ಎಂಥ ಪರಿಸ್ಥಿತಿಯೇ ಬರಲಿ, ಎಲ್ಲವನ್ನೂ ಕೂಲ್‌ ಆಗಿ ನಿಭಾಯಿಸುವ ರಾಶಿಯವರಿವರು; ಇವ್ರನ್ನ ನೋಡಿದ್ರೆ ಒತ್ತಡ ಕೂಡ ಹೆದರುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಎಂಥ ಪರಿಸ್ಥಿತಿಯೇ ಬರಲಿ, ಎಲ್ಲವನ್ನೂ ಕೂಲ್‌ ಆಗಿ ನಿಭಾಯಿಸುವ ರಾಶಿಯವರಿವರು; ಇವ್ರನ್ನ ನೋಡಿದ್ರೆ ಒತ್ತಡ ಕೂಡ ಹೆದರುತ್ತೆ

ಎಂಥ ಪರಿಸ್ಥಿತಿಯೇ ಬರಲಿ, ಎಲ್ಲವನ್ನೂ ಕೂಲ್‌ ಆಗಿ ನಿಭಾಯಿಸುವ ರಾಶಿಯವರಿವರು; ಇವ್ರನ್ನ ನೋಡಿದ್ರೆ ಒತ್ತಡ ಕೂಡ ಹೆದರುತ್ತೆ

Cool Zodiac Sign: ನೀವು ಕೆಲವೊಬ್ಬರನ್ನು ನೋಡಿರಬಹುದು. ಅವರು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸಹ ಸ್ವಲ್ಪವೂ ವಿಚಲಿತರಾಗದೇ ಸಮಾಧಾನದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಈ ರಾಶಿಯವರು ತಮ್ಮ ಕೌಶಲದಿಂದ ಕಠಿಣ ಪರಿಸ್ಥಿತಿಗಳನ್ನು ಸುಲಭವಾಗಿ ಎದುರಿಸುತ್ತಾರೆ.

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ (HT File Photo)

ಕೆಲವೊಬ್ಬರು ಇರುವುದೇ ಹಾಗೆ ಎಂತಹ ಪರಿಸ್ಥಿತಿ ಬಂದ್ರೂ ಕೂಲ್ ಆಗಿಯೇ ಇರುತ್ತಾರೆ. ಎಲ್ಲರೂ ಬಯಸುವುದು ಇದನ್ನೇ. ಆದರೆ ಎಲ್ಲರಿಗೂ ಹೀಗಿರಲು ಸಾಧ್ಯವಾಗುವುದಿಲ್ಲ. ಸಮಸ್ಯೆಗಳು ಬಂದಾಗ ವಿಚಲಿತರಾಗುವವರೇ ಹೆಚ್ಚು. ಇನ್ನು ಕೆಲವರಂತೂ ಸಮಸ್ಯೆ ಬಂದಾಗ ಅದನ್ನು ಪರಿಹಾರ ಮಾಡಿಕೊಳ್ಳುವ ಬದಲಿಗೆ ಇನ್ನೊಂದಷ್ಟು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಎಂತಹ ಕಠಿಣ ಸಮಯದಲ್ಲೂ ಕೂಲ್‌ ಆಗಿರುವ ಗುಣವು ಆ ವ್ಯಕ್ತಿ ಹುಟ್ಟಿದಾಗಿನಿಂದ ಬಂದಿರುತ್ತದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಗಳಿಗೆ ಸೇರಿದ ಜನರು ಯಾವುದೇ ಪರಿಸ್ಥಿತಿಯನ್ನಾದರೂ ಸಮಾಧಾನದಿಂದಲೇ ಗೆಲ್ಲುವ ಕೌಶಲವನ್ನು ಹೊಂದಿರುತ್ತಾರೆ. ಆ ರಾಶಿಗಳ ಜನರು ಕಷ್ಟದ ಸನ್ನಿವೇಶದಲ್ಲೂ ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗುವುದಿಲ್ಲ. ಅದನ್ನು ಸಮರ್ಥವಾಗಿ ನಿಭಾಯಿಸುವ ಕಲೆ ಅವರಲ್ಲಿರುತ್ತದೆ. ಹಾಗಾದ್ರೆ ಯಾವ ರಾಶಿಯವರು ಕಷ್ಟದ ಸಮಯದಲ್ಲೂ ಕೂಲ್‌ ಆಗಿರುವವರು ಇಲ್ಲಿದೆ ನೋಡಿ.

ವೃಷಭ ರಾಶಿ

ಈ ರಾಶಿಯವರು ಸ್ಥಿರ ಸ್ವಭಾವಕ್ಕೆ ಹೆಸರುವಾಸಿ. ಇವರು ಸೌಂದರ್ಯ ಮತ್ತು ಪ್ರಶಾಂತತೆಯ ಗ್ರಹವಾದ ಶುಕ್ರನಿಂದ ಆಳಲ್ಪಡುತ್ತಾರೆ. ಇವರು ಎಂತಹುದೇ ಕಷ್ಟದ ಸಂದರ್ಭದಲ್ಲಿಯೂ ತಮ್ಮ ಹಿಡಿತವನ್ನು ಕಾಪಾಡಿಕೊಳ್ಳುವ ಸಹಜ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರ ಐಹಿಕ ಶಕ್ತಿಯು ಸದ್ಯದ ಸ್ಥಿತಿಯನ್ನು ನಿಭಾಯಿಸಲು ಅನುವು ಮಾಡಿಕೊಡುತ್ತದೆ.

ಕಟಕ ರಾಶಿ

ಈ ರಾಶಿಯು ಚಂದ್ರನಿಂದ ನಿಯಂತ್ರಿಸಲ್ಪಡುತ್ತದೆ. ಈ ರಾಶಿಯ ಜನರು ಅವರ ಭಾವನೆಗಳೊಂದಿಗೆ ಹೆಚ್ಚು ಆಳವಾಗಿ ಹೊಂದಿಕೊಂಡಿರುತ್ತಾರೆ. ಒತ್ತಡ ಅಥವಾ ಕಷ್ಟದ ಸಮಯದಲ್ಲಿ ಅವರ ಸ್ವಾಭಾವಿಕ ಗುಣವಾದ ಸೌಮ್ಯ ಸ್ವಭಾವ ಮುಂದೆ ಬರುತ್ತದೆ. ಅವರ ಈ ಸೌಮ್ಯ ಸ್ವಭಾವವೇ ಅವರನ್ನು ಸುತ್ತಲಿನ ಜನರೊಂದಿಗೆ ಭಾವನಾತ್ಮಕವಾಗಿ ಹೊಂದಿಕೊಳ್ಳುವಂತೆ ಮಾಡುತ್ತದೆ.

ಕನ್ಯಾ ರಾಶಿ

ಈ ರಾಶಿಯವರು ಒತ್ತಡ ಉಂಟಾದಾಗ ಅಥವಾ ಕಠಿಣ ಪರಿಸ್ಥಿತಿಯಲ್ಲಿ ಸರಿಯಾದ ಕ್ರಮ ಕೈಗೊಳ್ಳುತ್ತಾರೆ. ಸಮಸ್ಯೆ ಪರಿಹರಿಸಲು ಇವರು ಅದನ್ನು ಆಳವಾಗಿ ವಿಶ್ಲೇಷಿಸುತ್ತಾರೆ. ತಮ್ಮ ಕೌಶಲ್ಯವನ್ನು ಬಳಸುತ್ತಾರೆ. ಕನ್ಯಾ ರಾಶಿಯವರು ಕಷ್ಟದ ಸಮಯವನ್ನು ಸವಾಲಿನಂತೆ ಸ್ವೀಕರಿಸಿ ಸುಲಭವಾಗಿ ಬಗೆಹರಿಸುತ್ತಾರೆ.

ವೃಶ್ಚಿಕ ರಾಶಿ

ಈ ರಾಶಿಯವರು ಸಮಯಕ್ಕೆ ತಕ್ಕಂತೆ ಪ್ರತಿಕ್ರಯಿಸುವ ಗುಣಸ್ವಭಾವಕ್ಕೆ ಹೆಸರುವಾಸಿಯಾದವರು. ಇವರು ಕಠಿಣ ಪರಿಸ್ಥಿತಿಯನ್ನು ವಿರೋಧಿಸುವ ಬದಲು ಅದು ಬೆಳವಣಿಗೆಗೆ ಅವಕಾಶ ಕಲ್ಪಿಸುತ್ತಿದೆ ಎಂದು ತಿಳಿಯುತ್ತಾರೆ. ಮತ್ತು ಅದನ್ನು ಹಾಗೆಯೇ ಸ್ವೀಕರಿಸುತ್ತಾರೆ. ಈ ರಾಶಿಯವರು ಸವಾಲುಗಳನ್ನು ಪರಿಶೀಲಿಸಿ ಬಹಳ ಶಾಂತವಾಗಿ ಅದನ್ನು ಬಗೆಹರಿಸುತ್ತಾರೆ. ಹಾಗೆಯೇ ಅದರಿಂದ ಇನ್ನಷ್ಟು ಮಾನಸಿಕವಾಗಿ ಬಲಗೊಳ್ಳುತ್ತಾರೆ.

ಮಕರ ರಾಶಿ

ಈ ರಾಶಿಯವರು ಒತ್ತಡ ಅಥವಾ ಸಮಸ್ಯೆಗೆ ಶಾಂತ ರೀತಿಯಲ್ಲಿ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ. ಈ ರಾಶಿಯ ಕಾರ್ಯನಿರ್ವಾಹಕನು ಶನಿಯಾದ್ದರಿಂದ ಶಿಸ್ತು ಮತ್ತು ಕ್ರಮಬದ್ಧವಾದ ಅಭ್ಯಾಸವನ್ನು ಹೊಂದಿರುತ್ತಾರೆ. ಈ ರಾಶಿಯವರು ರಚನಾತ್ಮಕವಾಗಿ ಸಮಸ್ಯೆ ಪರಿಹರಿಸಲು ನೋಡುತ್ತಾರೆ.

ಮೀನ ರಾಶಿ

ಕನಸು ಮತ್ತು ಭ್ರಮೆಗಳ ಗ್ರಹವಾದ ರಾಹುವಿನಿಂದ ಈ ರಾಶಿಯು ಆಳಲ್ಪಡುತ್ತದೆ. ಮೀನ ರಾಶಿಯವರಿಗೆ ಕಠಿಣ ಸಮಯದಲ್ಲಿ ಅದರಿಂದ ಹೊರಬರುವ ವಿಶಿಷ್ಟವಾದ ಸಾಮರ್ಥ್ಯವಿರುತ್ತದೆ. ಕಲ್ಪನೆ ಮತ್ತು ಸೃಜನಶೀಲತೆಯ ಮೂಲಕ ಇವರು ಶಾಂತತೆಯನ್ನು ಕಂಡುಕೊಳ್ಳುತ್ತಾರೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.