Rama Navami 2024: ಶ್ರೀ ರಾಮನವಮಿಯಂದು ಅಷ್ಟೋತ್ತರ ಶತನಾಮಾವಳಿ ಪಠಿಸಿ ರಘುನಾಥನ ಆಶೀರ್ವಾದ ಪಡೆಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Rama Navami 2024: ಶ್ರೀ ರಾಮನವಮಿಯಂದು ಅಷ್ಟೋತ್ತರ ಶತನಾಮಾವಳಿ ಪಠಿಸಿ ರಘುನಾಥನ ಆಶೀರ್ವಾದ ಪಡೆಯಿರಿ

Rama Navami 2024: ಶ್ರೀ ರಾಮನವಮಿಯಂದು ಅಷ್ಟೋತ್ತರ ಶತನಾಮಾವಳಿ ಪಠಿಸಿ ರಘುನಾಥನ ಆಶೀರ್ವಾದ ಪಡೆಯಿರಿ

Rama Navami 2024: ರಾಮ ನವಮಿ ಹತ್ತಿರ ಬರುತ್ತಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ರಾಮನವಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಏಪ್ರಿಲ್‌ 17 ರಂದು ರಾಮನವಮಿ ಆಚರಣೆಗೆ ಭಕ್ತರು ಅದ್ಧೂರಿಯಾಗಿ ಕಾಯುತ್ತಿದ್ದಾರೆ. ಭಕ್ತರು ರಾಮನ ಭಜನೆ ಜೊತೆಗೆ ಅಷ್ಟೋತ್ತರ ಶತನಾಮಾವಳಿಯನ್ನು ಕೂಡಾ ಪಠಿಸುವ ಮೂಲಕ ರಾಮನನ್ನು ಪೂಜಿಸುತ್ತಾರೆ.

ಶ್ರೀ ರಾಮ ಅಷ್ಟೋತ್ತರ ಶತನಾಮಾವಳಿ
ಶ್ರೀ ರಾಮ ಅಷ್ಟೋತ್ತರ ಶತನಾಮಾವಳಿ (PC: Canva)

Rama Navami 2024: ಹಿಂದೂಗಳು ಆರಾಧಿಸುವ ದೇವರಲ್ಲಿ ಶ್ರೀ ರಾಮನಿಗೆ ಕೂಡಾ ಪ್ರಮುಖ ಸ್ಥಾನ ನೀಡಲಾಗಿದೆ. ರಾಮನು ವಿಷ್ಣುವಿನ 7ನೇ ಅವತಾರ ಎಂದು ನಂಬಲಾಗಿದೆ. ಕೌಸಲ್ಯೆ ಮತ್ತು ದಶರಥ ದಂಪತಿಯ ಮಗನಾಗಿ ಕೋಸಲ ಸಾಮ್ರಾಜ್ಯದ ರಾಜಧಾನಿಯಾದ ಅಯೋಧ್ಯೆಯಲ್ಲಿ ಜನಿಸಿದ ಶ್ರೀರಾಮನನ್ನು ಅವತಾರ ಪುರುಷ ಎಂದೇ ಕರೆಯಲಾಗುತ್ತದೆ.

ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಶ್ರೀ ರಾಮ ಜನಿಸಿದ್ದು ಆ ದಿನವನ್ನು ಪ್ರತಿವರ್ಷ ಶ್ರೀರಾಮನವಮಿಯನ್ನಾಗಿ ಆಚರಿಸುತ್ತಾ ಬರಲಾಗಿದೆ. ಈ ವರ್ಷ ಏಪ್ರಿಲ್‌ 17 ರಂದು ಶ್ರೀರಾಮ ನವಮಿ ಆಚರಿಸಲಾಗುತ್ತಿದೆ. ಇದೇ ವರ್ಷ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ಉದ್ಘಾಟನೆ ಆಗಿದೆ. ಇದೇ ಖುಷಿಯಲ್ಲಿ ಈ ಬಾರಿ ರಾಮನವಮಿಯನ್ನು ಇನ್ನೂ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ರಾಮನವಮಿಯಂದು ಶ್ರೀರಾಮನ ಮೂರ್ತಿಗೆ ವಿವಿಧ ಹೂಗಳಿಂದ ಅಲಂಕರಿಸಿ ಧೂಪ ದೀಪ ನೈವೇದ್ಯದಿಂದ ಅಲಂಕರಿಸಲಾಗುತ್ತದೆ. ಪಾನಕ, ಕೋಸಂಬರಿಯನ್ನು ನೈವೇದ್ಯವನ್ನಾಗಿ ಇಟ್ಟು ಭಕ್ತರಿಗೆ ಹಂಚಲಾಗುತ್ತದೆ. ಶ್ರೀರಾಮನ ಭಜನೆ, ಮಂತ್ರಗಳನ್ನು ಪಠಿಸಲಾಗುತ್ತದೆ. ಶ್ರೀರಾಮ ಅಷ್ಟೋತ್ತರ ಶತನಾಮಾವಳಿಯನ್ನು ಹೇಳಿಕೊಂಡು ಪೂಜೆ ಮಾಡಲಾಗುತ್ತದೆ. ನೀವೂ ಕೂಡಾ ಮನೆಯಲ್ಲಿ ಶ್ರೀರಾಮ ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸುವ ಮೂಲಕ ಶ್ರೀರಾಮನ ಆಶೀರ್ವಾದ ಪಡೆಯಿರಿ.

ರಾಮ ಅಷ್ಟ್ತೋತ್ತರ ಶತನಾಮಾವಳಿ

ಓಂ ಶ್ರೀರಾಮಾಯ ನಮಃ
ಓಂ ರಾಮಭದ್ರಾಯ ನಮಃ
ಓಂ ರಾಮಚಂದ್ರಾಯ ನಮಃ
ಓಂ ಶಾಶ್ವತಾಯ ನಮಃ
ಓಂ ರಾಜೀವಲೋಚನಾಯ ನಮಃ
ಓಂ ಶ್ರೀಮತೇ ನಮಃ
ಓಂ ರಾಜೇಂದ್ರಾಯ ನಮಃ
ಓಂ ರಘುಪುಂಗವಾಯ ನಮಃ
ಓಂ ಜಾನಕೀವಲ್ಲಭಾಯ ನಮಃ
ಓಂ ಜೈತ್ರಾಯ ನಮಃ ॥ 10 ॥

ಓಂ ಜಿತಾಮಿತ್ರಾಯ ನಮಃ
ಓಂ ಜನಾರ್ದನಾಯ ನಮಃ
ಓಂ ವಿಶ್ವಾಮಿತ್ರಪ್ರಿಯಾಯ ನಮಃ
ಓಂ ದಾಂತಾಯ ನಮಃ
ಓಂ ಶರಣತ್ರಾಣತತ್ಪರಾಯ ನಮಃ
ಓಂ ವಾಲಿಪ್ರಮಥನಾಯ ನಮಃ
ಓಂ ವಾಙ್ಮಿನೇ ನಮಃ
ಓಂ ಸತ್ಯವಾಚೇ ನಮಃ
ಓಂ ಸತ್ಯವಿಕ್ರಮಾಯ ನಮಃ
ಓಂ ಸತ್ಯವ್ರತಾಯ ನಮಃ ॥ 20 ॥

ಓಂ ವ್ರತಧರಾಯ ನಮಃ
ಓಂ ಸದಾ ಹನುಮದಾಶ್ರಿತಾಯ ನಮಃ
ಓಂ ಕೋಸಲೇಯಾಯ ನಮಃ
ಓಂ ಖರಧ್ವಂಸಿನೇ ನಮಃ
ಓಂ ವಿರಾಧವಧಪಂಡಿತಾಯ ನಮಃ
ಓಂ ವಿಭೀಷಣಪರಿತ್ರಾತ್ರೇ ನಮಃ
ಓಂ ಹರಕೋದಂಡ ಖಂಡನಾಯ ನಮಃ
ಓಂ ಸಪ್ತಸಾಲ ಪ್ರಭೇತ್ತ್ರೇ ನಮಃ
ಓಂ ದಶಗ್ರೀವಶಿರೋಹರಾಯ ನಮಃ
ಓಂ ಜಾಮದಗ್ನ್ಯಮಹಾದರ್ಪದಳನಾಯ ನಮಃ ॥ 30 ॥

ಓಂ ತಾಟಕಾಂತಕಾಯ ನಮಃ
ಓಂ ವೇದಾಂತ ಸಾರಾಯ ನಮಃ
ಓಂ ವೇದಾತ್ಮನೇ ನಮಃ
ಓಂ ಭವರೋಗಸ್ಯ ಭೇಷಜಾಯ ನಮಃ
ಓಂ ದೂಷಣತ್ರಿಶಿರೋಹಂತ್ರೇ ನಮಃ
ಓಂ ತ್ರಿಮೂರ್ತಯೇ ನಮಃ
ಓಂ ತ್ರಿಗುಣಾತ್ಮಕಾಯ ನಮಃ
ಓಂ ತ್ರಿವಿಕ್ರಮಾಯ ನಮಃ
ಓಂ ತ್ರಿಲೋಕಾತ್ಮನೇ ನಮಃ
ಓಂ ಪುಣ್ಯಚಾರಿತ್ರಕೀರ್ತನಾಯ ನಮಃ ॥ 40 ॥

ಓಂ ತ್ರಿಲೋಕರಕ್ಷಕಾಯ ನಮಃ
ಓಂ ಧನ್ವಿನೇ ನಮಃ
ಓಂ ದಂಡಕಾರಣ್ಯಕರ್ತನಾಯ ನಮಃ
ಓಂ ಅಹಲ್ಯಾಶಾಪಶಮನಾಯ ನಮಃ
ಓಂ ಪಿತೃಭಕ್ತಾಯ ನಮಃ
ಓಂ ವರಪ್ರದಾಯ ನಮಃ
ಓಂ ಜಿತಕ್ರೋಧಾಯ ನಮಃ
ಓಂ ಜಿತಾಮಿತ್ರಾಯ ನಮಃ
ಓಂ ಜಗದ್ಗುರವೇ ನಮಃ
ಓಂ ಋಕ್ಷವಾನರಸಂಘಾತಿನೇ ನಮಃ ॥ 50॥

ಓಂ ಚಿತ್ರಕೂಟಸಮಾಶ್ರಯಾಯ ನಮಃ
ಓಂ ಜಯಂತತ್ರಾಣ ವರದಾಯ ನಮಃ
ಓಂ ಸುಮಿತ್ರಾಪುತ್ರ ಸೇವಿತಾಯ ನಮಃ
ಓಂ ಸರ್ವದೇವಾದಿದೇವಾಯ ನಮಃ
ಓಂ ಮೃತವಾನರಜೀವನಾಯ ನಮಃ
ಓಂ ಮಾಯಾಮಾರೀಚಹಂತ್ರೇ ನಮಃ
ಓಂ ಮಹಾದೇವಾಯ ನಮಃ
ಓಂ ಮಹಾಭುಜಾಯ ನಮಃ
ಓಂ ಸರ್ವದೇವಸ್ತುತಾಯ ನಮಃ
ಓಂ ಸೌಮ್ಯಾಯ ನಮಃ ॥ 60 ॥

ಓಂ ಬ್ರಹ್ಮಣ್ಯಾಯ ನಮಃ
ಓಂ ಮುನಿಸಂಸ್ತುತಾಯ ನಮಃ
ಓಂ ಮಹಾಯೋಗಿನೇ ನಮಃ
ಓಂ ಮಹೋದಾರಾಯ ನಮಃ
ಓಂ ಸುಗ್ರೀವೇಪ್ಸಿತ ರಾಜ್ಯದಾಯ ನಮಃ
ಓಂ ಸರ್ವಪುಣ್ಯಾಧಿಕ ಫಲಾಯ ನಮಃ
ಓಂ ಸ್ಮೃತಸರ್ವಾಘನಾಶನಾಯ ನಮಃ
ಓಂ ಆದಿಪುರುಷಾಯ ನಮಃ
ಓಂ ಪರಮಪುರುಷಾಯ ನಮಃ
ಓಂ ಮಹಾಪುರುಷಾಯ ನಮಃ ॥ 70 ॥

ಓಂ ಪುಣ್ಯೋದಯಾಯ ನಮಃ
ಓಂ ದಯಾಸಾರಾಯ ನಮಃ
ಓಂ ಪುರಾಣಾಯ ನಮಃ
ಓಂ ಪುರುಷೋತ್ತಮಾಯ ನಮಃ
ಓಂ ಸ್ಮಿತವಕ್ತ್ರಾಯ ನಮಃ
ಓಂ ಮಿತಭಾಷಿಣೇ ನಮಃ
ಓಂ ಪೂರ್ವಭಾಷಿಣೇ ನಮಃ
ಓಂ ರಾಘವಾಯ ನಮಃ
ಓಂ ಅನಂತಗುಣಗಂಭೀರಾಯ ನಮಃ
ಓಂ ಧೀರೋದಾತ್ತ ಗುಣೋತ್ತಮಾಯ ನಮಃ ॥ 80 ॥

ಓಂ ಮಾಯಾಮಾನುಷಚಾರಿತ್ರಾಯ ನಮಃ
ಓಂ ಮಹಾದೇವಾದಿ ಪೂಜಿತಾಯ ನಮಃ
ಓಂ ಸೇತುಕೃತೇ ನಮಃ
ಓಂ ಜಿತವಾರಾಶಯೇ ನಮಃ
ಓಂ ಸರ್ವತೀರ್ಥಮಯಾಯ ನಮಃ
ಓಂ ಹರಯೇ ನಮಃ
ಓಂ ಶ್ಯಾಮಾಂಗಾಯ ನಮಃ
ಓಂ ಸುಂದರಾಯ ನಮಃ
ಓಂ ಶೂರಾಯ ನಮಃ
ಓಂ ಪೀತವಾಸಸೇ ನಮಃ ॥ 90 ॥

ಓಂ ಧನುರ್ಧರಾಯ ನಮಃ
ಓಂ ಸರ್ವಯಜ್ಞಾಧಿಪಾಯ ನಮಃ
ಓಂ ಯಜ್ವನೇ ನಮಃ
ಓಂ ಜರಾಮರಣವರ್ಜಿತಾಯ ನಮಃ
ಓಂ ಶಿವಲಿಂಗಪ್ರತಿಷ್ಠಾತ್ರೇ ನಮಃ
ಓಂ ಸರ್ವಾವಗುಣವರ್ಜಿತಾಯ ನಮಃ
ಓಂ ಪರಮಾತ್ಮನೇ ನಮಃ
ಓಂ ಪರಸ್ಮೈ ಬ್ರಹ್ಮಣೇ ನಮಃ
ಓಂ ಸಚ್ಚಿದಾನಂದ ವಿಗ್ರಹಾಯ ನಮಃ
ಓಂ ಪರಸ್ಮೈಜ್ಯೋತಿಷೇ ನಮಃ ॥ 100 ॥

ಓಂ ಪರಸ್ಮೈ ಧಾಮ್ನೇ ನಮಃ
ಓಂ ಪರಾಕಾಶಾಯ ನಮಃ
ಓಂ ಪರಾತ್ಪರಾಯ ನಮಃ
ಓಂ ಪರೇಶಾಯ ನಮಃ
ಓಂ ಪಾರಗಾಯ ನಮಃ
ಓಂ ಪಾರಾಯ ನಮಃ
ಓಂ ಸರ್ವದೇವಾತ್ಮಕಾಯ ನಮಃ
ಓಂ ಪರಾಯ ನಮಃ ॥ 108 ॥

ಇತಿ ಶ್ರೀ ಶ್ರೀ ಶ್ರೀ ರಾಮಾಷ್ಟೋತ್ತರ ಶತನಾಮಾವಳಿ ಸಂಪೂರ್ಣ

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.