Navaratri 5th Day: ನವರಾತ್ರಿಯ 5ನೇ ದಿನ ಸ್ಕಂದಮಾತೆಗೆ ಪೂಜೆ; ಕಾರ್ತಿಕೇಯನ ತಾಯಿಗೆ ಪೂಜೆ ಸಲ್ಲಿಸುವುದರಿಂದ ಸಕಲ ಕಷ್ಟಗಳು ಪರಿಹಾರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Navaratri 5th Day: ನವರಾತ್ರಿಯ 5ನೇ ದಿನ ಸ್ಕಂದಮಾತೆಗೆ ಪೂಜೆ; ಕಾರ್ತಿಕೇಯನ ತಾಯಿಗೆ ಪೂಜೆ ಸಲ್ಲಿಸುವುದರಿಂದ ಸಕಲ ಕಷ್ಟಗಳು ಪರಿಹಾರ

Navaratri 5th Day: ನವರಾತ್ರಿಯ 5ನೇ ದಿನ ಸ್ಕಂದಮಾತೆಗೆ ಪೂಜೆ; ಕಾರ್ತಿಕೇಯನ ತಾಯಿಗೆ ಪೂಜೆ ಸಲ್ಲಿಸುವುದರಿಂದ ಸಕಲ ಕಷ್ಟಗಳು ಪರಿಹಾರ

Navaratri 5th Day: ನವರಾತ್ರಿಯ 5ನೇ ದಿನ ಸ್ಕಂದಮಾತೆಗೆ ಪೂಜೆ ಸಲ್ಲಿಸಲಾಗುತ್ತದೆ. ಈ ದಿನದ ಪೂಜೆಯಿಂದ ಮನುಷ್ಯರಲ್ಲಿ ಆತ್ಮವಿಶ್ವಾಸವು ಹೆಚ್ಚುತ್ತದೆ. ಮನದಲ್ಲಿರುವ ಆತಂಕದ ಭಾವನೆ ದೂರವಾಗುತ್ತದೆ. ಆದ್ದರಿಂದ ಈ ದಿನಕ್ಕೆ ವಿಶೇಷ ಪ್ರಾಶಸ್ತ್ಯ ನೀಡಲಾಗಿದೆ. ಇಂದಿನ ಪೂಜೆಯಿಂದ ಭಕ್ತರ ಬಹುತೇಕ ಆಸೆಗಳು ಪೂರ್ಣಗೊಳ್ಳುತ್ತವೆ ಎನ್ನುತ್ತಾರೆ ಜ್ಯೋತಿಷಿ ಎಚ್‌. ಸತೀಶ್‌.

ನವರಾತ್ರಿಯ 5ನೇ ದಿನ ಸ್ಕಂದಮಾತೆಗೆ ಪೂಜೆ
ನವರಾತ್ರಿಯ 5ನೇ ದಿನ ಸ್ಕಂದಮಾತೆಗೆ ಪೂಜೆ

ನವರಾತ್ರಿಯ ಐದನೇ ದಿನ ಬಹಳ ವಿಶೇಷ. ಕಾರಣ ಅಂದಿನ ದೇವತೆ ಸ್ಕಂದಮಾತ. ಇದು ದುರ್ಗಾಮಾತೆಯ ಐದನೇ ಅವತಾರವಾಗಿದೆ. ಭಗವಾನ್ ಸ್ಕಂದದೇವನು ಕುಮಾರ ಕಾರ್ತಿಕೇಯ ಎಂಬ ಹೆಸರನ್ನು ಪಡೆದಿದ್ದಾನೆ. ಸಾಮಾನ್ಯವಾಗಿ ಭಕ್ತರು ಇವನನ್ನು ಸುಬ್ರಹ್ಮಣ್ಯ ಸ್ವಾಮಿ ಎಂದು ಪೂಜಿಸುತ್ತಾರೆ. ಸ್ಕಂದದೇವನು ದೇವತೆಗಳು ಮತ್ತು ರಾಕ್ಷಸರ ಯುದ್ಧದಲ್ಲಿ ದೇವತೆಗಳ ಸೇನಾಧಿಪತಿಯಾಗುತ್ತಾನೆ. ಈತನಿಗೆ ಪುರಾಣ ಗ್ರಂಥಗಳ ಪ್ರಕಾರ ಶಕ್ತಿಧರ ಮತ್ತು ಕುಮಾರಸ್ವಾಮಿ ಎಂಬ ಹೆಸರುಗಳು ಇವೆ. ಇವನ ವಾಹನವು ನವಿಲು ಆದ್ದರಿಂದ ಈತನಿಗೆ ಮಯೂರ ವಾಹನ ಎಂಬ ಹೆಸರು ಇದೆ. ಸ್ಕಂದದೇವನ ತಾಯಿಯಾದ ಕಾರಣ ದುರ್ಗೆಯನ್ನು ಸ್ಕಂದ ಮಾತ ಎಂದು ಕರೆಯುತ್ತಾರೆ.

ನವರಾತ್ರಿಯ ಐದನೇ ದಿನವಾದ ಇಂದು ಈಕೆಯ ಪೂಜೆಯನ್ನು ಮಾಡಲಾಗುತ್ತದೆ. ಇಂದಿನ ಪೂಜೆಯಿಂದ ಆತ್ಮವಿಶ್ವಾಸವು ಹೆಚ್ಚುತ್ತದೆ. ಮನದಲ್ಲಿರುವ ಆತಂಕದ ಭಾವನೆ ದೂರವಾಗುತ್ತದೆ. ಆದ್ದರಿಂದ ಈ ದಿನಕ್ಕೆ ವಿಶೇಷ ಪ್ರಾಶಸ್ತ್ಯ ನೀಡಲಾಗಿದೆ. ಸ್ಕಂದಮಾತೆಯ ತೊಡೆಯ ಮೇಲೆ ಸ್ಕಂದದೇವನು ಬಾಲರೂಪಿಯಾಗಿ ಕುಳಿತಿರುತ್ತಾನೆ. ಸ್ಕಂದ ಮಾತೆಗೆ ನಾಲ್ಕು ಭುಜಗಳಿವೆ. ಒಂದು ಕೈಯಿಂದ ಬಾಲಸ್ಕಂದನಿಗೆ ಆಸರೆ ನೀಡಿದರೆ ಉಳಿದ ಕೈಗಳಲ್ಲಿ ವರಮುದ್ರೆ ಮತ್ತು ಕಮಲವಿದೆ ಈ ಕಾರಣದಿಂದಾಗಿ ಈಕೆಯನ್ನು ಪದ್ಮಾಸನಾದೇವಿ ಎಂದು ಕರೆಯಲಾಗುತ್ತದೆ. ಈ ದೇವಿಯ ವಾಹನವು ಸಿಂಹವಾಗಿದೆ.

ಇಂದಿನ ಪೂಜೆಯಿಂದ ಭಕ್ತರ ಮನಸ್ಸು ಲೌಕಿಕ ಸಂಸಾರಿಕ ಬಂಧನದಿಂದ ಹೊರ ಬರುತ್ತದೆ. ಕೇವಲ ನೋಡುವುದಲ್ಲದೆ ಮನಸ್ಸಿನಲ್ಲಿಯೂ ದೇವತೆಯ ರೂಪವು ಕುಳಿತುಬಿಡುತ್ತದೆ. ಆದರೆ ಭಕ್ತರು ಕೊಂಚ ಎಚ್ಚರಿಕೆಯಿಂದ ಉಪಾಸನೆಯಲ್ಲಿ ಮುಂದುವರೆಯಬೇಕು. ಯಾರು ಏಕಾಗ್ರತೆಯಿಂದ ಧ್ಯಾನ ಭಕ್ತಿಯಲ್ಲಿ ದೇವಿಯ ಪೂಜೆ ಮಾಡುವರೋ ಅವರಿಗೆ ಸುಲಭದ ರೀತಿಯಲ್ಲಿ ಮಹತ್ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇಂದಿನ ಪೂಜೆಯಿಂದ ಭಕ್ತರ ಬಹುತೇಕ ಆಸೆಗಳು ಪೂರ್ಣಗೊಳ್ಳುತ್ತವೆ. ಈ ಲೋಕದಲ್ಲಿಯೇ ಶಾಂತಿ, ನೆಮ್ಮದಿ ಭಕ್ತರಿಗೆ ದೊರೆಯುತ್ತದೆ. ಮೋಕ್ಷಕ್ಕೆ ದಾರಿಯೂ ತೋರುತ್ತದೆ. ಕೇವಲ ಸ್ಕಂದ ಮಾತೆಯ ಆರಾಧನೆ ಅಲ್ಲದೆ ಇದರೊಂದಿಗೆ ಸ್ಕಂದದೇವನ ಪೂಜೆ ಸೇರುತ್ತದೆ. ಸೂರ್ಯ ಮಂಡಲದ ದೇವಿ ಆದಕಾರಣ ಪೂಜೆ ಮಾಡುವವರಿಗೆ ವಿಶೇಷವಾದಂತಹ ತೇಜಸ್ಸು ಮತ್ತು ಕಾಂತಿ ಲಭಿಸುತ್ತದೆ. ಪ್ರತಿಯೊಬ್ಬರ ಪ್ರೀತಿ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ. ಮನೆಯಲ್ಲಿ ಪರಸ್ಪರ ಅಪನಂಬಿಕೆ ಇದ್ದಲ್ಲಿ ಅದು ಸಹ ದೂರವಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಇಂದಿನ ಪೂಜೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತದೆ.

ಭಾರತದ ಹೊರಗೆ ಸ್ಕಂದ ಮಾತಾ ದೇವಾಲಯವಿದೆ ಮತ್ತು ಇದನ್ನು ನೇಪಾಳದಲ್ಲಿ ಭಾಗೀಶ್ವರಿ ದೇವಿ ಎನ್ನುತಾರೆ. ಆಕೆಯ ಒಂದು ಕೈ ಭಯ-ನಿರ್ಮೂಲನೆ ಮಾಡುವ ಅಭಯಮುದ್ರ ಭಂಗಿಯಲ್ಲಿ ಇರುತ್ತದೆ. ಜನರ ನಂಬಿಕೆಯ ಪ್ರಕಾರ, ಅತೃಪ್ತ ಮಕ್ಕಳು ಈ ತಾಯಂದಿರನ್ನು ಪೂಜಿಸಿದರೆ, ಅವರ ಆಸೆಗಳು ಈಡೇರುತ್ತವೆ. ಜೊತೆಗೆ, ಯುವಜನರ ಶಿಕ್ಷಣದ ಅಡೆತಡೆಗಳು ದೂರವಾಗುತ್ತವೆ.

ಭಗವಾನ್ ವಿಶ್ವನಾಥ, ವಿಶಾಲಾಕ್ಷಿ, ಅನ್ನಪೂರ್ಣಿ ದೇವಿ, ಕಾಲ ಭೈರವ ಇತ್ಯಾದಿಗಳಿಗೆ ಸಮರ್ಪಿತವಾಗಿರುವ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುವುದು ಒಳ್ಳೆಯದು. ಆಕಾಶದ ಅಂಶವನ್ನು ಸ್ಕಂದ ಮಾತಾ ಪ್ರತಿನಿಧಿಸುತ್ತಾರೆ. ನವದುರ್ಗೆಯ ಒಂದು ಬದಿಯಲ್ಲಿ ನಾಲ್ಕು ಹೆಣ್ಣು ಮಕ್ಕಳಿದ್ದು, ಮಧ್ಯದಲ್ಲಿ ಸ್ಕಂದ ಮಾತೆಯಿದ್ದಾಳೆ. ಅದರಲ್ಲಿ ತಾಯ್ತನವೂ ಒಂದು.

ಇದನ್ನೂ ಓದಿ

Navaratri 2023: ದುರ್ಗಾದೇವಿಯ 10 ಕೈಗಳಲ್ಲಿದೆ 10 ಆಯುಧ; ಆದಿಶಕ್ತಿ ಕೈಯಲ್ಲಿರುವ ಈ ಆಯುಧಗಳ ಮಹತ್ವ ತಿಳಿಯಿರಿ

Ten Arms of Maa Durga: ನವರಾತ್ರಿಗೆ ಒಂಬತ್ತು ದಿನಗಳ ಕಾಲ ದುರ್ಗಾಮಾತೆಯನ್ನು ಪೂಜಿಸಲಾಗುತ್ತದೆ. ದುರ್ಗಾಮಾತೆಯು ಹತ್ತು ಕೈಗಳನ್ನು ಹೊಂದಿರುವ ದೇವಿ. ಈ ಹತ್ತು ಕೈಗಳಲ್ಲಿ 10 ಆಯುಧವನ್ನು ಹಿಡಿದಿದ್ದಾಳೆ ಆದಿಶಕ್ತಿ. ದೇವಿಯ ಕೈಯಲ್ಲಿರುವ ಈ ಆಯುಧಗಳನ್ನು ಆಕೆಗೆ ನೀಡಿದ್ದು ಯಾರು, ಅವುಗಳ ಮಹತ್ವವೇನು? ವಿವರ ಇಲ್ಲಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.