Garuda Purana: ಯಾರು ಯಾರಿಗೆ ದಾನ ಮಾಡಬೇಕು? ಪ್ರತಿಫಲ ಬಯಸದೇ ದಾನ ಮಾಡುವ ಮಹತ್ವ ಹೇಳುತ್ತೆ ಗರುಡ ಪುರಾಣ
Garuda Purana in Kannada: ಧರ್ಮದಲ್ಲಿಯೂ ದಾನವನ್ನು ಪುಣ್ಯ ಕಾರ್ಯವೆಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಗರುಡ ಪುರಾಣದ ಪ್ರಕಾರ ದಾನದ ಮಹತ್ವವೇನು, ಯಾರು ಯಾರಿಗೆ ದಾನ ಮಾಡಬೇಕು ಎಂದು ತಿಳಿಯೋಣ.
ಹಿಂದೂ ಧರ್ಮದಲ್ಲಿರುವ ಒಟ್ಟೂ 18 ಪುರಾಣಗಳಲ್ಲಿ ಗರುಡ ಪುರಾಣ ಕೂಡ ಒಂದು. ಗರುಡ ಪುರಾಣವು ಕೇವಲ ಮನುಷ್ಯನ ಸಾವಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದು ಬದುಕಿದ್ದಾಗ ಮನುಷ್ಯ ಮಾಡಬೇಕಾದ ಒಳ್ಳೆಯ ಕೆಲಸಗಳನ್ನೂ ಒತ್ತಿ ಹೇಳಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಪ್ರತಿಯೊಬ್ಬರೂ ದಾನ ಮಾಡಬೇಕು. ದಾನ ಮಾಡುವುದರಿಂದ ಹೆಚ್ಚಿನ ಪುಣ್ಯ ಬರುತ್ತದೆ ಎಂದು ನಂಬಲಾಗಿದೆ. ಹಿಂದೂ ಧರ್ಮ ಮಾತ್ರವಲ್ಲದೇ ಎಲ್ಲಾ ಧರ್ಮದಲ್ಲಿಯೂ ದಾನವನ್ನು ಪುಣ್ಯ ಕಾರ್ಯವೆಂದು ಪರಿಗಣಿಸಲಾಗುತ್ತದೆ.
ಈ ಸಂದರ್ಭದಲ್ಲಿ ಗರುಡ ಪುರಾಣದ ಪ್ರಕಾರ ದಾನದ ಮಹತ್ವವೇನು, ಯಾರು ಯಾರಿಗೆ ದಾನ ಮಾಡಬೇಕು ಎಂದು ತಿಳಿಯೋಣ. ಬಡವರಿಗೆ ಮತ್ತು ಅಸಹಾಯಕರಿಗೆ ತಮ್ಮ ಕೈಲಾದಷ್ಟು ದಾನ ಮಾಡುವವರು ಈ ಜನ್ಮದಲ್ಲಿ ಮಾತ್ರವಲ್ಲದೇ ಮುಂದಿನ ಜನ್ಮದಲ್ಲೂ ಸಾಕಷ್ಟು ಪುಣ್ಯವನ್ನು ಪಡೆಯುತ್ತಾರೆ ಎಂದು ಗರುಡ ಪುರಾಣದಲ್ಲಿ ವಿವರಿಸಲಾಗಿದೆ.
ಗರುಡ ಪುರಾಣದ ಪ್ರಕಾರ ಬಡವರು ಎಂದಿಗೂ ದಾನ ಮಾಡಬಾರದು. ಬಡವನಾಗಿದ್ದಾಗ ದಾನ ಮಾಡುವುದರಿಂದ ಮತ್ತಷ್ಟು ಬಡವನಾಗಬಹುದು. ಆದ್ದರಿಂದ ಬಡವನಾಗಿದ್ದುಕೊಂಡು ಖ್ಯಾತಿಗಾಗಿ ದಾನ ಮಾಡುವುದನ್ನು ತಪ್ಪಿಸಿ. ಒಬ್ಬ ವ್ಯಕ್ತಿಯು ತಾನು ಗಳಿಸಿದ ಲಾಭದಲ್ಲಿ ಹತ್ತು ಪ್ರತಿಶತದವರೆಗಾದರೂ ದಾನ ಮಾಡಬೇಕು. ಉಳ್ಳವನಿಗೆ ದಾನ ಮಾಡುವುದು ದಾನವಾಗುವುದಿಲ್ಲ, ಅದು ಉಡುಗೊರೆಯಾಗುತ್ತದೆ. ಅಗತ್ಯವಿರುವವರಿಗೆ ದಾನ ಮಾಡಿ. ಆಗ ಮಾತ್ರ ನಿಮ್ಮ ದಾನಕ್ಕೆ ಸೂಕ್ತವಾದ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ.
ಯಾರ ಬಳಿ ಹೆಚ್ಚು ಹಣವಿದೆಯೋ ಅವರು ಖಂಡಿತವಾಗಿಯೂ ಬಡವರಿಗೆ ಸಹಾಯ ಮಾಡಬೇಕು. ಇದರಿಂದ ನಿಮಗೆ ಮತ್ತಷ್ಟು ಒಳ್ಳೆಯದೇ ಆಗುತ್ತದೆ. ಅಲ್ಲದೆ ಪೋಷಕರು ತಮ್ಮ ಮಕ್ಕಳಿಗೆ ಕೂಡ ದಾನದ ಮಹತ್ವವನ್ನು ತಿಳಿಸಿ ಹೇಳಬೇಕು. ಹಾಗೆಯೇ ನಿಮ್ಮ ಸ್ವಂತ ಲಾಭಕ್ಕಾಗಿ, ಪ್ರತಿಷ್ಠೆಗಾಗಿ ದಾನ ಮಾಡಬೇಡಿ. ಪ್ರತಿಫಲ ಬಯಸದೆಯೇ ದಾನ ಮಾಡಿದಾಗ ಮಾತ್ರ ಒಳ್ಳೆಯದಾಗುತ್ತದೆ.
ಅನ್ಯಾಯ ಮಾಡುವವರಿಗೆ ಮತ್ತು ಮೋಸಗಾರರಿಗೆ ಎಂದಿಗೂ ದಾನ ಮಾಡಬೇಡಿ. ಅಂತಹವರಿಂದ ಆದಷ್ಟು ದೂರವಿರಿ. ಕಷ್ಟದಲ್ಲಿರುವ ಒಳ್ಳೆಯ ಅಥವಾ ಪ್ರಾಮಾಣಿಕ ಜನರಿಗೆ ದಾನ ಮಾಡಿದರೆ ಅವರು ನಿಮಗೆ ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ನೀಡುತ್ತಾರೆ.
ಗಮನಿಸಿ: ಇದು ನಂಬಿಕೆ, ಪುರಾಣ ಅಥವಾ ಶಾಸ್ತ್ರವನ್ನು ಆಧರಿಸಿದ ಬರಹವಾಗಿರುತ್ತದೆ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.