ರಾಮಾಯಣ: ದಶರಥನಿಗೆ ವಸಿಷ್ಠರ ಬುದ್ದಿವಾದ; ವಿಶ್ವಾಮಿತ್ರರೊಂದಿಗೆ ಕಾಡಿಗೆ ತೆರಳಿದ ರಾಮ, ಲಕ್ಷ್ಮಣರು-rama and lakshmana went to the forest thinking of the opportunity to serve guru vishwamitra smk ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಮಾಯಣ: ದಶರಥನಿಗೆ ವಸಿಷ್ಠರ ಬುದ್ದಿವಾದ; ವಿಶ್ವಾಮಿತ್ರರೊಂದಿಗೆ ಕಾಡಿಗೆ ತೆರಳಿದ ರಾಮ, ಲಕ್ಷ್ಮಣರು

ರಾಮಾಯಣ: ದಶರಥನಿಗೆ ವಸಿಷ್ಠರ ಬುದ್ದಿವಾದ; ವಿಶ್ವಾಮಿತ್ರರೊಂದಿಗೆ ಕಾಡಿಗೆ ತೆರಳಿದ ರಾಮ, ಲಕ್ಷ್ಮಣರು

ರಾಮಾಯಣ: ವಸಿಷ್ಠರು ಬಂದು ದಶರಥನ ಬಳಿ ಮಾತನಾಡಿ. ರಾಮನನ್ನು ತನ್ನೊಡನೆ ಕಳಿಸಿ ಕೊಡುವಂತೆ ಕೇಳುತ್ತಾರೆ. ಆಗ ದಶರಥನು ತನ್ನ ಪುತ್ರನನ್ನು ಕಳಿಸುವ ಬಗ್ಗೆ ಅಂಜುತ್ತಾನೆ. ಆಗ ಏನಾಗುತ್ತದೆ ನೋಡಿ. (ಬರಹ: ಎಚ್‌.ಸತೀಶ್, ಜ್ಯೋತಿಷಿ).

ವಿಶ್ವಾಮಿತ್ರರೊಂದಿಗೆ ಕಾಡಿಗೆ ತೆರಳಿದ ರಾಮ, ಲಕ್ಷ್ಮಣರು
ವಿಶ್ವಾಮಿತ್ರರೊಂದಿಗೆ ಕಾಡಿಗೆ ತೆರಳಿದ ರಾಮ, ಲಕ್ಷ್ಮಣರು

ವಿಶ್ವಾಮಿತ್ರರ ಈ ನಿರ್ಧಾರವು ಮೂರು ಲೋಕಗಳಲ್ಲಿ ಅಲ್ಲೋಲ ಕಲ್ಲೋಲವನ್ನು ಉಂಟು ಮಾಡುತ್ತದೆ. ದೇವಾನುದೇವತೆಗಳೇ ಮುಂದೆ ಒದಗಬಹುದಾದ ತೊಂದರೆಯನ್ನು ಗ್ರಹಿಸಿ ಭಯಭೀತರಾಗುತ್ತಾರೆ. ಇದನ್ನು ಗ್ರಹಿಸಿದ ವಸಿಷ್ಠರು ದಶರಥನಿಗೆ ಬುದ್ಧಿವಾದವನ್ನು ಹೇಳಲು ಪ್ರಯತ್ನಿಸುತ್ತಾರೆ. ದಶರಥನೆ, ಕೊಟ್ಟ ಮಾತನ್ನು ತಪ್ಪದೆ ನಡೆದುಕೊಳ್ಳುವಲ್ಲಿ ನಿಮ್ಮ ವಂಶ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ನಿನ್ನಲ್ಲಿರುವ ಧೈರ್ಯಕ್ಕೆ ಕೊರತೆ ಏನೂ ಇಲ್ಲ. ಸಂಪತ್ತಿಗೂ ಸಹ ಕೊರತೆ ಇಲ್ಲ. ಆದರೆ ಒಂದು ವೇಳೆ ನೀನು ಕೊಟ್ಟ ಮಾತನ್ನು ನಡೆಸಿಕೊಡದೆ ಹೋದಲ್ಲಿ ನಿನ್ನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವವರು ನಿನ್ನನ್ನು ಜರಿಯುತ್ತಾರೆ. ಅಷ್ಟು ಮಾತ್ರವಲ್ಲದೆ ಜನೋಪಕಾರಿ ಕೆಲಸ ಕಾರ್ಯಗಳಿಂದ ಗಳಿಸಿರುವ ಪುಣ್ಯದ ಫಲಗಳು ನಾಶವಾಗುತ್ತವೆ. ನೀನು ಮಾಡಿದ ಅಶ್ವಮೇಧ ಮತ್ತು ಇನ್ನಿತರ ಯಾಗಾದಿಗಳು ಸತ್ವಹೀನವಾಗುತ್ತವೆ. ಅದರ ಫಲವು ನಿನಗೆ ದೊರೆಯದಾಗುತ್ತದೆ.

ರಾಮನಿಂದ ಮಾತ್ರ ಸಾಧ್ಯ

ಆದ್ದರಿಂದ ಯಾವುದೇ ಅನರ್ಥಕ್ಕೆ ದಾರಿ ಮಾಡಿಕೊಡದೆ ಧೈರ್ಯದಿಂದ, ಒಂದೇ ಮನಸ್ಸಿನಿಂದ ರಾಮನನ್ನು ವಿಶ್ವಾಮಿತ್ರರೊಂದಿಗೆ ಕಳುಹಿಸಿ ಕೊಡು. ವಿಶ್ವಾಮಿತ್ರರ ರಕ್ಷಣೆ ರಾಮನಿಗೆ ಇರುತ್ತದೆ. ಅದನ್ನು ಭೇದಿಸಿ ರಾಮನನ್ನು ಯಾರೇ ಆಗಲಿ ಏನನ್ನು ಮಾಡಲು ಸಾಧ್ಯವಿಲ್ಲ. ವಿಶ್ವಮಿತ್ರರಿಗೆ ವಿಶೇಷವಾದ ವಿದ್ಯೆ ಇದೆ ಮತ್ತು ಸಿದ್ದಿಸಿದೆ. ವಿಶ್ವಾಮಿತ್ರನು ರಾಜ್ಯಭಾರ ಮಾಡುತ್ತಿದ್ದಾಗ ಸಾಕ್ಷಾತ್ ಪರಮೇಶ್ವರನೆ ಅಸ್ತ್ರದ ರೂಪರಾದ ಮಕ್ಕಳನ್ನು ವಿಶ್ವಾಮಿತ್ರರಿಗೆ ಉಡುಗೊರೆಯಾಗಿ ಕರುಣಿಸಿದ್ದಾನೆ.

ಬಾಲರಾಮನ ಜೀವಕ್ಕೆ ಏನಾಗುವುದೋ ಎಂಬ ಆತಂಕ ಬೇಡ

ವಿಶ್ವಾಮಿತ್ರರ ಬಳಿ ಇರುವ ಅಸ್ತ್ರಗಳನ್ನು ಒಮ್ಮೆ ಮಂತ್ರಿಸಿ ಶತ್ರುವಿನ ಮೇಲೆ ಪ್ರಯೋಗಿಸಿದರೆ ಶತ್ರುವಿನ ವಿನಾಶ ಖಂಡಿತ. ಬಾಲರಾಮನ ಜೀವಕ್ಕೆ ಏನಾಗುವುದೋ ಎಂಬ ಆತಂಕ ಬೇಡ. ಕೇವಲ ನಿನ್ನ ಮತ್ತು ನಿನ್ನ ಮಗನ ಶ್ರೇಯೋಭಿವೃದ್ಧಿಗಾಗಿ ರಾಮನನ್ನು ಕಳುಹಿಸುವಂತೆ ಒತ್ತಡ ಹೇರುತ್ತಿದ್ದಾರೆ. ವಸಿಷ್ಠರ ಈ ಮಾತುಗಳನ್ನು ಕೇಳಿದ ನಂತರ ದಶರಥನಿಗೆ ಸಮಾಧಾನ ಉಂಟಾಗುತ್ತದೆ. ನಿಜಾಂಶ ತಿಳಿದ ಕಾರಣ ಬಾಲರಾಮನನ್ನು ವಿಶ್ವಾಮಿತ್ರರ ಜೊತೆಯಲ್ಲಿ ಕಳುಹಿಸಲು ತೀರ್ಮಾನಿಸುತ್ತಾನೆ. ವಿಶ್ವಾಮಿತ್ರರ ಜೊತೆಯಲ್ಲಿ ರಾಮನನ್ನು ಕಳುಹಿಸಲು ತೀರ್ಮಾನಿಸಿದಾಗ ರಾಮನೊಂದಿಗೆ ಲಕ್ಷ್ಮಣನು ಹೊರಡುತ್ತಾನೆ.

ಆಕಾಶದಿಂದ ಇವರ ಮೇಲೆ ಹೂಮಳೆಗೆ ಸುರಿಯುತ್ತದೆ

ತನಗೆ ದೊರೆತ ಗುರುಗಳ ಸೇವೆ ಮಾಡುವ ಅವಕಾಶವನ್ನು ನೆನೆದು ರಾಮ ಲಕ್ಷ್ಮಣರು ಸಂತೋಷಗೊಳ್ಳುತ್ತಾರೆ. ರಾಮ ಲಕ್ಷ್ಮಣರು ತಂದೆ ದಶರಥ ಮತ್ತು ತಾಯಿಯಿಂದ ಆಶೀರ್ವಾದ ಪಡೆದು ಕೊಳ್ಳಲು ಅನುವಾಗುತ್ತಾರೆ. ವಸಿಷ್ಠರು ಜಯಶೀಲರಾಗಿ ಬರಲು ಮನಸಾರೆ ಹರಸುತ್ತಾರೆ. ತಂದೆ ತಾಯಿಗಳು ರಾಮನನ್ನು ಪ್ರೀತಿಯಿಂದ ಬಿಗಿದಪ್ಪಿ ವಿಶ್ವಾಮಿತ್ರರಿಗೆ ಒಪ್ಪಿಸುತ್ತಾರೆ. ಆಕಾಶದಿಂದ ಇವರ ಮೇಲೆ ಹೂಮಳೆಗೆ ಸುರಿಯುತ್ತದೆ. ಮನದಲ್ಲಿ ಸ್ವಲ್ಪವೂ ಅಳುಕಿಲ್ಲದೆ ನಗುನಗುತ್ತಲೇ ರಾಮ ಲಕ್ಷ್ಮಣರು ವಿಶ್ವಾಮಿತ್ರರನ್ನು ಹಿಂಬಾಲಿಸುತ್ತಾರೆ. ಸುದೀರ್ಘ ಪ್ರಯಾಣ ಮಾಡಿದ ನಂತರ ಸರಯೂ ನದಿಯ ತೀರವನ್ನು ಎಲ್ಲರೂ ತಲುಪುತ್ತಾರೆ.

ಬಲ ಅತ್ತಿಬ ಎಂಬ ಮಹಾವಿದ್ಯೆಯನ್ನು ಮೂಲ ಮಂತ್ರಗಳ ಸಹಿತ ಉಪದೇಶ ಮಾಡುತ್ತಾರೆ

ವಿಶ್ವಾಮಿತ್ರರು ರಾಮನಿಗೆ ಆಚಮನವನ್ನು ಮಾಡಲು ತಿಳಿಸುತ್ತಾರೆ. ಬಲ ಅತ್ತಿಬ ಎಂಬ ಮಹಾವಿದ್ಯೆಯನ್ನು ಮೂಲ ಮಂತ್ರಗಳ ಸಹಿತವಾಗಿ ಉಪದೇಶಿಸುತ್ತೇನೆ. ಈ ಈ ಮಂತ್ರವನ್ನು ಹೇಳಿಕೊಳ್ಳುವುದರಿಂದ ಅವಿರತವಾಗಿ ಯುದ್ಧವನ್ನು ಮಾಡಿದರು ನಿನ್ನನ್ನು ದಣಿವು ಆವರಿಸುವುದಿಲ್ಲ. ನಿನ್ನಲ್ಲಿರುವ ವಿಶೇಷ ಕಾಂತಿಯು ಸದಾಕಾಲ ಉಳಿಯುತ್ತದೆ. ಇದರಿಂದಾಗಿ ಯಾವುದೇ ರಾಕ್ಷಸರು ನಿನ್ನನ್ನು ಸೋಲಿಸಲು ಸಾಧ್ಯವಾಗುವುದೆ ಇಲ್ಲ. ಈ ಭೂಮಿಯಲ್ಲಿ ನಿನ್ನ ಹೊರತು ಈ ಮಂತ್ರಗಳನ್ನು ಸಿದ್ಧಿಸಿಕೊಂಡವರು ಬೇರೊಬ್ಬರು ಇರುವುದಿಲ್ಲ.

ಇದರಿಂದ ಸುಲಭವಾಗಿ ಮೂರು ಲೋಕಗಳನ್ನು ನೀನು ಜಯಿಸಬಲ್ಲೆ. ಇದರಿಂದ ನಿನಗೆ ವಿಶೇಷವಾದಂತಹ ಜ್ಞಾನವು ಪ್ರಾಪ್ತಿಯಾಗುತ್ತದೆ. ಹಸಿವೆಯಾಗಲಿ ಬಾಯಾರಿಕೆಯಾಗಲಿ ನಿನ್ನನ್ನು ಕಾಡುವುದಿಲ್ಲ. ಈ ಕಾರಣಗಳಿಂದಾಗಿ ಇದನ್ನು ನಿನಗೆ ಭೋದಿಸಬೇಕೆಂಬ ಆಸೆ ನನ್ನಲ್ಲಿ ಉದ್ಭವವಾಗಿದೆ. ಇಷ್ಟು ಮಾತ್ರವಲ್ಲದೆ ಇದನ್ನು ಗ್ರಹಿಸುವ ಮತ್ತು ಕಲಿಯುವ ಹಕ್ಕು ನಿನ್ನದಾಗಿದೆ. ಸಂತೋಷ ಮತ್ತು ಕುತೂಹಲದಿಂದ ರಾಮನು ವಿಶ್ವಾಮಿತ್ರರು ಬೋಧಿಸುವ ಮಂತ್ರಗಳನ್ನು ಕಲಿಯುತ್ತಾನೆ. ತಾನು ಮಹಾರಾಜರ ಮಕ್ಕಳು ಎಂಬುದನ್ನು ಮರೆತು ರಾಮ ಲಕ್ಷ್ಮಣರು ಧರ್ಬೆಯಿಂದ ಮಾಡಿದ ಹಾಸಿಗೆಯಲ್ಲಿ ದಿನವನ್ನು ಕಳೆಯುತ್ತಾರೆ.

mysore-dasara_Entry_Point

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.