ಮೀನ ರಾಶಿ ಭವಿಷ್ಯ ಆಗಸ್ಟ್‌ 23: ಹೆಚ್ಚಿನ ಒತ್ತಡ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ; ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದಿರಿ-pisces sign daily astrology for 23rd august 2024 meena rashi love finance health job horoscope smk ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೀನ ರಾಶಿ ಭವಿಷ್ಯ ಆಗಸ್ಟ್‌ 23: ಹೆಚ್ಚಿನ ಒತ್ತಡ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ; ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದಿರಿ

ಮೀನ ರಾಶಿ ಭವಿಷ್ಯ ಆಗಸ್ಟ್‌ 23: ಹೆಚ್ಚಿನ ಒತ್ತಡ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ; ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದಿರಿ

Pisces Daily Horoscope August 22, 2024: ರಾಶಿ ಚಕ್ರಗಳ ಪೈಕಿ ಕೊನೆಯದ್ದು ಮೀನ ರಾಶಿ. 12 ನೇ ರಾಶಿಚಕ್ರದಲ್ಲಿ ಚಂದ್ರ ಸಾಗುವ ಸಮಯದಲ್ಲಿ ಜನಿಸಿದವರ ರಾಶಿಚಕ್ರ ಇದು. ಆಗಸ್ಟ್‌ 22ರ ಮೀನ ರಾಶಿ ಭವಿಷ್ಯದ ಪ್ರಕಾರ,ಏನೇ ನಿರ್ಧಾರ ತೆಗೆದುಕೊಳ್ಳುವುದಾದರೂ ಎರಡು ಬಾರಿ ಯೋಚನೆ ಮಾಡಿ, ನಂತರ ನಿರ್ಧರಿಸಿ.

ಮೀನ ರಾಶಿ ಭವಿಷ್ಯ ಆಗಸ್ಟ್‌ 23:
ಮೀನ ರಾಶಿ ಭವಿಷ್ಯ ಆಗಸ್ಟ್‌ 23:

ಮೀನ ರಾಶಿ ದಿನಭವಿಷ್ಯ ಆಗಸ್ಟ್‌ 23: ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯುವ ಮೂಲ ಪ್ರೇಮಿಯೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಕೆಲಸದಲ್ಲಿನ ಶಿಸ್ತು ನಿಮ್ಮ ವೃತ್ತಿ ಜೀವನದ ಯಶಸ್ಸಿಗೆ ಕಾರಣವಾಗಲಿದೆ. ಸಣ್ಣಪುಟ್ಟ ವೈದ್ಯಕೀಯ ಸಮಸ್ಯೆಗಳು ಬರಬಹುದು. ಒಟ್ಟಾರೆ ಇಂದು ನಿಮಗೆ ಉತ್ತಮ ದಿನ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ಮೀನ ರಾಶಿಯ ಪ್ರೇಮ ಜೀವನ (Pisces Love Horoscope): ನಿಮ್ಮ ಪ್ರೀತಿಯ ಜೀವನದಲ್ಲಿ, ಗಮನಾರ್ಹವಾದ ರೂಪಾಂತರಗಳನ್ನು ನೀವಿಂದು ಕಾಣಲಿದ್ದೀರಿ. ಹೆಚ್ಚು ಅರ್ಥಪೂರ್ಣ ಜನರನ್ನು ನೀವು ಭೇಟಿಯಾಗಲಿದ್ದೀರಿ. ಸಿಂಗಲ್ಸ್‌ಗಾಗಿ, ಇಂದು ಹೊಸ ಮತ್ತು ಕುತೂಹಲಕಾರಿಯಾದ ಒಂದು ವಿಚಾರ ತೆರೆದುಕೊಳ್ಳಬಹುದು. ಹೊಸತನಕ್ಕೆ ಯಾವಾಗಲೂ ರೆಡಿಯಾಗಿರಿ. ಬದಲಾವಣೆಗೆ ಮುಕ್ತರಾಗಿರಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ. ಅವರ ಮನಸಿನ ಭಾವನೆಗಳನ್ನು ನೀವು ಅರ್ಥ ಮಾಡಿಕೊಳ್ಳಿ.

ಮೀನ ರಾಶಿ ಉದ್ಯೋಗ ಭವಿಷ್ಯ (Pisces Professional Horoscope): ನಿಮ್ಮ ವೃತ್ತಿಜೀವನದ ಭವಿಷ್ಯವು ಇಂದು ಭರವಸೆಯಿಂದ ಕೂಡಿರುತ್ತದೆ. ಹೊಸ ಆಲೋಚನೆಗಳನ್ನು ನೀವು ಮಾಡಬೇಕು. ಆಗ ಮಾತ್ರ ನಿಮಗೆ ಹೊಸ ಅವಕಾಶಗಳು ಬಂದರೆ ಅದನ್ನು ಹೇಗೆ ಒಗ್ಗೂಡಿಸಿಕೊಳ್ಳಬೇಕು ಎಂದು ಅರ್ಥವಾಗುತ್ತದೆ ಮತ್ತು ಇನ್ನೊಂದಷ್ಟು ಹೊಸ ವಿಚಾರಗಳು ದೊರೆಯುತ್ತದೆ. ಇಲ್ಲವಾದರೆ ಮಾಡಿದ್ದೇ ಕೆಲಸ ಮಾಡುತ್ತಿರಬೇಕಾಗುತ್ತದೆ.

ಮೀನ ರಾಶಿ ಆರ್ಥಿಕ ಭವಿಷ್ಯ (Pisces Money Horoscope): ಮೀನ ರಾಶಿಯವರಿಗೆ ಇಂದು ಆರ್ಥಿಕ ಸ್ಥಿರತೆ ಹೊಂದಲಿದ್ದೀರಿ. ನೀವು ಆದಾಯಕ್ಕಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳಬಹುದು ಅಥವಾ ಇರುವ ಯೋಜನೆಯನ್ನೇ ಇನ್ನಷ್ಟು ಅಂದಗೊಳಿಸಿಕೊಳ್ಳಬಹುದು. ನಿಮ್ಮ ಹಣಕಾಸಿನ ಯೋಜನೆಗಳನ್ನು ಪರಿಶೀಲಿಸಲು ಮತ್ತು ಅಗತ್ಯ ಹೊಂದಾಣಿಕೆಗಳನ್ನು ಮಾಡಿಕೊಳ್ಳಿ. ದೀರ್ಘಾವಧಿಯ ಹಣಕಾಸಿನ ಗುರಿಗಳ ಮೇಲೆ ಕೇಂದ್ರೀಕರಿಸಿ. ಅಗತ್ಯವಿದ್ದರೆ ವಿಶ್ವಾಸಾರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆಯಿರಿ. ವಿವೇಕಯುತ ಹಣಕಾಸು ನಿರ್ವಹಣೆ ಮಾಡಿ.

ಮೀನ ರಾಶಿ ಆರೋಗ್ಯ ಭವಿಷ್ಯ (Pisces Health Horoscope): ನಿಮ್ಮ ಆರೋಗ್ಯಕ್ಕೆ ಇಂದು ಗಮನ ಬೇಕು. ಒತ್ತಡ ಮತ್ತು ಅತಿಯಾದ ಪರಿಶ್ರಮವು ನಿಮ್ಮ ಯೋಗಕ್ಷೇಮದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಸಮತೋಲನವನ್ನು ಕಂಡುಹಿಡಿಯುವುದು ಬಹಳ ಮುಖ್ಯ. ನಿಮ್ಮ ದೈನಂದಿನ ದಿನಚರಿಯಲ್ಲಿ ಧ್ಯಾನ ಅಥವಾ ಯೋಗದಂತಹ ಚಟುವಟಿಕೆಗಳನ್ನು ರೂಪಿಸಿಕೊಳ್ಳಿ. ನಿಮ್ಮ ಆಹಾರಕ್ರಮಕ್ಕೆ ಗಮನ ಕೊಡಿ ಮತ್ತು ನೀವು ಸಾಕಷ್ಟು ವಿಶ್ರಾಂತಿ ಪಡೆಯುವುದನ್ನು ರೂಢಿಸಿಕೊಳ್ಳಿ. ಇಲ್ಲವಾದರೆ ನಿಮ್ಮ ಆರೋಗ್ಯದ ಮೇಲೆ ನಿಮ್ಮ ಕೆಲಸಗಳೇ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಮೀನ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ಮೀನ ರಾಶಿಯ ಅಧಿಪತಿ: ಗುರು, ಮೀನ ರಾಶಿಯವರಿಗೆ ಶುಭ ದಿನಾಂಕಗಳು: 1,3,4 ಮತ್ತು9, ಮೀನ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಮಂಗಳವಾರ ಮತ್ತು ಗುರುವಾರ, ಮೀನ ರಾಶಿಯವರಿಗೆ ಶುಭ ವರ್ಣ: ಕೆಂಪು, ಹಳದಿ ಮತ್ತು ರೋಸ್, ಮೀನ ರಾಶಿಯವರಿಗೆ ಅಶುಭ ವರ್ಣ: ನೀಲಿ, ಮೀನ ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ಮೀನ ರಾಶಿಯವರಿಗೆ ಶುಭ ತಿಂಗಳು: ಡಿಸೆಂಬರ್ 15ರಿಂದ ಜನವರಿ 14, ಮೀನ ರಾಶಿಯವರಿಗೆ ಶುಭ ಹರಳು: ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ಮೀನ ರಾಶಿಯವರಿಗೆ ಶುಭ ರಾಶಿ: ಕಟಕ, ವೃಶ್ಚಿಕ ಮತ್ತು ಮೀನ, ಮೀನ ರಾಶಿಯವರಿಗೆ ಅಶುಭ ರಾಶಿ: ಕನ್ಯಾ, ಕುಂಭ, ವೃಷಭ ಮತ್ತು ತುಲಾ.

ಮೀನ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1) ಇಂದ್ರಾಕ್ಷಿ ಸ್ತೋತ್ರ: ಪ್ರತಿದಿನ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೆಲಸ-ಕಾರ್ಯಗಳಿಗೆ ಎದುರಾಗುವ ಅಡ್ಡಿ, ಆತಂಕಗಳು ದೂರವಾಗಲಿವೆ. ಋಣಾತ್ಮಕ ಶಕ್ತಿಯು ಮನೆ ಮತ್ತು ಮನದಿಂದ ದೂರವಾಗುವುದು.

2) ಈ ದಾನಗಳಿಂದ ಶುಭ ಫಲ: ಎಳ್ಳು ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ಹಣದ ತೊಂದರೆ ಕಡಿಮೆ ಆಗಲಿದೆ.

3) ದೇವಾಲಯ ಮತ್ತು ದೇವರ ಪೂಜೆ: ಶ್ರೀ ವಿಷ್ಣು ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಅನುಕೂಲಗಳು ದೊರೆಯಲಿವೆ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು ಮತ್ತು ಕೇಸರಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.