ಮೀನ ರಾಶಿ ಭವಿಷ್ಯ ಆಗಸ್ಟ್ 9: ಉದ್ಯೋಗದಲ್ಲಿ ಏಳಿಗೆ, ಹಣ ಖರ್ಚು ಮಾಡುವಾಗ ಜಾಗರೂಕರಾಗಿ
Pisces Daily Horoscope August 9, 2024: ರಾಶಿ ಚಕ್ರಗಳ ಪೈಕಿ ಕೊನೆಯದ್ದು ಮೀನ ರಾಶಿ. 12 ನೇ ರಾಶಿಚಕ್ರದಲ್ಲಿ ಚಂದ್ರ ಸಾಗುವ ಸಮಯದಲ್ಲಿ ಜನಿಸಿದವರ ರಾಶಿಚಕ್ರ ಇದು. ಆಗಸ್ಟ್ 9ರ ಮೀನ ರಾಶಿ ಭವಿಷ್ಯದ ಪ್ರಕಾರ, ಇಂದು ಅನವಶ್ಯಕ ಹಣ ಖರ್ಚಾಗುವ ಸಾಧ್ಯತೆ ಇದೆ ಎಚ್ಚರಿಕೆಯಿಂದಿರಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲು ಇದು ಒಳ್ಳೆ ದಿನ.
ಮೀನ ರಾಶಿಯವರ ಇಂದಿನ (ಆಗಸ್ಟ್ 9, ಶುಕ್ರವಾರ) ದಿನ ಭವಿಷ್ಯದಲ್ಲಿ ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯುವ ಮೂಲ ಪ್ರೇಮಿಯೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಕೆಲಸದಲ್ಲಿನ ಶಿಸ್ತು ನಿಮ್ಮ ವೃತ್ತಿ ಜೀವನದ ಯಶಸ್ಸಿಗೆ ಕಾರಣವಾಗಲಿದೆ. ಸಣ್ಣಪುಟ್ಟ ವೈದ್ಯಕೀಯ ಸಮಸ್ಯೆಗಳು ಬರಬಹುದು. ಒಟ್ಟಾರೆ ಇಂದು ನಿಮಗೆ ಉತ್ತಮ ದಿನ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ಮೀನ ರಾಶಿ ಪ್ರೇಮ ಭವಿಷ್ಯ (Pisces Love Horoscope)
ಪ್ರೀತಿಯ ಸಂಬಂಧದಲ್ಲಿ ಆಹ್ಲಾದಕರ ಕ್ಷಣಗಳನ್ನು ಕಳೆಯಲಿದ್ದೀರಿ. ದಿನಾರಂಭದಲ್ಲಿ ಒಂದು ಸಣ್ಣ ಜಗಳವಾಗುತ್ತದೆ. ಆದರೂ ನಿಮ್ಮ ಪ್ರೀತಿ ಹಾಗೇ ಇರಲಿದೆ. ಪ್ರೀತಿಯ ಸಂಬಂಧವನ್ನು ಗೌರವಿಸಿ ಮತ್ತು ನಿಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಂಡು ಮುನ್ನಡೆಯಿರಿ. ಕಛೇರಿಯ ಸಮಾರಂಭದಲ್ಲಿ ಅಥವಾ ಕುಟುಂಬದ ಸಮಾರಂಭದಲ್ಲಿ ಆಸಕ್ತಿದಾಯಕ ವ್ಯಕ್ತಿಯನ್ನು ನೀವು ಇಂದು ಕಾಣಬಹುದು, ಅವರು ನಿಮಗೆ ಪ್ರಿಯರಾಗಬಹುದು.
ಮೀನ ರಾಶಿ ಉದ್ಯೋಗ ಭವಿಷ್ಯ (Pisces Professional Horoscope)
ನೀವು ಕಚೇರಿಯಲ್ಲಿ ಬೆಳೆಯುವ ಅವಕಾಶವನ್ನು ಹೊಂದಿದ್ದರೆ ಅದನ್ನು ಈಗಲೇ ಸದುಪಯೋಗ ಮಾಡಿಕೊಳ್ಳಿ. ವೃತ್ತಿ ಜೀವನಕ್ಕೆ ಇಂದು ಶುಭದಿನ. ಆ ಕಾರಣ ನಿಮ್ಮ ಎಲ್ಲ ಬಾಕಿ ಉಳಿದಿದ್ದ ಕೆಲಸಗಳನ್ನು ಮಾಡಿ. ದಿನದ ಆಗುಹೋಗುಗಳನ್ನು ಪಟ್ಟಿ ಮಾಡಿಕೊಳ್ಳಿ. ಕೆಲವು ವೃತ್ತಿಪರರು ಕೆಲಸದ ಕಾರಣಗಳಿಗಾಗಿ ಪ್ರಯಾಣಿಸಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ವಿವಾದಗಳಿಂದ ದೂರವಿರಿ. ಕೆಲವು ಐಟಿ ಮತ್ತು ಮೆಕ್ಯಾನಿಕಲ್ ವೃತ್ತಿಪರರು ವಿದೇಶಕ್ಕೆ ತೆರಳುತ್ತಾರೆ. ಉದ್ಯೋಗ ಬದಲಾಯಿಸಲು ಉತ್ಸುಕರಾಗಿರುವವರು ಸಂದರ್ಶನಕ್ಕೆ ಹಾಜರಾಗಬಹುದು.
ಮೀನ ರಾಶಿ ಆರ್ಥಿಕ ಭವಿಷ್ಯ (Pisces Money Horoscope)
ಮುಂದಿನ ದಿನಗಳಲ್ಲಿ ನಿಮಗೆ ಅಗತ್ಯವಿರುವ ಸಂಪತ್ತನ್ನು ಈಗಲೇ ವ್ಯಯಮಾಡಬೇಡಿ. ಇವತ್ತು ಶಾಪಿಂಗ್ ಮಾಡದೇ ಇರುವುದು ಉತ್ತಮ. ಯಾಕೆಂದರೆ ಗೊತ್ತೇ ಆಗದೇ ಅನವಶ್ಯಕ ಹಣ ಖರ್ಚಾಗುವ ಸಾಧ್ಯತೆ ಹೆಚ್ಚಿದೆ. ದಿನದ ಎರಡನೇ ಭಾಗದಲ್ಲಿ ಮಹಿಳೆಯರು ವಾಹನವನ್ನು ಖರೀದಿಸಬಹುದು. ಹಣಕಾಸಿನ ವಿಚಾರವಾಗಿ ಸ್ಟಾಕ್ ಮಾರ್ಕೆಟ್ನಲ್ಲಿ ನೀವು ಪ್ರಯೋಗ ಮಾಡಬೇಕು ಎಂದು ಅಂದುಕೊಂಡಿದ್ದರೆ ಇಂದೇ ಮಾಡಿ.
ಮೀನ ರಾಶಿ ಆರೋಗ್ಯ ಭವಿಷ್ಯ (Pisces Health Horoscope)
ಇಂದು ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳು ಇರುವುದಿಲ್ಲ. ಆದರೂ, ಈ ಹಿಂದಿನಿಂದ ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು ಭಾರದ ವಸ್ತುಗಳನ್ನು ಎತ್ತುವ ಸಾಹಸ ಮಾಡಬೇಡಿ. ಹಿರಿಯರು ಬಸ್ಸು ಅಥವಾ ರೈಲು ಹತ್ತುವಾಗ ಜಾಗರೂಕರಾಗಿರಬೇಕು. ಜಂಕ್ ಫುಡ್ ಮತ್ತು ತಂಪು ಪಾನೀಯಗಳನ್ನು ತ್ಯಜಿಸುವುದು ಸಹ ಒಳ್ಳೆಯದು. ಇಂದು ತಡರಾತ್ರಿ ವಾಹನ ಚಲಾಯಿಸುವುದನ್ನು ತಪ್ಪಿಸಿ. ನೀವು ಪ್ರವಾಸದಲ್ಲಿದ್ದರೆ, ವಿಶೇಷ ಗಮನ ಕೊಡಿ. ಅಲ್ಲದೆ, ಬ್ಯಾಗ್ನಲ್ಲಿ ವೈದ್ಯಕೀಯ ಕಿಟ್ ಸಿದ್ಧವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಮೀನ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಮೀನ ರಾಶಿಯ ಅಧಿಪತಿ: ಗುರು, ಮೀನ ರಾಶಿಯವರಿಗೆ ಶುಭ ದಿನಾಂಕಗಳು: 1,3,4 ಮತ್ತು9, ಮೀನ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಮಂಗಳವಾರ ಮತ್ತು ಗುರುವಾರ, ಮೀನ ರಾಶಿಯವರಿಗೆ ಶುಭ ವರ್ಣ: ಕೆಂಪು, ಹಳದಿ ಮತ್ತು ರೋಸ್, ಮೀನ ರಾಶಿಯವರಿಗೆ ಅಶುಭ ವರ್ಣ: ನೀಲಿ, ಮೀನ ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ಮೀನ ರಾಶಿಯವರಿಗೆ ಶುಭ ತಿಂಗಳು: ಡಿಸೆಂಬರ್ 15ರಿಂದ ಜನವರಿ 14, ಮೀನ ರಾಶಿಯವರಿಗೆ ಶುಭ ಹರಳು: ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ಮೀನ ರಾಶಿಯವರಿಗೆ ಶುಭ ರಾಶಿ: ಕಟಕ, ವೃಶ್ಚಿಕ ಮತ್ತು ಮೀನ, ಮೀನ ರಾಶಿಯವರಿಗೆ ಅಶುಭ ರಾಶಿ: ಕನ್ಯಾ, ಕುಂಭ, ವೃಷಭ ಮತ್ತು ತುಲಾ.
ಮೀನ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1) ಇಂದ್ರಾಕ್ಷಿ ಸ್ತೋತ್ರ: ಪ್ರತಿದಿನ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೆಲಸ-ಕಾರ್ಯಗಳಿಗೆ ಎದುರಾಗುವ ಅಡ್ಡಿ, ಆತಂಕಗಳು ದೂರವಾಗಲಿವೆ. ಋಣಾತ್ಮಕ ಶಕ್ತಿಯು ಮನೆ ಮತ್ತು ಮನದಿಂದ ದೂರವಾಗುವುದು.
2) ಈ ದಾನಗಳಿಂದ ಶುಭ ಫಲ: ಎಳ್ಳು ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ಹಣದ ತೊಂದರೆ ಕಡಿಮೆ ಆಗಲಿದೆ.
3) ದೇವಾಲಯ ಮತ್ತು ದೇವರ ಪೂಜೆ: ಶ್ರೀ ವಿಷ್ಣು ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಅನುಕೂಲಗಳು ದೊರೆಯಲಿವೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು ಮತ್ತು ಕೇಸರಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ವಿಭಾಗ