Swapna Shastra: ಕನಸಿನಲ್ಲಿ ಕಪ್ಪುಬೆಕ್ಕು ಕಂಡರೆ ಏನರ್ಥ; ಈ ರೀತಿ ಕನಸು ಬಿದ್ದರೆ ಜಾಗೃತರಾಗಿರಬೇಕು ಎನ್ನುತ್ತದೆ ಸ್ವಪ್ನಶಾಸ್ತ್ರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Swapna Shastra: ಕನಸಿನಲ್ಲಿ ಕಪ್ಪುಬೆಕ್ಕು ಕಂಡರೆ ಏನರ್ಥ; ಈ ರೀತಿ ಕನಸು ಬಿದ್ದರೆ ಜಾಗೃತರಾಗಿರಬೇಕು ಎನ್ನುತ್ತದೆ ಸ್ವಪ್ನಶಾಸ್ತ್ರ

Swapna Shastra: ಕನಸಿನಲ್ಲಿ ಕಪ್ಪುಬೆಕ್ಕು ಕಂಡರೆ ಏನರ್ಥ; ಈ ರೀತಿ ಕನಸು ಬಿದ್ದರೆ ಜಾಗೃತರಾಗಿರಬೇಕು ಎನ್ನುತ್ತದೆ ಸ್ವಪ್ನಶಾಸ್ತ್ರ

ಸ್ವಪ್ನಶಾಸ್ತ್ರದ ಪ್ರಕಾರ, ಕನಸುಗಳು ವಾಸ್ತವದೊಂದಿಗೆ ಬಹಳ ಆಳವಾದ ಸಂಪರ್ಕವನ್ನು ಹೊಂದಿವೆ. ಯಾವುದೇ ಕಾರಣವಿಲ್ಲದೆ ಕನಸು ಬೀಳಲು ಸಾಧ್ಯವಿಲ್ಲ. ಕೆಲವೊಮ್ಮೆ ಮನಸ್ಸಿನಲ್ಲಿ ಹತ್ತಿಕ್ಕಲಾದ ಭಾವನೆಗಳು ಅಥವಾ ಆಸೆಗಳು ಕನಸಿನ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಇನ್ನೂ ಕೆಲವು ಕನಸುಗಳು ನಮಗೆ ಮುಂಬರುವ ದಿನಗಳು ಹೇಗಿರಬಹುದು ಎಂಬುದರ ಸೂಚನೆಯನ್ನೂ ನೀಡಬಹುದು.

ಕನಸಿನಲ್ಲಿ ಕಪ್ಪು ಬೆಕ್ಕು ಕಂಡರೆ ಏನರ್ಥ, ಇಲ್ಲಿದೆ ವಿವರ
ಕನಸಿನಲ್ಲಿ ಕಪ್ಪು ಬೆಕ್ಕು ಕಂಡರೆ ಏನರ್ಥ, ಇಲ್ಲಿದೆ ವಿವರ

ಭವಿಷ್ಯದಲ್ಲಿ ಏನಾಗಲಿದೆ ಎಂಬುದು ಕನಸುಗಳು ತಿಳಿಸುತ್ತವೆ ಎನ್ನುತ್ತದೆ ಸ್ವಪ್ನಶಾಸ್ತ್ರ. ಕೆಲವೊಮ್ಮೆ ಕನಸುಗಳು ಈ ಹಿಂದೆ ಸಂಭವಿಸಿದ ಘಟನೆಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಆದರೆ ನಮಗೆ ಬೀಳುವ ಹೆಚ್ಚಿನ ಕನಸುಗಳು ನಾವು ಜಾಗರೂಕರಾಗಿರಬೇಕು ಅಥವಾ ಮುಂದಿನ ದಿನಗಳಲ್ಲಿ ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸಬಹುದು ಎಂಬುದನ್ನು ಸೂಚಿಸುತ್ತದೆ.

ನಾವು ಕನಸಿನಲ್ಲಿ ಬೆಕ್ಕು, ಚಿರತೆ ಮುಂತಾದವುಗಳನ್ನು ಕಾಣುತ್ತೇವೆ. ಬೆಕ್ಕು ಎಲ್ಲರ ಮನೆಯ ನೆಚ್ಚಿನ ಸಾಕುಪ್ರಾಣಿ. ಆದರೆ ಕಪ್ಪುಬೆಕ್ಕನ್ನು ಮನೆಯಲ್ಲಿ ಸಾಕುವುದು ಕಡಿಮೆ. ಕಪ್ಪು ಬೆಕ್ಕು ಅಪಶಕುನ ಎಂಬ ಮಾತು ಇದೆ. ಇಂದಿನ ಸ್ವಪ್ನಶಾಸ್ತ್ರದಲ್ಲಿ ಕನಸಿನಲ್ಲಿ ಕಪ್ಪು ಬೆಕ್ಕು ಕಂಡರೆ ಏನರ್ಥ, ಬಿಳಿಬೆಕ್ಕಿನ ಕನಸಿನ ಅರ್ಥವೇನು ಎಂಬುದನ್ನು ತಿಳಿಯೋಣ.

ನವಗ್ರಹದಲ್ಲಿ ರಾಹುವಿನ ಸವಾರ ಬೆಕ್ಕು. ಯಾರಿಗಾದರೂ ಕನಸಿನಲ್ಲಿ ಕಪ್ಪು ಬೆಕ್ಕನ್ನು ಪದೇ ಪದೇ ಕಂಡರೆ, ಜಾತಕದಲ್ಲಿ ರಾಹು ದೋಷವಿದೆ ಎಂದರ್ಥ. ನಿಮ್ಮ ಕನಸಿನಲ್ಲಿ ಕಪ್ಪು ಬೆಕ್ಕು ನಿಮ್ಮ ಮೇಲೆ ದಾಳಿ ಮಾಡಿ ಹಲ್ಲುಗಳಿಂದ ಕಚ್ಚಿದರೆ, ಈ ಕನಸು ನಿಮಗೆ ಮಾರಕವಾಗಬಹುದು, ಮುಂದಿನ ದಿನಗಳಲ್ಲಿ ನಿಮಗೆ ದೊಡ್ಡ ಅಪಘಾತ ಸಂಭವಿಸಬಹುದು ಎಂದು ಈ ಕನಸು ಸೂಚಿಸುತ್ತದೆ. ನಿಮ್ಮ ರಹಸ್ಯವನ್ನು ಉಳಿಸಿಕೊಳ್ಳಲು ನೀವು ಕೇಳಿದ ವ್ಯಕ್ತಿಯಿಂದ ನಿಮಗೆ ದ್ರೋಹವಾಗಬಹುದು.

ಕನಸಿನಲ್ಲಿ ಒಂದು ಕಪ್ಪು ಬೆಕ್ಕು ನಿಮ್ಮನ್ನು ಕಚ್ಚಲು ಪ್ರಯತ್ನಿಸಿದರೆ, ನೀವು ಇದರಿಂದ ತಪ್ಪಿಸಿಕೊಂಡು ಹೋದರೆ, ಇದರರ್ಥ ಕುಟುಂಬದ ಸದಸ್ಯರು ಅಥವಾ ಸ್ನೇಹಿತರು ನಿಮ್ಮೊಂದಿಗೆ ಪಿತೂರಿ ಮಾಡಲು ಪ್ರಯತ್ನಿಸುತ್ತಾರೆ ಆದರೆ ಯಶಸ್ವಿಯಾಗುವುದಿಲ್ಲ, ನೀವು ಹೇಗಾದರೂ ಅವರ ಬಲೆಯಿಂದ ತಪ್ಪಿಸಿಕೊಳ್ಳುತ್ತೀರಿ ಎಂದರ್ಥ.

ಆದರೆ ಕನಸಿನಲ್ಲಿ ಬೆಕ್ಕಿನ ಕಚ್ಚುವಿಕೆಯಿಂದ ಗಾಯಗೊಂಡು ಸತ್ತರೆ, ನೀವು ಜಾಗರೂಕರಾಗಿರಬೇಕು. ಮುಂದಿನ ದಿನಗಳಲ್ಲಿ ನೀವು ಕೆಲವು ಗಂಭೀರ ಕಾಯಿಲೆಗಳಿಂದ ಬಳಲುತ್ತಿರಿ ಎಂಬುದರ ಸಂಕೇತವಾಗಿದೆ. ಕನಸಿನಲ್ಲಿ ಕಂಡ ಬೆಕ್ಕು ಯಾವ ಬಣ್ಣದ್ದಾಗಿತ್ತು ಎಂಬುದು ಮುಖ್ಯವಲ್ಲ. ಕಪ್ಪು ಮತ್ತು ಬಿಳಿ ಬೆಕ್ಕುಗಳು ಮಾರಣಾಂತಿಕವಾಗಿವೆ.

ನಿಮ್ಮ ಕನಸಿನಲ್ಲಿ ಬೆಕ್ಕು ನಿಮ್ಮ ಹಾದಿಯನ್ನು ದಾಟುವುದನ್ನು ನೀವು ನೋಡಿದರೆ, ಭವಿಷ್ಯದಲ್ಲಿ ನಿಮ್ಮ ಕೆಲಸದಲ್ಲಿ ಅಡೆತಡೆಗಳು ಉಂಟಾಗುತ್ತವೆ ಎಂದರ್ಥ. ನೀವು ಪ್ರಯಾಣಕ್ಕೆ ಹೋಗುತ್ತಿದ್ದರೆ, ಸಾಧ್ಯವಾದರೆ, ಸದ್ಯಕ್ಕೆ ನಿಲ್ಲಿಸಿ. ಈ ಕನಸು ಅಪಾಯದ ಸಂಕೇತವಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.