ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ram Navami 2024: ಜಗದಾನಂದಕಾರಕ, ರಾಮ ನಾಮ ಪಾಯಸಕ್ಕೆ; ಶ್ರೀರಾಮನ ಕುರಿತ ಜನಪ್ರಿಯ ಕೀರ್ತನೆಗಳ ಲಿಸ್ಟ್‌ ಇಲ್ಲಿದೆ

Ram Navami 2024: ಜಗದಾನಂದಕಾರಕ, ರಾಮ ನಾಮ ಪಾಯಸಕ್ಕೆ; ಶ್ರೀರಾಮನ ಕುರಿತ ಜನಪ್ರಿಯ ಕೀರ್ತನೆಗಳ ಲಿಸ್ಟ್‌ ಇಲ್ಲಿದೆ

Ram Navami 2024: ಪುರಂದರದಾಸರು, ತ್ಯಾಗರಾಜರು ಸೇರಿದಂತೆ ಅನೇಕ ಮಹನೀಯರು ಶ್ರೀರಾಮನ ಕುರಿತಾದ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ನೀವು ಈ ಬಾರಿ ರಾಮನವಮಿಗೆ ಕೀರ್ತನೆಗಳನ್ನು ಹಾಡಬೇಕು ಎಂದಾದಲ್ಲಿ ರಾಮನ ಕುರಿತಾದ ಖ್ಯಾತ ಕೀರ್ತನೆಗಳ ಲಿಸ್ಟ್‌ ಇಲ್ಲಿದೆ.

ಶ್ರೀರಾಮನ ಕೀರ್ತನೆಗಳು
ಶ್ರೀರಾಮನ ಕೀರ್ತನೆಗಳು (PC: Canva)

Ram Navami 2024: ಏಪ್ರಿಲ್‌ 17 ರಂದು ರಾಮ ನವಮಿ ಆಚರಣೆಗೆ ದೇಶಾದ್ಯಂತ ಭಕ್ತರು ಕಾಯುತ್ತಿದ್ದಾರೆ. ಈ ಬಾರಿಯ ರಾಮ ನವಮಿ ಬಹಳ ವಿಶೇಷ ಎಂದೇ ಹೇಳಬಹುದು. ಇದೇ ವರ್ಷ ಅಕ್ಟೋಬರ್‌ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆಗಿದೆ. ಇದೇ ಖುಷಿಯಲ್ಲಿ ಈ ಬಾರಿ ರಾಮನವಮಿಯನ್ನು ಇನ್ನಷ್ಟು ಅದ್ದೂರಿಯಾಗಿ ಆಚರಿಸಲು ಎಲ್ಲೆಡೆ ಸಕಲ ಸಿದ್ದತೆ ನಡೆದಿದೆ.

ರಾಮ ನವಮಿ ಎಂದರೆ ಭಕ್ತರು ಶ್ರೀರಾಮನಿಗೆ ಧೂಪ ದೀಪ ನೈವೇದ್ಯವನ್ನಿರಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ದೇವಸ್ಥಾನಕ್ಕೆ ತೆರಳಿ ಭಜನೆಯಲ್ಲಿ ಪಾಲ್ಗೊಳ್ಳುತ್ತಾರೆ. ಆ ದಿನ ರಾಮನ ಕೀರ್ತನೆಗಳನ್ನು ಹೇಳುತ್ತಾ ಭಕ್ತಿ ಭಾವದಲ್ಲಿ ಮುಳುಗುತ್ತಾರೆ. ಪುರಂದರದಾಸರು, ತ್ಯಾಗರಾಜರು ಸೇರಿದಂತೆ ಅನೇಕ ಮಹನೀಯರು ಶ್ರೀರಾಮನ ಕೀರ್ತನೆಗಳನ್ನು ರಚಿಸಿದ್ದಾರೆ. ರಾಮನವಮಿಯಂದು ನೀವು ಭಜಿಸಬಹುದಾದ ಕೆಲವೊಂದು ಜನಪ್ರಿಯ ಶ್ರೀರಾಮನ ಕೀರ್ತನೆಗಳು ಹೀಗಿವೆ.

ರಾಮ ನಾಮ ಪಾಯಸಕ್ಕೆ

ಪುರಂದರದಾಸರು ರಚಿಸಿರುವ ರಾಮ ನಾಮ ಪಾಯಸಕ್ಕೆ ಕೀರ್ತನೆಯು ರೂಪಕ ತಾಳದಲ್ಲಿದ್ದು ಆನಂದ ಭೈರವಿ ರಾಗದಲ್ಲಿದೆ. ಕರ್ನಾಟಕ ಸಂಗೀತ ಪಿತಾಮಹ ಎಂದೇ ಖ್ಯಾತರಾಗಿರುವ ಪುರಂದರದಾಸರು ರಚಿಸಿರುವ ಸುಪ್ರಸಿದ್ಧ ಕೀರ್ತನೆಗಳಲ್ಲಿ ರಾಮ ನಾಮ ಪಾಯಸಕ್ಕೆ... ಕೂಡಾ ಒಂದು.

ರಾಮ ಮಂತ್ರವ ಜಪಿಸೋ

ರಾಮ ಮಂತ್ರವ ಜಪಿಸೋ ಹೇ ಮನುಜ...ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ...ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ ಎಂಬ ಈ ಸುಂದರ ಕೀರ್ತನೆ ಕೂಡಾ ಪುರಂದರದಾಸರು ರಚಿಸಿದ್ದು. ಇದು ಆದಿತಾಳದಲ್ಲಿದ್ದು ಜೌನ್ ಪುರಿ ರಾಗದಲ್ಲಿದೆ.

ರಾಮ ರಾಮ ರಾಮ ಎನ್ನಿರೋ

ರಾಮ ರಾಮ ರಾಮ ಎನ್ನಿರೋ ಇಂಥ..ಸ್ವಾಮಿಯ ನಾಮವ ಮರೆಯದಿರೋ..ಪುರಂದರದಾಸರು ರಚಿಸಿದ ಮತ್ತೊಂದು ಶ್ರೀರಾಮನ ಕುರಿತಾದ ಕೀರ್ತನೆ. ಇದು ಆದಿತಾಳದಲ್ಲಿದ್ದು ಚಾರುಕೇಶಿ ರಾಗದಲ್ಲಿದೆ.

ಜಯತು ಕೋದಂಡರಾಮ ಜಯತು ದಶರಥರಾಮ

ಪುರಂದರದಾಸರು ರಚಿಸಿರುವ ಜಯತು ಕೋದಂಡರಾಮ ಜಯತು ದಶರಥರಾಮ...ಜಯತು ಸೀತಾರಾಮ ಜಯತು ರಘುರಾಮ ಜಯತು ಜಯತು ಕೀರ್ತನೆಯು ಖಂಡಛಾಪು ರಾಗದಲ್ಲಿದ್ದು ಶಹನ ರಾಗದಲ್ಲಿದೆ.

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ...ಎಲ್ಲಿಲ್ಲಿ ನೋಡಿದರೂ ಅಲ್ಲಿ ಶ್ರೀರಾಮ... ಪುರಂದರದಾಸರ ಈ ಕೀರ್ತನೆ ರೂಪಕ ತಾಳದಲ್ಲಿದ್ದು ನಾಟಕುರುಂಜಿ ರಾಗದಲ್ಲಿದೆ.

ಪಿಬರೇ ರಾಮರಸಂ

ಶ್ರೀ ಸದಾಶಿವ ಬ್ರಹ್ಮೇ೦ದ್ರ ವಿರಚಿತ ಪಿಬರೇ ರಾಮರಸಂ, ಶ್ರೀ ರಾಮನ ಕುರಿತಾದ ಖ್ಯಾತ ಕೀರ್ತನೆಗಳಲ್ಲಿ ಒಂದು. ಶ್ರೀ ಬಾಲಮುರಳಿಕೃಷ್ಣ ಮೊದಲ ಬಾರಿಗೆ ಈ ಹಾಡನ್ನು ಹಾಡಿದರು. ನಂತರ ಶ್ರೀ ತ್ರಿಚೂರ್ ಬ್ರದರ್ಸ್, ಶ್ರೀರಂಜಿನಿ ಕೊಡಂಪಲ್ಲಿ, ಶ್ರೀ ರಾಹುಲ್ ವೆಲ್ಲಾಲ್ ಅವರ ದನಿಯಲ್ಲಿ ಕೂಡಾ ಈ ಧ್ವನಿ ಸುರಳಿ ಬಿಡುಗಡೆ ಆಗಿದೆ.

ಜಗದಾನಂದಕಾರಕ ಜಯ ಜಾನಕಿ ಪ್ರಾಣ ನಾಯಕ

ತ್ಯಾಗರಾಜರು ರಚಿಸಿರುವ ಈ ಕೀರ್ತನೆ ತೆಲುಗು ಭಾಷೆಯಲ್ಲಿದೆ. ನಟೈ ರಾಗದಲ್ಲಿರುವ ಈ ಕೀರ್ತನೆ ಆದಿ ತಾಳದಲ್ಲಿದೆ. ಈ ಹಾಡನ್ನು ತೆಲುಗಿನ ಶ್ರೀ ರಾಮರಾಜ್ಯಂ ಸಿನಿಮಾದಲ್ಲಿ ಕೂಡಾ ಬಳಸಿಕೊಳ್ಳಲಾಗಿದೆ. ಎಂ.ಎಸ್‌. ಸುಬ್ಬಲಕ್ಷ್ಮೀ ಅವರ ದನಿಯಲ್ಲಿ ಕೂಡಾ ಈ ಹಾಡು ಮೂಡಿ ಬಂದಿದೆ.

ನಗುಮೋಮು ಗಲವಾನಿ ನಾ ಮನೋಹರುನಿ

ನಗುಮೋಮು ಗಲವಾನಿ ನಾ ಮನೋಹರುನಿ... ಜಗಮೇಲು ಶೂರುನಿ ಜಾನಕಿ ವರುನಿ.. ದೇವಾದಿ ದೇವುನಿ ದಿವ್ಯಸುಂದರುನಿ.. ಶ್ರೀವಾಸುದೇವುನಿ ಸೀತಾರಾಘವುನಿ... ತ್ಯಾಗರಾಜರು ರಚಿಸಿರುವ ಈ ಕೀರ್ತನೆ ತೆಲುಗು ಭಾಷೆಯಲ್ಲಿದೆ. ಆದಿ ತಾಳ, ಮಧ್ಯಮಾವತಿ ರಾಗದಲ್ಲಿದೆ.