Lord Ganesha Names: ಗಣೇಶನ 108 ಹೆಸರು ತಿಳಿಯೋಣ, ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಗಣಪತಿಯ ವಿವಿಧ ಹೆಸರಿನ ಅರ್ಥಸಹಿತ ವಿವರಣೆ ಇಲ್ಲಿದೆ
Ganapati 108 Names and Meaning: ವಿಘ್ನ ನಿವಾರಕ ಗಣೇಶನನ್ನು 108 ಹೆಸರಿನಲ್ಲಿ ಸ್ತುತಿಸಲಾಗುತ್ತದೆ. ಎಲ್ಲರಿಗೂ ಪ್ರಿಯವಾದ ಗಜಾನನನ 108 ಹೆಸರುಗಳ ವಿವರ ಇಲ್ಲಿ ನೀಡಲಾಗಿದೆ. ಮಗುವಿಗೆ ನಾಮಕರಣ ಮಾಡಲು ಹೆಸರು ಹುಡುಕುವವರೂ ಗಣೇಶನ ವಿವಿಧ ಹೆಸರುಗಳಲ್ಲಿ ಸೂಕ್ತವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಬಹುದು.
Lord Ganesha Names: ಗಣೇಶನ 108 ಹೆಸರು (Hindustan Times)
ವಿನಾಯಕೋ ವಿಘ್ನರಾಜೋ ಗೌರೀಪುತ್ರೋ ಗಣೇಶ್ವರಃ ಸ್ಕಂದಾಗ್ರಜೋವ್ಯಯಃ ಪೂತೋ ದಕ್ಷೋಽಧ್ಯಕ್ಷೋ ದ್ವಿಜಪ್ರಿಯಃ ಅಗ್ನಿಗರ್ವಚ್ಛಿದಿಂದ್ರಶ್ರೀಪ್ರದೋ ವಾಣೀಪ್ರದೋಽವ್ಯಯಃ ಸರ್ವಸಿದ್ಧಿಪ್ರದಶ್ಶರ್ವತನಯಃ ಶರ್ವರೀಪ್ರಿಯಃ ಹೀಗೆ ಗಣೇಶನನ್ನು ಪೂಜಿಸುವಾಗ ಗಣಪತಿಯ 108 ಹೆಸರುಗಳನ್ನೂ ತಿಳಿಸಲಾಗುತ್ತದೆ. ಎಲ್ಲಾ ದೇವರಿಗಿಂತ ಮೊದಲು ಪೂಜೆ ಸಲ್ಲುವ ಗಣೇಶನ 108 ಹೆಸರುಗಳನ್ನು ಇಲ್ಲಿ ನೀಡಲಾಗಿದೆ.
ಗಣೇಶನ 108 ಹೆಸರುಗಳು ಮತ್ತು ಅರ್ಥ
- ಅಖುರಥ – ಮೂಸಿಕ ಅಥವಾ ಇಲಿಯನ್ನು ತನ್ನ ವಾಹನವಾಗಿರಿಸಿಕೊಂಡವ.
- ಆಲಂಪತ- ಎಂದಿಗೂ ಅನಂತನಾದ ದೇವ
- ಅಮಿತ – ಕೊನೆಯಿಲ್ಲದ, ಅಮಿತವಾದದ್ದು ಎಂಬ ಅರ್ಥವಿದೆ
- ಅನಂತಚಿದೃಪಮಯಂ – ಅನಂತ ಜ್ಞಾನ ಉಳ್ಳವ, ಗಣೇಶನು ಉತ್ತಮ ಜ್ಞಾನಿ
- ಅವನೀಶ್ – ಭೂಮಿಯ ಒಡೆಯ
- ಅವಿಘ್ನ – ಎಂದರೆ ವಿಘ್ನ ನಿವಾರಕ ಗಣೇಶ
- ಬಾಲಗಣಪತಿ- ಹೆಸರೇ ಹೇಳುವಂತೆ ಬಾಲಕ ಗಣೇಶ
- ಬಾಲಚಂದ್ರ -ಚಂದ್ರ ಶೋಬಿತ ಮುದ್ದು ಗಣೇಶ,
- ಭೀಮ – ಭೀಮನಂತೆ ಗಾತ್ರ ಹೊಂದಿರುವ ಗಣಪತಿ,
- ಭೂಪತಿ- ಭೂಮಿಗೆ ಪತಿ, ಭೂಮಿಗೆ ಯಜಮಾನ
- ಭುವನಪತಿ – ಭುವನಕ್ಕೆ ಒಡೆಯ, ಜಗತ್ತಿನ ಒಡೆಯ
- ಬುದ್ದಿನಾಥ – ಬುದ್ದಿಯನ್ನು, ಜ್ಞಾನವನ್ನು ದಯಪಾಲಿಸುವ ಗಣೇಶ
- ಬುದ್ಧಿಪ್ರಿಯ – ಬುದ್ದಿವಂತ, ಜ್ಞಾನವಂತನಾದ ಗಣೇಶ,
- ಬುದ್ಧಿವಿಧಾತ – ಜ್ಞಾನದ ದೇವತೆ, ಜ್ಞಾನ ದಯಪಾಲಿಸುವ ದೇವರು.
- ಚತುರ್ಭುಜ – ನಾಲ್ಕು ಕೈಗಳನ್ನು ಹೊಂದಿರುವ ಕಾರಣ ಈ ಹೆಸರು
- ದೇವದೇವ -ದೇವತೆಗಳ ದೇವ
- ದೇವಾಂತಕನಾಶಕ – ರಾಕ್ಷಸರನ್ನು, ಅಸುರರನ್ನು ನಾಶಪಡಿಸುವ ದೇವರು
- ದೇವವ್ರತ – ಭಕ್ತರ ಪ್ರಾಯಶ್ಚಿತ್ತಗಳನ್ನು ಒಪ್ಪಿಕೊಳ್ಳುವ ದೇವತೆ ಗಣಪತಿ
- ದೇವೇಂದ್ರಶಿಖಾ -ದೇವತೆಗಳ ಹಿತರಕ್ಷಣೆ ಮಾಡುವ ದೇವರು
- ಧಾರ್ಮಿಕ- ಧರ್ಮ ನಿರತನಾದ ಗಣೇಶನಿಗೆ ಈ ಹೆಸರು
- ಧೂಮ್ರವರ್ಣ- ಧೂಮ್ರ ಬಣ್ಣದ ದೇವತೆ, ಗಣೇಶನ ಬಣ್ಣದಿಂದ ಈ ಹೆಸರು
- ದುರ್ಜ -ಅದ್ವಿತೀಯ, ಅಜೇಯ ದೇವತೆ
- ದ್ವೈಮಾತುರ- ಇಬ್ಬರು ತಾಯಂದಿರನ್ನು ಉಳ್ಳವ,
- ಏಕಾಕ್ಷರ – ಒಂದು ಅಕ್ಷರದವ,
- ಏಕದಂತ – ಒಂದು ದಂತ ಹೊಂದಿರುವ ದೇವರು
- ಏಕದೃಷ್ಟ -ಏಕದಂತ ಮಾತ್ರವಲ್ಲದೆ ಗಣೇಶನಿಗೆ ಏಕದೃಷ್ಟ ಎಂಬ ಹೆಸರೂ ಇದೆ. ಅಂದರೆ, ಹಲ್ಲು ಹೊಂದಿರುವ ದೇವರು.
- ಈಶಪುತ್ರ – ಶಿವ/ಈಶ್ವರನ ಪುತ್ರ
- ಗದಾಧರ – ಗದೆಯನ್ನು ಆಯುಧವನ್ನಾಗಿ ಉಪಯೋಗಿಸುವ ದೇವರು
- ಗಜಕರ್ಣ- ಗಜದ ಕಣ್ಣು ಅಂದರೆ ಆನೆಯ ಕಣ್ಣುಗಳನ್ನು ಹೊಂದಿರುವ ದೇವರು
- ಗಜಾನನ – ಆನೆಯ ಮುಖವನ್ನು ಹೊಂದಿರುವ ದೇವರು. 3
- ಗಜನನೇತಿ – ಆನೆಯ ಮುಖದ ತರಹದ ಮುಖವನ್ನು ಹೊಂದಿರುವ ದೇವರು
- ಗಜವಕ್ರ – ಆನೆಯ ಸೊಂಡಿಲುಳ್ಳ ದೇವರು
- ಗಜವಕ್ತ್ರ – ಆನೆಯ ಬಾಯಂತೆ ಬಾಯನ್ನು ಉಳ್ಳ ದೇವರು,
- ಗಣದಕ್ಷಯ (ಗಣನಾಯಕ)- ಗಣಗಳಿಗೆಲ್ಲಾ(ದೇವತೆಗಳು) ಅಧಿನಾಯಕನಾದವನು
- ಗಣಧ್ಯಕ್ಷಿನ – ಗಣಗಳಿಗೆಲ್ಲಾ ಅಧ್ಯಕ್ಷನಾದವನು
- ಗಣಪತಿ- ಗಣನಾಯಕ, ದೇವತೆಗಳಿಗೆಲ್ಲಾ ಒಡೆಯನಾದವನು
- ಗೌರಿಸುತ – ಗೌರಿಯ ಪುತ್ರ, ಪಾರ್ವತಿಯ ಸುತ
- ಗುಣಿನ- ಸರ್ವ ಜ್ಞಾನ ಉಳ್ಳವನು
- ಹರಿದ್ರ – ಬಂಗಾರದ ಬಣ್ಣದ ಮೈ ಉಳ್ಳವ
- ಹೇರಂಬಾ- ತಾಯಿಯ ಮುದ್ದಿನ ಮಗ
- ಕಪಿಲಾ- ಹಳದಿಮಿಶ್ರಿತ ಕಂದುಬಣ್ಣದ ಮೈ
- ಕವೀಶ -ಕವಿಗಳಿಗೆಲಾ ಒಡೆಯ
- ಕೃತಿ- ಸಂಗೀತದ ದೇವತೆ
- ಕೃಪಾಳು- ಕರುಣಾಳಾದ ದೇವತೆ
- ಕೃಷಪಿಂಗಾಕ್ಷ – ಹಳದಿಮಿಶ್ರಿತ ಕಂದುಬಣ್ಣದ ಕಣ್ಣುಗಳುಳ್ಳವ
- ಕ್ಷಮಾಕರಂ- ಕ್ಷಮೆಯನ್ನು ದಯಪಾಲಿಸುವವ
- ಕ್ಷಿಪ್ರ – ಸರಳವಾಗಿ, ಸುಲಭವಾಗಿ ಭಕ್ತರಿಗೆ ಒಲಿಯುವ ದೇವರು
- ಲಂಬಕರ್ಣ- ಉದ್ದನೆಯ ಕಿವಿಗಳುಳ್ಳವ
- ಲಂಬೋದರ – ಉದ್ದನೆಯ ಹೊಟ್ಟೆಯನ್ನುಳ್ಳವ
- ಮಹಾಬಲ – ಅತ್ಯಂತ ಬಲಶಾಲಿಯಾದ ದೇವತೆ ಈತ
- ಮಹಾಗಣಪತಿ – ಸರ್ವಾಧಿಕಾರಿ, ಸರ್ವೋಚ್ಛ ದೇವತೆ
- ಮಹೇಶ್ವರಂ- ಮಹಾ ಈಶ್ವರನ ಸಮಾನರಾದ
- ಮಂಗಳಮೂರ್ತಿ- ಮಂಗಳಕರನಾದ ದೇವತಾ ಮೂರ್ತಿ
- ಮನೋಮಯಿ -ಮನಸ್ಸನ್ನು ಗೆಲ್ಲುವ
- ಮೃತ್ಯುಂಜಯ- ಮೃತ್ಯುವನ್ನು ಗೆದ್ದವನು
- ಮುಂದಾಕರಮ- ಸಂತಸವನ್ನು ಮನೆ ಮಾಡಿಕೊಂಡಿರುವ ದೇವರು
- ಮುಕ್ತಿದಾಯ – ಮುಕ್ತಿಯನ್ನು ದಯಪಾಲಿಸುವ ದೇವರು
- ಮೂಷಿಕವಾಹನ- ಇಲಿಯನ್ನು ವಾಹನವಾಗಿರಿಸಿಕೊಂಡ ದೇವರು
- ನಾದಪ್ರತಿಥಿಷ್ಟ- ನಾದ ಸುಧೆಯನ್ನು ಇಷ್ಟಪಡುವ ದೇವರು
- ನಮಸ್ತೇತು – ದುಷ್ಟಶಕ್ತಿಗಳನ್ನು, ದುಷ್ಟ ವಿಚಾರಗಳನ್ನು ನಿರ್ಮೂಲನ ಮಾಡುವವನು
- ನಂದನ- ಶಿವನ ಪುತ್ರ
- ನಿಧೀಶ್ವರಂ- ಆಯುರಾರೋಗ್ಯ ಐಶ್ವರ್ಯವನ್ನು ದಯಪಾಲಿಸುವ ದೇವನೀತ.
- ಓಂಕಾರ- ಓಂಕಾರ ಸ್ವರೂಪಿ
- ಪೀತಾಂಬರ- ಹಳದಿಬಣ್ಣ
- ಪ್ರಮೋದ- ಮೋದಕಪ್ರಿಯ
- ಪ್ರಥಮೇಶ್ವರ- ಪ್ರಥಮ ಪೂಜೆಯ ದೇವತೆ
- ಪುರುಷ್- ಅಪ್ರತಿಮ ಪುರುಷ ವ್ಯಕ್ತಿತ್ವ
- ರಕ್ತ – ಕೆಂಪಗಿನ ಕಣ್ಣುಗಳು ಇರುವ ದೇವರು
- ರುದ್ರಪ್ರಿಯ- ರುದ್ರನಿಗೆ/ ಶಿವನಿಗೆ ಪ್ರಿಯನಾದ ದೇವ
- ಸರ್ವದೇವಾತ್ಮನ್-ಸರ್ವಕಾಣಿಕೆಗಳನ್ನ,ಪೂಜೆಗಳನ್ನು, ಒಪ್ಪಿಸಿಕೊಳ್ಳುವವ,
- ಸರ್ವಸಿದ್ಧಾಂತ – ವಿದ್ಯೆ,ಬುದ್ದಿ, ಜ್ಞಾನವನ್ನುಸಿದ್ದಿಸುವವನು
- ಸರ್ವಾತ್ಮನ್-ಜಗತ್ತನ್ನು ಸಂರಕ್ಷಿಸುತ್ತಿರುವವನು
- ಶಾಂಭವಿ-ಶಾಂಭವಿಯಾದ ತಾಯಿ ಪಾರ್ವತಿಯ ಸುತ
- ಶಶಿವರ್ಣಂ- ಚಂದ್ರನ ಬಣ್ಣವುಳ್ಳವನು
- ಶೂರ್ಪಕರ್ಣ-ಬೃಹದಾಕಾರದ ಕಿವಿಗಳುಳ್ಳವನು
- ಶುಭನ್- ಶುಭದಾಯಕ
- ಶುಭಗುಣಕಣನ್-ಸರ್ವಕಾಯ, ಸರ್ವವಿಧಿಯನ್ನು ಬಲ್ಲ ದೇವರು
- ಶ್ವೇತ-ಬಿಳಿಯ ಬಣ್ಣದಂತೆ ಶುಭ್ರ
- ಸಿದ್ದಿದಾತ- ಸಿದ್ದಿಯನ್ನು ದಯಾಪಾಲಿಸುವ ದೇವರು
- ಸಿದ್ದಿಪ್ರಿಯ-ಆಶೀರ್ವಾದವನ್ನು ಸಿದ್ದಿಸುವವ
- ಸಿದ್ದಿವಿನಾಯಕ- ಯಶಸ್ಸಿನ ಅಧಿದೇವತೆ ಗಣೇಶ.
- ಸ್ಕಂದಪೂರ್ವಜ-ಸುಬ್ರಹ್ಮಣ್ಯನ ಸಹೋದರ
- ಸುಮುಖ-ಸ್ತುತ್ಯಾರ್ಹ ಮುಖವನ್ನುಳ್ಳ ದೇವರು
- ಸುರೇಶ್ವರಂ-ಸುರದೇವತಿಗಳಿಗೆಲ್ಲಾ ಒಡೆಯನಾದ ದೇವರು
- ಸ್ವರೂಪ್ – ರೂಪವಂತನೂ, ಸುಂದರವದನ
- ತರುಣ್-ಸದಾಕಾಲ ತರುಣಂತೆಯೇ ಇರುವ ದೇವರು
- ಉದ್ದಂಡ- ದುಷ್ಟ ಶಿಕ್ಷಕ
- ಉಮಾಪುತ್ರ- ಉಮೆಯ ಮಗ
- ವಕ್ರತುಂಡ-ಬಾಗಿದ ಸೊಂಡಿಲುಳ್ಳ
- ವರಗಣಪತಿ-ಬೇಡಿದ ವರ ನೀಡುವ ದೇವರು
- ವರಪ್ರದ-ವರಗಳನ್ನು ದಯಪಾಲಿಸುವ ದೇವರು
- ವರದವಿನಾಯಕ- ಯಶಸ್ಸಿನ್ನು ಹರಸಿ ವರವನ್ನು ನೀಡುವ ದೇವರು
- ವೀರಗಣಪತಿ-ವೀರನಾದ ಗಣೇಶ ದೇವತೆ ಈತ.
- ವಿದ್ಯಾವಾರಿಧಿ-ವಿದ್ಯೆಯ ಅಧಿದೇವತೆ
- ವಿಘ್ನಹರ-ವಿಘ್ನಗಳನ್ನು ಹರಿಸುವವನು
- ವಿಘ್ನಹರ್ತ-ವಿಘ್ನಗಳನ್ನು ನಾಶಪಡಿಸುವವನು
- ವಿಘ್ನರಾಜ-ವಿಘ್ನಗಳನ್ನೆಲ್ಲಾ ಜಯಿಸಿ, ಅದರ ಒಡೆಯನಾಗಿರುವವ
- ವಿಘ್ನರಾಜೇಂದ್ರ- ವಿಘ್ನಗಳನ್ನೆಲ್ಲಾ ಜಯಿಸುವವ
- ವಿಘ್ನವಿನಾಶಾನಯ-ವಿಘ್ನಗಳ ನಾಶ ಮಾಡುವ ದೇವರು
- ವಿಘ್ನೇಶ್ವರ-ನಿಘ್ನಗಳಿಂದ ಕಾಪಾಡುವ ದೇವರು
- ವಿಕತ್- ಬೃಹತ್ ದೇಹದ ದೇವರು
- ವಿನಾಯಕ- ಎಲ್ಲರಿಗೂ ನಾಯಕ
- ವಿಶ್ವಮುಖ- ಜಗತ್ತಿಗೆ ಮುಖದಂತೆ ಇರುವವನು
- ವಿಶ್ವರಾಜ- ಜಗತ್ತಿಗೇ ರಾಜ
- ಯಜ್ಞಕಾಯ-ಯಜ್ಞಗಳಲ್ಲಿ ಭಕ್ತಿಸಮರ್ಪಣೆಗಳನ್ನು ಸ್ವೀಕರಿಸುವ ದೇವರು
- ಯಶಸ್ಕರಂ- ಯಶಸ್ಸನ್ನು, ಅದೃಷ್ಟವನ್ನು, ಸಿದ್ದಿಸುವವನು
- ಯಶಸ್ವಿನ್-ಅತ್ಯಂತ ಪ್ರೀತಿದಾಯಕನಾದ, ಅತ್ಯಂತ ಜನಪ್ರಿಯನಾದ ದೇವತೆ
- ಯೋಗದೀಪ- ಯೋಗದ ಅಧಿದೇವತೆ.
ಹೀಗೆ ಗಣೇಶನಿಗೆ 108 ಹೆಸರುಗಳಿವೆ. ಗಣಪತಿಯ ವಿವಿಧ ಹೆಸರುಗಳು ನಾನಾ ಅರ್ಥ ಧ್ವನಿಸುತ್ತವೆ. ಗಣೇಶನ ಸ್ತುತಿಸಲು ಗಣೇಶನ 108 ಹೆಸರಿನ ಅಷ್ಟೋತ್ತರ ಪಠಿಸಿ ಮಹಾ ಗಣಪತಿಯ ಕೃಪೆಗೆ ಪಾತ್ರರಾಗಬಹುದು.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.