ರಾಶಿಗನುಗುಣವಾಗಿ ನೀವು ನಿಮ್ಮ ಸಂಗಾತಿಗೆ ಯಾಕೆ ಮೋಸ ಮಾಡುತ್ತೀರಿ? ಪ್ರೀತಿಯಲ್ಲಿ ದ್ರೋಹ ಮಾಡಲು ಕಾರಣವಿದು-relationship how your cheating your partner in relationship according to your zodiac sign prediction rst ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಶಿಗನುಗುಣವಾಗಿ ನೀವು ನಿಮ್ಮ ಸಂಗಾತಿಗೆ ಯಾಕೆ ಮೋಸ ಮಾಡುತ್ತೀರಿ? ಪ್ರೀತಿಯಲ್ಲಿ ದ್ರೋಹ ಮಾಡಲು ಕಾರಣವಿದು

ರಾಶಿಗನುಗುಣವಾಗಿ ನೀವು ನಿಮ್ಮ ಸಂಗಾತಿಗೆ ಯಾಕೆ ಮೋಸ ಮಾಡುತ್ತೀರಿ? ಪ್ರೀತಿಯಲ್ಲಿ ದ್ರೋಹ ಮಾಡಲು ಕಾರಣವಿದು

ಪ್ರೀತಿ ಅನ್ನೋದು ಒಂದು ಸುಮಧುರ ಭಾವನೆ. ಪ್ರೀತಿ ಅರಳಿದಾಗ ಪ್ರೀತಿಸಿದ ವ್ಯಕ್ತಿಯೇ ನಮ್ಮ ಬದುಕು ಎನ್ನಿಸುತ್ತದೆ. ಆದರೆ ಈ ಭಾವನೆಗಳು ನಿರಂತರವಾಗಿ ಹೀಗೆ ಇರುವುದಿಲ್ಲ. ಸಮಯ ಕಳೆದಂತೆ ಬದಲಾಗುತ್ತದೆ, ಮೋಸ ಮಾಡುವ ಮಟ್ಟಿಗೂ ಹೋಗುತ್ತದೆ. ನಿಮ್ಮ ಜನ್ಮ ರಾಶಿ ಪ್ರಕಾರ ನೀವು ನಿಮ್ಮ ಸಂಗಾತಿಗೆ ಹೇಗೆ ಮೋಸ ಮಾಡುತ್ತೀರಿ ನೋಡಿ.

ರಾಶಿಗನುಗುಣವಾಗಿ ನೀವು ನಿಮ್ಮ ಸಂಗಾತಿಗೆ ಯಾಕೆ ಮೋಸ ಮಾಡುತ್ತೀರಿ?
ರಾಶಿಗನುಗುಣವಾಗಿ ನೀವು ನಿಮ್ಮ ಸಂಗಾತಿಗೆ ಯಾಕೆ ಮೋಸ ಮಾಡುತ್ತೀರಿ?

ನಮಗೆ ಯಾರ ಮೇಲಾದ್ರೂ ಪ್ರೀತಿಯಾದಾಗ ಜಗವೇ ಸುಂದರ ಎನ್ನಿಸುತ್ತದೆ. ನಾವು ಪ್ರೀತಿಸಿದ ವ್ಯಕ್ತಿಯೇ ನಮಗೆ ಬದುಕಾಗುತ್ತಾರೆ. ಅವರ ಮೇಲೆ ಎಲ್ಲಿಲ್ಲದ ಪ್ರೀತಿ, ಕಾಳಜಿ, ಅಕ್ಕರೆ ತೋರುತ್ತೇವೆ. ಆದರೆ ದಿನ ಕಳೆದಂತೆ ಪ್ರೀತಿಯ ಆಕರ್ಷಣೆ ಬಣ್ಣ ಕಳೆದುಕೊಳ್ಳುತ್ತದೆ. ನಿಧಾನಕ್ಕೆ ನಮಗೆ ಪ್ರೀತಿಸಿದ ವ್ಯಕ್ತಿಯ ಮೇಲೆ ಅಸಮಾಧಾನ ಹುಟ್ಟಲು ಆರಂಭವಾಗುತ್ತದೆ. ಕೆಲವರು ಈ ಅಸಮಾಧಾನದೊಂದಿಗೆ ಬದುಕು ಮುಂದಕ್ಕೆ ಸಾಗಿಸಿದರೆ ಕೆಲವರು ತಮ್ಮ ಸಂಗಾತಿಗೆ ಮೋಸ ಮಾಡುತ್ತಾರೆ. ಪ್ರೀತಿಯಲ್ಲಿ ವಿಭಿನ್ನ ದಾರಿಯನ್ನು ಹುಡುಕುತ್ತಾರೆ. ಕೆಲವೊಮ್ಮೆ ಸಂಗಾತಿಗೆ ತಿಳಿಯದಂತೆ ಬೇರೆ ಸಂಬಂಧದಲ್ಲಿರುತ್ತಾರೆ.

ಹೀಗೆ ಪ್ರೀತಿಯಲ್ಲಿ ಅಥವಾ ಸಂಬಂಧದಲ್ಲಿ ಇದ್ದವರು ಸಂಗಾತಿ, ಪ್ರೀತಿಯ ಮೇಲೆ ಬೇಸರ ಬಂದಾಗ ಮೋಸ ಮಾಡುವ ಮಟ್ಟಿಗೆ ಇಳಿಯುವುದು ಸಹಜ. ರಾಶಿಚಕ್ರಗಳ ಪ್ರಕಾರ ಯಾವ ರಾಶಿಯವರು ತಮ್ಮ ಸಂಗಾತಿಗೆ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ.

ಮೇಷ ರಾಶಿ

ಮೇಷ ರಾಶಿಯವರು ಹಠಾತ್ ಪ್ರವೃತ್ತಿಯವರು. ಈ ರಾಶಿಯವರಿಗೆ ತಮ್ಮ ಸಂಗಾತಿಯ ವಿಚಾರದಲ್ಲಿ ಏಕತಾನತೆ ಕಾಡಿದರೆ ಇವರು ಸುಲಭವಾಗಿ ಬೇರೆಯವರ ಕಡೆಗೆ ಒಲವು ತೋರುತ್ತಾರೆ. ಸಂಗಾತಿ ವಿಚಾರದಲ್ಲಿ ಬೇಸರ ಬಂದಿದ್ದಾಗ ಯಾರಾದರೂ ಕೊಂಚ ಕಾಳಜಿ ತೋರಿದರೂ ಅವರತ್ತ ಮನಸ್ಸು ವಾಲಿಸುತ್ತಾರೆ. ಆದರೆ ಇದರಿಂದಾಗುವ ಪರಿಣಾಮಗಳ ಬಗ್ಗೆ ಇವರು ಯಾವಾಗಲೂ ಯೋಚಿಸುವುದಿಲ್ಲ.

ವೃಷಭ ರಾಶಿ

ವೃಷಭ ರಾಶಿಯವರು ಮೊಂಡುತನದವರು. ತಮ್ಮ ಜೀವನದಲ್ಲಿ ಯಾರು ಬರುತ್ತಾರೆ ಮತ್ತು ಯಾರು ಬಿಡುತ್ತಾರೆ ಎಂಬುದರ ಬಗ್ಗೆ ಬಹಳ ನಿರ್ದಿಷ್ಟವಾಗಿರುತ್ತಾರೆ. ಇವರು ಬದ್ಧತೆಗೆ ಹೆಸರಾದವರು. ಯಾರನ್ನೇ ಆಯ್ಕೆ ಮಾಡಿಕೊಳ್ಳುವ ಮುನ್ನ ದೀರ್ಘವಾಗಿ ಯೋಚಿಸುತ್ತಾರೆ. ಹಾಗಾಗಿ ಇವರು ಮೋಸ ಮಾಡುವುದು ಅಸಂಭವ ಎನ್ನಬಹುದು. ಒಂದು ವೇಳೆ ಇವರು ಮೋಸ ಮಾಡಿದರೂ ತಮ್ಮ ಪ್ರೀತಿ ವಿಚಾರಕ್ಕೆ ಮಾತ್ರ ಮಾಡಿರಬಹುದು.

ಮಿಥುನ ರಾಶಿ

ಮಿಥುನ ರಾಶಿಯವರು ಸಾಹಸೀ ಮನೋಭಾವದವರು. ಇವರು ಸಂಬಂಧದಲ್ಲಿದ್ದಾಗಲೂ ವಿವಿಧ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಾರೆ. ಹೊಸ ವಿಷಯಗಳು ಮತ್ತು ಹೊಸ ಜನರನ್ನು ಅನ್ವೇಷಿಸುವುದು ನಿಮಗೆ ಇಷ್ಟವಾಗುತ್ತದೆ. ಆ ಕಾರಣದಿಂದಾಗಿ ನೀವು ನಿಮ್ಮ ಸಂಗಾತಿಗೆ ಮೋಸ ಮಾಡುತ್ತೀರಿ. ಹಾಗಂತ ನೀವು ವಿಶ್ವಾಸದ್ರೋಹಿಯಲ್ಲ. ನಿಮ್ಮ ಕೆಟ್ಟ ಕುತೂಹಲವೇ ಮೋಸಕ್ಕೆ ಪ್ರೇರಣೆಯಾಗುತ್ತದೆ.

ಕಟಕ ರಾಶಿ

ಕಟಕ ರಾಶಿಯವರು ತುಂಬಾ ಭಾವುಕ ಜೀವಿಗಳು. ನಿಮಗೆ ಪ್ರೀತಿಯಲ್ಲಿ ಬಿದ್ದ ಮೇಲೆ ಬೇರೆ ವ್ಯಕ್ತಿಯ ಕಡೆಗೆ ಆಕರ್ಷಣೆ ಹುಟ್ಟದೇ ಇರಬಹುದು. ಆದರೆ ಸಂಬಂಧದಲ್ಲಿ ಪ್ರೀತಿಯ ಕೊರತೆಯು ಬೇರೆಯವರೆಡೆಗೆ ಸೆಳೆಯುವಂತೆ ಮಾಡಬಹುದು. ನೀವು ಮೋಸ ಮಾಡುವಾಗ ನೀವು ತುಂಬಾ ಸೂಕ್ಷ್ಮವಾಗಿರುತ್ತೀರಿ. ತಕ್ಷಣಕ್ಕೆ ಸಂಬಂಧವನ್ನು ಬಿಟ್ಟು ಬಿಡುವುದಿಲ್ಲ. ಒಂದಿಷ್ಟು ಸಮಯ ಕಾದು ನಂತರ ಪ್ರೀತಿಗೆ ಅಂತ್ಯ ಹಾಡುತ್ತೀರಿ.

ಸಿಂಹ ರಾಶಿ

ಸಿಂಹ ರಾಶಿಯವರು ಉತ್ಸಾಹಿಗಳು ಮತ್ತು ಮೆಚ್ಚುಗೆಗೆ ಪಾತ್ರರಾದವರು. ಪ್ರೀತಿ ವಿಚಾರದಲ್ಲಿ ಸಾಕಷ್ಟು ನೀಡುವ ಅವರು ಸಂಗಾತಿಯಿಂದ ನಿರೀಕ್ಷಿತ ಪ್ರತಿಕ್ರಿಯೆ ಬಾರದೇ ಇದ್ದಾಗ ಬೇರೆಯವರತ್ತ ಮನಸ್ಸು ಹೊರಳಿಸುತ್ತಾರೆ. ಅಂತಹ ಸಮಯದಲ್ಲಿ ಇವರು ಮೋಸ ಮಾಡುವ ಬಗ್ಗೆ ಎರಡೆರಡು ಬಾರಿ ಯೋಚಿಸುವುದಿಲ್ಲ.

ಕನ್ಯಾ ರಾಶಿ

ಕನ್ಯಾ ರಾಶಿಯವರು ತಮ್ಮ ಸಂಗಾತಿಯನ್ನು ಪದೇ ಪದೇ ಟೀಕಿಸುತ್ತಾರೆ. ಸಂಗಾತಿಯಲ್ಲಿರುವ ಸಣ್ಣ ಸಣ್ಣ ನ್ಯೂನತೆಗಳನ್ನು ಗುರುತಿಸಿ ಹೀಯಾಳಿಸುತ್ತಾರೆ. ಅಲ್ಲದೇ ಆ ವಿಚಾರಕ್ಕೆ ನಿರಾಸೆಗೊಳಗಾಗುತ್ತಾರೆ. ಆ ಕಾರಣಕ್ಕೆ ತಮ್ಮ ಕಲ್ಪನೆ ಪರಿಪೂರ್ಣತೆ ಸಿಗುವವರೆಗೂ ಅವರು ಮೋಸದ ಬಗ್ಗೆ ಚಿಂತಿಸುವುದಿಲ್ಲ. ಆದರೆ ಕನ್ಯಾ ರಾಶಿಯವರು ದಾಂಪತ್ಯ ದ್ರೋಹವನ್ನು ಎಂದಿಗೂ ಮುಚ್ಚಿಡುವುದಿಲ್ಲ. ತಾವು ಮಾಡಿದ್ದು ನ್ಯಾಯ ಸಮ್ಮತ ಎಂದು ಅವರು ಅವರು ಭಾವಿಸುತ್ತಾರೆ.

ತುಲಾ

ನಿಮ್ಮ ಫ್ಲರ್ಟಿಂಗ್ ಗುಣ. ಕೆಲವೊಮ್ಮೆ ಫ್ಲರ್ಟಿಂಗ್ ಎನ್ನುವುದು ದಾಂಪತ್ಯದ್ರೋಹಕ್ಕೆ ಮೂಲವಾಗಬಹುದು. ನೀವು ಈ ವಿಚಾರವಾಗಿ ನಿಮ್ಮ ಇತಿಮಿತಿಗಳನ್ನು ಮೀರಬಹುದು. ನಿಮ್ಮ ಆಕರ್ಷಕ ವ್ಯಕ್ತಿತ್ವ ಜನರನ್ನು ನಿಮ್ಮತ್ತ ಸೆಳೆಯುವಂತೆ ಮಾಡುತ್ತದೆ. ಪ್ರಲೋಭೆನಗಳನ್ನು ವಿರೋಧಿಸುವುದು ನಿಮಗೆ ಕಷ್ಟವಾಗಬಹುದು

ವೃಶ್ಚಿಕ

ವೃಶ್ಚಿಕ ರಾಶಿಯವರಿಗೆ ದೈಹಿಕ ಅನ್ಯೋನ್ಯತೆ ಬಹಳ ಮುಖ್ಯ ಎನ್ನಿಸುತ್ತದೆ. ಕಾಲಕಾಲಕ್ಕೆ, ನಿಮ್ಮ ಹಾಗೂ ಸಂಗಾತಿಯ ನಡುವೆ ಬಿರುಕುಗಳು ಉಂಟಾಗಬಹುದು, ಇದು ನಿಮ್ಮಿಬ್ಬರ ನಡುವೆ ಪ್ರೀತಿ ಕುಂದಲು ಕಾರಣವಾಗುತ್ತದೆ. ಇದು ಹತಾಶೆ ಮತ್ತು ಗೊಂದಲದ ವಾತಾವರಣವನ್ನು ಸೃಷ್ಟಿಸುತ್ತದೆ, ನಿಮ್ಮ ಸಂಗಾತಿಗೆ ಮೋಸ ಮಾಡಲು ಕಾರಣವಾಗುತ್ತದೆ. ನಿಮಗೆ ಭರವಸೆ ನೀಡುವ ಪೂರ್ಣ ಹೃದಯದಿಂದ ಪ್ರೀತಿಸುವ ವ್ಯಕ್ತಿಯತ್ತ ನೀವು ಆಕರ್ಷಿತರಾಗುತ್ತೀರಿ.

ಧನು

ಸಾಹಸಿ ಮನೋಭಾವದ ಧನು ರಾಶಿಯವರು ಜಗತ್ತನ್ನು ಅನ್ವೇಷಿಸುವ ಗುಣ ಹೊಂದಿರುತ್ತಾರೆ. ಹೊಸ ಹೊಸ ಜಾಗಗಳಿಗೆ ಹೋಗುವುದು, ಹೊಸ ಹೊಸ ವ್ಯಕ್ತಿಗಳನ್ನು ಭೇಟಿ ಮಾಡುವುದು ನಿಮಗೆ ಇಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಹೊಸ ಜನರನ್ನು ಭೇಟಿಯಾಗುತ್ತಿರುತ್ತೀರಿ. ಅಂತಹ ಸಂದರ್ಭದಲ್ಲಿ ಮನೆಯಲ್ಲಿ ಸಂಗಾತಿ ಇದ್ದಾರೆ ಎಂಬುದನ್ನೂ ಮರೆತು ಬಿಡುತ್ತೀರಿ. ನೀವು ನಿಮ್ಮ ಸಂಗಾತಿಯಿಂದ ದೂರವಿರುವುದರಿಂದ, ಅವರಿಗೆ ಮೋಸ ಮಾಡುವುದು ಸರಿ ಎಂದು ನೀವು ನಂಬಬಹುದು, ಅದು ನಿಜವಲ್ಲ.

ಮಕರ ರಾಶಿ

ಈ ರಾಶಿಯವರು ಪ್ರೀತಿಯ ವಿಷಯದಲ್ಲಿ ತಮ್ಮ ಹೃದಯಕ್ಕಿಂತ ಹೆಚ್ಚಾಗಿ ತಮ್ಮ ಮನಸ್ಸಿನಿಂದ ಯೋಚಿಸುತ್ತಾರೆ. ತಮ್ಮ ಪಾಲುದಾರರಿಗೆ ಮೋಸ ಮಾಡುವಾಗ ಅನೇಕರು ತಪ್ಪಿತಸ್ಥ ಭಾವನೆ ಮತ್ತು ಪಶ್ಚಾತ್ತಾಪವನ್ನು ಅನುಭವಿಸುತ್ತಾರೆ. ಮೋಸ ಮಾಡುವ ಮೊದಲೇ ಯಾವ ಕಾರಣಕ್ಕೆ ಮೋಸ ಮಾಡುತ್ತಿದ್ದೇನೆ ಎಂದು ಯೋಚಿಸುತ್ತಾರೆ.‍ ಮೋಸದ ಮಾಡುವ ಸೂಕ್ತ ಕಾರಣ ಇದ್ದರಷ್ಟೇ ಮುಂದುವರಿಯುವ ಮನೋಭಾವ ಇವರದ್ದು.

ಕುಂಭ ರಾಶಿ

ನೀವು ಕುಂಭರಾಶಿಯವರಾಗಿದ್ದರೆ ನಿಮ್ಮ ಸ್ನೇಹಿತೆ ಅಥವಾ ಸ್ನೇಹಿತನ ಜೊತೆ ಸೇರಿ ನಿಮ್ಮ ಸಂಗಾತಿಗೆ ಮೋಸ ಮಾಡುತ್ತೀರಿ. ನೀವು ಸ್ನೇಹಿತರ ಸಣ್ಣ ವಲಯವನ್ನು ಹೊಂದಿರುವಾಗ ಮತ್ತು ಅದನ್ನು ಇಷ್ಟಪಡುವ ಸಂದರ್ಭದಲ್ಲಿ, ನಿಮ್ಮ ಸ್ನೇಹಿತ ರಹಸ್ಯ ಪ್ರೇಮಿಯಾಗಿ ಬದಲಾಗುವುದನ್ನು ನೀವು ಎಂದಿಗೂ ಅರ್ಥಮಾಡಿಕೊಳ್ಳುವುದಿಲ್ಲ.

ಮೀನ ರಾಶಿ

ಮೀನ ರಾಶಿಯವರು ಸಾಮಾನ್ಯವಾಗಿ ಬಹಳ ಸೂಕ್ಷ್ಮ ಮತ್ತು ಸಹಾನುಭೂತಿ ಹೊಂದಿರುತ್ತಾರೆ.ಸಂಗಾತಿ ನಿಮ್ಮ ಬಗ್ಗೆ ಮೆಚ್ಚುಗೆ ಸೂಚಿಸದೇ ಇದ್ದಾಗ, ನೀವು ಅವರಿಗೆ ಪ್ರೀತಿ ಪಾತ್ರರಲ್ಲ ಎಂಬ ಭಾವನೆ ಬಂದಾಗ ನೀವು ಅವರಿಗೆ ಮೋಸ ಮಾಡುತ್ತೀರಿ. ನೀವು ಯಾವಾಗಲೂ ಸುಂದರವಾದ ಮತ್ತು ಆದರ್ಶಪ್ರಾಯವಾದ ಪ್ರೇಮ-ವ್ಯವಹಾರಗಳಲ್ಲಿ ತೊಡಗಿರುವ ಕಾರಣ ಅಂತಹ ವ್ಯಕ್ತಿಯ ಮೇಲೆ ನಿಮಗೆ ಆಕರ್ಷಣೆ ಮೂಡಬಹುದು.

ಗಮನಿಸಿ: ಇದು ನಂಬಿಕೆ ಮತ್ತು ಪ್ರಚಲಿತ ಕಥೆಗಳನ್ನು ಆಧರಿಸಿದ ಬರಹ. ಇಲ್ಲಿರುವ ಯಾವ ಸಂಗತಿಯನ್ನೂ 'ಹಿಂದೂಸ್ತಾನ್ ಟೈಮ್ಸ್‌ ಕನ್ನಡ' ಜಾಲತಾಣದ ಸಿಬ್ಬಂದಿ ಪುಷ್ಟೀಕರಿಸುವುದೂ ಇಲ್ಲ, ನಿರಾಕರಿಸುವುದೂ ಇಲ್ಲ. ಓದುಗರಿಗೆ ಮಾಹಿತಿ ಕೊಡುವ ಉದ್ದೇಶದಿಂದ ಈ ಬರಹ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.