Shattila Ekadashi 2025: ಷಟ್ತಿಲಾ ಏಕಾದಶಿ ಯಾವಾಗ? ಈ ದಿನ ವಿಷ್ಣುವಿನ ಪೂಜಿಸಿದರೆ ಇಷ್ಟಾರ್ಥ ಸಿದ್ಧಿ; ಪೂಜಾ ಸಮಯ, ವಿಧಿವಿಧಾನಗಳ ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Shattila Ekadashi 2025: ಷಟ್ತಿಲಾ ಏಕಾದಶಿ ಯಾವಾಗ? ಈ ದಿನ ವಿಷ್ಣುವಿನ ಪೂಜಿಸಿದರೆ ಇಷ್ಟಾರ್ಥ ಸಿದ್ಧಿ; ಪೂಜಾ ಸಮಯ, ವಿಧಿವಿಧಾನಗಳ ವಿವರ

Shattila Ekadashi 2025: ಷಟ್ತಿಲಾ ಏಕಾದಶಿ ಯಾವಾಗ? ಈ ದಿನ ವಿಷ್ಣುವಿನ ಪೂಜಿಸಿದರೆ ಇಷ್ಟಾರ್ಥ ಸಿದ್ಧಿ; ಪೂಜಾ ಸಮಯ, ವಿಧಿವಿಧಾನಗಳ ವಿವರ

Shattila Ekadashi 2025 Date: ಮಾಘ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ಷಟ್ತಿಲಾ ಏಕಾದಶಿ ಆಚರಿಸಲಾಗುತ್ತದೆ. ಈ ದಿನ ವಿಷ್ಣುವಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಉಪವಾಸ ಮಾಡುವುದರಿಂದ ಸಂತೋಷ, ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ.

Shattila Ekadashi 2025: ಷಟ್ತಿಲಾ ಏಕಾದಶಿ
Shattila Ekadashi 2025: ಷಟ್ತಿಲಾ ಏಕಾದಶಿ (Photo Credit: hindubhagwan.com/)

Shattila Ekadashi 2025 Date:ಜನವರಿ ತಿಂಗಳಲ್ಲಿ ಬರುವ ಎರಡನೇ ಏಕಾದಶಿಯನ್ನು ಷಟ್ತಿಲಾ ಏಕಾದಶಿ ಎಂದು ಕರೆಯಲಾಗುತ್ತದೆ. ಮಾಘ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ಷಟ್ತಿಲಾ ಏಕಾದಶಿಯನ್ನು ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ ಈ ವರ್ಷ ಷಟ್ತಿಲಾ ಏಕಾದಶಿಯು ಜನವರಿ 25ರಂದು ಬರುತ್ತದೆ. ವಿಷ್ಣುವನ್ನು ಸರಿಯಾದ ವಿಧಿವಿಧಾನಗಳೊಂದಿಗೆ ಈ ದಿನದಂದು ಪೂಜಿಸಲಾಗುತ್ತದೆ. ಹರಿಯನ್ನು ಮೆಚ್ಚಿಸಲು ಈ ದಿನವನ್ನು ಬಹಳ ವಿಶೇಷ ಮತ್ತು ಮುಖ್ಯವೆಂದು ಪರಿಗಣಿಸಲಾಗಿದೆ. ಷಟ್ತಿಲಾ ಏಕಾದಶಿಯಂದು ಉಪವಾಸ ಮಾಡುವುದರಿಂದ ಸಂತೋಷ, ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಷಟ್ತಿಲಾ ಏಕಾದಶಿ ದಿನಾಂಕ, ಪೂಜೆಗೆ ಶುಭ ಸಮಯ, ಪೂಜಾ ವಿಧಾನ, ಉಪವಾಸದ ಸಮಯದ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಷಟ್ತಿಲಾ ಏಕಾದಶಿ 2025 ದಿನಾಂಕ

ಈ ವರ್ಷ ಷಟ್ತಿಲಾ ಏಕಾದಶಿಯನ್ನು ಜನವರಿ 25, 2025ರಂದು ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ ಏಕಾದಶಿ ತಿಥಿ ಜನವರಿ 24ರಂದು ಸಂಜೆ 07:25ಕ್ಕೆ ಪ್ರಾರಂಭವಾಗಿ ಜನವರಿ 25ರಂದು ರಾತ್ರಿ 08:31ರವರೆಗೆ ಇರುತ್ತದೆ.

ಷಟ್ತಿಲಾ ಏಕಾದಶಿ ಶುಭ ಮುಹೂರ್ತ

  • ಏಕಾದಶಿ ತಿಥಿ ಆರಂಭ: ಜನವರಿ 24, 2025ರಂದು 19:25 ಕ್ಕೆ ಗಂಟೆಗೆ
  • ಏಕಾದಶಿ ತಿಥಿ ಕೊನೆಗೊಳ್ಳುವ ಸಮಯ: ಜನವರಿ 25, 2025ರಂದು 20:31 ಗಂಟೆಗೆ.
  • ದ್ವಾದಶಿಯ ಅಂತ್ಯದ ಸಮಯ: 20:54 ಗಂಟೆ

ಷಟ್ತಿಲಾ ಏಕಾದಶಿಯಂದು ವಿಷ್ಣುವನ್ನು ಹೇಗೆ ಪೂಜಿಸಬೇಕು?

  • ಸ್ನಾನ ಮಾಡಿ ಬಂದು ದೇವರ ಕೋಣೆಯನ್ನು ಸ್ವಚ್ಛಗೊಳಿಸಿ.
  • ಶ್ರೀ ಹರಿಗೆ ಜಲಾಭಿಷೇಕ ಮಾಡಿ
  • ಭಗವಂತನಿಗೆ ಪಂಚಾಮೃತ ಮತ್ತು ಗಂಗಾ ಜಲದಿಂದ ಅಭಿಷೇಕ ಮಾಡಿ.
  • ಹಳದಿ ಶ್ರೀಗಂಧ ಮತ್ತು ಹಳದಿ ಹೂವುಗಳನ್ನು ಅರ್ಪಿಸಿ.
  • ತುಪ್ಪದ ದೀಪ ಹಚ್ಚಿ
  • ಈ ದಿನ ಸಾಧ್ಯವಾದರೆ ಉಪವಾಸ ಮಾಡಿ
  • ಷಟ್ತಿಲಾ ಏಕಾದಶಿಯ ಉಪವಾಸದ ಕಥೆಯನ್ನು ಓದಿ
  • ಓಂ ನಮೋ ಭಗವತೇ ವಾಸುದೇವಾಯ ಮಂತ್ರವನ್ನು ಪಠಿಸಿ.
  • ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಭಕ್ತಿಯಿಂದ ಆರತಿ ಮಾಡಿ.
  • ದೇವರಿಗೆ ತುಳಸಿ ಎಲೆಗಳ ಜೊತೆಗೆ ಪ್ರಸಾದವನ್ನು ಅರ್ಪಿಸಿ.
  • ಪೂಜೆಯ ಕೊನೆಯಲ್ಲಿ ಭಕ್ತಿಯಿಂದ ಪ್ರಾರ್ಥಿಸಿ ನಿಮ್ಮ ಕೋರಿಕೆಗಳನ್ನು ಸಲ್ಲಿಸಿ.

ಡಿಸ್‌ಕ್ಲೈಮರ್‌/ ಹಕ್ಕು ನಿರಾಕರಣೆ

ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ನಿರ್ದಿಷ್ಟ ಪೂಜಾ ವಿಧಿವಿಧಾನಗಳ ಕುರಿತು ಲಭ್ಯವಿರುವ ಮಾಹಿತಿಗಳ ಆಧಾರದಲ್ಲಿ ಈ ಲೇಖನ ಬರೆಯಲಾಗಿದೆ. ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಂಪೂರ್ಣವಾಗಿ ಸತ್ಯ ಮತ್ತು ನಿಖರವಾಗಿದೆ ಎಂದು ನಾವು ಹೇಳಿಕೊಳ್ಳುವುದಿಲ್ಲ. ವಿವರವಾದ ಮತ್ತು ಹೆಚ್ಚಿನ ಮಾಹಿತಿಗಾಗಿ ಧಾರ್ಮಿಕ ಪಂಡಿತರು, ಆರ್ಚಕರು ಅಥವಾ ಬಲ್ಲವರನ್ನು ಸಂಪರ್ಕಿಸಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.