Gajakesari Yoga: ಸಂಕ್ರಾಂತಿ ನಂತರ ಗಜಕೇಸರಿ ಯೋಗ; ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲವೂ ಚಿನ್ನವಾಗುವ ಕಾಲ
ಚಂದ್ರ ಗ್ರಹವು ತನ್ನ ರಾಶಿಯವನ್ನು ಬದಲಿಸಿದ್ದು, ಇದರಿಂದ ಗಜಕೇಸರಿ ಯೋಗ ಸಂಭವಿಸಲಿದೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟದ ದಿನಗಳು ಆರಂಭವಾಗಲಿವೆ. ಇಷ್ಟು ದಿನ ಕಷ್ಟಗಳಿಗೆ ಇನ್ನು ಮುಂದೆ ಪರಿಹಾರ ಸಿಗಲಿದೆ.
ಗ್ರಹಗಳ ಸಂಚಾರದಿಂದ ಜನವರಿಯಲ್ಲಿ ಹಲವು ಶುಭ ಮತ್ತು ಅಶುಭ ಯೋಗಗಳು ಉಂಟಾಗಲಿವೆ. ಅದರಲ್ಲಿ ಗಜಕೇಸರಿ ಯೋಗವೂ ಒಂದು. ಜ್ಯೋತಿಷ್ಯದಲ್ಲಿ ಗಜಕೇಸರಿ ಯೋಗವನ್ನು ಅತ್ಯಂತ ಮಂಗಳಕರ ಯೋಗವೆಂದು ಪರಿಗಣಿಸಲಾಗಿದೆ. ಗಜಕೇಸರಿ ಯೋಗವು ಗುರು ಮತ್ತು ಚಂದ್ರನ ಸಂಯೋಜನೆಯಿಂದ ರೂಪುಗೊಂಡಿದೆ.
ಈ ಯೋಗವು ಸಮೃದ್ಧಿ, ಕೀರ್ತಿ, ಆರೋಗ್ಯ, ಹಠಾತ್ ಆರ್ಥಿಕ ಲಾಭ, ಸಂಪತ್ತು ಮತ್ತು ದೀರ್ಘಾಯುಷ್ಯವನ್ನು ನೀಡುತ್ತದೆ. ಗುರುವು ವೈಭವ, ಸಂಪತ್ತು ಮತ್ತು ಗೌರವವನ್ನು ಸಂಕೇತಿಸುತ್ತದೆ. ಪ್ರಸ್ತುತ ಗುರು ಗ್ರಹವು ಮೇಷ ರಾಶಿಯಲ್ಲಿ ಸಾಗುತ್ತಿದ್ದಾನೆ. ಜನವರಿ 18 ರಂದು, ಚಂದ್ರನು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮೇಷದಲ್ಲಿ ಈ ಎರಡು ಗ್ರಹಗಳ ಸಂಯೋಗದಿಂದ ಉಂಟಾಗುವ ಗಜಕೇಸರಿ ಯೋಗವು ಹನ್ನೆರಡು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಇನ್ನು ಮುಂದೆ ಕೆಲವು ರಾಶಿಯವರಿಗೆ ಸುವರ್ಣಯುಗ ಆರಂಭವಾಗಲಿದೆ. ಈ ಯೋಗದ ಪ್ರಭಾವದಿಂದ ನೀವು ಆರ್ಥಿಕ ಲಾಭವನ್ನು ಪಡೆಯಬಹುದಾಗಿದೆ. ಹಾಗಾದರೆ ಯಾವ ರಾಶಿಯವರಿಗೆ ಗಜಕೇಸರಿ ಯೋಗದ ಅನುಕೂಲವಿದೆ ನೋಡಿ.
ಮೇಷ ರಾಶಿ
ಮೇಷ ರಾಶಿಯಲ್ಲಿ ಗುರು ಮತ್ತು ಚಂದ್ರರ ಸಂಯೋಗವಾಗಿದೆ. ಆದ್ದರಿಂದ, ಈ ರಾಶಿಯವರಿಗೆ ಗಜಕೇಸರಿ ಯೋಗವು ಶುಭ ಫಲಿತಾಂಶಗಳನ್ನು ನೀಡಲಿದೆ. ಇವರಿಗೆ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚುತ್ತದೆ. ಹಿಂದಿನ ಹೂಡಿಕೆಗಳಿಂದ ನೀವು ಉತ್ತಮ ಆದಾಯವನ್ನು ಪಡೆಯುತ್ತೀರಿ. ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಮಧುರವಾಗಿರುತ್ತದೆ. ಮನಸ್ಸು ಸಂತೋಷದಿಂದ ಉಕ್ಕಿ ಹರಿಯುತ್ತದೆ. ಉದ್ಯೋಗಿಗಳಿಗೆ ಅನುಕೂಲಕರ ಸಮಯ. ಯೋಜಿತ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ.
ಇದನ್ನೂ ಓದಿ: Makara Sankranti: ವಿವಿಧ ರಾಶಿಗಳ ಮೇಲೆ ಮಕರ ಸಂಕ್ರಾಂತಿಯ ಫಲಾಫಲ ಹೇಗಿದೆ? ಅಂದು ಯಾವ ರಾಶಿಯವರು ಏನು ಮಾಡಬೇಕು, ಇಲ್ಲಿದೆ ವಿವರ
ಮಕರ
ಗಜಕೇಸರಿ ಯೋಗ ಅತ್ಯಂತ ಪವಿತ್ರವಾದುದು. ಈ ಯೋಗದ ಪ್ರಭಾವದಿಂದ, ಮಕರ ರಾಶಿಯವರ ಜೀವನದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಹಣ ಸಂಪಾದನೆಯಾಗುವ ಸಂಭವವಿದ್ದರೂ ಖರ್ಚಿನ ಕಡೆ ಗಮನ ಹರಿಸುವುದು ಅಗತ್ಯ. ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಈ ಯೋಗದ ಫಲವಾಗಿ ವೈವಾಹಿಕ ಜೀವನದಲ್ಲಿ ಉದ್ಭವಿಸುವ ಸಮಸ್ಯೆಗಳು ದೂರವಾಗುತ್ತವೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಅದೃಷ್ಟದ ಸಂಯೋಜನೆಯಿಂದಾಗಿ, ಕೈಗೊಂಡ ಯಾವುದೇ ಕಾರ್ಯವು ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ನೀವು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತೀರಿ.
ಮೀನ
ಮೀನ ರಾಶಿಯವರಿಗೆ ಗಜಕೇಸರಿ ಯೋಗವು ಅತ್ಯುತ್ತಮ ಲಾಭವನ್ನು ನೀಡಲಿದೆ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ವೃತ್ತಿ ನಿರ್ಧಾರಗಳ ವಿಷಯದಲ್ಲಿ ಜಾಗರೂಕರಾಗಿರಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಹೊಸ ಕೆಲಸ ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಈ ಸಮಯವು ತುಂಬಾ ಸೂಕ್ತವಾಗಿದೆ.