ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹೊಸ ವರ್ಷದಲ್ಲಿ ಹೊಸ ಬಿಸಿನೆಸ್‌ ಶುರು ಮಾಡ್ಬೇಕು ಅಂತಿದ್ರೆ ಗಮನಿಸಿ, ನಿಮ್ಮ ರಾಶಿಗೆ ಯಾವ ವ್ಯವಹಾರ ಹೆಚ್ಚು ಹೊಂದುತ್ತೆ ನೋಡಿ

ಹೊಸ ವರ್ಷದಲ್ಲಿ ಹೊಸ ಬಿಸಿನೆಸ್‌ ಶುರು ಮಾಡ್ಬೇಕು ಅಂತಿದ್ರೆ ಗಮನಿಸಿ, ನಿಮ್ಮ ರಾಶಿಗೆ ಯಾವ ವ್ಯವಹಾರ ಹೆಚ್ಚು ಹೊಂದುತ್ತೆ ನೋಡಿ

ಹೊಸ ವರ್ಷಕ್ಕೆ ಹೊಸ ವ್ಯಾಪಾರ ಆರಂಭಿಸಿ ಯಶಸ್ಸು ಪಡೆಯಬೇಕೆಂಬುದು ನಿಮ್ಮ ಬಯಕೆಯಾಗಿದ್ರೆ ಅದಕ್ಕೆ ನಿಮ್ಮ ಪರಿಶ್ರಮವಷ್ಟೇ ಸಾಕಾಗುವುದಿಲ್ಲ. ಸರಿಯಾದ ಸಮಯದಲ್ಲಿ, ಸರಿಯಾದ ದಾರಿ ಆಯ್ಕೆ ಮಾಡಿಕೊಳ್ಳುವುದು ಅಷ್ಟೇ ಮುಖ್ಯ. ಜ್ಯೋತಿಷ್ಯಶಾಸ್ತ್ರದಲ್ಲಿ ಯಾವ ರಾಶಿಯವರು, ಯಾವ ವ್ಯಾಪಾರ ಆಯ್ದುಕೊಂಡರೆ ಉತ್ತಮ ಎಂಬ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನೀವು ನಿಮ್ಮದೇ ಸ್ವಂತ ವ್ಯಾಪಾರ ಪ್ರಾರಂಭಿಸಬೇಕೆಂದು ಕೊಂಡಿದ್ದೀರಾ? ಅದರಲ್ಲಿ ಪರಿಪೂರ್ಣ ಯಶಸ್ಸು ಗಳಿಸುವುದೂ ಸಹ ನಿಮ್ಮ ಬಯಕೆಯಾಗಿದೆಯಾ? ಹಾಗಾದರೆ ವ್ಯಾಪಾರ ಪ್ರಾರಂಭಿಸುವ ಮೊದಲು ನಿಮ್ಮ ರಾಶಿಯನ್ನು ಗಮನದಲ್ಲಿರಿಸಿಕೊಂಡು ಮುಂದುವರಿಯುವುದು ಉತ್ತಮ. ಏಕೆಂದರೆ ನೀವು ಆರಂಭಿಸಿದ ವ್ಯಾಪಾರದಲ್ಲಿ ಉನ್ನತಿಯನ್ನು ಕಾಣಲು ಅದು ನಿಮಗೆ ನೆರವಾಗುತ್ತದೆ. ಸ್ವಂತ ವ್ಯಾಪಾರವನ್ನು ಆಯ್ದುಕೊಂಡು, ಅದರಲ್ಲಿ ಯಶಸ್ಸು ಗಳಿಸುವುದು ಕೇವಲ ವ್ಯಕ್ತಿಯ ಪ್ರಯತ್ನದ ಮೇಲೆ ಅವಲಂಬಿಸಿರುವುದಿಲ್ಲ. ಅದು ಸರಿಯಾದ ಸಮಯದಲ್ಲಿ, ಸರಿಯಾದ ವ್ಯಾಪಾರವನ್ನು ಆಯ್ದುಕೊಳ್ಳುವುದು ಸಹ ಯಶಸ್ಸುಗಳಿಸುವ ಮೂಲ ಅಂಶವಾಗಿದೆ. ಕೆಲವೊಮ್ಮೆ ಎಷ್ಟೇ ಕಠಿಣ ಪ್ರಯತ್ನಪಟ್ಟರೂ ಸಹ ವ್ಯಾಪಾರ ನಷ್ಟದ ಹಾದಿಯಲ್ಲಿರುವುದನ್ನು ನೀವೆಲ್ಲರೂ ನೋಡಿರಬಹುದು. ಹಾಗೆಯೇ ವ್ಯಾಪಾರದಲ್ಲಿ ಯಾವುದೇ ಹೆಚ್ಚಿನ ಪ್ರಯತ್ನಪಡದೇ ದಿನೇದಿನೇ ಪ್ರಗತಿ ಹೊಂದುವುದನ್ನು ನೋಡಿರಬಹುದು. ಇದು ಬರೀ ಶ್ರಮದ ಬಲದಿಂದ ಆಗುವುದಲ್ಲ. ಅದಕ್ಕೆ ನಿಮ್ಮ ರಾಶಿ ಮತ್ತು ಗ್ರಹಗತಿಗೆ ಅನುಗುಣವಾಗಿ ಯಾವ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವುದರಿಂದ ಹೆಚ್ಚಿನ ಲಾಭಗಳಿಸಬಹುದು ಎಂಬುದನ್ನು ಅರಿತು ಮುಂದುವರಿಯುವುದರ ಮೂಲಕ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ರಾಶಿಯವರು ಯಾವ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವದರಿಂದ ಹೆಚ್ಚಿನ ಯಶಸ್ಸುಗಳಿಸಬಹುದು ಎಂದು ಹೇಳಲಾಗಿದೆ. ನಿಮ್ಮ ರಾಶಿಗೆ ಯಾವ ವ್ಯಾಪಾರವನ್ನು ಆಯ್ದುಕೊಳ್ಳುವುದು ಉತ್ತಮ ಇಲ್ಲಿದೆ ಓದಿ.

ಮೇಷ ರಾಶಿ

ಮಂಗಳನು ಮೇಷ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗಿದೆ. ಈ ರಾಶಿಯ ಜನರು ಹೆಚ್ಚು ಸ್ಪರ್ಧಾತ್ಮಕ ಮನೋಭಾವದವರಾಗಿರುತ್ತಾರೆ. ಅವರಿಗೆ ಉತ್ತಮ ವ್ಯವಹಾರ ಜ್ಞಾನವನ್ನು ಹೊಂದಿರಬಹುದು. ಹಾಗಾಗಿ ಮೇಷ ರಾಶಿಯವರು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳಬಹುದು.

ವೃಷಭ ರಾಶಿ

ವೃಷಭ ರಾಶಿಯ ಜನರು ಜೀವನದಲ್ಲಿ ಹೆಚ್ಚು ವ್ಯಾವಹಾರಿಕವಾಗಿ ಆಲೋಚಿಸುವವರಾಗಿರುತ್ತಾರೆ. ಈ ರಾಶಿಯವರು ಶಿಕ್ಷಣಕ್ಕೆ ಸಂಬಂಧಿಸಿದ ವ್ಯಾಪಾರವನ್ನು ಪ್ರಾರಂಭಿಸಬಹುದು. ಅವರು ಶಾಲೆ ಅಥವಾ ತರಬೇತಿಗಳನ್ನು ಪ್ರಾರಂಭಿಸಿದರೆ, ಅದರಲ್ಲಿ ಹೆಚ್ಚಿನ ಫಲವನ್ನು ಕಾಣಬಹುದಾಗಿದೆ.

ಇದನ್ನೂ ಓದಿ: RajaYoga: 2024ರ ಹೊಸ ವರ್ಷದಲ್ಲಿ ಶಶ, ರುಚಕ, ಮಾಲವ್ಯ ರಾಜಯೋಗ; ಈ 5 ರಾಶಿಯವರಿಗೆ ಭಾರಿ ಅದೃಷ್ಟ

ಮಿಥುನ ರಾಶಿ

ಮಿಥುನ ರಾಶಿಯ ಜನರು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ತಮ್ಮ ಸುತ್ತಮುತ್ತಲಿನ ಬಗ್ಗೆ ತಿಳಿದುಕೊಂಡಿರುತ್ತಾರೆ. ಮಿಥುನ ರಾಶಿಯವರು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಮಾಡಬಹುದು. ಅದು ಅವರಿಗೆ ಜೀವನದಲ್ಲಿ ಯಶಸ್ಸನ್ನು ನೀಡುತ್ತದೆ.

ಕಟಕ ರಾಶಿ

ಕಟಕ ರಾಶಿಯ ಜನರ ಕರಣಾಮಯಿಗಳಾಗಿರುತ್ತಾರೆ ಮತ್ತು ಕ್ರಿಯಾತ್ಮಕ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ತುಂಬಾ ಬುದ್ಧಿವಂತರಾಗಿರುತ್ತಾರೆ. ಈ ರಾಶಿಯವರಿಗೆ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಾಪಾರವು ಉತ್ತಮ ಆಯ್ಕೆಯಾಗಿದೆ.

ಸಿಂಹ

ಸಿಂಹ ರಾಶಿಯ ಜನರು ಅತ್ಯಂತ ಪ್ರಭಾವಶಾಲಿಗಳು. ಅವರ ಸ್ವಭಾವವು ಅವರನ್ನು ನಾಯಕರನ್ನಾಗಿ ಮಾಡುತ್ತದೆ. ಸಿಂಹ ರಾಶಿಯ ಜನರು ರಿಯಲ್ ಎಸ್ಟೇಟ್ ಅಥವಾ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಮಾಡಬಹುದು. ಜೊತೆಗೆ ಈ ರಾಶಿಯವರು ಪ್ರಯಾಣಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಸಹ ಮಾಡಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರು ಎಲ್ಲವನ್ನು ಬಹಳ ವಿವರವಾಗಿ ತಿಳಿದುಕೊಳ್ಳುವರಾಗಿರುತ್ತಾರೆ. ಜೊತೆಗೆ ತಾಂತ್ರಿಕ ಜ್ಞಾನವನ್ನು ಹೊಂದಿರುತ್ತಾರೆ. ಕನ್ಯಾ ರಾಶಿಯವರು ಫಾರ್ಮಸಿಗೆ ಸಂಬಂಧಿಸಿದ ವ್ಯವಹಾರವನ್ನು ಪ್ರಾರಂಭಿಸಿದರೆ, ಅದು ಅವರ ಭವಿಷ್ಯಕ್ಕೆ ಒಳ್ಳೆಯದು.

ತುಲಾ ರಾಶಿ

ಜಿಮ್, ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಅಥವಾ ಯಾವುದೇ ಡಿಸೈನಿಂಗ್-ಸಂಬಂಧಿತ ವ್ಯಾಪಾರವನ್ನು ಹೊಂದಿರುವುದು ತುಲಾ ರಾಶಿಯವರಿಗೆ ಒಳ್ಳೆಯದು. ಅವರ ಸೃಜನಾತ್ಮಕ ಮತ್ತು ಸಂವೇದನಾಶೀಲ ಮನಸ್ಥಿತಿ ಅವರಿಗೆ ವ್ಯವಹಾರದಲ್ಲಿ ಹೆಚ್ಚು ಉಪಯುಕ್ತವಾಗಿರುತ್ತದೆ.

2024 ರ ರಾಶಿ ಪ್ರಕಾರ ವರ್ಷ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರು ಬುದ್ಧಿವಂತರು ಮತ್ತು ಶ್ರಮಜೀವಿಗಳಾಗಿರುತ್ತಾರೆ. ಅವರಲ್ಲಿ ಜನರಿಗೆ ಸಹಾಯ ಮಾಡುವ ಗುಣವಿರುತ್ತದೆ. ಈ ರಾಶಿಯವರು ಎನ್‌ಜಿಒ ಆರಂಭಿಸಿದರೆ ಅವರಿಗೆ ಒಳ್ಳೆಯದಾಗುತ್ತದೆ.

ಧನು ರಾಶಿ

ಧನು ರಾಶಿಯ ಜನರು ಧನಾತ್ಮಕ ಮತ್ತು ಉತ್ಸಾಹಭರಿತರಾಗಿದ್ದಾರೆ. ಅವರು ಫ್ಲೈಟ್ ಅಟೆಂಡೆಂಟ್, ವಿಡಿಯೋಗ್ರಾಫಿ, ಫೋಟೋಗ್ರಾಫಿ ಅಥವಾ ಮಾರಾಟ ಕಂಪನಿಯಂತಹ ವ್ಯಾಪಾರದಲ್ಲಿ ಯಶಸ್ವಿಯಾಗಬಹುದು.

ಮಕರ ರಾಶಿ

ಮಕರ ರಾಶಿಯ ಜನರು ತಾರ್ಕಿಕ ಮತ್ತು ಬುದ್ಧಿವಂತರಾಗಿರುತ್ತಾರೆ. ತಾಂತ್ರಿಕ ಕ್ಷೇತ್ರದಲ್ಲಿ ಐಟಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಉತ್ತಮ ಅವಕಾಶವಿದೆ. ಈ ಕ್ಷೇತ್ರದಲ್ಲಿ ಅವರಿಗಿರುವ ಅಗಾಧ ಜ್ಞಾನದಿಂದಾಗಿ ಅವರ ವ್ಯಾಪಾರವು ಹೆಚ್ಚಿನ ಯಶಸ್ಸು ಸಿಗುತ್ತದೆ. ಅವರು ಈ ರೀತಿಯ ವ್ಯಾಪಾರದಲ್ಲಿ ತೊಡಿಗಿಸಿಕೊಳ್ಳಲು ಸೂಕ್ತರು ಎಂಬುದರಲ್ಲಿ ಸಂದೇಹವಿಲ್ಲ.

ಕುಂಭ ರಾಶಿ

ಕುಂಭ ರಾಶಿಯ ಜನರು ಸ್ವತಂತ್ರ ಮನೋಭಾವ, ಸೃಜನಶೀಲ ಮತ್ತು ಭಾವೋದ್ರಿಕ್ತಗೊಳ್ಳುವ ವ್ಯಕ್ತಿತ್ವ ಹೊಂದಿರುವವರಾಗಿರುತ್ತಾರೆ. ಅವರು ಸಂಗೀತ, ನೃತ್ಯ ಅಥವಾ ವಿನ್ಯಾಸದ ವ್ಯಾಪಾರದಲ್ಲಿ ತೊಡಗಿಸಿಕೊಳ್ಳಬಹುದು.

ಮೀನ ರಾಶಿ

ಮೀನ ರಾಶಿಯವರು ಭಾವಜೀವಿಗಳು ಮತ್ತು ಸಂವೇದನಾಶೀಲರಾಗಿರುತ್ತಾರೆ. ಅವರು ಜೀವನದ ಬಗ್ಗೆ ಹೊಸ ದೃಷ್ಟಿಕೋನವನ್ನು ಸಹ ಹೊಂದಿರುತ್ತಾರೆ. ಚಿತ್ರಕಲೆ ಅಥವಾ ವಿನ್ಯಾಸದಂತಹ ಕ್ರಿಯೇಟಿವಿಟಿಯನ್ನು ಪ್ರದರ್ಶಿಸುವ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವುದು ಉತ್ತಮವಾಗಿರುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.