ಮೀನ ರಾಶಿ ವಾರ ಭವಿಷ್ಯ: ಕಚೇರಿ ಕೆಲಸಗಳಲ್ಲಿ ಜಾಗರೂಕರಾಗಿರಿ, ಈ ವಾರ ಹೆಚ್ಚಿನ ಹಣ ಖರ್ಚಾಗಲಿದೆ
Pisces Weekly Horoscope 2024 August 18 to 24: ರಾಶಿ ಚಕ್ರಗಳ ಪೈಕಿ ಕೊನೆಯದ್ದು ಮೀನ ರಾಶಿ. 12ನೇ ರಾಶಿಚಕ್ರದಲ್ಲಿ ಚಂದ್ರ ಸಾಗುವ ಸಮಯದಲ್ಲಿ ಜನಿಸಿದವರ ರಾಶಿಚಕ್ರ ಇದು. ಆಗಸ್ಟ್ 18 ರಿಂದ 24ರ ಮೀನ ರಾಶಿ ಭವಿಷ್ಯದ ಪ್ರಕಾರ,
ಮೀನ ರಾಶಿ ವಾರ ಭವಿಷ್ಯ ಆಗಸ್ಟ್ 18 ರಿಂದ 24: ಸ್ವಯಂ ಅನ್ವೇಷಣೆ ಮತ್ತು ಭಾವನಾತ್ಮಕ ವಿಕಸನಕ್ಕೆ ಇದು ಉತ್ತಮ ವಾರ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಹೊಸ ಮಾರ್ಗಗಳನ್ನು ನೋಡುತ್ತೀರಿ. ಮದುವೆಯ ವಿಚಾರವಾಗಿ ನಿಮ್ಮ ಸಂಗಾತಿಯೊಡನೆ ಮಾತನಾಡಲಿದ್ದೀರಿ. ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ಮೀನ ರಾಶಿಯ ಪ್ರೇಮ ಜೀವನ (Pisces Love Horoscope): ಪ್ರೇಮ ಸಂಬಂಧವನ್ನು ನೀವು ಕಾಪಾಡಿಕೊಳ್ಳಲು ಸೋಲುತ್ತಾ ಇದ್ದೀರಾ. ನೀವು ತುಂಬ ಭಯಪಟ್ಟುಕೊಳ್ಳುತ್ತೀರ. ಕೆಲವು ಅದೃಷ್ಟವಂತ ಮೀನ ರಾಶಿಯ ಮಹಿಳೆಯರು ಮತ್ತೊಮ್ಮೆ ತಮ್ಮ ಹಳೆ ಪ್ರೇಮಿಯೊಡನೆ ಒಂದಾಗುವ ಅವಕಾಶ ಹೊಂದಿದ್ದಾರೆ. ಈ ವಾರ ಅಂತ್ಯವಾಗುವುದರ ಒಳಗಡೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಹಳೆಯ ಸಂಬಂಧದ ಪುನರಾರಂಭಕ್ಕೆ ದಾರಿ ಮಾಡಿಕೊಡಬಹುದು. ವಿವಾಹಿತರು ತಮ್ಮ ವೈವಾಹಿಕ ಜೀವನದ ಮೇಲೆ ಏನೂ ಕೆಟ್ಟ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು.
ಮೀನ ರಾಶಿ ಉದ್ಯೋಗ ಭವಿಷ್ಯ (Pisces Professional Horoscope): ಈ ವಾರ ಉದ್ಯೋಗಕ್ಕೆ ಸಂಬಂಧಿಸಿದ ಸಣ್ಣ ಸಮಸ್ಯೆಗಳು ಉಂಟಾಗಬಹುದು. ವೃತ್ತಿಯಲ್ಲಿ ನಿಮ್ಮ ಬದ್ಧತೆ ಎಲ್ಲರಿಗೂ ಎದ್ದು ಕಾಣಿಸುತ್ತದೆ. ಆದರೆ ಕೆಲವು ಕಚೇರಿಗೆ ಸಂಬಂಧಿಸಿದ ರಾಜಕೀಯವು ಹಾಳಾಗಬಹುದು. ಮೌಲ್ಯಮಾಪನ ಚರ್ಚೆಗಳ ಸಮಯದಲ್ಲಿ ಕೆಲಸ ಮಾಡುವ ಶಿಸ್ತೇ ನಿಮಗೆ ಕಷ್ಟ ತರಬಹುದು. ಕೆಲವು ಹೊಸ ನಿರ್ಣಾಯಕ ಕಾರ್ಯಯೋಜನೆಗಳಿಗೆ ನೀವು ಕ್ಲೈಂಟ್‌ನ ಭೇಟಿ ಮಾಡಬೇಕಾಗುತ್ತದೆ. ಕಾರ್ಯಸ್ಥಳದಲ್ಲಿ ಹೆಚ್ಚು ಸಮಯವನ್ನು ಕಳೆಯಬೇಕಾಗುತ್ತದೆ. ಉದ್ಯಮಿಗಳು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ.
ಮೀನ ರಾಶಿ ಆರ್ಥಿಕ ಭವಿಷ್ಯ (Pisces Money Horoscope): ಹೆಚ್ಚು ತೊಂದರೆಯಿಲ್ಲದೆ ಸಂಪತ್ತು ನಿಮ್ಮ ಮನೆಯ ಬಾಗಿಲು ಬಡಿಯುತ್ತದೆ. ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಮನೆಯ ಪೀಠೋಪಕರಣಗಳನ್ನು ಖರೀದಿಸುವಲ್ಲಿ ನೀವು ಉತ್ತಮರು. ಮನೆಯನ್ನು ನವೀಕರಿಸಲು ಅಥವಾ ವಾಹನವನ್ನು ದುರಸ್ತಿ ಮಾಡಲು ಸಹ ಖರ್ಚು ಮಾಡಬಹುದು. ನೀವು ಹೂಡಿಕೆ ಮಾಡುವ ಯೋಜನೆಯನ್ನು ಹೊಂದಿರುವಾಗ, ಷೇರು ಮಾರುಕಟ್ಟೆಯನ್ನು ಪರಿಗಣಿಸಿ. ವಿಚಾರ ಮಾಡಿ ಹಣ ಹೂಡಿಕೆ ಮಾಡಿ.
ಮೀನ ರಾಶಿ ಆರೋಗ್ಯ ಭವಿಷ್ಯ (Pisces Health Horoscope): ಕೆಲವು ಹಿರಿಯರು ಈ ವಾರ ಕೀಲುಗಳು ಮತ್ತು ಕಣ್ಣುಗಳ ನೋವಿನ ಸಮಸ್ಯೆ ಹೊಂದಿರುತ್ತಾರೆ. ಆರೋಗ್ಯಕರ ದೈಹಿಕ ಜೀವನಕ್ಕಾಗಿ ನೀವು ಸರಿಯಾದ ಆಹಾರ ತಿನ್ನಬೇಕಾಗುತ್ತದೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಿರಿ. ಮೀನ ರಾಶಿಯವರಿಗೆ ಮಧುಮೇಹ, ಕೊಲೆಸ್ಟ್ರಾಲ್, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಎದೆಯ ಸೋಂಕುಗಳು ಸಾಮಾನ್ಯವಾಗಿದೆ.
ಮೀನ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಮೀನ ರಾಶಿಯ ಅಧಿಪತಿ: ಗುರು, ಮೀನ ರಾಶಿಯವರಿಗೆ ಶುಭ ದಿನಾಂಕಗಳು: 1,3,4 ಮತ್ತು9, ಮೀನ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಮಂಗಳವಾರ ಮತ್ತು ಗುರುವಾರ, ಮೀನ ರಾಶಿಯವರಿಗೆ ಶುಭ ವರ್ಣ: ಕೆಂಪು, ಹಳದಿ ಮತ್ತು ರೋಸ್, ಮೀನ ರಾಶಿಯವರಿಗೆ ಅಶುಭ ವರ್ಣ: ನೀಲಿ, ಮೀನ ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ಮೀನ ರಾಶಿಯವರಿಗೆ ಶುಭ ತಿಂಗಳು: ಡಿಸೆಂಬರ್ 15ರಿಂದ ಜನವರಿ 14, ಮೀನ ರಾಶಿಯವರಿಗೆ ಶುಭ ಹರಳು: ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ಮೀನ ರಾಶಿಯವರಿಗೆ ಶುಭ ರಾಶಿ: ಕಟಕ, ವೃಶ್ಚಿಕ ಮತ್ತು ಮೀನ, ಮೀನ ರಾಶಿಯವರಿಗೆ ಅಶುಭ ರಾಶಿ: ಕನ್ಯಾ, ಕುಂಭ, ವೃಷಭ ಮತ್ತು ತುಲಾ.
ಮೀನ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1) ಇಂದ್ರಾಕ್ಷಿ ಸ್ತೋತ್ರ: ಪ್ರತಿದಿನ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೆಲಸ-ಕಾರ್ಯಗಳಿಗೆ ಎದುರಾಗುವ ಅಡ್ಡಿ, ಆತಂಕಗಳು ದೂರವಾಗಲಿವೆ. ಋಣಾತ್ಮಕ ಶಕ್ತಿಯು ಮನೆ ಮತ್ತು ಮನದಿಂದ ದೂರವಾಗುವುದು.
2) ಈ ದಾನಗಳಿಂದ ಶುಭ ಫಲ: ಎಳ್ಳು ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ಹಣದ ತೊಂದರೆ ಕಡಿಮೆ ಆಗಲಿದೆ.
3) ದೇವಾಲಯ ಮತ್ತು ದೇವರ ಪೂಜೆ: ಶ್ರೀ ವಿಷ್ಣು ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಅನುಕೂಲಗಳು ದೊರೆಯಲಿವೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು ಮತ್ತು ಕೇಸರಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.