Jadatva Yoga: ಜಡತ್ವಯೋಗದ ಪರಿಣಾಮ; ಹೊಸ ವರ್ಷದಲ್ಲಿ ಈ 3 ರಾಶಿಯವರ ಬಾಳಿನಲ್ಲಿ ಎದುರಾಗಲಿದೆ ನಾನಾ ಸಂಕಟ, ಜಾಗೃತೆ ಇರಲಿ
ಬುಧ ಮತ್ತು ರಾಹುವಿನ ಸಂಯೋಗದಿಂದಾಗಿ ಜಡತ್ವ ಯೋಗ ಉಂಟಾಗಲಿದೆ. ಇದರ ಪರಿಣಾಮದಿಂದಾಗಿ 3 ರಾಶಿಯವರು ಹೊಸ ವರ್ಷದಲ್ಲಿ ಕೆಲವು ದಿನಗಳ ಕಾಲ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಹೊಸ ವರ್ಷ ಯಾವ ರಾಶಿಯವರಿಗೆ ಸಂಕಷ್ಟ ತರಲಿದೆ ನೋಡಿ.
ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಗೆ ಬಹಳ ಪ್ರಾಮುಖ್ಯ ನೀಡಲಾಗುತ್ತದೆ. ಒಂದು ನಿರ್ದಿಷ್ಟ ಅವಧಿಯ ನಂತರ ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುತ್ತವೆ. ಇದರಿಂದ ಶುಭ ಮತ್ತು ಅಶುಭ ಯೋಗಗಳು ಉಂಟಾಗುತ್ತವೆ. 2024ರಲ್ಲಿ, ಹಲವು ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸುವುದರಿಂದ ಕೆಲವು ಯೋಗಗಳು ಉಂಟಾಗಲಿವೆ.
ಹೊಸ ವರ್ಷದಲ್ಲಿ ಹಲವು ರಾಜಯೋಗಗಳ ಜೊತೆಗೆ ಅಶುಭ ಯೋಗಗಳೂ ರೂಪುಗೊಳ್ಳಲಿವೆ. ಈ ಅಶುಭಯೋಗಗಳು ಕೆಲವು ರಾಶಿಚಕ್ರಗಳ ಮೇಲೆ ತೀವ್ರ ಪರಿಣಾಮ ಬೀರಲಿವೆ. ಬುಧ ಮತ್ತು ರಾಹುವಿನ ಸಂಯೋಜನೆಯಿಂದ ಅಶುಭ ಜಡತ್ವ ಯೋಗ ರೂಪುಗೊಳ್ಳಲಿದೆ. ಹೊಸ ವರ್ಷದಲ್ಲಿ ರಾಹು ಹಾಗೂ ಬುಧ ಮೀನ ರಾಶಿಯಲ್ಲಿ ಸಂಧಿಸಲಿದ್ದಾರೆ.
ಗ್ರಹಗಳ ಅಧಿಪತಿ ಹಾಗೂ ಜ್ಞಾನವನ್ನು ನೀಡುವ ಬುಧ, ಹೊಸ ವರ್ಷದಲ್ಲಿ ತನ್ನ ಸ್ಥಾನ ಬದಲಾಯಿಸಲಿದ್ದಾನೆ. ರಾಹುವನ್ನು ನೆರಳುಗ್ರಹ ಎಂದು ಹೇಳಲಾಗುತ್ತದೆ. ರಾಹುವು ಪ್ರಬಲಸ್ಥಾನದಲ್ಲಿದ್ದರೆ, ವ್ಯಕ್ತಿಯ ಜೀವನದಲ್ಲಿ ಸಂತೋಷ, ನೆಮ್ಮದಿ ನೆಲೆಸಿರುತ್ತದೆ. ಅದೇ ಅಶುಭ ಸ್ಥಾನದಲ್ಲಿದ್ದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಾರ್ಚ್ 7ರಂದು ಬುಧನು ಮೀನರಾಶಿಯನ್ನು ಪ್ರವೇಶಿಸಲಿದ್ದಾನೆ. ರಾಹು ಈಗಾಗಲೇ ಮೀನ ರಾಶಿಯಲ್ಲಿದ್ದಾನೆ. ಈ ಅಶುಭ ಜಡತ್ವ ಯೋಗವು ಬುಧ ಮತ್ತು ರಾಹುವಿನ ಸಂಯೋಗದಿಂದ ಉಂಟಾಗುತ್ತದೆ. ಇದರ ಫಲಿತಾಂಶವು ಕೆಲವು ರಾಶಿಚಕ್ರದ ಚಿಹ್ನೆಗಳ ಮೇಲೆ ಕೆಟ್ಟ ಪರಿಣಾಮವನ್ನು ತೋರಿಸುತ್ತದೆ. ಹಾಗಾದರೆ ಜಡತ್ವ ಯೋಗದಿಂದ ಬಳಲುತ್ತಿರುವ ರಾಶಿಚಕ್ರ ಚಿಹ್ನೆಗಳು ಯಾವುವು?
ಇದನ್ನೂ ಓದಿ: ಆದಿತ್ಯ ಮಂಗಳ ರಾಜಯೋಗ; ನಿಮ್ಮದು ಈ ರಾಶಿಯಾಗಿದ್ದರೆ ಮುಂಬರಲಿದೆ ನಿಮ್ಮ ಪಾಲಿನ ಸುವರ್ಣ ದಿನಗಳು
ಮೀನ ರಾಶಿ
ಈ ರಾಶಿಯಲ್ಲಿ ಬುಧ ಮತ್ತು ರಾಹುಗಳ ಸಂಯೋಗದಿಂದ ಜಡತ್ವ ಯೋಗ ಉಂಟಾಗುತ್ತದೆ. ಈ ಕಾರಣದಿಂದಾಗಿ, ಮೀನ ರಾಶಿಯವರು ಸ್ವಲ್ಪ ಜಾಗರೂಕರಾಗಿರಬೇಕು. ನೀವು ಏನನ್ನಾದರೂ ಮಾಡಲು ನಿರ್ಧರಿಸಿದಾಗ ಎಚ್ಚರಿಕೆಯಿಂದ ಯೋಚಿಸಿ ಮತ್ತು ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಈ ಸಮಯದಲ್ಲಿ, ರಾಶಿಯವರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿಯೇ ನೀವು ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಉದ್ಯೋಗದಲ್ಲಿ ಒತ್ತಡ ಹೆಚ್ಚಬಹುದು. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಈ ಸಮಯ ಅಷ್ಟೊಂದು ಒಳ್ಳೆಯದಲ್ಲ. ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಹತ್ತು ಬಾರಿ ಯೋಚಿಸುವುದು ಉತ್ತಮ. ದೇವರನ್ನು ಆರಾಧಿಸಿ.
ವೃಶ್ಚಿಕ ರಾಶಿ
ಈ ಜಡತ್ವ ಯೋಗವು ವೃಶ್ಚಿಕ ರಾಶಿಯ ಐದನೇ ಮನೆಯಲ್ಲಿ ಉಂಟಾಗುತ್ತದೆ. ಈ ಸಮಯದಲ್ಲಿ ಅಧ್ಯಯನದ ವಿಷಯದಲ್ಲಿ ಸ್ವಲ್ಪ ಒತ್ತಡಕ್ಕೆ ಒಳಗಾಗುತ್ತಾರೆ. ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ಸಮಸ್ಯೆ ಇಲ್ಲದಿದ್ದರೂ ಎಚ್ಚರಿಕೆ ವಹಿಸುವುದು ಉತ್ತಮ. ಆರೋಗ್ಯ ಸಮಸ್ಯೆಗಳೂ ಎದುರಾಗುತ್ತವೆ. ದಾಂಪತ್ಯ ಜೀವನದಲ್ಲಿ ಜಗಳಗಳು ಉಂಟಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Kubera Yoga: ರಾಹು ಕೇತು ಪ್ರಭಾವದಿಂದ ಕುಬೇರ ಯೋಗ; ಹೊಸ ವರ್ಷವು ಈ 3 ರಾಶಿಯವರ ಬದುಕಿನಲ್ಲಿ ಅದೃಷ್ಟ ಹೊತ್ತು ತರಲಿದೆ
ಮೇಷ ರಾಶಿ
ಮೇಷ ರಾಶಿಯ ಜನರು ಜಡತ್ವ ಯೋಗದಿಂದ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಚಿಹ್ನೆಯಲ್ಲಿ, ಜಡತ್ವ ಯೋಗವು 12ನೇ ಮನೆಯಲ್ಲಿ ಕಂಡುಬರುತ್ತದೆ. ಅವರು ಅಂದುಕೊಂಡ ಕಾರ್ಯಗಳಲ್ಲಿ ವಿಫಲರಾಗುತ್ತಾರೆ. ಆರೋಗ್ಯದ ಬಗ್ಗೆ ಸ್ವಲ್ಪ ಜಾಗ್ರತೆ ಇರಲಿ. ಹಣಕಾಸಿನ ಸಮಸ್ಯೆಗಳಿರುತ್ತವೆ. ಈ ಸಮಯದಲ್ಲಿ ಮಾಡಿದ ಯಾವುದೇ ಕೆಲಸವು ಹಿನ್ನಡೆ ಅನುಭವಿಸುವ ಸಾಧ್ಯತೆಯಿದೆ. ಒತ್ತಡಕ್ಕೆ ಒಳಗಾಗಬಹುದು. ಸ್ವಂತದವರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ಸ್ವಲ್ಪ ಆರ್ಥಿಕ ನಷ್ಟವಾಗುವ ಸಾಧ್ಯತೆಯೂ ಇದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)