ಮೀನ ರಾಶಿ ವಾರದ ಭವಿಷ್ಯ: ಉದ್ಯೋಗದಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಿ, ಆಪ್ತರಿಗೆ ಹಣ ಸಹಾಯ ಮಾಡಬೇಕಾಗಬಹುದು
Pisces Daily Horoscope July 28- August 3, 2024: ರಾಶಿ ಚಕ್ರಗಳ ಪೈಕಿ ಕೊನೆಯದ್ದು ಮೀನ ರಾಶಿ. 12 ನೇ ರಾಶಿಚಕ್ರದಲ್ಲಿ ಚಂದ್ರ ಸಾಗುವ ಸಮಯದಲ್ಲಿ ಜನಿಸಿದವರ ರಾಶಿಚಕ್ರ ಇದು. ಜುಲೈ 28 ರಿಂದ ಆಗಸ್ಟ್ 3 ರವರೆಗೆ ಮೀನ ರಾಶಿಯವರ ವಾರದ ಭವಿಷ್ಯದ ಪ್ರಕಾರ, ಉದ್ಯೋಗದ ವಿಚಾರದಲ್ಲಿ ಹಲವು ಬದಲಾವಣೆಗಳಾಗಬಹುದು. ಸಮತೋಲಿತ ಆಹಾರ ಸೇವಿಸಿ.

ಮೀನ ರಾಶಿ ವಾರ (ಜುಲೈ 28 ರಿಂದ ಆಗಸ್ಟ್ 3) ವಾರ ಭವಿಷ್ಯದಲ್ಲಿ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಉದ್ಯೋಗದಲ್ಲಿರುವ ಪ್ರತಿಯೊಂದು ಅವಕಾಶವನ್ನೂ ಬಳಸಿಕೊಳ್ಳಿ. ಪ್ರೀತಿಯ ಜೀವನವು ಉತ್ತಮವಾಗಿರುತ್ತದೆ ಮತ್ತು ಆರ್ಥಿಕವಾಗಿ ನೀವು ಯಶಸ್ಸನ್ನು ಕಾಣುತ್ತೀರಿ. ಆರೋಗ್ಯವೂ ಚೆನ್ನಾಗಿರುತ್ತದೆ.
ಮೀನ ರಾಶಿಯವರ ವಾರದ ಪ್ರೇಮ ಜೀವನ ಭವಿಷ್ಯ (Pisces Weekly Love Horoscope)
ಇಬ್ಬರೂ ಸಂಗಾತಿಗಳು ಸಂತೋಷ ಮತ್ತು ದುಃಖವನ್ನು ಹಂಚಿಕೊಂಡಾಗ ಸಂಬಂಧ ಗಟ್ಟಿಯಾಗುತ್ತದೆ. ನಿಮ್ಮಿಬ್ಬರ ಅಭಿರುಚಿ ಬೇರೆ ಇರಬಹುದು. ಇದರಿಂದ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಆದರೆ ಇಬ್ಬರೂ ಒಬ್ಬರಿಗೊಬ್ಬರ ಅಭಿಪ್ರಾಯಗಳಿಗೆ ಬೆಲೆ ನೀಡಿ. ಸಂಬಂಧದಲ್ಲಿ ಪ್ರಾಮಾಣಿಕವಾಗಿರಿ. ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತುಕೊಳ್ಳಿ. ಕೆಲವು ಪ್ರೇಮ ಪ್ರಕರಣಗಳು ಪೋಷಕರ ಒಪ್ಪಿಗೆ ಪಡೆದು ಮದುವೆ ಹಂತಕ್ಕೆ ತಲುಪಬಹುದು.
ಮೀನ ರಾಶಿಯವರ ವಾರದ ಉದ್ಯೋಗ ಭವಿಷ್ಯ (Pisces Weekly Professional Horoscope)
ಕೆಲಸದಲ್ಲಿ ನೆಮ್ಮದಿ ಇಲ್ಲ ಎಂದಾದರೆ ಬೇರೆ ಕೆಲಸ ಹುಡುಕಲು ಆಲೋಚಿಸಿ. ಉದ್ಯೋಗ ವೆಬ್ಸೈಟ್ನಲ್ಲಿ ನಿಮ್ಮ ಹೆಸರು ನೋಂದಾಯಿಸಬಹುದು. ಕಛೇರಿಯಲ್ಲಿ ಉತ್ತಮ ಶ್ರಮ ವಹಿಸಿ ಕೆಲಸ ಮಾಡಿ. ಹಿರಿಯರು ಮತ್ತು ಗ್ರಾಹಕರಿಂದ ಪುರಸ್ಕಾರ ನಿರೀಕ್ಷೆ ಮಾಡಬಹುದು. ಸಂಸ್ಥೆಗೆ ಹೊಸದಾಗಿ ಸೇರ್ಪಡೆಗೊಂಡ ಕೆಲವು ವ್ಯಕ್ತಿಗಳು ತಂಡದ ಸಭೆಗಳಲ್ಲಿ ಅಭಿಪ್ರಾಯಗಳನ್ನು ನೀಡುವಾಗ ಜಾಗರೂಕರಾಗಿರಬೇಕು. ವಾರದ ದ್ವಿತೀಯಾರ್ಧವು ಉದ್ಯೋಗ ಸಂದರ್ಶನಗಳಿಗೆ ಹಾಜರಾಗಲು ಉತ್ತಮವಾಗಿದೆ.
ಮೀನ ರಾಶಿಯವರ ವಾರದ ಆರ್ಥಿಕ ಭವಿಷ್ಯ (Pisces Weekly Money Horoscope)
ನೀವು ವಿವಿಧ ಮೂಲಗಳಿಂದ ಹಣಕಾಸಿನ ಬೆಂಬಲವನ್ನು ಸ್ವೀಕರಿಸುತ್ತೀರಿ. ನೀವು ವಿಶ್ವಾಸದಿಂದ ಹಣವನ್ನು ದಾನ ಮಾಡಬಹುದು ಅಥವಾ ಹಣದ ತುರ್ತು ಅಗತ್ಯವಿರುವ ಸಹೋದರ ಅಥವಾ ಸ್ನೇಹಿತರಿಗೆ ಸಹಾಯ ಮಾಡಬಹುದು. ಸ್ನೇಹಿತರ ಜೊತೆ ಇರುವ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವತ್ತ ಗಮನ ಹರಿಸಿ. ಹಿರಿಯರು ಮಕ್ಕಳಿಗೆ ಸಂಪತ್ತನ್ನು ಹಂಚಬಹುದು. ಈ ವಾರ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಲು ಅಥವಾ ಮನೆಯಲ್ಲಿ ಸಂಭ್ರಮಾಚರಣೆ ಮಾಡಲು ಉತ್ತಮ.
ಮೀನ ರಾಶಿಯವರ ವಾರದ ಆರೋಗ್ಯ ಭವಿಷ್ಯ (Pisces Weekly Health Horoscope)
ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ಆದರೆ, ರಾತ್ರಿ ವೇಳೆ ಅದರಲ್ಲೂ ಗುಡ್ಡಗಾಡು ಪ್ರದೇಶಗಳಲ್ಲಿ ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸುವುದು ಒಳ್ಳೆಯದು. ನೀವು ವ್ಯಾಯಾಮವನ್ನು ದಿನಚರಿಯ ಭಾಗವಾಗಿ ರೂಢಿಸಿಕೊಳ್ಳಿ. ಸಕ್ಕರೆ ಮತ್ತು ಎಣ್ಣೆ ಸಮೃದ್ಧವಾಗಿರುವ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ನಿಲ್ಲಿಸಿ. ಪ್ರೊಟೀನ್ ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಿ. ಅಪ್ರಾಪ್ತ ವಯಸ್ಕರು ಆಟವಾಡುವಾಗ ಜಾಗರೂಕರಾಗಿರಬೇಕು ಮತ್ತು ಗರ್ಭಿಣಿಯರು ರಜೆಯ ಸಮಯದಲ್ಲಿ ಸಾಹಸ ಕ್ರೀಡೆಗಳನ್ನು ತಪ್ಪಿಸಬೇಕು.
ಮೀನ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಮೀನ ರಾಶಿಯ ಅಧಿಪತಿ: ಗುರು, ಮೀನ ರಾಶಿಯವರಿಗೆ ಶುಭ ದಿನಾಂಕಗಳು: 1,3,4 ಮತ್ತು9, ಮೀನ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಮಂಗಳವಾರ ಮತ್ತು ಗುರುವಾರ, ಮೀನ ರಾಶಿಯವರಿಗೆ ಶುಭ ವರ್ಣ: ಕೆಂಪು, ಹಳದಿ ಮತ್ತು ರೋಸ್, ಮೀನ ರಾಶಿಯವರಿಗೆ ಅಶುಭ ವರ್ಣ: ನೀಲಿ, ಮೀನ ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ಮೀನ ರಾಶಿಯವರಿಗೆ ಶುಭ ತಿಂಗಳು: ಡಿಸೆಂಬರ್ 15ರಿಂದ ಜನವರಿ 14, ಮೀನ ರಾಶಿಯವರಿಗೆ ಶುಭ ಹರಳು: ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ಮೀನ ರಾಶಿಯವರಿಗೆ ಶುಭ ರಾಶಿ: ಕಟಕ, ವೃಶ್ಚಿಕ ಮತ್ತು ಮೀನ, ಮೀನ ರಾಶಿಯವರಿಗೆ ಅಶುಭ ರಾಶಿ: ಕನ್ಯಾ, ಕುಂಭ, ವೃಷಭ ಮತ್ತು ತುಲಾ.
ಮೀನ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1)ಇಂದ್ರಾಕ್ಷಿ ಸ್ತೋತ್ರ: ಪ್ರತಿದಿನ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೆಲಸ-ಕಾರ್ಯಗಳಿಗೆ ಎದುರಾಗುವ ಅಡ್ಡಿ, ಆತಂಕಗಳು ದೂರವಾಗಲಿವೆ. ಋಣಾತ್ಮಕ ಶಕ್ತಿಯು ಮನೆ ಮತ್ತು ಮನದಿಂದ ದೂರವಾಗುವುದು.
2)ಈ ದಾನಗಳಿಂದ ಶುಭ ಫಲ: ಎಳ್ಳು ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ಹಣದ ತೊಂದರೆ ಕಡಿಮೆ ಆಗಲಿದೆ.
3)ದೇವಾಲಯ ಮತ್ತು ದೇವರ ಪೂಜೆ: ಶ್ರೀ ವಿಷ್ಣು ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಅನುಕೂಲಗಳು ದೊರೆಯಲಿವೆ.
4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು ಮತ್ತು ಕೇಸರಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.