ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Saturn Mars Conjunction: ಶನಿ-ಮಂಗಳ ಸಂಯೋಗ: ಈ 3 ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ, ಕೆಲವರ ಜೀವನದಲ್ಲಿ ಸಮಸ್ಯೆ

Saturn Mars Conjunction: ಶನಿ-ಮಂಗಳ ಸಂಯೋಗ: ಈ 3 ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ, ಕೆಲವರ ಜೀವನದಲ್ಲಿ ಸಮಸ್ಯೆ

ಜೂನ್‌ 30 ರಿಂದ ಶನಿಯು ಹಿಮ್ಮುಖ ಚಲನೆ ಆರಂಭಿಸುತ್ತಾನೆ. ಈಗಾಗಲೇ ಮೇಷ ರಾಶಿಯಲ್ಲಿರುವ ಮಂಗಳನ ಮೇಲೆ ಶನಿಯ ಮೂರನೇ ಕಣ್ಣು ಬಿದ್ದಾಗ ಈ ಎರಡೂ ರಾಶಿಗಳ ಸಂಯೋಜನೆ ಆಗುತ್ತದೆ. ಇದರಿಂದ ಮೇಷ ಸೇರಿದಂತೆ 3 ರಾಶಿಗಳಿಗೆ ಶುಭ ಫಲಿತಾಂಶ ದೊರೆತರೆ ಕೆಲವರಿಗೆ ಸಮಸ್ಯೆ ಉಂಟಾಗಬಹುದು. (ಬರಹ: ಮೇಘನಾ .ಬಿ)

ಶನಿ-ಮಂಗಳ ಸಂಯೋಗ: ಈ 3 ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ, ಕೆಲವರ ಜೀವನದಲ್ಲಿ ಸಮಸ್ಯೆ
ಶನಿ-ಮಂಗಳ ಸಂಯೋಗ: ಈ 3 ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ, ಕೆಲವರ ಜೀವನದಲ್ಲಿ ಸಮಸ್ಯೆ

ಇದೇ ವರ್ಷ ಮಾರ್ಚ್ 15 ರಂದು ಕುಂಭ ರಾಶಿಯಲ್ಲಿ ಶನಿ ಮಂಗಳ ಗ್ರಹಗಳ ಸಂಯೋಗವಾಗಿತ್ತು. ಸುಮಾರು 150 ವರ್ಷಗಳ ನಂತರ ಕರ್ಮಕಾರಕ ಶನಿ ಹಾಗೂ ಕುಜ ಒಂದೇ ರಾಶಿಯಲ್ಲಿ ಭೇಟಿ ಆಗಿದ್ದರು. ಇದೀಗ ಮತ್ತೆ ಶನಿ-ಮಂಗಳ ಸಂಯೋಜನೆ ಆಗುತ್ತಿದ್ದಾರೆ. ಆದರೆ ಈ ಬಾರಿ ಒಂದೇ ರಾಶಿಯಲ್ಲಿ ಶನಿ - ಮಂಗಳ ಗ್ರಹಗಳ ಸಂಯೋಜನೆಯಾಗುತ್ತಿಲ್ಲ, ಬದಲಾಗಿ ಶನಿಯ ಮೂರನೇ ದೃಷ್ಟಿ ಮಂಗಳನ ಮೇಲೆ ಬೀಳುತ್ತಿದೆ.

ಜೂನ್‌ 30ರಿಂದ ಶನಿಯ ಹಿಮ್ಮುಖ ಚಲನೆ

ಈಗಾಗಲೇ ಅಂದರೆ ಜೂನ್ 1 ರಂದು ಮಂಗಳ ಗ್ರಹವು ಮೇಷ ರಾಶಿಯನ್ನು ಪ್ರವೇಶಿಸಿದ್ದು, ಜುಲೈ 12ರ ವರೆಗೆ ಅದೇ ರಾಶಿಯಲ್ಲಿ ಇರುತ್ತಾನೆ. ಜೂನ್ 30 ರಿಂದ ಶನಿಯ ಹಿಮ್ಮುಖ ಚಲನೆ ಆರಂಭವಾಗಲಿದೆ. ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಿದಾಗ ಶನಿಯ ಮೂರನೇ ಕಣ್ಣು ಮಂಗಳನ ಮೇಲೆ ಬೀಳುತ್ತದೆ. ಈ ಮೂಲಕ ಈ ಎರಡು ಗ್ರಹಗಳ ಸಂಯೋಜನೆಯಾಗಲಿದೆ. ಇದರಿಂದಾಗಿ ಮೂರು ರಾಶಿಯವರಿಗೆ ಅದೃಷ್ಟ ಒಲಿಯಲಿದೆ.

ಮಂಗಳ ಗ್ರಹವು ಇಚ್ಛಾಶಕ್ತಿ, ಚೈತನ್ಯ, ಧೈರ್ಯ ಮತ್ತು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯದ ಸಂಕೇತವಾಗಿದೆ. ಶನಿಯು ನಾವು ಮಾಡಿದ ಕರ್ಮಗಳಿಗನುಸಾರವಾಗಿ ಫಲವನ್ನು ನೀಡುತ್ತಾನೆ. ಶನಿಯ ಅಶುಭ ಪ್ರಭಾವದಿಂದ ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಶನಿಯು ಅವರ ಜಾತಕದಲ್ಲಿ ಶುಭ ಪ್ರಭಾವ ಬೀರಿದರೆ ಬಡವನೂ ರಾಜನಾಗುತ್ತಾನೆ. ಈ ಗ್ರಹಗಳ ಸಂಯೋಜನೆಯಿಂದಾಗಿ ವ್ಯವಹಾರಗಳು ಸುಗಮವಾಗಿ ನಡೆಯುತ್ತವೆ. ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಶನಿ - ಮಂಗಳ ಗ್ರಹಗಳ ಸಂಯೋಗದಿಂದ ಪ್ರಯೋಜನ ಪಡೆಯುವ ರಾಶಿಗಳು ಯಾವುವು ನೋಡೋಣ.

ಮೇಷ ರಾಶಿ

ಶನಿ ಮತ್ತು ಮಂಗಳ ಸಂಯೋಗವು ಮೇಷ ರಾಶಿಯವರಿಗೆ ಅದೃಷ್ಟ ತರುತ್ತದೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ವ್ಯವಹಾರದಲ್ಲಿ ಹೊಸ ದಿಕ್ಕಿನತ್ತ ಗಮನ ಹರಿಸಲಿದ್ದೀರಿ, ಆದರೆ ವ್ಯವಹಾರಗಳನ್ನು ಮಾಡುವಾಗ ಜಾಗರೂಕರಾಗಿರಬೇಕು.

ಮಿಥುನ ರಾಶಿ

ಮಂಗಳ ಮತ್ತು ಶನಿ ಸಂಯೋಜನೆಯು ಮಿಥುನ ರಾಶಿಯವರಿಗೆ ಮಂಗಳಕರ ಲಾಭಗಳನ್ನು ನೀಡುತ್ತದೆ. ನಿಮ್ಮ ಕಚೇರಿಯಲ್ಲಿ ಉತ್ತಮ ವಾತಾವರಣವಿರಲಿದೆ. ನಿಮಗೆ ಬರಬೇಕಾದ ಹಣ ಸಿಗುತ್ತದೆ. ದೀರ್ಘಕಾಲದ ಅನಾರೋಗ್ಯ ಸಮಸ್ಯೆ ದೂರವಾಗಿ ಆರೋಗ್ಯವಂತರಾಗುವಿರಿ. ಹಣಕಾಸಿನ ತೊಂದರೆಗಳ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯವಿಲ್ಲ. ಕುಟುಂಬ ಸಮೇತ ತೀರ್ಥಯಾತ್ರೆಗೆ ತೆರಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವರು.

ಕನ್ಯಾ ರಾಶಿ

ನಿಮ್ಮ ಬಾಕಿ ಹಣವನ್ನು ಮರಳಿ ಪಡೆಯಬಹುದು. ಇದರ ಹೊರತಾಗಿ ನಿಮ್ಮ ಕೆಲಸದ ಮೇಲೆ ಗಮನ ಹರಿಸಲಿದ್ದೀರಿ. ಕಷ್ಟಪಟ್ಟು ಕೆಲಸ ಮಾಡಿದರೆ ಪ್ರಯೋಜನಗಳನ್ನು ಪಡೆಯುತ್ತೀರಿ. ಕಚೇರಿಯಲ್ಲಿ ಮೇಲಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ. ಉದ್ಯೋಗದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸನ್ನು ಪಡೆಯುತ್ತೀರಿ. ವ್ಯವಹಾರದ ವಿಷಯಗಳನ್ನು ಮೊದಲು ಪರಿಹರಿಸಿ. ಕಲೆಯಲ್ಲಿ ಆಸಕ್ತಿ ಹೆಚ್ಚುತ್ತದೆ. ವ್ಯಾಪಾರ ಆರಂಭಿಸಲು ಉತ್ತಮ ಸಮಯ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ಆರ್ಥಿಕ ಲಾಭವನ್ನು ಪಡೆಯುವ ಸೂಚನೆಗಳಿವೆ. ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ.

ಈ ರಾಶಿಯವರಿಗೆ ಸಮಸ್ಯೆ

ಶನಿ ಮತ್ತು ಮಂಗಳನ ಸಂಯೋಜನೆಯು ಕಟಕ, ತುಲಾ, ವೃಶ್ಚಿಕ ಮತ್ತು ಮಕರ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡದಿರಬಹುದು. ವ್ಯಾಪಾರದಲ್ಲಿ ನಷ್ಟವಾಗಬಹುದು ಮತ್ತು ಹಣ ಗಳಿಸುವ ಪ್ರಯತ್ನಗಳು ವಿಫಲವಾಗಬಹುದು. ಒತ್ತಡವು ಹೆಚ್ಚಾಗಬಹುದು. ಆರೋಗ್ಯ ಸಮಸ್ಯೆಗಳು ಕಾಡಬಹುದು. ವೃತ್ತಿ ಜೀವನದಲ್ಲಿ ಹಿನ್ನಡೆ ಉಂಟಾಗಲಿದೆ. ಕೆಲವು ದೊಡ್ಡ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದು ಉತ್ತಮ. ಶ್ರಮಕ್ಕೆ ಮನ್ನಣೆ ಸಿಗುವುದಿಲ್ಲ. ಧೈರ್ಯ ಮತ್ತು ಆತ್ಮವಿಶ್ವಾಸ ಕ್ಷೀಣಿಸುತ್ತದೆ. ಪ್ರೇಮ ಜೀವನ ಮತ್ತು ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳಿರುತ್ತವೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಬರಹ: ಮೇಘನಾ .ಬಿ)