ಮೀನ ರಾಶಿ ಭವಿಷ್ಯ ಆಗಸ್ಟ್ 8: ಖರ್ಚಿನ ಮೇಲೆ ನಿಗಾ ವಹಿಸುವುದು ಭವಿಷ್ಯಕ್ಕೆ ಉತ್ತಮ, ಗರ್ಭಿಣಿಯರು ಪ್ರಯಾಣದ ವೇಳೆ ಎಚ್ಚರ ವಹಿಸಿ
Pisces Daily Horoscope August 8, 2024:ರಾಶಿಚಕ್ರಗಳಪೈಕಿಕೊನೆಯದ್ದುಮೀನರಾಶಿ. 12ನೇರಾಶಿಚಕ್ರದಲ್ಲಿಚಂದ್ರಸಾಗುವಸಮಯದಲ್ಲಿಜನಿಸಿದವರರಾಶಿಚಕ್ರಇದು.ಆಗಸ್ಟ್ 8ರಮೀನರಾಶಿಭವಿಷ್ಯದಪ್ರಕಾರಈ ದಿನ ತುಂಬಾ ಉತ್ತಮವಾದ ದಿನ. ನೀವು ಮಾಡಬೇಕು ಎಂದು ಮುಂದೂಡಿದ ಕೆಲಸ ಇಂದು ನೆರವೇರಲಿದೆ.
ಮೀನ ರಾಶಿ ದಿನಭವಿಷ್ಯ ಆಗಸ್ಟ್ 8: ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯುವ ಮೂಲ ಪ್ರೇಮಿಯೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಕೆಲಸದಲ್ಲಿನ ಶಿಸ್ತು ನಿಮ್ಮ ವೃತ್ತಿ ಜೀವನದ ಯಶಸ್ಸಿಗೆ ಕಾರಣವಾಗಲಿದೆ. ಸಣ್ಣಪುಟ್ಟ ವೈದ್ಯಕೀಯ ಸಮಸ್ಯೆಗಳು ಬರಬಹುದು. ಒಟ್ಟಾರೆ ಇಂದು ನಿಮಗೆ ಉತ್ತಮ ದಿನ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ಮೀನ ರಾಶಿ ಪ್ರೇಮ ಭವಿಷ್ಯ (Pisces Love Horoscope)
ಇಂದು ನಿಮ್ಮ ಸಂಗಾತಿಯೊಡನೆ ಸಣ್ಣ ಜಗಳ ಆಗಬಹುದು ಆದರೆ ಅದು ನಿಮ್ಮ ಪ್ರೇಮಕ್ಕೇನು ಅಡ್ಡಿ ಆಗುವುದಿಲ್ಲ. ನಿಮ್ಮಿಬ್ಬರ ಸಂಬಂಧದ ಮೇಲೆ ಯಾವುದೇ ಗಂಭೀರ ಪರಿಣಾಮ ಬೀರುವುದಿಲ್ಲ. ಒಟ್ಟಿಗೆ ಸಮಯ ಕಳೆಯಿರಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಒಬ್ಬರು ಇನ್ನೊಬ್ಬರ ನಿರ್ಧಾರಕ್ಕೆ ಮತ್ತು ಅಭಿಪ್ರಾಯಕ್ಕೆ ಆದ್ಯತೆ ಕೊಟ್ಟು ಪರಿಗಣಿಸಿ. ನಿಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಸಂಗಾತಿಯ ಮೇಲೆ ಹೇರಬೇಡಿ. ನೀವು ಮದುವೆ ಆಗಲು ನಿರ್ಧರಿಸಿದ್ದರೆ ಇಂದೇ ಅವರನ್ನೊಮ್ಮೆ ಕೇಳಿ ಇದೇ ಅತ್ಯುತ್ತಮ ಸಮಯ. ಈಗಲೇ ಮದುವೆ ಆಗಿದ್ದವರು ನಿಮ್ಮ ವೈವಾಹಿಕ ಜೀವನದ ಮೇಲೆ ಇನ್ನಷ್ಟು ಗಮನ ನೀಡುವ ಅನಿವಾರ್ಯತೆ ಇದೆ.
ಮೀನ ರಾಶಿ ವೃತ್ತಿ ಭವಿಷ್ಯ (Pisces Professional Horoscope)
ನಿಮ್ಮ ಗಮನವು ಕೇವಲ ಕೆಲಸದ ಮೇಲಿರಬೇಕು. ಕಚೇರಿಯಲ್ಲಿ ಗಾಸಿಪ್ ಅನ್ನು ಬಿಟ್ಟುಬಿಡಿ. ಇಂದು ನಿಮ್ಮ ಕಚೇರಿಯ ಮೀಟಿಂಗ್ನಲ್ಲಿ ನೀವು ಎಲ್ಲವನ್ನೂ ಅರ್ಥ ಮಾಡಿಕೊಂಡು ನಂತರ ಮಾತನಾಡಿ. ವಿದೇಶಕ್ಕೆ ತೆರಳಲು ಬಯಸುವವರಿಗೆ ಅವಕಾಶಗಳು ತೆರೆದುಕೊಳ್ಳಲಿದೆ. ಗ್ರಾಹಕರು ಹಾಗೂ ನಿಮಗಿಂತ ಹಿರಿಯರಿಂದ ಕೆಲವು ಟೀಕೆಗಳನ್ನು ಎದುರಿಸಲು ಸಿದ್ಧರಾಗಿರಿ. ಯಾವಾಗಲೂ 'ಪ್ಲಾನ್ ಬಿ' ಯೊಂದಿಗೆ ಸಿದ್ಧರಾಗಿರಿ. ಉದ್ಯಮಿಗಳು ವ್ಯಾಪಾರವನ್ನು ಹೊಸ ಕ್ಷೇತ್ರಗಳಿಗೆ ವಿಸ್ತರಿಸುವ ಆಲೋಚನೆಯೊಂದಿಗೆ ಮುಂದುವರಿಯಬಹುದು. ಕೆಲವು ವ್ಯಾಪಾರಿಗಳು ಇಂದು ಪರವಾನಗಿ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಾರೆ.
ಮೀನ ರಾಶಿ ಹಣಕಾಸು ಭವಿಷ್ಯ (Pisces Money Horoscope)
ಇಂದು ನೀವು ಹಣವನ್ನು ವ್ಯಯ ಮಾಡುವಾಗ ಸ್ವಲ್ಪ ಯೋಚಿಸಿ ಮಾಡಿ. ಯಾಕೆಂದರೆ ಈ ದಿನದ ಆರಂಭದಲ್ಲಿ ನಿಮಗೆ ಸ್ವಲ್ಪ ಸಮಸ್ಯೆ ಆಗುವ ಸಾಧ್ಯತೆ ಇದೆ. ಆದರೆ ದಿನ ಮುಂದುವರೆದಂತೆ ಸಮಸ್ಯೆ ಆಗುವುದಿಲ್ಲ. ಹೆಚ್ಚು ಹೂಡಿಕೆ ಮಾಡುವುದರತ್ತ ನಿಮ್ಮ ಗಮನವಿರಲಿ, ಹೆಚ್ಚು ಖರ್ಚು ಮಾಡುವುದಲ್ಲ. ಅಸ್ತಿ ವಿಚಾರದಲ್ಲಿ ಗಮನ ಇರಲಿ. ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಖರೀದಿಸಲು ಉತ್ಸುಕರಾಗಿರುವವರು ದಿನದ ದ್ವಿತೀಯಾರ್ಧದಲ್ಲಿ ಅವುಗಳನ್ನು ಖರೀದಿಸಬಹುದು. ಬಾಕಿ ಉಳಿದಿರುವ ಎಲ್ಲಾ ಹಣವನ್ನು ತೀರಿಸುವಲ್ಲಿ ಉದ್ಯಮಿಗಳು ಯಶಸ್ವಿಯಾಗುತ್ತಾರೆ. ಕೆಲವು ವ್ಯಾಪಾರಿಗಳು ವಿದೇಶಿ ಕರೆನ್ಸಿಯಲ್ಲಿ ಪಾವತಿಗಳನ್ನು ಪಡೆಯುತ್ತಾರೆ.
ಮೀನ ರಾಶಿ ಆರೋಗ್ಯ ಭವಿಷ್ಯ (Pisces Health Horoscope)
ಇಂದು ಮೀನ ರಾಶಿಯವರಿಗೆ ಜ್ವರ, ಚರ್ಮಕ್ಕೆ ಸಂಬಂಧಿಸಿದ ಸೋಂಕು ಮತ್ತು ಸಣ್ಣ ಕಡಿತಗಳು ಸಾಮಾನ್ಯವಾಗಿರುತ್ತದೆ. ವ್ಯಾಯಾಮವನ್ನು ದಿನಚರಿಯ ಭಾಗವಾಗಿಸಿ. ಯೋಗ ಮತ್ತು ಧ್ಯಾನ ನಿಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿಡಲು ಸಹಕಾರಿ. ಗರ್ಭಿಣಿಯರು ಪ್ರಯಾಣಿಸುವಾಗ ಅಥವಾ ಬಸ್ ಹತ್ತುವಾಗ ಜಾಗರೂಕರಾಗಿರಬೇಕು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಹೆಚ್ಚು ಜಾಗರೂಕರಾಗಿರಬೇಕು.
ಮೀನ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಮೀನ ರಾಶಿಯ ಅಧಿಪತಿ: ಗುರು, ಮೀನ ರಾಶಿಯವರಿಗೆ ಶುಭ ದಿನಾಂಕಗಳು: 1,3,4 ಮತ್ತು9, ಮೀನ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಮಂಗಳವಾರ ಮತ್ತು ಗುರುವಾರ, ಮೀನ ರಾಶಿಯವರಿಗೆ ಶುಭ ವರ್ಣ: ಕೆಂಪು, ಹಳದಿ ಮತ್ತು ರೋಸ್, ಮೀನ ರಾಶಿಯವರಿಗೆ ಅಶುಭ ವರ್ಣ: ನೀಲಿ, ಮೀನ ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ಮೀನ ರಾಶಿಯವರಿಗೆ ಶುಭ ತಿಂಗಳು: ಡಿಸೆಂಬರ್ 15ರಿಂದ ಜನವರಿ 14, ಮೀನ ರಾಶಿಯವರಿಗೆ ಶುಭ ಹರಳು: ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ಮೀನ ರಾಶಿಯವರಿಗೆ ಶುಭ ರಾಶಿ: ಕಟಕ, ವೃಶ್ಚಿಕ ಮತ್ತು ಮೀನ, ಮೀನ ರಾಶಿಯವರಿಗೆ ಅಶುಭ ರಾಶಿ: ಕನ್ಯಾ, ಕುಂಭ, ವೃಷಭ ಮತ್ತು ತುಲಾ.
ಮೀನ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1) ಇಂದ್ರಾಕ್ಷಿ ಸ್ತೋತ್ರ: ಪ್ರತಿದಿನ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೆಲಸ-ಕಾರ್ಯಗಳಿಗೆ ಎದುರಾಗುವ ಅಡ್ಡಿ, ಆತಂಕಗಳು ದೂರವಾಗಲಿವೆ. ಋಣಾತ್ಮಕ ಶಕ್ತಿಯು ಮನೆ ಮತ್ತು ಮನದಿಂದ ದೂರವಾಗುವುದು.
2) ಈ ದಾನಗಳಿಂದ ಶುಭ ಫಲ: ಎಳ್ಳು ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ಹಣದ ತೊಂದರೆ ಕಡಿಮೆ ಆಗಲಿದೆ.
3) ದೇವಾಲಯ ಮತ್ತು ದೇವರ ಪೂಜೆ: ಶ್ರೀ ವಿಷ್ಣು ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಅನುಕೂಲಗಳು ದೊರೆಯಲಿವೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು ಮತ್ತು ಕೇಸರಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ವಿಭಾಗ