ಹಣ ಉಳಿಸುವಲ್ಲಿ ಈ ರಾಡಿಕ್ಸ್‌ ನಂಬರ್‌ ಹುಡುಗಿಯರು ಎತ್ತಿದ ಕೈ; ಹುಡುಗರಿಗಂತೂ ಇವರು ಅದೃಷ್ಟಲಕ್ಷ್ಮಿಯೇ ಸರಿ-radix number 2 lucky girls who always prefer to save money for future numerology in kannada date of birth astrology ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹಣ ಉಳಿಸುವಲ್ಲಿ ಈ ರಾಡಿಕ್ಸ್‌ ನಂಬರ್‌ ಹುಡುಗಿಯರು ಎತ್ತಿದ ಕೈ; ಹುಡುಗರಿಗಂತೂ ಇವರು ಅದೃಷ್ಟಲಕ್ಷ್ಮಿಯೇ ಸರಿ

ಹಣ ಉಳಿಸುವಲ್ಲಿ ಈ ರಾಡಿಕ್ಸ್‌ ನಂಬರ್‌ ಹುಡುಗಿಯರು ಎತ್ತಿದ ಕೈ; ಹುಡುಗರಿಗಂತೂ ಇವರು ಅದೃಷ್ಟಲಕ್ಷ್ಮಿಯೇ ಸರಿ

ಪ್ರತಿಯೊಂದು ರಾಡಿಕ್ಸ್‌ ನಂಬರ್‌ನವರು ಒಂದೊಂದು ಗುಣವನ್ನು ಹೊಂದಿರುತ್ತಾರೆ. ರಾಡಿಕ್ಸ್‌ ನಂಬರ್‌ 2ನ್ನು ಹೊಂದಿರುವ ಹುಡುಗಿಯರು ಹುಡುಗರಿಗೆ ಅದೃಷ್ಟ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಈ ಹುಡುಗಿಯರು ಹಣ ಉಳಿತಾಯ ಮಾಡುವಲ್ಲಿ ಎತ್ತಿದ ಕೈ. ಅನಾವಶ್ಯಕವಾಗಿ ಖರ್ಚು ಮಾಡದೆ ಭವಿಷ್ಯಕ್ಕೆ ಹಣ ಸಂಗ್ರಹಿಸುವ ಗುಣ ಇರುವವರು.

ಹಣ ಉಳಿಸುವಲ್ಲಿ ಈ ರಾಡಿಕ್ಸ್‌ ನಂಬರ್‌ ಹುಡುಗಿಯರು ಎತ್ತಿದ ಕೈ; ಹುಡುಗರಿಗಂತೂ ಇವರು ಅದೃಷ್ಟಲಕ್ಷ್ಮಿಯೇ ಸರಿ
ಹಣ ಉಳಿಸುವಲ್ಲಿ ಈ ರಾಡಿಕ್ಸ್‌ ನಂಬರ್‌ ಹುಡುಗಿಯರು ಎತ್ತಿದ ಕೈ; ಹುಡುಗರಿಗಂತೂ ಇವರು ಅದೃಷ್ಟಲಕ್ಷ್ಮಿಯೇ ಸರಿ

ಸಂಖ್ಯಾಶಾಸ್ತ್ರ: ಮನುಷ್ಯನ ಜೀವನದಲ್ಲಿ ಗ್ರಹಗತಿಗಳು ಮಾತ್ರವಲ್ಲ ಸಂಖ್ಯೆಗಳು ಕೂಡಾ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಜ್ಯೋತಿಷ್ಯ ಮಾತ್ರವಲ್ಲ, ಸಂಖ್ಯಾಶಾಸ್ತ್ರವೂ ಜೀವನವನ್ನು ಮುನ್ನಡೆಸುತ್ತದೆ. ಸಂಖ್ಯಾಶಾಸ್ತ್ರದಲ್ಲಿನ ಸಂಖ್ಯೆಗಳ ಆಧಾರದ ಮೇಲೆ ಅಂದರೆ ಹುಟ್ಟಿದ ದಿನಾಂಕದ ಆಧಾರದ ಮೇಲೆ ಒಬ್ಬರ ದೈನಂದಿನ ಜೀವನದ ಭವಿಷ್ಯವನ್ನು ತಿಳಿಯಬಹುದು.

ರಾಡಿಕ್ಸ್‌ ನಂಬರ್‌ 2 ಹುಡುಗಿಯರು ಹಣ ಉಳಿತಾಯ ಮಾಡುವಲ್ಲಿ ಮುಂದು

ಜ್ಯೋತಿಷ್ಯದಂತೆ, ಸಂಖ್ಯಾಶಾಸ್ತ್ರವು ಜನ್ಮ ದಿನಾಂಕದ ಆಧಾರದ ಮೇಲೆ ಭೂತ, ಭವಿಷ್ಯ ಮತ್ತು ವರ್ತಮಾನವನ್ನು ಊಹಿಸುತ್ತದೆ. ಸಂಖ್ಯಾಶಾಸ್ತ್ರದಲ್ಲಿ ಕೆಲವೊಂದು ನಿರ್ದಿಷ್ಟ ದಿನಾಂಕದಂದು ಜನಿಸಿದ ಹುಡುಗಿಯರು ಹಣ ಮಾಡುವಲ್ಲಿ ದಿಟ್ಟತನ ಹೊಂದಿರುತ್ತಾರೆ. ತನ್ನ ಮನೆಯನ್ನು ಸುಗಮವಾಗಿ ಮುನ್ನಡೆಸಲು ಪ್ರತಿ ಮಹಿಳೆಗೂ ಹಣ ಅತ್ಯವಶ್ಯಕ. ಆದರೆ ಕೆಲವೇ ಕೆಲವು ಗೃಹಿಣಿಯರು ಮಾತ್ರ ಹಣ ಉಳಿತಾಯ ಮಾಡಿ ಮುಂದಿನ ಜೀವನಕ್ಕೆ ಸಂಗ್ರಹಿಸುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಈ ರಾಡಿಕ್ಸ್‌ನಲ್ಲಿ ಜನಿಸಿದವರು ಆ ವರ್ಗಕ್ಕೆ ಸೇರುತ್ತಾರೆ. ವ್ಯರ್ಥವಾಗಿ ಖರ್ಚು ಮಾಡದೆ ಪ್ರತಿ ರೂಪಾಯಿಯನ್ನು ಬಹಳ ಕಾಳಜಿಯಿಂದ ಖರ್ಚು ಮಾಡುತ್ತಾರೆ. ಇಂತಹ ಹುಡುಗಿಯರು ಜೀವನದಲ್ಲಿ ಬಂದರೆ, ಸಂಗಾತಿಯ ಸಂತೋಷಕ್ಕೆ ಮಿತಿಯೇ ಇಲ್ಲ. ಹಾಗಾದರೆ ಆ ರಾಡಿಕ್ಸ್ ಸಂಖ್ಯೆ ಯಾವುದು ನೋಡೋಣ. 

ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಹುಡುಗಿಯರು 2 ರಾಡಿಕ್ಸ್ ಸಂಖ್ಯೆಯನ್ನು ಹೊಂದಿರುತ್ತಾರೆ. ಈ ರಾಡಿಕ್ಸ್ ಸಂಖ್ಯೆಯ ಅಧಿಪತಿ ಚಂದ್ರ . ಚಂದ್ರನು ತಣ್ಣನೆಯ ಮನಸ್ಸು ಮತ್ತು ಭಾವನೆಗಳನ್ನು ಸಂಕೇತಿಸುತ್ತಾನೆ. ಚಂದ್ರನ ಪ್ರಭಾವದಿಂದಾಗಿ, ಈ ರಾಡಿಕ್ಸ್ ಸಂಖ್ಯೆಯ ಅಡಿಯಲ್ಲಿ ಜನಿಸಿದ ಹುಡುಗಿಯರು ಬುದ್ಧಿವಂತರು, ಭಾವನಾತ್ಮಕ ಮತ್ತು ಭವಿಷ್ಯದ ಬಗ್ಗೆ ಯೋಚಿಸುವವರಾಗಿದ್ದಾರೆ. ಈ ಹುಡುಗಿರು ಬಹಳ ಸೃಜನಶೀಲರು. ಅವರು ಅತ್ಯುತ್ತಮ ಆಲೋಚನಾ ಶಕ್ತಿಯನ್ನು ಹೊಂದಿದ್ದಾರೆ. ತನ್ನ ಬುದ್ಧಿವಂತಿಕೆಯಿಂದ ಇತರರನ್ನು ಮೆಚ್ಚಿಸುತ್ತಾಳೆ. ಸಾಮಾನ್ಯವಾಗಿ ಈ ರಾಡಿಕ್ಸ್‌ ನಂಬರ್‌ನಲ್ಲಿ ಜನಿಸಿದ ಯುವತಿಯರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಅವರು ಹೆಚ್ಚು ಹಣವನ್ನು ಖರ್ಚು ಮಾಡಲು ಇಷ್ಟಪಡುವುದಿಲ್ಲ. ಆದ್ದರಿಂದಲೇ ಅವರಿಗೆ ಹಣದ ಕೊರತೆ ಬಹಳ ಕಡಿಮೆ.

ಹುಡುಗರಿಗೆ ಇವರು ಅದೃಷ್ಟಲಕ್ಷ್ಮಿಯರು

ಸಂಖ್ಯಾಶಾಸ್ತ್ರದ ಪ್ರಕಾರ ರಾಡಿಕ್ಸ್ 2 ಗೆ ಸೇರಿದ ಹುಡುಗಿಯರು ಬಹಳ ಆಕರ್ಷಕವಾಗಿರುತ್ತಾರೆ. ಅವಳು ತನ್ನ ಮಾತುಗಳಿಂದ ಇತರರನ್ನು ಸೆಳೆಯುತ್ತಾರೆ. ಪ್ರತಿಯೊಬ್ಬರೂ ಇವರ ಮಾತನನ್ನು ಕೇಳಲು ಇಷ್ಟಪಡುತ್ತಾರೆ. ಅವರು ಅಧ್ಯಯನದಲ್ಲಿ ಪ್ರವೀಣರು. ಹಣ ಮಾಡುವ ಕಲೆ ಅವರಲ್ಲಿದ್ದು, ಅದರಿಂದ ಅವರ ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ. ಈ ಯುವತಿಯರಿಗೆ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವಿರುತ್ತದೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ.

ಸಂಖ್ಯೆ 2 ರಲ್ಲಿ ಜನಿಸಿದ ಹುಡುಗಿಯರ ವೈವಾಹಿಕ ಜೀವನ ಕೂಡಾ ಬಹಳ ಸಂತೋಷದಿಂದ ಕೂಡಿರುತ್ತದೆ. ಅವರು ತಮ್ಮ ಸಂಗಾತಿಯಿಂದ ಸಂಪೂರ್ಣ ಬೆಂಬಲ ಮತ್ತು ಪ್ರೀತಿಯನ್ನು ಪಡೆಯುತ್ತಾರೆ. ಈ ಹುಡುಗಿಯರು ಎಲ್ಲಿಗೆ ಹೋದರೂ ಅಲ್ಲಿ ಸಂತೋಷ ಮತ್ತು ಆಶೀರ್ವಾದ ಇರುತ್ತದೆ. ಈ ದಿನಾಂಕದಂದು ಜನಿಸಿದ ಹುಡುಗಿಯರು ತಮ್ಮ ಗಂಡನಿಗೆ ಅದೃಷ್ಟ ದೇವತೆಗಳಾಗಿರುತ್ತಾರೆ. ಇವರು ಹೋದಲೆಲ್ಲಾ ಸಂಪತ್ತು ಮತ್ತು ಸಮೃದ್ಧಿ ಇರುತ್ತದೆ. 

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.