ಮೀನ ರಾಶಿ ಭವಿಷ್ಯ ಜುಲೈ 29: ಕೆಲಸದ ಒತ್ತಡ ಬಾಧಿಸಬಹುದು, ಖರ್ಚು ಕಡಿಮೆ ಮಾಡುವುದು ನಿಮ್ಮ ಆದ್ಯತೆಯಾಗಿರಲಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೀನ ರಾಶಿ ಭವಿಷ್ಯ ಜುಲೈ 29: ಕೆಲಸದ ಒತ್ತಡ ಬಾಧಿಸಬಹುದು, ಖರ್ಚು ಕಡಿಮೆ ಮಾಡುವುದು ನಿಮ್ಮ ಆದ್ಯತೆಯಾಗಿರಲಿ

ಮೀನ ರಾಶಿ ಭವಿಷ್ಯ ಜುಲೈ 29: ಕೆಲಸದ ಒತ್ತಡ ಬಾಧಿಸಬಹುದು, ಖರ್ಚು ಕಡಿಮೆ ಮಾಡುವುದು ನಿಮ್ಮ ಆದ್ಯತೆಯಾಗಿರಲಿ

Pisces Daily Horoscope July 29, 2024: ರಾಶಿ ಚಕ್ರಗಳ ಪೈಕಿ ಕೊನೆಯದ್ದು ಮೀನ ರಾಶಿ. 12ನೇ ರಾಶಿಚಕ್ರದಲ್ಲಿ ಚಂದ್ರ ಸಾಗುವ ಸಮಯದಲ್ಲಿ ಜನಿಸಿದವರ ರಾಶಿಚಕ್ರ ಇದು. ಜುಲೈ 29ರ ಮೀನ ರಾಶಿ ಭವಿಷ್ಯದ ಪ್ರಕಾರ, ಕೆಲಸ ಒತ್ತಡ ಹೆಚ್ಚಿರಬಹುದು, ನಿಭಾಯಿಸುವುದನ್ನು ಕಲಿಯಿರಿ. ಆಹಾರದ ಮೇಲೆ ಗಮನವಿರಲಿ.

ಮೀನ ರಾಶಿ ಭವಿಷ್ಯ ಜುಲೈ 29: ಕೆಲಸದ ಒತ್ತಡ ಬಾಧಿಸಬಹುದು, ಖರ್ಚು ಕಡಿಮೆ ಮಾಡುವುದು ನಿಮ್ಮ ಆದ್ಯತೆಯಾಗಿರಲಿ
ಮೀನ ರಾಶಿ ಭವಿಷ್ಯ ಜುಲೈ 29: ಕೆಲಸದ ಒತ್ತಡ ಬಾಧಿಸಬಹುದು, ಖರ್ಚು ಕಡಿಮೆ ಮಾಡುವುದು ನಿಮ್ಮ ಆದ್ಯತೆಯಾಗಿರಲಿ

ಮೀನ ರಾಶಿ ದಿನ ಭವಿಷ್ಯ ಜುಲೈ 29: ನಿಮ್ಮ ಪ್ರೀತಿ ಜೀವನದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಉಪಕ್ರಮಗಳನ್ನು ತೆಗೆದುಕೊಳ್ಳಿ. ನಿಮ್ಮ ವೃತ್ತಿಪರ ಅಗತ್ಯಗಳು ಮತ್ತು ಕಾರ್ಯಗಳನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತೀರಿ. ಹಣ ಖರ್ಚು ಮಾಡುವಲ್ಲಿ ಜಾಗರೂಕರಾಗಿರಿ. ನೀವು ಇಂದು ಆರೋಗ್ಯವಾಗಿರುತ್ತೀರಿ, ಆದರೆ ನಿಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಿ.

ಮೀನ ರಾಶಿ ಪ್ರೇಮ ಜೀವನ (Pisces Love Horoscope)

ಇಂದು ಪ್ರಣಯದಲ್ಲಿ ಮುಳುಗುವಿರಿ. ನಿಮ್ಮ ಸಂಗಾತಿ ಇಂದು ನಿಮ್ಮ ಬೆಂಬಲವನ್ನು ಮೆಚ್ಚುತ್ತಾರೆ. ದಿನವನ್ನು ರೊಮ್ಯಾಂಟಿಕ್ ಮಾಡಲು ಸರ್ಪ್ರೈಸ್‌ ಡೇಟಿಂಗ್‌ ಪ್ಲಾನ್‌ ಮಾಡಿ. ನೀವು ಇಂದು ರಾತ್ರಿ ಲಾಂಗ್ ಡ್ರೈವ್‌ಗೆ ಹೋಗುವುದನ್ನು ಪರಿಗಣಿಸಬಹುದು, ಇದರಿಂದ ನಿಮ್ಮ ಪ್ರೀತಿ ಬದುಕು ಇನ್ನಷ್ಟು ಅರಳಬಹುದು. ಮೀನ ರಾಶಿಯ ಹೆಣ್ಣುಮಕ್ಕಳಿಗೆ ಕೆಲಸದ ಸ್ಥಳ ಅಥವಾ ಕಾಲೇಜ್‌ನಲ್ಲಿ ಯಾರಾದರೂ ಪ್ರಪೋಸ್‌ ಮಾಡಬಹುದು. ನಿಮ್ಮ ಸಂಬಂಧವನ್ನು ನೀವು ಮುಂದಿನ ಹಂತಕ್ಕೆ ಕೊಂಡೊಯ್ಯಬಹುದು. ಆದರೆ ವಿವಾಹಿತರು ಕಚೇರಿಯಲ್ಲಿ ಪ್ರಣಯದಲ್ಲಿ ತೊಡಗಬಾರದು. ದೂರವಿರುವ ಸಂಬಂಧಗಳಿಗೆ ಇಂದು ಹೆಚ್ಚಿನ ಸಂವಹನದ ಅಗತ್ಯವಿರುತ್ತದೆ.

ಮೀನ ರಾಶಿ ವೃತ್ತಿ ಭವಿಷ್ಯ (Pisces Professional Horoscope)

ಕೆಲಸದಲ್ಲಿ ನಿಮ್ಮ ಬದ್ಧತೆಯನ್ನು ಮುಂದುವರಿಸಿ, ಇದು ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಕೌಶಲಗಳನ್ನು ಹೆಚ್ಚಿಸಿಕೊಳ್ಳಿ. ಕೆಲವು ಮೀನ ರಾಶಿಯವರು ಸಂಬಳದಲ್ಲಿ ಹೆಚ್ಚಳವನ್ನು ನಿರೀಕ್ಷಿಸಬಹುದು. ವ್ಯಾಪಾರದಲ್ಲಿರುವವರು ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬಹುದು. ಒಂದೋ ಎರಡೋ ದಿನದಲ್ಲಿ ಕೆಲಸಗಳು ಮತ್ತೆ ಹಳಿಗೆ ಬರುತ್ತವೆ. ವ್ಯವಹಾರದ ಬೆಳವಣಿಗೆಗೆ ಇದು ಮುಖ್ಯವಾದ ಕಾರಣ ನಿಮ್ಮ ಪಾಲುದಾರರೊಂದಿಗೆ ನೀವು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತೀರಿ ಎಂಬುದನ್ನು ನೆನಪಿನಲ್ಲಿಡಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣುತ್ತಾರೆ.

ಮೀನ ರಾಶಿ ಆರ್ಥಿಕ ಭವಿಷ್ಯ (Pisces Money Horoscope)

ಬೆಳಿಗ್ಗೆ ಸಣ್ಣ ಪ್ರಮಾಣದ ಹಣದ ಸಮಸ್ಯೆಗಳು ಉಂಟಾಗಬಹುದು. ಸಂಜೆಯ ವೇಳೆಗೆ ಉತ್ತಮ ಗಳಿಕೆ ಇರುತ್ತದೆ. ಖರ್ಚುಗಳನ್ನು ನೋಡಿಕೊಳ್ಳಿ ಮತ್ತು ಐಷಾರಾಮಿ ವಸ್ತುಗಳಿಗೆ ಹೆಚ್ಚು ಹಣ ಖರ್ಚು ಮಾಡಬೇಡಿ. ಕೆಲವು ಮಹಿಳೆಯರು ಸಹೋದರ ಸಹೋದರಿಯರಿಂದ ಆರ್ಥಿಕ ಸಹಾಯವನ್ನು ಪಡೆಯುತ್ತಾರೆ. ಮೀನ ರಾಶಿಯ ಪುರುಷರಿಗೆ ವ್ಯಾಪಾರ ಅಗತ್ಯಗಳಿಗಾಗಿ ಹಣದ ಅಗತ್ಯವಿರುತ್ತದೆ. ನೀವು ಸಂಬಂಧಿಕರೊಂದಿಗೆ ಹಣಕಾಸಿನ ಸಮಸ್ಯೆಯನ್ನು ಪರಿಹರಿಸಬಹುದು. ಹಣವನ್ನು ದಾನ ಮಾಡಲು ಇಂದು ಶುಭ ಸಮಯವಲ್ಲ.

ಮೀನ ರಾಶಿ ಆರೋಗ್ಯ ಭವಿಷ್ಯ (Pisces Health Horoscope)

ನೀವು ಇಂದು ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಹೊಂದಿರಬಹುದು, ಇದಕ್ಕೆ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಅಡುಗೆ ಕೆಲಸ ಮಾಡುವ ಮಹಿಳೆಯರು ತರಕಾರಿ ಕತ್ತರಿಸುವಾಗ ಸಣ್ಣಪುಟ್ಟ ಗಾಯಗಳಾಗದಂತೆ ಎಚ್ಚರ ವಹಿಸಬೇಕು. ಕೆಲವರಿಗೆ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ಕಚೇರಿಯ ಒತ್ತಡವನ್ನು ನಿಭಾಯಿಸಿ ಮತ್ತು ಅದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರಲು ಬಿಡಬೇಡಿ. ನಿಮ್ಮ ಆಹಾರದಲ್ಲಿ ಹೆಚ್ಚು ತರಕಾರಿಗಳು ಮತ್ತು ಹಣ್ಣುಗಳು ಇರಬೇಕು. ಇಂದು ಮದ್ಯ ಮತ್ತು ತಂಬಾಕು ಎರಡನ್ನೂ ತ್ಯಜಿಸಲು ಉತ್ತಮ ದಿನವಾಗಿದೆ.

ಮೀನ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ಮೀನ ರಾಶಿಯ ಅಧಿಪತಿ: ಗುರು, ಮೀನ ರಾಶಿಯವರಿಗೆ ಶುಭ ದಿನಾಂಕಗಳು: 1,3,4 ಮತ್ತು9, ಮೀನ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಮಂಗಳವಾರ ಮತ್ತು ಗುರುವಾರ, ಮೀನ ರಾಶಿಯವರಿಗೆ ಶುಭ ವರ್ಣ: ಕೆಂಪು, ಹಳದಿ ಮತ್ತು ರೋಸ್, ಮೀನ ರಾಶಿಯವರಿಗೆ ಅಶುಭ ವರ್ಣ: ನೀಲಿ, ಮೀನ ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ಮೀನ ರಾಶಿಯವರಿಗೆ ಶುಭ ತಿಂಗಳು: ಡಿಸೆಂಬರ್ 15 ರಿಂದ ಜನವರಿ 14, ಮೀನ ರಾಶಿಯವರಿಗೆ ಶುಭ ಹರಳು: ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ಮೀನ ರಾಶಿಯವರಿಗೆ ಶುಭ ರಾಶಿ: ಕಟಕ, ವೃಶ್ಚಿಕ ಮತ್ತು ಮೀನ, ಮೀನ ರಾಶಿಯವರಿಗೆ ಅಶುಭ ರಾಶಿ: ಕನ್ಯಾ, ಕುಂಭ, ವೃಷಭ ಮತ್ತು ತುಲಾ.

ಮೀನ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1) ಇಂದ್ರಾಕ್ಷಿ ಸ್ತೋತ್ರ: ಪ್ರತಿದಿನ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೆಲಸ-ಕಾರ್ಯಗಳಿಗೆ ಎದುರಾಗುವ ಅಡ್ಡಿ, ಆತಂಕಗಳು ದೂರವಾಗಲಿವೆ. ಋಣಾತ್ಮಕ ಶಕ್ತಿಯು ಮನೆ ಮತ್ತು ಮನದಿಂದ ದೂರವಾಗುವುದು.

2) ಈ ದಾನಗಳಿಂದ ಶುಭ ಫಲ: ಎಳ್ಳು ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ಹಣದ ತೊಂದರೆ ಕಡಿಮೆ ಆಗಲಿದೆ.

3) ದೇವಾಲಯ ಮತ್ತು ದೇವರ ಪೂಜೆ: ಶ್ರೀ ವಿಷ್ಣು ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಅನುಕೂಲಗಳು ದೊರೆಯಲಿವೆ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು ಮತ್ತು ಕೇಸರಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಆಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.