ಸದಾ ಚಿಂತೆಯಲ್ಲಿ ಮುಳುಗಿರುವ 5 ರಾಶಿಗಳಿವು, ಇವರಿಗೆ ಸಂತೆಯಲ್ಲಿದ್ರೂ ಚಿಂತೆ ತಪ್ಪಲ್ವ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸದಾ ಚಿಂತೆಯಲ್ಲಿ ಮುಳುಗಿರುವ 5 ರಾಶಿಗಳಿವು, ಇವರಿಗೆ ಸಂತೆಯಲ್ಲಿದ್ರೂ ಚಿಂತೆ ತಪ್ಪಲ್ವ

ಸದಾ ಚಿಂತೆಯಲ್ಲಿ ಮುಳುಗಿರುವ 5 ರಾಶಿಗಳಿವು, ಇವರಿಗೆ ಸಂತೆಯಲ್ಲಿದ್ರೂ ಚಿಂತೆ ತಪ್ಪಲ್ವ

ಸದಾ ಒಂದಿಲ್ಲೊಂದು ಚಿಂತೆಯಿಂದ ಬಳಲುವ 5 ರಾಶಿಗಳಿವು. ಈ ರಾಶಿಯವರಿಗೆ ತಮ್ಮ ಚಿಂತೆಯ ಜೊತೆಗೆ ಇತರರ ಚಿಂತೆಯೂ ಜೊತೆಯಾಗುತ್ತದಂತೆ. ಈ ಕಾರಣಕ್ಕೆ ಇವರು ಎಂದಿಗೂ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ. ಎಲ್ಲಿ ಹೋದರೂ ಚಿಂತೆ ಇವರನ್ನು ಬಿಡುವುದಿಲ್ಲ. ಹಾಗಾದರೆ ಜ್ಯೋತಿಷ್ಯದ ಪ್ರಕಾರ ಅತಿಯಾಗಿ ಚಿಂತೆ ಮಾಡುವ ರಾಶಿಗಳು ಯಾವುವು ಎಂದು ನೋಡೋಣ.

ಸದಾ ಚಿಂತೆಯಲ್ಲಿ ಮುಳುಗಿರುವ 5 ರಾಶಿಗಳಿವು
ಸದಾ ಚಿಂತೆಯಲ್ಲಿ ಮುಳುಗಿರುವ 5 ರಾಶಿಗಳಿವು

ಒತ್ತಡ, ಚಿಂತೆ ಎಲ್ಲರಿಗೂ ಇದ್ದಿದ್ದೆ. ಆದರೆ ಈ ಕೆಲವು ರಾಶಿಯವರಿಗೆ ಚಿಂತೆ ಬೆಂಬಿಡದಂತೆ ಕಾಡುತ್ತದಂತೆ. ಇವರಿಗೆ ಹೇಗೆದಂತೆ ಚಿಂತೆಯು ಇವರ ಹೆಗಲ ಮೇಲೆ ಇರುವಂತೆ ಭಾಸವಾಗುತ್ತದೆ. ಇವರು ಎಲ್ಲಿ ಹೋದರೂ ಚಿಂತೆ ತಪ್ಪುವುದಿಲ್ಲ. ಜವಾಬ್ದಾರಿಯೊಂದಿಗೆ ಚಿಂತೆಯ ಭಾರ ಹೊತ್ತು ಸಾಗುವುದೇ ಇವರ ಬದುಕಾಗಿರುತ್ತದೆ. ಹಾಗಾದ್ರೆ ರಾಶಿಯವರು ಯಾರು ನೋಡೋಣ.

ಕನ್ಯಾರಾಶಿ

ಕನ್ಯಾ ರಾಶಿಯವರು ಎಲ್ಲಾ ವಿಚಾರಗಳಲ್ಲೂ ಬಹಳ ಜಾಗರೂಕರಾಗಿರುವ ಕಾರಣದಿಂದ ಹೆಸರುವಾಸಿಯಾಗಿದ್ದಾರೆ. ಈ ರಾಶಿಯವರು ಪ್ರತಿಯೊಂದು ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಆ ಕಾರಣಕ್ಕೆ ಸಾಕಷ್ಟು ಚಿಂತೆ ಇವರನ್ನು ಕಾಡುವುದಿಲ್ಲ. ಈ ರಾಶಿಯವರು ಎಲ್ಲವೂ ಪರಿಪೂರ್ಣವಾಗಿರಬೇಕು ಎಂದು ಪ್ರಯತ್ನಿಸುತ್ತಾರೆ. ಹಾಗಾಗಿ ಮನಸ್ಸಿನಲ್ಲಿ ಸಾಕಷ್ಟು ವಿಚಾರಗಳನ್ನು ಇರಿಸಿಕೊಂಡಿರುತ್ತಾರೆ. ಒಂದೇ ಬಾರಿಗೆ ಹಲವು ಆಲೋಚನೆಗಳನ್ನು ತುಂಬಿಕೊಳ್ಳುತ್ತಾರೆ. ಇದರಿಂದ ಬೇಡವೆಂದರೂ ಚಿಂತೆ ಅವರಿಸುತ್ತದೆ.

ಕಟಕ ರಾಶಿ

ಭಾವನೆಗಳ ಬಗ್ಗೆ ಅತಿಯಾಗಿ ಕಾಳಜಿ ವಹಿಸುವ ರಾಶಿ ಇದಾಗಿದೆ. ಇವರು ತಮ್ಮ ಜೊತೆಗೆ ಇತರರ ಭಾವನೆಗಳ ಕಾಳಜಿಯನ್ನೂ ಮಾಡುತ್ತಾರೆ. ಇದು ಅವರಿಗೆ ಚಿಂತೆ ಹೆಚ್ಚುವಂತೆ ಮಾಡಬಹುದು. ಅತಿಯಾದ ದಯಾ ಮನೋಭಾವವು ಇತರರ ಚಿಂತೆಗಳನ್ನೂ ತಮ್ಮದು ಎಂದು ಭಾವಿಸುವಂತೆ ಮಾಡಬಹುದು. ಕಟಕ ರಾಶಿಯವರ ಈ ಗುಣವೇ ಅವರಿಗೆ ತೊಂದರೆ ಉಂಟು ಮಾಡಬಹುದು.

ಮೀನ ರಾಶಿ

ಈ ರಾಶಿಯವರು ಕನಸುಗಾರರು. ತಿಳುವಳಿಕೆ ಕಾರಣದಿಂದ ಹೆಸರುವಾಸಿಯಾದ ಇವರು ತಮ್ಮ ಸುತ್ತಲಿನ ಜನರ ಚಿಂತೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಈ ರಾಶಿಯವರ ಸೂಕ್ಷ್ಮ ಮನೋಭಾವವು ಇತರರ ಬಗ್ಗೆ ಅತಿಯಾಗಿ ಕಾಳಜಿ ಹೊಂದುವಂತೆ ಮಾಡುತ್ತದೆ. ಇದು ಅವರೊಳಗೆ ಚಿಂತೆಗಳ ಸಮುದ್ರವನ್ನೇ ಸೃಷ್ಟಿಸುತ್ತದೆ. ಇವರಿಗೆ ತಮ್ಮ ಚಿಂತೆಗಳ ಜೊತೆಗೆ ಇತರರ ಚಿಂತೆಗಳ ಮೇಲೂ ಕಾಳಜಿ ಇರುತ್ತದೆ.

ಮಕರ ರಾಶಿ

ಈ ರಾಶಿಯವರು ಮಹತ್ವಾಕಾಂಕ್ಷೆ ಹಾಗೂ ಜವಾಬ್ದಾರಿಯುಳ್ಳವರು. ಇಡೀ ಪ್ರಪಂಚದ ಚಿಂತೆ ತಮ್ಮ ಮೇಲೆ ಇದೆ ಎಂದು ಭಾವಿಸುವ ಜನರು ಈ ರಾಶಿಯವರು. ಗುರಿ ಸಾಧಿಸುವ ಅವರ ನಿರ್ಣಯವು ಯಶಸ್ಸಿನ ಬಗ್ಗೆ ಚಿಂತೆ ಹುಟ್ಟುವಂತೆ ಮಾಡಬಹುದು. ಒಟ್ಟಾರೆ ಈ ರಾಶಿಯವರಿಗೂ ಚಿಂತೆ ತಪ್ಪಿದ್ದಲ್ಲ.

ವೃಶ್ಚಿಕ

ಭಾವನಲೋಕದಿಂದ ಈ ರಾಶಿಯವರು ಹೆಸರು ಗಳಿಸಿದ್ದಾರೆ. ಇವರು ಆಗಾಗ ಅತಿಯಾಗಿ ಚಿಂತಿಸುತ್ತಾರೆ. ಇವರಿಗೆ ತಮ್ಮ ದೈನಂದಿನ ಕಾಳಜಿಯು ಅತಿಯಾಗಿ ಕಾಡಬಹುದು. ಇವರು ಚಿಂತೆ, ಭಾವನೆಗಳನ್ನು ಹೊರಗಡೆ ತೋರದೇ ಇದ್ದರೂ ಮನಸ್ಸಿನಲ್ಲಿ ಬಹಳಷ್ಟು ಕೊರಗುತ್ತಿರುತ್ತಾರೆ. ಶಾಂತ ಗುಣ ಇವರಲ್ಲಿದ್ದರೂ ಚಿಂತೆ ತಪ್ಪಿದ್ದಲ್ಲ.

ಕಟಕ, ಕನ್ಯಾ, ಮೀನ, ಮಕರ ಮತ್ತು ವೃಶ್ಚಿಕ ರಾಶಿಯವರು ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ರಾಶಿಯವರಾಗಿದ್ದಾರೆ. ಈ ರಾಶಿಯವರ ಚಿಂತೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಈ ರಾಶಿಯವರ ಚಿಂತೆಗಳನ್ನು ಇತರರು ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸಬೇಕು. ಸರಿ ಈಗ ನೋಡಿದ್ರಲ್ಲ ಯಾವೆಲ್ಲಾ ರಾಶಿಯವರಿಗೆ ಅತಿಯಾದ ಚಿಂತೆ ಕಾಡುತ್ತದೆ ಎಂದು. ಇನ್ನಾದರೂ ನಿಮ್ಮ ಆತ್ಮೀಯರಲ್ಲಿ ಈ ರಾಶಿಯವರು ಇದ್ದರೆ ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.