Navaratri 7th Day: ಮಹಾಗೌರಿಗೆ ನವರಾತ್ರಿಯ 8ನೇ ದಿನದ ಪೂಜೆ; ಈ ದೇವಿಯ ಪೂಜೆಯಿಂದ ಕಳೆವುದು ಜನ್ಮ ಜನ್ಮಾಂತರಗಳ ಪಾಪ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Navaratri 7th Day: ಮಹಾಗೌರಿಗೆ ನವರಾತ್ರಿಯ 8ನೇ ದಿನದ ಪೂಜೆ; ಈ ದೇವಿಯ ಪೂಜೆಯಿಂದ ಕಳೆವುದು ಜನ್ಮ ಜನ್ಮಾಂತರಗಳ ಪಾಪ

Navaratri 7th Day: ಮಹಾಗೌರಿಗೆ ನವರಾತ್ರಿಯ 8ನೇ ದಿನದ ಪೂಜೆ; ಈ ದೇವಿಯ ಪೂಜೆಯಿಂದ ಕಳೆವುದು ಜನ್ಮ ಜನ್ಮಾಂತರಗಳ ಪಾಪ

Navaratri 8th Day: ನವರಾತ್ರಿಯ 8ನೇ ದಿನ ಮಹಾಗೌರಿಗೆ ಪೂಜೆ ಸಲ್ಲಿಸಲಾಗುತ್ತದೆ. ನವರಾತ್ರಿಯ ಅಷ್ಟಮಿಯಂದು ಮಹಾಗೌರಿಯ ಉಪಾಸನೆಯನ್ನು ಮಾಡಬೇಕು. ಇದರಿಂದ ವಿಶೇಷವಾದ ಫಲವು ಲಭಿಸುತ್ತದೆ. ಈಕೆಯ ಪೂಜೆಯಿಂದ ಮನದಲ್ಲಿ ಇರುವ ಎಲ್ಲಾ ಕಲ್ಮಶಗಳು ದೂರವಾಗುತ್ತವೆ. ಜನ್ಮಜನ್ಮಾಂತರಗಳಲ್ಲಿ ಮಾಡಿರುವ ಪಾಪವು ಮರೆಯಾಗುತ್ತದೆ ಎಂಬುದು ನಂಬಿಕೆ.

ಮಹಾಗೌರಿಗೆ ನವರಾತ್ರಿಯ 8ನೇ ದಿನದ ಪೂಜೆ
ಮಹಾಗೌರಿಗೆ ನವರಾತ್ರಿಯ 8ನೇ ದಿನದ ಪೂಜೆ

ದುರ್ಗಾದೇವಿಯ ಎಂಟನೇ ಶಕ್ತಿಯೇ ಮಹಾಗೌರಿ. ಮಹಾಗೌರಿ ನವರಾತ್ರಿಯ ಅಷ್ಟಮಿಯ ದಿನದಂದು ಮಹಾಗೌರಿಯ ಪೂಜೆಯನ್ನು ಮಾಡುತ್ತೇವೆ. ಈ ಕೈಯ ಬಣ್ಣವು ಸಂಪೂರ್ಣವಾಗಿ ಬಿಳಿಯ ಬಣ್ಣವಾಗಿದೆ. ಈಕೆಯ ವರ್ಣನೆಯನ್ನು ಶಂಖ ಮತ್ತು ಚಂದ್ರನ ಬಿಳುಪಿಗೆ ಹೋಲಿಸಲಾಗಿದೆ. ಈಕೆಯ ವಯಸ್ಸು 8 ವರ್ಷಗಳು. ಆದ್ದರಿಂದ ಎಂಟು ವರ್ಷದ ಹೆಣ್ಣು ಮಕ್ಕಳಿಗೆ ಮಡಿಲು ತುಂಬುವ ಪದಾರ್ಥಗಳನ್ನು ನೀಡಿದಲ್ಲಿ ಅದು ಮಹಾಗೌರಿಗೆ ಸೇರುತ್ತದೆ ಎಂದು ಹೇಳಲಾಗಿದೆ. ಈಕೆಗೆ ನಾಲ್ಕು ಕೈಗಳಿವೆ.

ಆಕೆಯ ಕೈಗಳಲ್ಲಿ ಅಭಯ ಮುದ್ರೆ, ತ್ರಿಶೂಲ, ಡಮರು ಮತ್ತು ವರ ಮುದ್ರೆಗಳಿವೆ. ಈಕೆಯ ಮುಖದಲ್ಲಿ ಅತ್ಯಂತ ಶಾಂತಿಮಯವಾದ ಕಳೆಯಿದೆ. ಈಕೆಯು ಪಾರ್ವತಿ ರೂಪದಲ್ಲಿ ಇರುತ್ತಾಳೆ, ಶಿವನನ್ನು ವಿವಾಹವಾಗಲು ಅತಿ ಘೋರ ತಪಸ್ಸನ್ನು ಆಚರಿಸುತ್ತಾಳೆ. ಶಿವನನ್ನಲ್ಲದೆ ಇನ್ನಾರನ್ನೂ ವಿವಾಹವಾಗಲಾರೆ ಎಂಬ ಪ್ರತಿಜ್ಞೆಯನ್ನು ಕೈಗೊಂಡಿರುತ್ತಾಳೆ. ವೇಳೆಯನ್ನು ಲೆಕ್ಕ ಇಡದೆ ತಪಸ್ಸು ಮಾಡುವ ಕಾರಣಕ್ಕೆ ಇಡೀ ದೇಹವು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.

ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗುತ್ತಾನೆ. ತನ್ನಲ್ಲಿರುವ ಗಂಗೆಯಿಂದ ಪಾರ್ವತಿಯನ್ನು ತೊಳೆಯುತ್ತಾನೆ. ಆಗ ಆಕೆಗೆ ಬಿಳಿ ಬಣ್ಣವು ದೊರಕುವ ಕಾರಣ ಗೌರಿ ಎಂಬ ಹೆಸರನ್ನು ಪಡೆದಿರುತ್ತಾರೆ. ನವರಾತ್ರಿಯ ಅಷ್ಟಮಿಯಂದು ಮಹಾಗೌರಿಯ ಉಪಾಸನೆಯನ್ನು ಮಾಡಬೇಕು. ಇದರಿಂದ ವಿಶೇಷವಾದ ಫಲವು ಲಭಿಸುತ್ತದೆ. ಈಕೆಯ ಪೂಜೆಯಿಂದ ಮನದಲ್ಲಿ ಇರುವ ಎಲ್ಲಾ ಕಲ್ಮಶಗಳು ದೂರವಾಗುತ್ತವೆ. ಜನ್ಮಜನ್ಮಾಂತರಗಳಲ್ಲಿ ಮಾಡಿರುವ ಪಾಪವು ಮರೆಯಾಗುತ್ತದೆ. ಪೂಜೆಯಿಂದ ಸಂಪೂರ್ಣ ಪುಣ್ಯವು ದೊರೆಯುತ್ತದೆ. ಪದ್ಮಾಸನದಲ್ಲಿ ಕುಳಿತು ಈಕೆಯ ಧ್ಯಾನವನ್ನು ಮಾಡಬೇಕು. ಜೀವನದ ಅಸಾಧ್ಯ ಎನ್ನಬಹುದಾದಂತಹ ಕಾರ್ಯಗಳನ್ನು ಮಾಡಬಹುದು. ಒಟ್ಟಾರೆ ಭಕ್ತರನ್ನು ಒಳ್ಳೆಯ ದಿಕ್ಕಿನಲ್ಲಿ ಸಾಗಿಸುವ ದಾರಿ ದೊರೆಯುತ್ತದೆ.

ವಾರಣಾಸಿ: ದುರ್ಗಾ ಮಾತೆಯ ಎಂಟನೇ ರೂಪವಾದ ಮಹಾಗೌರಿಯನ್ನು ಪೂಜಿಸಲು ವಿಶ್ವನಾಥ ಗಲ್ಲಿಯಲ್ಲಿರುವ ಅನ್ನಪೂರ್ಣ ದೇವಸ್ಥಾನಕ್ಕೆ ಶನಿವಾರ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬೆಳಗಿನ ಜಾವದಿಂದಲೇ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜಾ ಪುನಸ್ಕಾರಗಳನ್ನು ಆರಂಭಿಸಿ ಸಂಜೆಯವರೆಗೂ ಮುಂದುವರೆಸುತ್ತಾರೆ. ದುರ್ಗಕುಂಡ್, ಮಂಗಳಗೌರಿ, ಕಾಳಿ ಮಂದಿರ ಮತ್ತು ಲಕ್ಷ್ಮಿ ದೇವಸ್ಥಾನ ಸೇರಿದಂತೆ ಇತರ ಪ್ರಸಿದ್ಧ ದೇವಾಲಯಗಳು ಇಲ್ಲಿವೆ.

ಅಷ್ಟಮಿಯಂದು ಅನೇಕರು ‘ಕನ್ಯಾ ಪೂಜೆ’ಯನ್ನೂ ಮಾಡುತ್ತಾರೆ. ಕನ್ಯಾ ಮುತ್ತೈದೆಯ ಪೂಜೆಗಾಗಿ ಚಿಕ್ಕ ಹುಡುಗಿಯರನ್ನು ಆಯ್ಕೆ ಮಾಡುತ್ತಾರೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.