೇಮ ಇಂದು ಹೆಣೆದುಕೊಂಡಿದೆ. ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಶ್ರಾಂತಿ ಬೇಕೇ ಬೇಕು. ವಿಶ್ರಾಂತಿ ಪಡೆಯಲು ಸಮಯ ತೆಗೆದುಕೊಳ್ಳಿ. ಯೋಗ, ಧ್ಯಾನ ಅಥವಾ ವಾಕಿಂಗ್ ಮಾಡಿ. ನಿಮ್ಮ ಆಹಾರಕ್ರಮಕ್ಕೆ ಗಮನ ಕೊಡಿ. ಒತ್ತಡದ ಜೀವನವನ್ನು ಬದುಕುವುದು ಸರಿ ಅಲ್ಲ. ಇದರಿಂದಲೇ ಸಮಸ್ಯೆಗಳು ಆರಂಭವಾಗುತ್ತದೆ. ಆ ಕಾರಣಕ್ಕಾಗಿ ನೀವು ಅಗತ್ಯ ಇರುವಷ್ಟು ವಿಶ್ರಾಂತಿ ಪಡೆಯುತ್ತಿದ್ದೀರಾ? ಇಲ್ಲವಾ? ಎಂದು ಗಮನಿಸಿಕೊಳ್ಳಿ.

ಇದನ್ನೂ ಓದಿ: ಸಿಂಹ ರಾಶಿ ಭವಿಷ್ಯ ಆಗಸ್ಟ್‌ 21: ಸಹೋದ್ಯೋಗಿಗಳೊಂದಿಗೆ ಅನಗತ್ಯ ವಾದಗಳನ್ನು ತಪ್ಪಿಸಿ, ಆಸ್ತಿಗೆ ಸಂಬಂಧಿಸಿದ ವಿವಾದಗಳು ಬಗೆಹರಿಯಲಿವೆ

ಮೀನ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ಮೀನ ರಾಶಿಯ ಅಧಿಪತಿ: ಗುರು, ಮೀನ ರಾಶಿಯವರಿಗೆ ಶುಭ ದಿನಾಂಕಗಳು: 1,3,4 ಮತ್ತು9, ಮೀನ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಮಂಗಳವಾರ ಮತ್ತು ಗುರುವಾರ, ಮೀನ ರಾಶಿಯವರಿಗೆ ಶುಭ ವರ್ಣ: ಕೆಂಪು, ಹಳದಿ ಮತ್ತು ರೋಸ್, ಮೀನ ರಾಶಿಯವರಿಗೆ ಅಶುಭ ವರ್ಣ: ನೀಲಿ, ಮೀನ ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ಮೀನ ರಾಶಿಯವರಿಗೆ ಶುಭ ತಿಂಗಳು: ಡಿಸೆಂಬರ್ 15ರಿಂದ ಜನವರಿ 14, ಮೀನ ರಾಶಿಯವರಿಗೆ ಶುಭ ಹರಳು: ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ಮೀನ ರಾಶಿಯವರಿಗೆ ಶುಭ ರಾಶಿ: ಕಟಕ, ವೃಶ್ಚಿಕ ಮತ್ತು ಮೀನ, ಮೀನ ರಾಶಿಯವರಿಗೆ ಅಶುಭ ರಾಶಿ: ಕನ್ಯಾ, ಕುಂಭ, ವೃಷಭ ಮತ್ತು ತುಲಾ.

ಮೀನ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1) ಇಂದ್ರಾಕ್ಷಿ ಸ್ತೋತ್ರ: ಪ್ರತಿದಿನ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೆಲಸ-ಕಾರ್ಯಗಳಿಗೆ ಎದುರಾಗುವ ಅಡ್ಡಿ, ಆತಂಕಗಳು ದೂರವಾಗಲಿವೆ. ಋಣಾತ್ಮಕ ಶಕ್ತಿಯು ಮನೆ ಮತ್ತು ಮನದಿಂದ ದೂರವಾಗುವುದು.

2) ಈ ದಾನಗಳಿಂದ ಶುಭ ಫಲ: ಎಳ್ಳು ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ಹಣದ ತೊಂದರೆ ಕಡಿಮೆ ಆಗಲಿದೆ.

3) ದೇವಾಲಯ ಮತ್ತು ದೇವರ ಪೂಜೆ: ಶ್ರೀ ವಿಷ್ಣು ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಅನುಕೂಲಗಳು ದೊರೆಯಲಿವೆ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು ಮತ್ತು ಕೇಸರಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.