Home Horoscope: ಈ ವರ್ಷ ಹೊಸ ಮನೆ, ಆಸ್ತಿ ಖರೀದಿ ಯೋಚನೆ ಇದ್ರೆ ಗಮನಿಸಿ, 2024ರ ಶುಭದಿನಗಳು, ಮುಹೂರ್ತದ ವಿವರ ಇಲ್ಲಿದೆ
ಹೊಸ ಮನೆ ಖರೀದಿ, ಆಸ್ತಿ ಖರೀದಿ ಮಾಡುವಾಗ ಪಂಚಾಂಗ ನೋಡಿ ಉತ್ತಮ ದಿನ ಹಾಗೂ ಶುಭ ಮುಹೂರ್ತವನ್ನು ಪರಿಗಣಿಸುವುದು ವಾಡಿಕೆ. 2024 ರಲ್ಲಿ ನೀವು ಆಸ್ತಿ, ಮನೆ ಕೊಳ್ಳುವ ಯೋಚನೆ ಇದ್ದರೆ ಯಾವೆಲ್ಲ ದಿನಗಳು ಉತ್ತಮವಾಗಿವೆ, ಘಳಿಗೆ ಯಾವುದು ಉತ್ತಮ ಎಂಬುದರ ವಿವರ ಇಲ್ಲಿದೆ.
ಹೊಸ ವರ್ಷ ಬಂತು, ಈ ವರ್ಷ ಆದ್ರೂ ಬಾಡಿಗೆ ಮನೆ ಬಿಟ್ಟು ಹೊಸ ಮನೆಗೆ ಕಾಲಿಡಬೇಕು. ಹೊಸ ಮನೆಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಅಂತ ಆಸೆ ಪಡುವುದು ಮನುಷ್ಯರ ಸಹಜ ಗುಣ.
ಹೊಸ ಮನೆಗೆ ಕೊಳ್ಳುವಾಗ ಕೇವಲ ದುಡ್ಡಿದ್ದರೆ ಸಾಲುವುದಿಲ್ಲ, ಅದಕ್ಕೆ ಒಳ್ಳೆಯ ಮುಹೂರ್ತ ಕೂಡ ಬೇಕು ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ.
ವೈದಿಕ ಜ್ಯೋತಿಷ್ಯದಲ್ಲಿ ಮಹೂರ್ತಕ್ಕೆ ಬಹಳ ಪ್ರಾಮುಖ್ಯವಿದೆ. ಹಿಂದೂಗಳಲ್ಲಿ ಯಾವುದೇ ಶುಭ ಸಮಾರಂಭಗಳಿಗೂ ಶುಭ ಮೂಹೂರ್ತ ಎನ್ನುವುದು ಬಹಳ ಮುಖ್ಯವಾಗುತ್ತದೆ.
ಇದು ಆಸ್ತಿ, ಮನೆ ಖರೀದಿ ವಿಚಾರದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಶುಭ ಮುಹೂರ್ತದಲ್ಲಿ ಖರೀದಿ ಮಾಡಿದರೆ ಧನಾತ್ಮಕ ಫಲಿತಾಂಶ ಸಿಗುತ್ತದೆ ಎಂಬುದು ನಂಬಿಕೆ. ಒಳ್ಳೆಯ ಮುಹೂರ್ತದಲ್ಲಿ ಖರೀದಿ ಮಾಡಿದರೆ ಆದಾಯ ಹೆಚ್ಚುತ್ತದೆ. ಸಮೃದ್ಧಿ, ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂಬುದು ನಂಬಿಕೆ.
ಹಾಗಾದರೆ 2024ರಲ್ಲಿ ಆಸ್ತಿ, ಮನೆ ಖರೀದಿಗೆ ಯಾವೆಲ್ಲಾ ದಿನಗಳು ಉತ್ತಮವಾಗಿವೆ ಎಂಬುದನ್ನು ನೋಡೋಣ.
ಇದನ್ನೂ ಓದಿ: Tarot Card: ಈ ವರ್ಷ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ಒಲಿಯಲಿದೆ, ಯಾರಿಗೆ ಅಶುಭ; 2024ರ ಟ್ಯಾರೋ ಕಾರ್ಡ್ ರೀಡಿಂಗ್ ಭವಿಷ್ಯ ತಿಳಿಯಿರಿ
ಮನೆ ಖರೀದಿಗೆ ಉತ್ತಮ ಸಮಯ
ಜ್ಯೋತಿಷಗಳ ಪ್ರಕಾರ ಭೂಮಿ ಖರೀದಿ, ಮನೆ ಅಗ್ರಿಮೆಂಟ್‌ಗೆ ಸಹಿ ಹಾಕುವುದು, ಹೊಸ ಮನೆಗೆ ಶಿಫ್ಟ್ ಆಗುವುದು, ಗ್ರಹಪ್ರವೇಶ ಮಾಡುವುದು ಮುಂತಾದ ಶುಭ ಸಮಾರಂಭಗಳಿಗೆ ಈ ಕೆಳಗಿನ ದಿನಾಂಕಗಳು ಅತ್ಯುತ್ತಮ.
* 2024, ಫೆಬ್ರುವರಿ 12, ಸೋಮವಾರ: ಮಧ್ಯಾಹ್ನ 2.56 ರಿಂದ ಸಂಜೆ 5.54ರವರೆಗೆ
* 2024, ಫೆಬ್ರುವರಿ 19, ಸೋಮವಾರ: ಬೆಳಿಗ್ಗೆ 6.57 ರಿಂದ ಬೆಳ್ಳಿಗ್ಗೆ 10.33
* 2024, ಫೆಬ್ರುವರಿ 26 ಸೋಮವಾರ: ಬೆಳಿಗ್ಗೆ 6.50ರಿಂದ 00.00
* 2024, ಮಾರ್ಚ್ 2, ಶನಿವಾರ: ಮಧ್ಯಾಹ್ನ 2.42 ರಿಂದ 00.00
* 2024, ಮಾರ್ಚ್ 6, ಬುಧವಾರ: ಮಧ್ಯಾಹ್ನ 2.52 ರಿಂದ 00.00
* 2024, ಮಾರ್ಚ್ 11, ಸೋಮವಾರ: ಬೆಳಿಗ್ಗೆ 10.44 ರಿಂದ 00.00
* 2024, ಮಾರ್ಚ್ 16, ಶನಿವಾರ: ಬೆಳಿಗ್ಗೆ 6.29 ರಿಂದ ಬೆಳಿಗ್ಗೆ 9.38
* 2024, ಮಾರ್ಚ್ 27 ಬುಧವಾರ: ಬೆಳಿಗ್ಗೆ 6.17 ರಿಂದ ಸಂಜೆ 4.16
* 2024, ಮಾರ್ಚ್ 29, ಶುಕ್ರವಾರ: ರಾತ್ರಿ 8.30 ರಿಂದ 00.00
* 2024, ಜುಲೈ 31, ಬುಧವಾರ: ಬೆಳಿಗ್ಗೆ 4 ರಿಂದ ಮಧ್ಯಾಹ್ನ 12.30
* 2024, ಜುಲೈ ಆಗಸ್ಟ್ 1, ಗುರುವಾರ: ಬೆಳಿಗ್ಗೆ 4 ರಿಂದ ಮಧ್ಯಾಹ್ನ 2.00
* 2024, ಆಗಸ್ಟ್ 9, ಶುಕ್ರವಾರ: 12.30 ರಿಂದ 00.00
* 2024, ಆಗಸ್ಟ್ 19, ಸೋಮವಾರ: ಬೆಳಿಗ್ಗೆ 9.08 ರಿಂದ ರಾತ್ರಿ 11.55
* 2024, ನವೆಂಬರ್ 2, ಶನಿವಾರ: ಬೆಳ್ಳಿಗ್ಗೆ 5.58 ರಿಂದ 00.00
* 2024, ನವೆಂಬರ್ 7, ಗುರುವಾರ: ಮಧ್ಯಾಹ್ನ 12.34 ರಿಂದ 00.00
* 2024, ನವೆಂಬರ್ 25, ಸೋಮವಾರ: ಬೆಳಿಗ್ಗೆ 6.52 ರಿಂದ 00.00
* 2024, ಡಿಸೆಂಬರ್ 5, ಗುರುವಾರ: 12.49 ರಿಂದ ಸಂಜೆ 5.26
* 2024, ಡಿಸೆಂಬರ್ 11, ಬುಧವಾರ: ಬೆಳಿಗ್ಗೆ 7.04 ರಿಂದ ಬೆಳಿಗ್ಗೆ 11.48
* 2024 ಡಿಸೆಂಬರ್ 25, ಬುಧವಾರ: ಬೆಳಿಗ್ಗೆ 7.12 ರಿಂದ ಮಧ್ಯಾಹ್ನ 3.22.
ಜ್ಯೋತಿಷಿಗಳ ಪ್ರಕಾರ ವಸಂತಕಾಲದ ಆಗಮನವನ್ನು ಸೂಚಿಸುವ ಮಕರ ಸಂಕ್ರಾಂತಿ ಹಬ್ಬವಾದ ಜನವರಿ 14 ಹಾಗೂ ಅಕ್ಟೋಬರ್ 12ರ ದಸರಾ ಹಬ್ಬದಂದು ಮನೆ ಖರೀದಿಸಲು ಯೋಗ್ಯ ದಿನ ಎಂದು ಜ್ಯೋತಿಷಿಗಳು ಹೇಳುತ್ತಾರೆ. 2023 ಡಿಸೆಂಬರ್ 16 ರಿಂದ 2024 ಜನವರಿವರೆಗೆ ಖಾರ್ಮಾಸ್ ಹಾಗೂ 2024 ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2ರವರೆಗೆ ರಿಯಲ್ ಎಸ್ಟೇಟ್ ಹಾಗೂ ಭೂ ವ್ಯವಹಾರಗಳಿಗೆ ಅನುಕೂಲವಾಗಿಲ್ಲ. ಈ ಸಮಯದಲ್ಲಿ ಮನೆ ಖರೀದಿ ಯೋಗ್ಯವಲ್ಲ ಎನ್ನುತ್ತಾರೆ ಜ್ಯೋತಿಷಿಗಳು.