ಕನ್ನಡ ಸುದ್ದಿ  /  Astrology  /  Ram Navami 2023 Shree Rama Ashtottara Shatanamavali In Kannada

Shree Rama Ashtottara Shatanamavali: ಇದೇ 30ಕ್ಕೆ ರಾಮ ನವಮಿ ಸಂಭ್ರಮ; ಇಲ್ಲಿದೆ ಶ್ರೀ ರಾಮ ಅಷ್ಟೋತ್ತರ ಶತನಾಮಾವಳಿ..

ಇದೇ ತಿಂಗಳ 30ರಂದು ದೇಶಾದ್ಯಂತ ರಾಮ ನವಮಿ ಸಂಭ್ರಮ. ಈ ಹಿನ್ನೆಲೆಯಲ್ಲಿ ನವಮಿಯ ಮುಹೂರ್ತ ಸಹಿತ ಶ್ರೀ ರಾಮ ಅಷ್ಟೋತ್ತರ ಶತನಾಮಾವಳಿ ಇಲ್ಲಿದೆ.

ಇದೇ 30ಕ್ಕೆ ರಾಮ ನವಮಿ ಸಂಭ್ರಮ; ಇಲ್ಲಿದೆ ಶ್ರೀ ರಾಮ ಅಷ್ಟೋತ್ತರ ಶತನಾಮಾವಳಿ..
ಇದೇ 30ಕ್ಕೆ ರಾಮ ನವಮಿ ಸಂಭ್ರಮ; ಇಲ್ಲಿದೆ ಶ್ರೀ ರಾಮ ಅಷ್ಟೋತ್ತರ ಶತನಾಮಾವಳಿ..

Ram Navami 2023: ಪ್ರತಿ ವರ್ಷ ರಾಮ ನವಮಿಯನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನದಂದು ಜನಿಸಿದನೆಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಈ ದಿನವನ್ನು ಶ್ರೀರಾಮನ ನವಮಿಯೆಂದು ಆಚರಿಸಲಾಗುತ್ತದೆ. ಹಾಗಾದರೆ ಈ ವರ್ಷದ ರಾಮ ನವಮಿ ಯಾವಾಗ? ಈ ವರ್ಷ ರಾಮ ನವಮಿ ಮಾರ್ಚ್ 30ಕ್ಕೆ ಬಂದಿದೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ಈ ವಿಶೇಷ ದಿನವನ್ನು ಸಂಭ್ರಮಿಸಲಾಗುತ್ತದೆ.

ಮುಹೂರ್ತ ಸಮಯ

ಮಾರ್ಚ್ 29, 2023, ರಾತ್ರಿ 09.07 ರಿಂದ ಚೈತ್ರ ಮಾಸದ ನವಮಿ ಪ್ರಾರಂಭ

ಮಾರ್ಚ್ 30, 2023, ರಾತ್ರಿ 11.30 ಕ್ಕೆ ಚೈತ್ರ ಮಾಸದ ನವಮಿ ಕೊನೆಗೊಳ್ಳಲಿದೆ

ಮಾರ್ಚ್ 30, 2023, ಬೆಳಿಗ್ಗೆ 11.17 ರಿಂದ ಮಧ್ಯಾಹ್ನ 1.46ರವರೆಗೆ ರಾಮ ನವಮಿ ಅಭಿಜೀತ್ ಮುಹೂರ್ತ

ರಾಮ ನವಮಿ ಒಟ್ಟು ಪೂಜೆ ಅವಧಿ: 2 ಗಂಟೆ 28 ನಿಮಿಷಗಳು

ರಾಮ ನವಮಿ 2023 ಶುಭ ಯೋಗ

ಈ ವರ್ಷ ರಾಮ ನವಮಿಯಂದು ಗುರು ಪುಷ್ಯ ಯೋಗ, ಅಮೃತ ಸಿದ್ಧಿ ಯೋಗ, ರವಿಯೋಗ, ಸರ್ವಾರ್ಥ ಸಿದ್ಧಿ ಯೋಗ ಇರಲಿದ್ದು, ಕಾಕತಾಳೀಯವೆಂಬಂತೆ ಗುರುವಾರದಂದು ರಾಮ ನವಮಿ ಆಚರಿಸಲ್ಪಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರಾಮನವಮಿಯ ದಿನದಂದು ರಾಮನನ್ನು ಪೂಜಿಸುವುದರಿಂದ ಶುಭವಾಗಲಿದೆ. ಮಾಡುವ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ವಾಸ್ತವವಾಗಿ, ಶ್ರೀರಾಮ ವಿಷ್ಣುವಿನ 7 ನೇ ಅವತಾರವಾಗಿದೆ. ಗುರುವಾರ ರಾಮ ನವಮಿಯಂದು ಬರುತ್ತದೆ ಮತ್ತು ಗುರುವಾರ ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ. ಈ ಮೂಲಕ ರಾಮ ನವಮಿಯ ಮಹತ್ವ ಇನ್ನಷ್ಟು ಹೆಚ್ಚಿದೆ.

ಗುರು ಪುಷ್ಯ ಯೋಗ - 30 ಮಾರ್ಚ್ 2023, 10.59 - 31 ಮಾರ್ಚ್ 2023, 06.13

ಅಮೃತ ಸಿದ್ಧಿ ಯೋಗ - 30 ಮಾರ್ಚ್ 2023, 10.59 - 31 ಮಾರ್ಚ್ 2023, 06.13

ಸರ್ವಾರ್ಥ ಸಿದ್ಧಿ ಯೋಗ - ಇಡೀ ದಿನ

ರವಿ ಯೋಗ - ಇಡೀ ದಿನ

ಶ್ರೀ ರಾಮ ಅಷ್ಟೋತ್ತರ ಶತನಾಮಾವಳಿ

ಓಂ ಶ್ರೀರಾಮಾಯ ನಮಃ |

ಓಂ ರಾಮಭದ್ರಾಯ ನಮಃ |

ಓಂ ರಾಮಚಂದ್ರಾಯ ನಮಃ |

ಓಂ ಶಾಶ್ವತಾಯ ನಮಃ |

ಓಂ ರಾಜೀವಲೋಚನಾಯ ನಮಃ |

ಓಂ ಶ್ರೀಮತೇ ನಮಃ |

ಓಂ ರಾಜೇಂದ್ರಾಯ ನಮಃ |

ಓಂ ರಘುಪುಂಗವಾಯ ನಮಃ |

ಓಂ ಜಾನಕೀವಲ್ಲಭಾಯ ನಮಃ |

ಓಂ ಚೈತ್ರಾಯ ನಮಃ || ೧೦ ||

ಓಂ ಜಿತಮಿತ್ರಾಯ ನಮಃ |

ಓಂ ಜನಾರ್ದನಾಯ ನಮಃ |

ಓಂ ವಿಶ್ವಾಮಿತ್ರ ಪ್ರಿಯಾಯ ನಮಃ |

ಓಂ ದಾಂತಾಯ ನಮಃ |

ಓಂ ಶರಣ್ಯತ್ರಾಣತತ್ಪರಾಯ ನಮಃ |

ಓಂ ವಾಲಿಪ್ರಮಥನಾಯ ನಮಃ |

ಓಂ ವಾಗ್ಮಿನೇ ನಮಃ |

ಓಂ ಸತ್ಯವಾಚೇ ನಮಃ |

ಓಂ ಸತ್ಯವಿಕ್ರಮಾಯ ನಮಃ |

ಓಂ ಸತ್ಯವ್ರತಾಯ ನಮಃ || ೨೦ ||

ಓಂ ವ್ರತಧರಾಯ ನಮಃ |

ಓಂ ಸದಾಹನುಮದಾಶ್ರಿತಾಯ ನಮಃ |

ಓಂ ಕೌಸಲೇಯಾಯ ನಮಃ |

ಓಂ ಖರಧ್ವಂಸಿನೇ ನಮಃ |

ಓಂ ವಿರಾಧವಧಪಂಡಿತಾಯ ನಮಃ |

ಓಂ ವಿಭೀಷಣಪರಿತ್ರಾಣಾಯ ನಮಃ |

ಓಂ ಹರಕೋದಂಡಖಂಡನಾಯ ನಮಃ |

ಓಂ ಸಪ್ತತಾಳಪ್ರಭೇತ್ತ್ರೇ ನಮಃ |

ಓಂ ದಶಗ್ರೀವಶಿರೋಹರಾಯ ನಮಃ |

ಓಂ ಜಾಮದಗ್ನ್ಯಮಹಾದರ್ಪ ದಳನಾಯ ನಮಃ || ೩೦ ||

ಓಂ ತಾಟಕಾಂತಕಾಯ ನಮಃ |

ಓಂ ವೇದಾಂತಸಾರಾಯ ನಮಃ |

ಓಂ ವೇದಾತ್ಮನೇ ನಮಃ |

ಓಂ ಭವರೋಗೈಕಸ್ಯಭೇಷಜಾಯ ನಮಃ |

ಓಂ ದೂಷಣತ್ರಿಶಿರೋಹಂತ್ರೇ ನಮಃ |

ಓಂ ತ್ರಿಮೂರ್ತಯೇ ನಮಃ |

ಓಂ ತ್ರಿಗುಣಾತ್ಮಕಾಯ ನಮಃ |

ಓಂ ತ್ರಿವಿಕ್ರಮಾಯ ನಮಃ |

ಓಂ ತ್ರಿಲೋಕಾತ್ಮನೇ ನಮಃ |

ಓಂ ಪುಣ್ಯಚಾರಿತ್ರಕೀರ್ತನಾಯ ನಮಃ || ೪೦ ||

ಓಂ ತ್ರಿಲೋಕರಕ್ಷಕಾಯ ನಮಃ |

ಓಂ ಧನ್ವಿನೇ ನಮಃ |

ಓಂ ದಂಡಕಾರಣ್ಯಕರ್ತನಾಯ ನಮಃ |

ಓಂ ಅಹಲ್ಯಾಶಾಪಶಮನಾಯ ನಮಃ |

ಓಂ ಪಿತೃಭಕ್ತಾಯ ನಮಃ |

ಓಂ ವರಪ್ರದಾಯ ನಮಃ |

ಓಂ ಜಿತೇಂದ್ರಿಯಾಯ ನಮಃ |

ಓಂ ಜಿತಕ್ರೋಧಾಯ ನಮಃ |

ಓಂ ಜಿತಮಿತ್ರಾಯ ನಮಃ |

ಓಂ ಜಗದ್ಗುರವೇ ನಮಃ || ೫೦ ||

ಓಂ ಯಕ್ಷವಾನರಸಂಘಾತಿನೇ ನಮಃ |

ಓಂ ಚಿತ್ರಕೂಟಸಮಾಶ್ರಯಾಯ ನಮಃ |

ಓಂ ಜಯಂತತ್ರಾಣವರದಾಯ ನಮಃ |

ಓಂ ಸುಮಿತ್ರಾಪುತ್ರಸೇವಿತಾಯ ನಮಃ |

ಓಂ ಸರ್ವದೇವಾಧಿದೇವಾಯ ನಮಃ |

ಓಂ ಮೃತವಾನರಜೀವನಾಯ ನಮಃ |

ಓಂ ಮಾಯಾಮಾರೀಚಹಂತ್ರೇ ನಮಃ |

ಓಂ ಮಹಾದೇವಾಯ ನಮಃ |

ಓಂ ಮಹಾಭುಜಾಯ ನಮಃ |

ಓಂ ಸರ್ವದೇವಸ್ತುತಾಯ ನಮಃ || ೬೦ ||

ಓಂ ಸೌಮ್ಯಾಯ ನಮಃ |

ಓಂ ಬ್ರಹ್ಮಣ್ಯಾಯ ನಮಃ |

ಓಂ ಮುನಿಸಂಸ್ತುತಾಯ ನಮಃ |

ಓಂ ಮಹಾಯೋಗಿನೇ ನಮಃ |

ಓಂ ಮಹೋದರಾಯ ನಮಃ |

ಓಂ ಸುಗ್ರೀವೇಪ್ಸಿತರಾಜ್ಯದಾಯ ನಮಃ |

ಓಂ ಸರ್ವಪುಣ್ಯಾಧಿಕಫಲಾಯ ನಮಃ |

ಓಂ ಸ್ಮೃತಸರ್ವಾಘನಾಶನಾಯ ನಮಃ |

ಓಂ ಆದಿಪುರುಷಾಯ ನಮಃ |

ಓಂ ಪರಮ ಪುರುಷಾಯ ನಮಃ || ೭೦ ||

ಓಂ ಮಹಾಪುರುಷಾಯ ನಮಃ |

ಓಂ ಪುಣ್ಯೋದಯಾಯ ನಮಃ |

ಓಂ ದಯಾಸಾರಾಯ ನಮಃ |

ಓಂ ಪುರಾಣಪುರುಷೋತ್ತಮಾಯ ನಮಃ |

ಓಂ ಸ್ಮಿತವಕ್ತ್ರಾಯ ನಮಃ |

ಓಂ ಮಿತಭಾಷಿಣೇ ನಮಃ |

ಓಂ ಪೂರ್ವಭಾಷಿಣೇ ನಮಃ |

ಓಂ ರಾಘವಾಯ ನಮಃ |

ಓಂ ಅನಂತಗುಣಗಂಭೀರಾಯ ನಮಃ |

ಓಂ ಧೀರೋದಾತ್ತಗುಣೋತ್ತರಾಯ ನಮಃ || ೮೦ ||

ಓಂ ಮಾಯಾಮಾನುಷಚಾರಿತ್ರಾಯ ನಮಃ |

ಓಂ ಮಹಾದೇವಾದಿಪೂಜಿತಾಯ ನಮಃ |

ಓಂ ಸೇತುಕೃತೇ ನಮಃ |

ಓಂ ಜಿತವಾರಾಶಯೇ ನಮಃ |

ಓಂ ಸರ್ವತೀರ್ಥಮಯಾಯ ನಮಃ |

ಓಂ ಹರಯೇ ನಮಃ |

ಓಂ ಶ್ಯಾಮಾಂಗಾಯ ನಮಃ |

ಓಂ ಸುಂದರಾಯ ನಮಃ |

ಓಂ ಶೂರಾಯ ನಮಃ |

ಓಂ ಪೀತವಾಸಾಯ ನಮಃ || ೯೦ ||

ಓಂ ಧನುರ್ಧರಾಯ ನಮಃ |

ಓಂ ಸರ್ವಯಜ್ಞಾಧಿಪಾಯ ನಮಃ |

ಓಂ ಯಜ್ಞಾಯ ನಮಃ |

ಓಂ ಜರಾಮರಣವರ್ಜಿತಾಯ ನಮಃ |

ಓಂ ವಿಭೀಷಣ ಪ್ರತಿಷ್ಠಾತ್ರೇ ನಮಃ |

ಓಂ ಸರ್ವಾಪಗುಣವರ್ಜಿತಾಯ ನಮಃ |

ಓಂ ಪರಮಾತ್ಮನೇ ನಮಃ |

ಓಂ ಪರಸ್ಮೈಬ್ರಹ್ಮಣೇ ನಮಃ |

ಓಂ ಸಚ್ಚಿದಾನಂದವಿಗ್ರಹಾಯ ನಮಃ |

ಓಂ ಪರಸ್ಮೈಜ್ಯೋತಿಷೇ ನಮಃ || ೧೦೦ ||

ಓಂ ಪರಸ್ಮೈಧಾಮ್ನೇ ನಮಃ |

ಓಂ ಪರಾಕಾಶಾಯ ನಮಃ |

ಓಂ ಪರಾತ್ಪರಸ್ಮೈ ನಮಃ |

ಓಂ ಪರೇಶಾಯ ನಮಃ |

ಓಂ ಪಾರಗಾಯ ನಮಃ |

ಓಂ ಪಾರಾಯ ನಮಃ |

ಓಂ ಸರ್ವದೇವಾತ್ಮಕಾಯ ನಮಃ |

ಓಂ ಪರಸ್ಮೈ ನಮಃ || ೧೦೮ ||

|| ಇತೀ ಶ್ರೀ ರಾಮಾಷ್ಟೋತ್ತರ ಶತನಾಮಾವಲಿಃ ಸಂಪೂರ್ಣಮ್ ||

ವಿಭಾಗ