ಹೀಗೆ ಮಾಡಿ ವಿದ್ಯಾಭ್ಯಾಸ, ಪರೀಕ್ಷೆ ತಯಾರಿ ಆರಂಭಿಸಿದರೆ ಯಶಸ್ಸು ಸುಲಭ: ವಿದ್ಯಾರ್ಥಿಗಳು, ಪೋಷಕರಿಗೆ ತಿಳಿದಿರಬೇಕಾದ ಮಾಹಿತಿ ಇದು
ಯಾವುದೇ ಕೆಲಸವಾದರೂ ಜನ್ಮ ತಾರೆ, ವಿಪತ್ತು ತಾರೆ ಮತ್ತು ನೈದನ ತಾರೆಗಳಲ್ಲಿ ಆರಂಭಿಸಬಾರದು. ಈ ಹಿನ್ನೆಲೆಯಲ್ಲಿ ನಿಮ್ಮ ಜನ್ಮತಾರೆ ಯಾವುದು ಎಂದು ತಿಳಿದುಕೊಂಡು, ಅದಕ್ಕೆ ಅನುಗುಣವಾಗಿ ನಿಮಗೆ ಹೊಂದಾಣಿಕೆಯಾಗುವ ನಕ್ಷತ್ರಗಳಲ್ಲಿ ವಿದ್ಯಾಭ್ಯಾಸ ಆರಂಭಿಸಿದರೆ ಯಶಸ್ಸು ಸಿಗುತ್ತದೆ. (ಬರಹ: ಸತೀಶ್ ಎಚ್.)
ತಾರಾಬಲ ಎಂದರೆ ಉತ್ತಮ ನಕ್ಷತ್ರ ಎಂದೇ ಅರ್ಥ. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮಾತ್ರ ನಾವು ಉತ್ತಮ ಫಲಗಳನ್ನು ಪಡೆಯಲು ಸಾಧ್ಯ. ಇದೇ ರೀತಿ ವಿದ್ಯಾಭ್ಯಾಸದ ವಿಚಾರದಲ್ಲಿಯೂ ನಕ್ಷತ್ರವು ಬಲು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಯಾವುದೇ ಕೆಲಸವಾದರೂ ಜನ್ಮ ತಾರೆ, ವಿಪತ್ತು ತಾರೆ ಮತ್ತು ನೈದನ ತಾರೆಗಳಲ್ಲಿ ಆರಂಭಿಸಬಾರದು. ಈ ಹಿನ್ನೆಲೆಯಲ್ಲಿ ನಿಮ್ಮ ಜನ್ಮತಾರೆ ಯಾವುದು ಎಂದು ತಿಳಿದುಕೊಂಡು, ಅದಕ್ಕೆ ಅನುಗುಣವಾಗಿ ನಿಮಗೆ ಹೊಂದಾಣಿಕೆಯಾಗುವ ನಕ್ಷತ್ರಗಳಲ್ಲಿ ವಿದ್ಯಾಭ್ಯಾಸ ಆರಂಭಿಸಿದರೆ ಯಶಸ್ಸು ಸಿಗುತ್ತದೆ.
ಕೃತ್ತಿಕಾ, ಉತ್ತರ ಮತ್ತು ಉತ್ತರಾಷಾಢ ನಕ್ಷತ್ರದಲ್ಲಿ ಜನಿಸಿರುವವರು ಅಶ್ವಿನಿ, ಪುಷ್ಯ ಪುಬ್ಬಾ ಹಸ್ತ ಸ್ವಾತಿ ಮೂಲ ಪೂರ್ವಾಷಾಡ ನಕ್ಷತ್ರಗಳಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಬಹುದು. ಇದೇ ನಕ್ಷತ್ರಗಳಲ್ಲಿ ಪರೀಕ್ಷೆಯ ತಯಾರಿ ನಡೆಸಿದರೂ ಒಳ್ಳೆಯದಾಗುತ್ತದೆ. ರೋಹಿಣಿ, ಹಸ್ತ ಮತ್ತು ಶ್ರವಣ ನಕ್ಷತ್ರಗಳಲ್ಲಿ ಜನಿಸಿರುವವರು ಮೃಗಶಿರ, ಪುನರ್ವಸು, ಪುಬ್ಬ, ಚಿತ್ತ, ಪೂರ್ವಾಷಾಢ, ಪೂರ್ವಾಭಾದ್ರ ನಕ್ಷತ್ರಗಳಲ್ಲಿ ವಿದ್ಯಾಭ್ಯಾಸ ಅಥವಾ ಪರೀಕ್ಷಾ ತಯಾರಿ ಆರಂಭಿಸುವುದು ಒಳ್ಳೆಯದು.
ಮೃಗಶಿರಾ, ಚಿತ್ತಾ ಮತ್ತು ಧನಿಷ್ಠ ನಕ್ಷತ್ರಗಳಲ್ಲಿ ಜನಿಸಿರುವವರು ಅಶ್ವಿನಿ, ಪುಷ್ಯ, ಹಸ್ತ, ಸ್ವಾತಿ ಮತ್ತು ಮೂಲ ನಕ್ಷತ್ರಗಳಲ್ಲಿ ವಿದ್ಯಾಭ್ಯಾಸ ಅಥವಾ ಪರೀಕ್ಷಾ ತಯಾರಿ ಆರಂಭಿಸುವುದು ಒಳ್ಳೆಯದು. ಆಶ್ಲೇಷ, ಜೇಷ್ಠ ಮತ್ತು ರೇವತಿ ನಕ್ಷತ್ರಗಳಲ್ಲಿ ಜನಿಸಿರುವವರು ಮೃಗಶಿರ, ಪುನರ್ವಸು, ಪುಷ್ಯ, ಚಿತ್ತ ಮತ್ತು ಮೂಲ ನಕ್ಷತ್ರಗಳಲ್ಲಿ ವಿದ್ಯಾಭ್ಯಾಸ ಅಥವಾ ಪರೀಕ್ಷಾ ತಯಾರಿ ಆರಂಭಿಸುವುದು ಒಳ್ಳೆಯದು.
ಪುನರ್ವಸು, ವಿಷಾಖ ಮತ್ತು ಪೂರ್ವಭಾದ್ರ ನಕ್ಷತ್ರಗಳಲ್ಲಿ ಜನಿಸಿರುವವರು ಅಶ್ವಿನಿ ಮೃಗಶಿರ, ಪುಷ್ಯ, ಚಿತ್ತ, ಸ್ವಾತಿ ಮತ್ತು ಮೂಲ ನಕ್ಷತ್ರಗಳಲ್ಲಿ ವಿದ್ಯಾಭ್ಯಾಸ ಅಥವಾ ಪರೀಕ್ಷಾ ತಯಾರಿ ನಡೆಸುವುದು ಯೋಗ್ಯಕರ. ಭರಣಿ, ಪುಬ್ಬ ಮತ್ತು ಪೂರ್ವಾಷಾಢ ನಕ್ಷತ್ರಗಳಲ್ಲಿ ಜನಿಸಿರುವವರು ಅಶ್ವಿನಿ, ಮೃಗಶಿರ, ಪುನರ್ವಸು, ಚಿತ್ತ, ಮೂಲ ಪೂರ್ವಭಾದ್ರ ನಕ್ಷತ್ರಗಳಲ್ಲಿ ವಿದ್ಯಾಭ್ಯಾಸ ಅಥವಾ ಪರೀಕ್ಷಾ ತಯಾರಿ ನಡೆಸುವುದು ಒಳ್ಳೆಯದು.
ಪುಷ್ಯ, ಅನುರಾಧ ಮತ್ತು ಉತ್ತರಭಾದ್ರ ನಕ್ಷತ್ರಗಳಲ್ಲಿ ಜನಿಸಿರುವವರು ಪುನರ್ವಸು, ಪುಬ್ಬ, ಹಸ್ತ, ಸ್ವಾತಿ, ಪೂರ್ವಾಷಾಢ ಮತ್ತು ಪೂರ್ವಭಾದ್ರ ನಕ್ಷತ್ರಗಳಲ್ಲಿ ವಿದ್ಯಾಭ್ಯಾಸ ಅಥವಾ ಪರೀಕ್ಷಾ ತಯಾರಿ ನಡೆಸುವುದು ಸೂಕ್ತ. ಆರ್ದ್ರಾ, ಸ್ವಾತಿ ಮತ್ತು ಶತಭಿಷ ನಕ್ಷತ್ರಗಳಲ್ಲಿ ಜನಿಸಿರುವವರು ಮೃಗಶಿರ, ಪುನರ್ವಸು, ಹಸ್ತ, ಚಿತ್ತ ಪೂರ್ವಾಷಾಢ, ಪೂರ್ವಭಾದ್ರ ನಕ್ಷತ್ರಗಳಲ್ಲಿ ವಿದ್ಯಾಭ್ಯಾಸ ಅಥವಾ ಪರೀಕ್ಷಾ ತಯಾರಿ ನಡೆಸುವುದು ಒಳ್ಳೆಯದು. ಅಶ್ವಿನಿ, ಮಖ ಮತ್ತು ಮೂಲ ನಕ್ಷತ್ರದಲ್ಲಿ ಜನಿಸಿರುವವರು ಪುಷ್ಯ, ಪುಬ್ಬ, ಹಸ್ತ, ಸ್ವಾತಿ, ಪೂರ್ವಾಷಾಢ ನಕ್ಷತ್ರಗಳಲ್ಲಿ ವಿದ್ಯಾಭ್ಯಾಸ ಅಥವಾ ಪರೀಕ್ಷಾ ತಯಾರಿಯನ್ನು ನಡೆಸುವುದು ಸೂಕ್ತವಾಗುತ್ತದೆ.
ಪುನರ್ವಸು ನಕ್ಷತ್ರ ಇದ್ದಾಗ ಎಚ್ಚರಿಕೆ ವಹಿಸಿ
ಸಾಮಾನ್ಯವಾಗಿ ಪುನರ್ವಸು ನಕ್ಷತ್ರವಿರುವ ದಿನ ಯಾವುದೇ ಕೆಲಸ ಮಾಡಿದರು ಅದನ್ನು ಪದೇಪದೇ ಮಾಡಬೇಕಾಗುತ್ತದೆ. ಆದ್ದರಿಂದ ಪುನರ್ವಸು ನಕ್ಷತ್ರವಿರುವ ದಿನ ಪರೀಕ್ಷೆಯ ಶುಲ್ಕವನ್ನು ಪಾವತಿ ಮಾಡದಿರುವುದು ಒಳ್ಳೆಯದು. ಯಾವುದೇ ನಕ್ಷತ್ರವಾದರೂ ಪರೀಕ್ಷೆ ಆರಂಭವಾಗುವ ದುರ್ಗಾ ಸೂಕ್ತ ಹೋಮವನ್ನು ಮಾಡಿಸಬಹುದು. ಇದರಿಂದಾಗಿ ಆತ್ಮವಿಶ್ವಾಸವು ಹೆಚ್ಚುತ್ತದೆ. ಮನಸ್ಸಿನಲ್ಲಿರುವ ದೌರ್ಬಲ್ಯವು ಮರೆಯಾಗಿ ಒಮ್ಮೆ ಕಲಿತ ವಿಚಾರಗಳು ಪೂರ್ಣವಾಗಿ ಮನನವಾಗುತ್ತದೆ. ಸಹಪಾಠಿಗಳ ಜೊತೆ ಉತ್ತಮ ಬಾಂಧವ್ಯವು ರೂಪುಗೊಳ್ಳುತ್ತದೆ. ಮನೆಯಲ್ಲಿ ಹೋಮ ಮಾಡಲು ಸಾಧ್ಯವಿಲ್ಲವಾದರೆ ಸಾಮೂಹಿಕವಾಗಿ ಮಾಡುವ ಹೋಮದಲ್ಲಿ ಪಾಲ್ಗೊಳ್ಳಬಹುದು.
ಮೊದಲ ದಿನ ಶಾಲೆಗೆ ಕಳಿಸುವ ಮೊದಲು ಶಾರದಾ ಪೂಜೆ ಮಾಡಿ
ಮೊದಲ ದಿನ ಪುಟ್ಟ ಮಕ್ಕಳನ್ನು ಶಾಲೆಗೆ ಕಳಿಸುವ ವೇಳೆಯಲ್ಲಿ ಶ್ರೀ ಶಾರದಾ ದೇವಿಯ ದೇವಾಲಯದಲ್ಲಿ ಪೂಜೆ ಮಾಡಿಸುವುದು ಸೂಕ್ತ. ಐದು ಜನ ಪುಟ್ಟ ಮಕ್ಕಳಿಗೆ ಪುಸ್ತಕ, ಪೆನ್-ಪೆನ್ಸಿಲ್‌ಗಳನ್ನು ಪ್ರೀತಿಯಿಂದ ನೀಡಿದರೆ ವಿದ್ಯಾಭ್ಯಾಸವು ಯಾವುದೇ ಅಡ್ಡಿ ಆತಂಕವಿಲ್ಲದೆ ಮುಂದುವರೆಯುತ್ತದೆ. ಕೆಲವು ಮಕ್ಕಳಿಗೆ ಪರೀಕ್ಷೆಗಳ ವೇಳೆಯಲ್ಲಿ ಅನಾರೋಗ್ಯ ಉಂಟಾಗುತ್ತದೆ. ಇಂತಹವರು ಶ್ರೀ ದತ್ತಾತ್ರೇಯ ಅಥವಾ ಯಾವುದೇ ಗುರುಗಳ ಮಂದಿರದಲ್ಲಿ ಪೂಜೆ ಮಾಡಿಸುವುದು ಒಳಿತು. ಹಯಗ್ರೀವ ದೇವರಪೂಜೆ ಅಥವಾ ಪ್ರಸಾದ ಸ್ವೀಕಾರದಿಂದ ಉತ್ತಮ ಆರೋಗ್ಯ ಸಿಗುತ್ತದೆ. ಮನದಲ್ಲಿರುವ ಭಯವು ದೂರವಾಗುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)