Pitru Paksha: ವಿದೇಶಗಳಲ್ಲಿ ತೀರಿಕೊಂಡವರು, ವ್ಯಕ್ತಿಯ ಮರಣದ ದಿನಾಂಕ, ಸಮಯ ತಿಳಿಯದವರು ಶ್ರಾದ್ಧಕರ್ಮಗಳನ್ನು ಯಾವಾಗ ಮಾಡಬೇಕು; ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Pitru Paksha: ವಿದೇಶಗಳಲ್ಲಿ ತೀರಿಕೊಂಡವರು, ವ್ಯಕ್ತಿಯ ಮರಣದ ದಿನಾಂಕ, ಸಮಯ ತಿಳಿಯದವರು ಶ್ರಾದ್ಧಕರ್ಮಗಳನ್ನು ಯಾವಾಗ ಮಾಡಬೇಕು; ವಿವರ

Pitru Paksha: ವಿದೇಶಗಳಲ್ಲಿ ತೀರಿಕೊಂಡವರು, ವ್ಯಕ್ತಿಯ ಮರಣದ ದಿನಾಂಕ, ಸಮಯ ತಿಳಿಯದವರು ಶ್ರಾದ್ಧಕರ್ಮಗಳನ್ನು ಯಾವಾಗ ಮಾಡಬೇಕು; ವಿವರ

Pitrkarma: ಶ್ರದ್ಧೆಯಿಂದ ಮಾಡುವ ಶ್ರಾದ್ಧ ಕಾರ್ಯಗಳಿಗೆ ಶ್ರಾದ್ಧಕರ್ಮ ಎನ್ನುತ್ತಾರೆ. ಪ್ರತಿ ವರ್ಷ ವರ್ಷಾಂತಿಕ ಅಥವಾ ತಿಥಿ ಕಾರ್ಯಕ್ರಮ ಮಾಡುವ ಮೂಲಕ ಸತ್ತವರಿಗೆ ಕ್ರಿಯಾವಿಧಿವಿಧಾನಗಳನ್ನು ಮಾಡಲಾಗುತ್ತದೆ. ಆದರೆ ಮರಣ ಹೊಂದಿದ ವ್ಯಕ್ತಿ ಯಾವ ದಿನಾಂಕ ಹಾಗೂ ಸಮಯದಲ್ಲಿ ತೀರಿಕೊಂಡರು ಎಂದು ತಿಳಿಯದೇ ಇದ್ದಾಗ ಯಾವಾಗ ಶ್ರಾದ್ಧಕರ್ಮ ಮಾಡಬೇಕು? ಉತ್ತರ ಇಲ್ಲಿದೆ.

ವಿದೇಶಗಳಲ್ಲಿ ತೀರಿಕೊಂಡವರು, ವ್ಯಕ್ತಿಯ ಮರಣದ ದಿನಾಂಕ, ಸಮಯ ತಿಳಿಯದವರು ಶ್ರಾದ್ಧಕರ್ಮಗಳನ್ನು ಯಾವಾಗ ಮಾಡಬೇಕು
ವಿದೇಶಗಳಲ್ಲಿ ತೀರಿಕೊಂಡವರು, ವ್ಯಕ್ತಿಯ ಮರಣದ ದಿನಾಂಕ, ಸಮಯ ತಿಳಿಯದವರು ಶ್ರಾದ್ಧಕರ್ಮಗಳನ್ನು ಯಾವಾಗ ಮಾಡಬೇಕು

ನಮ್ಮ ಕುಟುಂಬದಲ್ಲಿ ಮರಣ ಹೊಂದಿದ ವ್ಯಕ್ತಿಗಳಿಗೆ ಪ್ರತಿವರ್ಷ ವರ್ಷಾಂತಿಕ ಅಥವಾ ಶ್ರಾದ್ಧಕರ್ಮಗಳನ್ನು ಮಾಡಬೇಕು ಎಂದು ಶಾಸ್ತ್ರಗಳು ತಿಳಿಸಿವೆ. ನಮ್ಮ ಪೂರ್ವಜರ ಪ್ರಕಾರ ವರ್ಷವೂ ತಪ್ಪದೇ ಶ್ರಾದ್ಧ ಮಾಡಬೇಕು ಎನ್ನುತ್ತಾರೆ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಶರ್ಮಾ.

ಆದರೆ ಇತ್ತೀಚಿನ ಕಲಿಯುಗದಲ್ಲಿ ಕೆಲವೊಮ್ಮೆ ಸತ್ತವರಿಗೆ ಶ್ರಾದ್ಧ ಮಾಡುವುದು ಅಸಾಧ್ಯವಾಗುವಂತಹ ಪರಿಸ್ಥಿತಿ ಸಂಭವಿಸುತ್ತಿದೆ. ಹಾಗೆಯೆ ಕೊರೊನಾದಂತಹ ವಿಪತ್ತುಗಳು, ಮಳೆಹಾನಿ, ಗುಡ್ಡ ಕುಸಿತ ಇಂತಹವುಗಳಿಂದ ಜನರು ಹೇಗೆ, ಯಾವಾಗ, ಎಲ್ಲಿ ಸತ್ತರೂ ಎಂಬುದು ತಿಳಿಯುವುದಿಲ್ಲ.

ಇನ್ನು ವಿದೇಶಗಳಲ್ಲಿ ನಮ್ಮ ಸಂಬಂಧಿಕರು ಯಾರಾದರೂ ಸತ್ತರೆ ಅವರು ಯಾವ ಸಮಯ, ಯಾದ ದಿನಾಂಕದಂದು ತೀರಿಕೊಂಡರು ಎಂಬುದು ನಮ್ಮ ಅರಿವಿಗೆ ಬರುವುದಿಲ್ಲ.

ಹಾಗಾದರೆ ಹೀಗೆ ಅಸಹಜ ಸಂದರ್ಭ, ಅನಿರೀಕ್ಷಿತ ಸಾವುಗಳಾದಾಗ ಅವರ ಶ್ರಾದ್ಧಕರ್ಮಗಳನ್ನು ಮಾಡುವುದು ಹೇಗೆ ಎಂಬ ಬಗ್ಗೆ ವಿವರಣೆ ನೀಡಿದ್ದಾರೆ ಚಿಲಕಮರ್ತಿಗಳು.

ʼಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ವರ್ಷದ ತಿಥಿಯಂದು ಪಿತೃದೇವತಾ ಕಾರ್ಯಕ್ರಮ ನಡೆಸಲು ತೊಂದರೆ ಆಗಿರುತ್ತದೆ. ಅಂತಹ ಸಂದರ್ಭದಲ್ಲಿ ಹಾಗೂ ಮೇಲೆ ತಿಳಿಸಿದಂತಹ ಸಂದರ್ಭಗಳಲ್ಲಿ ಮಹಾಲಯ ಪಕ್ಷಗಳು ಪಿತೃಕರ್ಮಗಳನ್ನು ಆಚರಿಸಲು ಶ್ರೇಷ್ಠವಾಗಿವೆ. ಇವುಗಳಲ್ಲಿ ಮಹಾಲಯ ಪಕ್ಷದ ತ್ರಯೋದಶಿ, ಚತುರ್ದಶಿ, ಅಮಾವಾಸ್ಯೆಯ ತಿಥಿಗಳೂ ವಿಶೇಷವಾಗಿವೆ ಎಂದು ಚಿಲಕಮರ್ತಿಗಳು ಹೇಳುತ್ತಾರೆ.

ಈ ಮೂರರಲ್ಲಿ ಮಹಾಲಯ ಅಮಾವಾಸ್ಯೆ ದಿನ ಮೃತರಾದವರಿಗೆ ತರ್ಪಣ, ಪಿಂಡ ಪ್ರಧಾನ, ಶ್ರಾದ್ಧ ಕರ್ಮಗಳನ್ನು ಮಾಡಿದರೆ ಶ್ರಾದ್ಧ, ತರ್ಪಣ ಮಾಡಿದ ಫಲ ದೊರೆಯುತ್ತದೆ ಎಂದು ಅವರು ಹೇಳುತ್ತಾರೆ.

ವಿದೇಶ ಅಥವಾ ಹೊರ ರಾಜ್ಯಗಳಲ್ಲಿ ತೀರಿಕೊಂಡವರ ದಿನಾಂಕ, ಸಮಯ ತಿಳಿಯದೇ ಇದ್ದವರು ಮಹಾಲಯ ಅಮಾವಾಸ್ಯೆಯಂದು ಶಾಸ್ತ್ರೋಕ್ತವಾಗಿ ವಿಧಿವಿಧಾನವನ್ನು ನಡೆಸಿದರೆ ಅದರಿಂದ ಪೂರ್ಣಫಲ ದೊರೆಯುತ್ತದೆ ಎಂದು ಚಿಲಕಮರ್ತಿಗಳು ಹೇಳುತ್ತಾರೆ.

ಇದನ್ನೂ ಓದಿ

Mahalaya Amavasya 2023: ಮಹಾಲಯ ಅಮಾವಾಸ್ಯೆಯನ್ನು ಏಕೆ ಆಚರಿಸಬೇಕು, ಕ್ರಮ ಹೇಗಿರಬೇಕು, ಈ ದಿನದ ಪ್ರಾಮುಖ್ಯವೇನು; ವಿವರ ಇಲ್ಲಿದೆ

ಮನುಷ್ಯರಾದ ನಾವು ದೇವತಾರಾಧನೆಗೆ ಎಷ್ಟು ಪ್ರಾಮುಖ್ಯ ನೀಡುತ್ತೇವೋ ಅಷ್ಟೇ ಪ್ರಾಮುಖ್ಯವನ್ನು ಪಿತೃದೇವತೆಗಳಿಗೆ ನೀಡಬೇಕು ಎಂದು ಜ್ಯೋತಿಷಿ, ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಶರ್ಮಾ ಹೇಳುತ್ತಾರೆ. ನಮ್ಮ ಸನಾತನ ಧರ್ಮದಲ್ಲಿ ಮೃತರಿಗೆ ಪೂರ್ವಿಕರ ಸಂಸ್ಕಾರ, ತರ್ಪಣ ಬಿಡುವುದು ಸಂಪ್ರದಾಯ. ಮನೆಯಲ್ಲಿ ಯಾರಾದರೂ ಸತ್ತಾಗ ಕೆಲವು ಕಾರಣಗಳಿಂದ ಪಿತೃಕರ್ಮಗಳನ್ನು ಮಾಡಲಾಗದೇ ಇದ್ದರೆ, ಕೆಲವೊಮ್ಮೆ ಅವಘಡಗಳಲ್ಲಿ ಸತ್ತಾಗ ಅವರು ಯಾವಾಗ ಸತ್ತರು ಎಂಬ ಸಮಯ, ಗಳಿಗೆ ತಿಳಿಯದ ಸಂದರ್ಭದಲ್ಲಿ ಪಿತೃಪಕ್ಷ ಮಾಸದ ಭಾದ್ರಪದದಂದು ಕಾರ್ಯಗಳನ್ನು ಮಾಡುವುದು ಯೋಗ್ಯ ಎಂದು ಚಿಲಕಮರ್ತಿಗಳು ಹೇಳುತ್ತಾರೆ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.