Swapna Shastra: ಕನಸಿನಲ್ಲಿ ಲಕ್ಷ್ಮೀದೇವಿಯನ್ನು ಕಾಣುವುದು ಅದೃಷ್ಟದ ಸೂಚನೆಯೇ; ಸ್ವಪ್ನಶಾಸ್ತ್ರದ ಪ್ರಕಾರ ಈ ಕನಸಿನ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Swapna Shastra: ಕನಸಿನಲ್ಲಿ ಲಕ್ಷ್ಮೀದೇವಿಯನ್ನು ಕಾಣುವುದು ಅದೃಷ್ಟದ ಸೂಚನೆಯೇ; ಸ್ವಪ್ನಶಾಸ್ತ್ರದ ಪ್ರಕಾರ ಈ ಕನಸಿನ ಅರ್ಥ ತಿಳಿಯಿರಿ

Swapna Shastra: ಕನಸಿನಲ್ಲಿ ಲಕ್ಷ್ಮೀದೇವಿಯನ್ನು ಕಾಣುವುದು ಅದೃಷ್ಟದ ಸೂಚನೆಯೇ; ಸ್ವಪ್ನಶಾಸ್ತ್ರದ ಪ್ರಕಾರ ಈ ಕನಸಿನ ಅರ್ಥ ತಿಳಿಯಿರಿ

ಸ್ವಪ್ನಶಾಸ್ತ್ರ ಅಥವಾ ಕನಸಿನ ಜ್ಯೋತಿಷ್ಯದ ಪ್ರಕಾರ ನಾವು ಕಾಣುವ ಪ್ರತಿಯೊಂದು ಕನಸಿಗೂ ಭಿನ್ನ ಅರ್ಥವಿರುತ್ತದೆ. ಅಲ್ಲದೆ ಪ್ರತಿ ಕನಸಿಗೂ ಮಹತ್ವವಿದೆ. ನಿಮ್ಮ ಕನಸಿನಲ್ಲಿ ಲಕ್ಷ್ಮೀದೇವಿಯನ್ನು ಕಂಡರೆ ಏನರ್ಥ, ಈ ಕನಸು ಏನನ್ನು ಪ್ರತಿನಿಧಿಸುತ್ತದೆ ಎಂಬುದನ್ನು ತಿಳಿಯೋಣ.

ಸ್ವಪ್ನಶಾಸ್ತ್ರ
ಸ್ವಪ್ನಶಾಸ್ತ್ರ

ಸ್ವಪ್ನಶಾಸ್ತ್ರವು ಕನಸಿನ ಅರ್ಥಗಳನ್ನು ವಿವರಿಸುತ್ತದೆ. ಜ್ಯೋತಿಷ್ಯದ ಭಾಗವಾಗಿರುವ ಈ ಶಾಸ್ತ್ರವು ಪ್ರತಿಯೊಂದು ಕನಸಿನ ಅರ್ಥವನ್ನು ತಿಳಿಸುತ್ತದೆ. ಸ್ವಪ್ನಶಾಸ್ತ್ರದ ಪ್ರಕಾರ ರಾತ್ರಿ ನಾವು ಮಲಗಿದ್ದಾಗ ಕಾಣುವ ಕನಸು ತಮ್ಮ ಭವಿಷ್ಯದ ಸೂಚಕವಾಗಿರುತ್ತದೆ. ಇದು ಭವಿಷ್ಯದಲ್ಲಿ ಘಟಿಸುವ ಘಟನೆಯನ್ನು ಕಲ್ಪನೆಯ ರೂಪದಲ್ಲಿ ಮೂಡುವಂತೆ ಮಾಡುವುದು ಎನ್ನಲಾಗುತ್ತದೆ.

ಕನಸಿನಲ್ಲಿ ದೇವರುಗಳನ್ನು ಕಾಣುವುದಕ್ಕೆ ವಿಶೇಷ ಅರ್ಥವಿದೆ. ಇದು ನಿಮ್ಮ ಜೀವನದಲ್ಲಿ ಮಿಶ್ರ ಪರಿಣಾಮ ಉಂಟು ಮಾಡಬಹುದು. ಧರ್ಮಗ್ರಂಥಗಳ ಪ್ರಕಾರ ಕೆಲವು ನಿರ್ದಿಷ್ಟ ದೇವರುಗಳನ್ನು ಕನಸಿನಲ್ಲಿ ಕಾಣುವುದು ಸಂಪತ್ತು ಹೆಚ್ಚುವ ಸೂಚನೆಯಾಗಿರುತ್ತದೆ. ಕನಸಿನಲ್ಲಿ ಲಕ್ಷ್ಮೀದೇವಿಯನ್ನು ನೋಡಿದರೆ ನಿಮಗೆ ಆರ್ಥಿಕ ಲಾಭ ಸಿಗುತ್ತದೆ ಎಂಬುದು ಮಾತ್ರವಲ್ಲ, ಇದು ಮಿಶ್ರ ಪ್ರತಿಕ್ರಿಯೆಗೂ ಕಾರಣವಾಗಬಹುದು.

ಸ್ವಪ್ನಶಾಸ್ತ್ರದ ಪ್ರಕಾರ ನಿಮ್ಮ ಕನಸಿನಲ್ಲಿ ಲಕ್ಷ್ಮೀದೇವಿಯನ್ನು ಕಂಡರೆ ನಿಮ್ಮ ಭವಿಷ್ಯದಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ನಡೆಯಬಹುದು. ಅಲ್ಲದೆ ಈ ಘಟನೆಗಳಿಂದ ನೀವು ಕೆಲವು ಪ್ರಯೋಜನಗಳನ್ನೂ ಪಡೆಯಬಹುದು. ಸಾಮಾನ್ಯವಾಗಿ ಇಂತಹ ಕನಸುಗಳು ಶುಭಸೂಚಕವಾಗಿರುತ್ತದೆ.

ಲಕ್ಷ್ಮೀದೇವಿ ರೂಪ ಕನಸಿನಲ್ಲಿ ಕಂಡರೆ ಸಂಪತ್ತಿನ ಚಿಹ್ನೆಗಳು

ನಿಮ್ಮ ಕನಸಿನಲ್ಲಿ ಲಕ್ಷ್ಮೀದೇವಿ ನಗುತ್ತಿರುವುದನ್ನು ಕಂಡರೆ ಶೀರ್ಘದಲ್ಲೇ ನೀವು ಆರ್ಥಿಕ ಲಾಭ ಗಳಿಸಲಿದ್ದೀರಿ ಎಂದರ್ಥ. ಮನೆಯಲ್ಲಿ ಪರಸ್ಪರ ಪ್ರೀತಿ ಹಾಗೂ ಸೌಹಾರ್ದತೆ ನೆಲೆಸಲು ಲಕ್ಷ್ಮೀದೇವಿ ಕಾರಣಳಾಗುತ್ತಾಳೆ.

ಕಮಲದ ಹೂವಿನ ಮೇಲೆ ಸಂತೋಷದ ಭಂಗಿಯಲ್ಲಿ ಕುಳಿತಿರುವ ಲಕ್ಷ್ಮೀದೇವಿಯು ಕಾಣಿಸಿದರೆ ಇದು ಒಳ್ಳೆಯ ಸಂಕೇತವಾಗಿದೆ. ಇದು ನಿಮಗೆ ಅದೃಷ್ಟದ ಹಾದಿಯನ್ನು ತೆರೆಯಲು ಸಹಾಯ ಮಾಡುತ್ತದೆ. ಅಲ್ಲದೆ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.

ಕನಸಿನಲ್ಲಿ ಲಕ್ಷ್ಮೀದೇವಿ ವಾಹನವಾದ ಗೂಬೆಯನ್ನು ನೋಡುವುದು

ಕನಸಿನಲ್ಲಿ ಲಕ್ಷ್ಮೀದೇವಿಯು ತನ್ನ ವಾಹನವಾದ ಗೂಬೆಯೊಂದಿಗೆ ಕಂಡರೆ ಇದು ಶುಭ ಸಂಕೇತವಾಗಿದೆ. ಇದರರ್ಥ ನೀವು ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಬಹುದು ಎಂಬುದಾಗಿದೆ. ಅಲ್ಲದೆ ನೀವು ಹಿಡಿದ ಕೆಲಸದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆಯೂ ಹೆಚ್ಚು. ಇದು ಸಂಪತ್ತಿನ ಸಂಕೇತವಾಗಿರಬಹುದು.

ಗಣೇಶನೊಂದಿಗೆ ಲಕ್ಷ್ಮೀದೇವಿಯನ್ನು ನೋಡುವುದು

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕನಸಿನಲ್ಲಿ ಲಕ್ಷ್ಮೀ ಹಾಗೂ ಗಣೇಶನ ವಿಗ್ರಹವನ್ನು ಒಟ್ಟಿಗೆ ನೋಡಿದರೆ ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ನೀವು ಯಾವುದೇ ಹೊಸ ಕೆಲಸ ಪ್ರಾರಂಭಿಸಲು ಹೊರಟಿದ್ದರೆ ಆ ಕೆಲಸದಲ್ಲಿ ನೀವು ಯಶಸ್ವಿಯಾಗಬಹುದು ಎಂಬುದು ಇದರ ಸೂಚನೆಯಾಗಿದೆ. ಇದರಿಂದ ನಿಮ್ಮ ಎಲ್ಲಾ ತೊಂದರೆಗಳು ನಿವಾರಣೆಯಾಗಬಹುದು.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.