ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆಷಾಢ ಮಾಸದಲ್ಲಿ ಅತ್ತೆ-ಸೊಸೆ ಒಂದೇ ಮನೆಯಲ್ಲಿ ಇರಬಾರದು ಏಕೆ? ಶಾಸ್ತ್ರ ಕೊಡುವ ಉತ್ತರ ಹೀಗಿದೆ

ಆಷಾಢ ಮಾಸದಲ್ಲಿ ಅತ್ತೆ-ಸೊಸೆ ಒಂದೇ ಮನೆಯಲ್ಲಿ ಇರಬಾರದು ಏಕೆ? ಶಾಸ್ತ್ರ ಕೊಡುವ ಉತ್ತರ ಹೀಗಿದೆ

Ashada masam: ಆಷಾಡದಲ್ಲಿ ಅತ್ತೆ ಮತ್ತು ಸೊಸೆ ಒಂದೇ ಮನೆಯಲ್ಲಿ ಇರಬಾರದು ಎಂದು ಹೇಳುತ್ತಾರೆ. ಹೀಗೆ ಏಕೆ ಹೇಳುತ್ತಾರೆ? ಇದರ ಹಿಂದಿನ ಕಾರಣವೇನು ಎಂಬುದನ್ನು ಜ್ಯೋತಿಷಿಗಳು ಹೇಳಿದ್ದಾರೆ.

ಆಷಾಢ ಮಾಸದಲ್ಲಿ ಅತ್ತೆ-ಸೊಸೆ ಒಂದೇ ಮನೆಯಲ್ಲಿ ಇರಬಾರದು ಏಕೆ? ಶಾಸ್ತ್ರ ಕೊಡುವ ಉತ್ತರ ಹೀಗಿದೆ
ಆಷಾಢ ಮಾಸದಲ್ಲಿ ಅತ್ತೆ-ಸೊಸೆ ಒಂದೇ ಮನೆಯಲ್ಲಿ ಇರಬಾರದು ಏಕೆ? ಶಾಸ್ತ್ರ ಕೊಡುವ ಉತ್ತರ ಹೀಗಿದೆ (PC: Freepik)

ಉತ್ತರಾಯಣ ಮುಗಿದು ದಕ್ಷಿಣಾಯಣ ಆರಂಭವಾಗುವ ಕಾಲವೇ ಆಷಾಡ ಮಾಸ. ಹಿಂದೂ ಕ್ಯಾಲೆಂಡರ್‌ನ ನಾಲ್ಕನೇ ತಿಂಗಳನ್ನು ಆಷಾಢ ಮಾಸ ಎಂದು ಕರೆಯಲಾಗುತ್ತದೆ. ಈ ಮಾಸದಲ್ಲಿ ಶುಭಕಾರ್ಯಗಳು ನಡೆಯುವುದಿಲ್ಲ. ಈ ಮಾಸದಲ್ಲಿ ಮಹಾವಿಷ್ಣು ಯೋಗನಿದ್ರೆಗೆ ಜಾರುವ ಕಾರಣದಿಂದ; ವ್ರತಾಚರಣೆ, ತೀರ್ಥಯಾತ್ರೆಗಳಿಗೆ ಇದು ಪುಣ್ಯ ಕಾಲ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಶಕ್ತಿ ದೇವತೆಗಳಾದ ಭೈರವ ಹಾಗೂ ನರಸಿಂಹ ಸೇರಿದಂತೆ ವಿವಿಧ ದೇವರುಗಳನ್ನು ಪೂಜಿಸಲಾಗುತ್ತದೆ. ಇದೇ ವೇಳೆ ಶಕ್ತಿ ಸ್ವರೂಪಿಣಿಯಾಗಿರುವ ವರಾಹಿ ಅಮ್ಮನನ್ನು ಆರಾಧಿಸಲಾಗುತ್ತದೆ. ಒಂದು ಅರ್ಥದಲ್ಲಿ ಆಷಾಢ ಎಂದರೆ ಆದಿ ಹಾಗೂ ಶಕ್ತಿ ಎಂಬ ಅರ್ಥವೂ ಇದೆ ಎಂದು ಜ್ಯೋತಿಷಿಗಳಾದ ಚಿಲಕಮರ್ಥಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳುತ್ತಾರೆ.

ಹಿಂದೂ ಸಂಪ್ರದಾಯದಲ್ಲಿ ಕೆಲವೊಂದು ಆಚರಣೆಗಳಿವೆ. ಆಷಾಡ ಮಾಸದಲ್ಲಿ ಕೆಲವೊಂದು ನಿಯಮ ಪಾಲನೆಗಳು ಹೆಚ್ಚು. ಮದುವೆಯಾದ ನಂತರ ಬರುವ ಮೊದಲ ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾದ ದಂಪತಿ ಅಥವಾ ಅತ್ತೆ-ಸೊಸೆ ಒಟ್ಟಿಗೆ ಇರಬಾರದು ಎಂದು ಹೇಳಲಾಗುತ್ತದೆ. ಈ ಕುರಿತು ಜ್ಯೋತಿಷಿಗಳಾದ ಚಿಲಕಮರ್ಥಿ ಕೂಡಾ ಹೇಳಿದ್ದಾರೆ. ಆಷಾಢ ಮಾಸದಲ್ಲಿ ಮಳೆ ಹೆಚ್ಚು. ಅಲ್ಲದೆ ಹವಾಮಾನ ಬದಲಾವಣೆಯಿಂದ ಅನಾರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಹೆಚ್ಚಾಗುತ್ತದೆ. ಹೀಗಾಗಿ ಈ ಸಂಪ್ರದಾಯದ ಹಿಂದೆ ಕೆಲವೊಂದು ಕಾರಣಗಳಿವೆ ಎಂದು ಹೇಳಲಾಗಿದೆ.

ಆಷಾಡ ಮಾಸದಲ್ಲಿ ಪತಿ-ಪತ್ನಿ ಒಂದಾಗಬಾರದು

ಆಷಾಢ ಮಾಸದಲ್ಲಿ ಪತಿ-ಪತ್ನಿಯರ ಒಂದಾದರೆ, ಹುಟ್ಟುವ ಮಕ್ಕಳಿಗೆ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಹಿರಿಯರು ಹೇಳುತ್ತಾರೆ. ಹೊಸದಾಗಿ ಮದುವೆಯಾದ ಮಹಿಳೆ ಸಾಮಾನ್ಯವಾಗಿ ತನ್ನ ಹೆತ್ತವರಿಂದ ದೂರವಿದ್ದು ಗಂಡನೊಂದಿಗೆ ಅತ್ತೆ ಮನೆಯಲ್ಲಿ ವಾಸಿಸುತ್ತಾಳೆ. ಇಂತಹ ಸಮಯದಲ್ಲಿ ಮಗಳು ನಮ್ಮಿಂದ ದೂರವಿದ್ದಾಳೆ ಎಂಬ ಬೇಸರ ಹಾಗೂ ಆತಂಕ ಪೋಷಕರಿಗೆ ಕಾಡಬಹುದು. ಹೀಗಾಗಿ ನವ ವಿವಾಹಿತ ಮಹಿಳೆ ತನ್ನ ತವರಿಗೆ ಮರಳಿ ತಂದೆ ತಾಯಿಯರ ಜೊತೆಗೆ ಇದ್ದು ಅವರ ಸೇವೆ ಮಾಡಲು ಇದು ಅವಕಾಶವಾಗಿದೆ. ಜೊತೆಗೆ ಹೆತ್ತವರ ಆರೋಗ್ಯ ಕಾಳಜಿ ವಹಿಸಿ ಅವರ ಆಶೀರ್ವಾದ ಪಡೆದು ಶಕ್ತಿ ಆರಾಧನೆ ಮಾಡಲು ಇದೊಂದು ಉತ್ತಮ ಅವಕಾಶವಾಗಿದೆ.

ಹೀಗಾಗಿ ಆಷಾಡ ಮಾಡದ ಸಮಯದಲ್ಲಿ ನವವಿವಾಹಿತೆ ತವರಿಗೆ ಮರಳುವುದರಲ್ಲಿ ಎರಡು ಮುಖ್ಯ ಕಾರಣಗಳಿವೆ. ಗಂಡ-ಹೆಂಡತಿ ಈ ಸಮಯದಲ್ಲಿ ಜೊತೆಯಾಗುವುದನ್ನ ತಪ್ಪಿಸುವುದು. ಇನ್ನೊಂದು, ಹೆಣ್ಣು ಮಗಳು ತವರಿಗೆ ಮರಳಿ ತಂದೆ- ತಾಯಿಯರ ಆರೋಗ್ಯ ಕಾಳಜಿ ವಹಿಸುವುದಾಗಿದೆ. ಹೀಗಾಗಿ ಆಷಾಢ ಮಾಸದ ನಿಯಮವನ್ನು ನವ ದಂಪತಿಗಳು ಮಾತ್ರ ಪಾಲಿಸಿದರೆ ಸಾಕಾಗುತ್ತದೆ. ಉಳಿದವರಿಗೆ ಇದು ಅಗತ್ಯವಿಲ್ಲ ಎಂದು ಜ್ಯೋತಿಷಿ ಚಿಲಕಮೃತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳುತ್ತಾರೆ.

ಆಷಾಡದಲ್ಲಿ ಮದುವೆ, ಗೃಹಪ್ರವೇಶ, ಉಪನಯನಗಳಂಥ ಯಾವುದೇ ಶುಭಕಾರ್ಯಗಳನ್ನು ನಡೆಸಲಾಗುವುದಿಲ್ಲ. ಈ ಸಮಯದಲ್ಲಿ ವ್ರತ, ಉಪವಾಸ ಮತ್ತು ತೀರ್ಥಯಾತ್ರೆ ಮುಂತಾದ ಪುಣ್ಯದ ಕೆಲಸಗಳನ್ನು ಹೆಚ್ಚಾಗಿ ಮಾಡಲಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.