ಪಿತೃ ಪಕ್ಷವನ್ನು ಯಾವ ಕಾರಣಕ್ಕೆ ಆಚರಿಸಬೇಕು, ಪಿತೃಗಳಿಗೆ ಶ್ರಾದ್ಧ ಮಾಡುವ ಹಿಂದಿನ ಧಾರ್ಮಿಕ ಕಥೆಯೇನು; ವಿವರ ಇಲ್ಲಿದೆ
ಬ್ರಹ್ಮಪುರಾಣದ ಪ್ರಕಾರ ಆಶ್ವೀಜಮಾಸದ ಕೃಷ್ಣಪಕ್ಷದಂದು ಯಮಧರ್ಮನು ಎಲ್ಲಾ ಪಿತೃಗಳನ್ನು ತನ್ನ ಪಾಶದಿಂದ ಮುಕ್ತಗೊಳಿಸುತ್ತಾನೆ. ತನ್ನ ಪರಿವಾರದವರು ಮಾಡುವ ಶ್ರಾದ್ಧದ ಭೋಜನವನ್ನು ಆಘ್ರಾಣಿಸಿ ಬರಲೆಂಬುದು ಇದರ ಉದ್ದೇಶ. ಪಿತೃ ಪಕ್ಷವನ್ನು ಯಾವ ಕಾರಣಕ್ಕೆ ಆಚರಿಸಬೇಕು, ಪಿತೃಗಳಿಗೆ ಶ್ರಾದ್ಧ ಮಾಡುವ ಹಿಂದಿನ ಧಾರ್ಮಿಕ ಕಥೆಯನ್ನು ವಿವರಿಸಿದ್ದಾರೆ ಜ್ಯೋತಿಷಿ ಎಚ್. ಸತೀಶ್
ಪ್ರತಿಯೊಬ್ಬ ತಂದೆ ತಾಯಿ ಬಯಸುವುದು ಉತ್ತಮ ಸಂತಾನವನ್ನು. ತಮ್ಮ ಕಣ್ಣಲ್ಲಿ ರಕ್ತಬಂದರೂ ಸರಿಯೆ ಮಕ್ಕಳ ಕಣ್ಣಲ್ಲಿ ನೀರು ಬರಬಾರದೆಂಬುದು ಅವರ ಆಸೆ. ಒಂಬತ್ತು ತಿಂಗಳು ಹೊತ್ತು, ಹೆತ್ತು ಸಾಕಿ ಸಲಹುವ ತಾಯಿ, ತನ್ನ ಜೀವವನ್ನೇ ತೇದು ಬೇಕು ಬೇಡಗಳನ್ನು ಪೂರೈಸುವ ತಂದೆ. ತಾವು ಚಿಕ್ಕಂದಿನಲ್ಲಿ ಪಟ್ಟಕಷ್ಟ ತಮ್ಮ ಮಕ್ಕಳಿಗೆ ಬೇಡವೆಂದು ಕಣ್ಣಲ್ಲಿ ಕಣ್ಣಿಟ್ಟು ಬೆಳೆಸುತ್ತಾರೆ. ಅವರ ಆಸೆ ತಮ್ಮ ಮಕ್ಕಳು ಮುಪ್ಪಿನಕಾಲದಲ್ಲಿ ತಮಗೆ ಆಸರೆಯಾಗುತ್ತಾರೆ ಎಂಬ ಬಲವಾದ ನಂಬಿಕೆ. ತಾಯಿಗಿಂತ ದೇವರಿಲ್ಲ, ತಂದೆಗಿಂತ ಗುರುವಿಲ್ಲ ಎಂಬ ನುಡಿಗೆ ತಕ್ಕಂತೆ ತಾಯಿ ಮಕ್ಕಳಿಗೆ ಪುರಾಣದ ಕಥೆಗಳನ್ನು ಹೇಳುತ್ತ, ನೀತಿ ನಿಯಮಗಳನ್ನು ಬೋಧಿಸಿ ಸನ್ಮಾರ್ಗವನ್ನು ತೋರುತ್ತಿದ್ದಳು. ಅದರ ಪರಿಣಾಮ ಮಕ್ಕಳು ಧರ್ಮ-ಕರ್ಮಗಳನ್ನು ಅರಿತು ಸಮಾಜಕ್ಕೆ ಶಕ್ತಿ ತುಂಬುತ್ತಿದ್ದರು. ತಂದೆಯು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತುಕೊಟ್ಟು ಅದಕ್ಕೆ ಬೇಕಾದ ಪರಿಕರದಿಂದ ಹಿಡಿದು ಅವರ ಆಸೆ, ಆಕಾಂಕ್ಷೆಗಳನ್ನು ಈಡೇರಿಸುತ್ತಾ, ತಪ್ಪುಗಳನ್ನು ತಿದ್ದಿ ಉತ್ತಮ ಹಾದಿಯಲ್ಲಿ ನಡೆಯುವಂತೆ ಮಾಡುತ್ತಿದ್ದನು.
ಪಿತೃ ಪಕ್ಷದ ಆಚರಣೆ
ಬ್ರಹ್ಮಪುರಾಣದಲ್ಲಿ ತಿಳಿಸಿರುವಂತೆ ಆಶ್ವೀಜಮಾಸದ ಕೃಷ್ಣಪಕ್ಷದಂದು ಯಮಧರ್ಮನು ಎಲ್ಲಾ ಪಿತೃಗಳನ್ನು ತನ್ನ ಪಾಶದಿಂದ ಮುಕ್ತಗೊಳಿಸುತ್ತಾನೆ. ಕಾರಣ ತನ್ನ ಪರಿವಾರದವರು ಮಾಡುವ ಶ್ರಾದ್ಧದ ಭೋಜನವನ್ನು ಆಘ್ರಾಣಿಸಿ ಬರಲೆಂಬುದು ಇದರ ಉದ್ದೇಶ. ಆದರೆ ಈ ಮಾಸದಲ್ಲಿ ಶ್ರಾದ್ಧ ಮಾಡದೆ ಇರುವವರ ಪಿತೃಗಳು ಅತೃಪ್ತರಾಗಿ ಕೋಪದಿಂದ ಹಿಂದಿರುಗುತ್ತಾರೆ. ಇದು ಪಿತೃಶಾಪಕ್ಕೆ ದಾರಿಯಾಗುತ್ತದೆ.
ಮಹಾಭಾರತದ ಯುದ್ಧದಲ್ಲಿ ಕರ್ಣನು ವೀರಸ್ವರ್ಗವನ್ನು ಸೇರಿದನು. ದಾನಕ್ಕೆ ಹೆಸರಾಗಿದ್ದ ಕರ್ಣನಿಗೆ ಹಸಿವು ಎಂದಾಗ ಇಂದ್ರನು ಬಂಗಾರವನ್ನು ಆಭರಣಗಳನ್ನು ನೀಡತೊಡಗಿದನು. ಹಸಿವನ್ನು ತಾಳಲಾರದೆ ಕರ್ಣನು ಇಂದ್ರನನ್ನು ಕರಿತು ನನಗೆ ಹಸಿವು ಎಂದರೆ ಆಹಾರ ನೀಡದೆ ಬಂಗಾರ, ಆಭರಣಗಳನ್ನು ಏಕೆ ನೀಡುತ್ತಿದ್ದೀ? ಎಂದು ಪ್ರಶ್ನಿಸಿದ. ಆಗ ದೇವೇಂದ್ರನು ಕರ್ಣ ನೀನು ಭೂಲೋಕದಲ್ಲಿ ಅನ್ನದಾನ ಮಾಡದೆ ಒಡವೆಗಳನ್ನು, ಬಂಗಾರವನ್ನು ದಾನಮಾಡಿದೆ. ಸತ್ತ ನಿನ್ನ ಪಿತೃಗಳಿಗೆ ಶ್ರಾದ್ಧ ಮಾಡಿ ಅನ್ನದಾನ ಮಾಡಿಲ್ಲ. ಅದರಿಂದಾಗಿ ನಿನಗೆ ಅನ್ನ ದೊರೆಯದು ಎಂದನು. ಆಗ ಕರ್ಣನು ನನಗೆ ನನ್ನ ಪಿತೃಗಳು ಯಾರೆಂದು ತಿಳಿದಿರಲಿಲ್ಲ ಎಂದನು. ಅದಕ್ಕೆ ಇಂದ್ರನು ನೀನು ಹದಿನೈದು ದಿನಗಳ ಕಾಲ ಭೂಲೋಕಕ್ಕೆ ಹೋಗಿ ಅಲ್ಲಿ ನಿನ್ನ ಪಿತೃಗಳಿಗೆ ಶ್ರಾದ್ಧವನ್ನು ಮಾಡಿ ಅನ್ನದಾನ ಮಾಡಿ ಬರುವಂತೆ ತಿಳಿಸಿದನು. ಅದನ್ನೇ ಪಿತೃಪಕ್ಷ ಎನ್ನುತ್ತಾರೆ.
ಪಿತೃಕಾರ್ಯಕ್ಕೆ ಶ್ರೇಷ್ಠವಾದ ತೀರ್ಥಕ್ಷೇತ್ರಗಳು
ಅಯೋಧ್ಯಾ, ಮಥುರಾ, ಮಾಯಾ, ಕಾಶಿ, ಕಾಂಚಿ, ಅವಂತೀ, ಪುರಿ, ದ್ವಾರಕಾ ನಗರಗಳೂ, ವಿಶ್ವೇಶ್ವರ,ಮಾಧವ, ದಂಡಪಾಣಿ, ಭೈರವ ಮುಂತಾದವರು ಆ ಕ್ಷೇತ್ರದ ಅಧಿದೇವತೆಗಳೂ, ಗಂಗಾ, ಭವಾನೀ, ಮಣಿಕರ್ಣಿಕಾ ಮುಂತಾದ ಪುಣ್ಯನದಿಗಳೂ, ಗೋಕರ್ಣ, ರಾಮಸೇತು, ಪ್ರಯಾಗ, ಕಾಶ್ಮೀರ ಸೋಮೇಶ್ವರ, ರುದ್ರಪ್ರಯಾಗ, ಶ್ರೀರಂಗ, ಕೇದಾರ ಮತ್ತು ಕುರುಕ್ಷೇತ್ರ ಇವುಗಳನ್ನು ಮನದಲ್ಲಿ ನೆನದರೇಸಾಕು ಆಸ್ಥಳದಲ್ಲಿ ಶ್ರಾದ್ಧಮಾಡಿದ ಪುಣ್ಯ ಲಭಿಸುವುದೆಂದು ಪುರಾಣಗಳಲ್ಲಿ ಹೇಳಲ್ಪಟ್ಟಿದೆ.
ಪಿತೃಪಕ್ಷದಲ್ಲಿ ವಿಶೇಷವಾಗಿ ಆಹಾರ ರ‍್ಪಣೆಗಳ ಮೂಲಕ ತಮ್ಮ ಪರ‍್ವಜರಿಗೆ ಗೌರವ ನೀಡುವುದು ಪದ್ಧತಿ. ಆದರೆ ಆಚರಣೆಯ ವಿಧಗಳು ಬೇರೆ ಬೇರೆ. ಇದರ ಅವತಿ 15 ದಿನಗಳು. ಇದನ್ನು ಪಿತೃಪಕ್ಷ,ಸೋಲಾ ಶ್ರದ್ಧಾ,ಮಹಾಲಯ ಪಕ್ಷ ಮತ್ತು ಅಪರ ಪಕ್ಷ ಎಂದು ಕರೆಯುತ್ತೇವೆ.
ಈ ಅವದಿಯಲ್ಲಿ ವಂಶಸ್ಥರು ಪಿತೃಲೋಕ ಬಿಟ್ಟು ಮನೆಗಳಲ್ಲಿ ಇರುವರೆಂದು ನಂಬಲಾಗಿದೆ. ಪರ‍್ವಜರ ಅನುಗ್ರಹ ಪಡೆಯಲು ಇದು ಸುಸಮಯ ಎನ್ನಾಲಾಗಿದೆ.
ಬರಹ: ಜ್ಯೋತಿಷಿ ಎಚ್. ಸತೀಶ್
ಇದನ್ನೂ ಓದಿ
Pitru Paksha 2023: ಪಿತೃ ಪಕ್ಷ ಆರಂಭಕ್ಕೆ ಕೆಲವೇ ದಿನಗಳು ಬಾಕಿ; ದಿನಾಂಕ, ಆಚರಣೆ, ಮಹತ್ವ ತಿಳಿಯಿರಿ
ಹಿಂದೂ ಕ್ಯಾಲೆಂಡರ್ ಪ್ರಕಾರ, ಅಶ್ವಿನಿ ಮಾಸದ ಕೃಷ್ಣ ಪಕ್ಷವನ್ನು ಪಿತೃ ಪಕ್ಷ ಎಂದು ಕರೆಯಲಾಗುತ್ತದೆ. ಪಿತೃ ಪಕ್ಷವು ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಿಂದ ಪ್ರಾರಂಭವಾಗಿ ಅಶ್ವಿನಿ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯವರೆಗೆ ಮುಂದುವರಿಯುತ್ತದೆ.
ಪಿತೃ ಪಕ್ಷ ಅಥವಾ ಶ್ರಾದ್ಧ ಎಂದರೆ ಹಿಂದೂಗಳು ತಮ್ಮ ಪೂರ್ವಜರನ್ನು ಸ್ಮರಿಸಲು ಇರುವ 15 ದಿನಗಳ ಆಚರಣೆಯಾಗಿದೆ. ಈ 15 ದಿನಗಳ ಅವಧಿಯಲ್ಲಿ ಒಂದು ದಿನ ಮಕ್ಕಳು ಪಿತೃಲೋಕದಲ್ಲಿರುವ ಪೂರ್ವಜರಿಗೆ ಶ್ರಾದ್ಧವನ್ನು ಮಾಡುತ್ತಾರೆ. ಸ್ವರ್ಗ ಮತ್ತು ಭೂಮಿಯ ನಡುವಿನ ಕ್ಷೇತ್ರವನ್ನು ಪಿತೃಲೋಕ ಎಂದು ಕರೆಯಲಾಗುತ್ತದೆ.