ಕುಂಭ ರಾಶಿಗೆ ರಾಹು ಸಂಚಾರ; ಮೇಷ ಸೇರಿದಂತೆ ಈ 3 ರಾಶಿಯವರಿಗೆ ದುಪ್ಪಟ್ಟು ಆದಾಯ, ಕೆಲಸಗಳಲ್ಲಿ ಯಶಸ್ಸು
ರಾಹು ಹಾಗೂ ಕೇತು ಬೇರೆ ರಾಶಿಗಳಿಗೆ ಸಂಚರಿಸಿದರೂ ಪರಿಣಾಮಗಳು ಒಂದೇ ಆಗಿರುತ್ತದೆ. 18 ಮೇ 2025 ರಂದು ರಾಹುವು ಕುಂಭ ರಾಶಿಗೆ ಪ್ರವೇಶಿಸುತ್ತಿದ್ದನೆ. ಇದು ಶನಿಯ ಸ್ವಂತ ರಾಶಿಯಾಗಿದ್ದು ಈ ಸಮಯದಲ್ಲಿ ರಾಹುವು 3 ರಾಶಿಯವರಿಗೆ ಆಶೀರ್ವದಿಸಲಿದ್ದಾನೆ.
ಜ್ಯೋತಿಷ್ಯದ ಪ್ರಕಾರ ರಾಹು ಹಾಗೂ ಕೇತುವನ್ನು ನೆರಳು ಗ್ರಹಗಳು ಎಂದು ಕರೆಯುತ್ತಾರೆ. ಈ ಎರಡೂ ಗ್ರಹಗಳು ಸದಾ ಹಿಮ್ಮುಖವಾಗಿ ಚಲಿಸುತ್ತವೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು 18 ತಿಂಗಳು ಸಮಯ ಬೇಕು. ರಾಹುವು ಮೇ 18 ರಂದು ಕುಂಭ ರಾಶಿಗೆ ಚಲಿಸುತ್ತಾನೆ.ಇದು ಶನಿಯ ಸಂಕೇತವಾಗಿದೆ. ರಾಹುವಿನ ಕುಂಭ ರಾಶಿಯ ಪ್ರಯಾಣವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.ಆದರೆ ಕೆಲವು ರಾಶಿಗಳಿಗೆ ಬಹಳ ಉತ್ತಮ ಫಲಗಳನ್ನು ನೀಡುತ್ತಾನೆ. ಆ ರಾಶಿಗಳು ಯಾವುವು ನೋಡೋಣ.
ಮೇಷ ರಾಶಿ
2025 ರಲ್ಲಿ ರಾಹುವಿನ ಸಂಚಾರವು ಮೇಷ ರಾಶಿಗೆ ಉತ್ತಮ ಯೋಗವನ್ನು ನೀಡುತ್ತದೆ.ಆದಾಯದಲ್ಲಿ ಉತ್ತಮ ಹೆಚ್ಚಳವಾಗಲಿದೆ.ಸಾಕಷ್ಟು ಲಾಭದಾಯಕ ಅವಕಾಶಗಳು ಲಭ್ಯವಿರುತ್ತವೆ.ಈ ಅವಧಿಯಲ್ಲಿ ನೀವು ದುಪ್ಪಟ್ಟು ಆದಾಯವನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ಉತ್ತಮ ಪ್ರಗತಿ ಇರುತ್ತದೆ.ಸಾಲದ ಸಮಸ್ಯೆಗಳಿಂದ ನೀವು ಪರಿಹಾರ ಪಡೆಯುತ್ತೀರಿ. ನೀವು ಶಾಂತಿಯುತ ಜೀವನವನ್ನು ಹೊಂದಬಹುದು. ಹೊಸ ಹೂಡಿಕೆಗಳು ಉತ್ತಮ ಲಾಭವನ್ನು ತರುತ್ತವೆ. ಆಸ್ತಿ ಸಂಬಂಧಿತ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯು ನಿಮಗೆ ಉತ್ತಮ ಆದಾಯವನ್ನು ನೀಡುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ರಾಹು ಸಂಚಾರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ, ನೀವು ವ್ಯವಹಾರದಲ್ಲಿ ಉತ್ತಮ ಲಾಭ ಪಡೆಯುತ್ತೀರಿ ನಿಮ್ಮ ಹಳೆಯ ವ್ಯವಹಾರವನ್ನು ವಿಸ್ತರಿಸುವ ಅವಕಾಶಗಳು ಇವೆ, ನಿಮ್ಮ ಆದಾಯ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರೆಯುತ್ತದೆ. ಕಚೇರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಮೇಲಧಿಕಾರಿಗಳು ನಿಮ್ಮ ಪರವಾಗಿ ಕೆಲಸ ಮಾಡುತ್ತಾರೆ. ವಿವಾಹಿತ ದಂಪತಿಗಳ ನಡುವೆ ಅನ್ಯೋನ್ಯತೆ ಹೆಚ್ಚಾಗುತ್ತದೆ. ಪ್ರೇಮ ಜೀವನ ಸುಖಮಯವಾಗಿರುತ್ತದೆ. ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳು ಕಡಿಮೆಯಾಗುತ್ತವೆ.
ಮಕರ ರಾಶಿ
ರಾಹುವಿನ ಸಂಚಾರವು ಮಕರ ರಾಶಿಯವರಿಗೆ 2025 ರಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಹಣಕಾಸಿನ ಲಾಭಗಳು ಇವೆ. ಖರ್ಚು ಕಡಿಮೆಯಾಗುತ್ತದೆ ಉಳಿತಾಯ ಹೆಚ್ಚಾಗುತ್ತದೆ.ಹಣದ ಕೊರತೆ ಇರುವುದಿಲ್ಲ.ವಿವಿಧ ರೀತಿಯ ಯೋಗ ಇದೆ.ನೀವು ಎಲ್ಲಾ ಕ್ಷೇತ್ರಗಳಲ್ಲಿ ಲಾಭ ಪಡೆಯುತ್ತೀರಿ.ಸಂವಹನ ಕೌಶಲ್ಯದ ಸಹಾಯದಿಂದ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ. ಆರೋಗ್ಯ ಚೆನ್ನಾಗಿರುತ್ತದೆ. ಹೊಸ ಮನೆ ಮತ್ತು ವಾಹನ ಖರೀದಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಮೇಲುಗೈ ಸಾಧಿಸುತ್ತಾರೆ. ವಿದೇಶಕ್ಕೆ ಹೋಗುವ ಅವಕಾಶವಿರುತ್ತದೆ. ವಿದೇಶದಲ್ಲಿರುವವರಿಗೆ ಯೋಗವಿದೆ. ಅದೃಷ್ಟ ನಿಮ್ಮೊಂದಿಗಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಇದನ್ನೂ ಓದಿ: ಬಾಗಿಲಿನ ಹಿಂದೆ ಬಟ್ಟೆ ಹಾಕುವುದು ಸಮಸ್ಯೆ ಆಗುತ್ತಾ?