ಜ್ಯೋತಿಷ್ಯಶಾಸ್ತ್ರದ ಪ್ರಕಾರ ಬೆಳಿಗ್ಗೆ ಬೇಗ ಏಳುವುದರಿಂದ ದೇಹಕ್ಕಾಗುವ ಅದ್ಭುತ ಪ್ರಯೋಜನಗಳಿವು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜ್ಯೋತಿಷ್ಯಶಾಸ್ತ್ರದ ಪ್ರಕಾರ ಬೆಳಿಗ್ಗೆ ಬೇಗ ಏಳುವುದರಿಂದ ದೇಹಕ್ಕಾಗುವ ಅದ್ಭುತ ಪ್ರಯೋಜನಗಳಿವು

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಬೆಳಿಗ್ಗೆ ಬೇಗ ಏಳುವುದರಿಂದ ದೇಹಕ್ಕಾಗುವ ಅದ್ಭುತ ಪ್ರಯೋಜನಗಳಿವು

ಜ್ಯೋತಿಷ್ಯದ ಪ್ರಕಾರ ರಾಹು, ಚಂದ್ರ ಹಾಗೂ ಶನಿಯ ಪ್ರಭಾವ ಇರುವ ವ್ಯಕ್ತಿಗಳಿಗೆ ಬೆಳಿಗ್ಗೆ ಬೇಗನೇ ಏಳುವುದು ಕಷ್ಟವಾಗಬಹುದು. ರಾಹು ಹಾಗೂ ಶನಿ ಗ್ರಹಗಳು ರಾತ್ರಿ ವೇಳೆ ವ್ಯಕ್ತಿಗಳು ಹೆಚ್ಚು ಕ್ರಿಯಾಶೀಲರನ್ನಾಗಿರುವಂತೆ ಮಾಡುತ್ತದೆ. ಆ ಕಾರಣಕ್ಕೆ ಹಗಲಿನ ವೇಳೆ ಹೆಚ್ಚು ನಿದ್ದೆ ಮಾಡುತ್ತಾರೆ. ಇದು 35 ವರ್ಷದ ನಂತರ ಮಾನಸಿಕ ಆರೋಗ್ಯ ಸ್ಥಿತಿ ಕೆಡಲು ಕಾರಣವಾಗುತ್ತದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಳಿಗ್ಗೆ ಬೇಗ ಏಳುವುದು ಹಲವು ಕಾರಣಗಳಿಗೆ ಉತ್ತಮ. ಅನಾದಿ ಕಾಲದಿಂದಲೂ ನಸುಕಿನಲ್ಲೇ ಎದ್ದು ನಮ್ಮ ದಿನಚರಿ ಆರಂಭಿಸುವುದು ಹಲವು ಕಾರಣಗಳಿಗೆ ಉತ್ತಮ ಎಂದು ಹೇಳುತ್ತಿದ್ದರು, ಅಲ್ಲದೆ ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಹಿಂದಿನಿಂದಲೂ ರೂಢಿಯಲ್ಲಿತ್ತು. ಬೆಳಿಗ್ಗೆ ಬೇಗ ಏಳುವುದರಿಂದ ಆರೋಗ್ಯ, ಆಧ್ಯಾತ್ಮ ಮಾತ್ರವಲ್ಲ ಜ್ಯೋತಿಷ್ಯದ ದೃಷ್ಟಿಯಿಂದಲೂ ಹಲವು ಪ್ರಯೋಜನಗಳನ್ನು ಹೊಂದಿದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳು ಹಾಗೂ ನಕ್ಷತ್ರಗಳು ತಮ್ಮ ಹಣೆಬರಹದ ಮೇಲೆ ಪ್ರಭಾವ ಬೀರುತವಂತೆ ನಾವು ಏಳುವ ಸಮಯ ಹಾಗೂ ತಮ್ಮ ದಿನಚರಿಯು ಮೇಲೂ ಇವು ಪ್ರಭಾವ ಬೀರುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಹು, ಚಂದ್ರ ಅಥವಾ ಶನಿ ಗ್ರಹಗಳ ಪ್ರಭಾವ ಇರುವ ವ್ಯಕ್ತಿಗಳು ಬೆಳಿಗ್ಗೆ ಬೇಗ ಏಳುವ ವಿಚಾರದಲ್ಲಿ ಸವಾಲುಗಳನ್ನು ಎದುರಿಸಬಹುದು.

ಬೆಳಿಗ್ಗೆ ಬೇಗ ಏಳುವುದರಿಂದಾಗುವ ಜ್ಯೋತಿಷ್ಯ ಪ್ರಯೋಜನಗಳಿವು

ಜ್ಯೋತಿಷ್ಯದ ಪ್ರಕಾರ ರಾಹು ಹಾಗೂ ಶನಿಯಂತಹ ಕೆಲವು ಗ್ರಹಗಳು ರಾತ್ರಿ ವೇಳೆ ಮನುಷ್ಯರನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡುತ್ತವೆ ಎಂದು ನಂಬಲಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ಚಂದ್ರನ ಪ್ರಭಾವವು ರಾತ್ರಿ ವೇಳೆ ಜನರು ಭಾವನಾತ್ಮಕ ಸ್ಥಿತಿಗಳ ಮೇಲೆ ಪ್ರಭಾವ ಬೀರಬಹುದು. ಜ್ಯೋತಿಷಿಗಳ ಪ್ರಕಾರ 35 ವರ್ಷದ ನಂತರ ನಿದ್ದೆ ಸಮಸ್ಯೆ ಕಾಡುವವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎನ್ನುತ್ತಾರೆ.

ಜ್ಯೋತಿಷ್ಯ ಮತ್ತು ವಿಜ್ಞಾನ

ಜ್ಯೋತಿಷ್ಯದ ಕೆಲವು ಪರಿಕಲ್ಪನೆಗಳು ವೈಜ್ಞಾನಿಕ ಸಂಶೋಧನೆಗಳೊಂದಿಗೆ ಹೊಂದಿಕೆಯಾಗುತ್ತವೆ. ಬೆಳಗಿನ ಜಾವಕ್ಕೂ ಮೊದಲು ಅಂದರೆ 4 ಗಂಟೆಯ ಹೊತ್ತಿಗೆ ಬೀಸುವ ತಂಪಾದ ಗಾಳಿಯು ಉತ್ತಮ ನಿದ್ದೆಗೆ ಸಹಕಾರಿ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಈ ಉಲ್ಲಾಸಕರ ಗಾಳಿಯು ನಿದ್ದೆಯನ್ನು ಸೆಳೆಯುತ್ತದೆ. ಇದು ಮನುಷ್ಯನನ್ನು ನಿದ್ದೆಯಿಂದ ಎಚ್ಚರಿಸುವ ಅಥವಾ ಕ್ರಿಯಾಶೀಲರನ್ನಾಗಿಸುವ ಕಾರ್ಟಿಸೋಲ್‌ ಬಿಡುಗಡೆಯ ಜೊತೆ ಸೇರಿಕೊಳ್ಳುತ್ತದೆ. ಆಕಾಶಕಾಯಗಳು ಮತ್ತು ನಮ್ಮ ಜೈವಿಕ ಲಯಗಳ ನಡುವೆ ಪರಸ್ಪರ ಸಂಬಂಧವಿದ್ದು, ಇದು ಒಂದು ಆಕರ್ಷಕ ಕೊಂಡಿಯಾಗಿದೆ. ಚಂದ್ರನ ಪ್ರಭಾವವು ರಾತ್ರಿಯ ಸಮಯದಲ್ಲಿ ಜನರ ಭಾವನಾತ್ಮಕ ಸ್ಥಿತಿಗಳ ಮೇಲೆ ಪರಿಣಾಮ ಬೀರಬಹುದು. ಜ್ಯೋತಿಷಿಗಳು 35 ವರ್ಷ ವಯಸ್ಸಿನ ನಂತರ ಮಾನಸಿಕ ಆರೋಗ್ಯದ ಮೇಲೆ ಸಂಭಾವ್ಯ ಪರಿಣಾಮಗಳು ಸೂಚಿಸುತ್ತಾರೆ.

ಬೆಳಿಗ್ಗೆ ಬೇಗ ಏಳುವುದರಿಂದಾಗುವ ಆರೋಗ್ಯ ಪ್ರಯೋಜನಗಳು

ಬೆಳಗಿನ ಜಾವದ ಗಾಳಿಯನ್ನು ಉಸಿರಾಡುವುದರಿಂದ ಇದು ತಮ್ಮ ರಕ್ತದೊಂದಿಗೆ ಸೇರಿ ಇದು ಒಟ್ಟಾರೆ ಯೋಗಕ್ಷೇಮ ಸುಧಾರಣೆಗೆ ಸಹಾಯ ಮಾಡುತ್ತದೆ. ರಕ್ತಶುದ್ಧಿಯಾಗುವುದು ಕೂಡ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುವುದು, ರಕ್ತದ pH ಮಟ್ಟವನ್ನು ಸಮತೋಲನಗೊಳಿಸುವುದು, ಸುಧಾರಿತ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಒಳಗೊಂಡಿರುತ್ತದೆ.

ತಾತ್ವಿಕ ಪರಿಣಾಮಗಳು ಮಾತ್ರವಲ್ಲ, ಅದನ್ನು ಮೀರಿ ಬೇಗ ಏಳುವುದರಿಂದ ಹಲವು ರೀತಿಯ ಪ್ರಾಯೋಗಿಕ ಪ್ರಯೋಜನಗಳನ್ನು ಹೊಂದಿರುತ್ತದೆ. ಬೆಳಿಗ್ಗೆ ಬೇಗ ಏಳುವವರು ಹೆಚ್ಚು ಜಾಗರೂಕರಾಗಿರುತ್ತಾರೆ. ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೆಳಿಗ್ಗೆ ಏಳುವುದು ಸಹಕಾರಿ. ಬೆಳಿಗ್ಗೆ ಬೇಗ ಏಳುವವರು ದಿನವಿಡೀ ಕ್ರಿಯಾಶೀಲರಾಗಿರುತ್ತಾರೆ. ಬೆಳಿಗ್ಗೆ ಬೇಗ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ನಿದ್ದೆಯ ಗುಣಮಟ್ಟದ ಸುಧಾರಿಸಲು ಸಹಕಾರಿ. ಇದು ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ.

ಒಟ್ಟಾರೆ ಬೆಳಿಗ್ಗೆ ಬೇಗ ಏಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆಗೆ ಸಾಕಷ್ಟು ಪ್ರಯೋಜನಕಾರಿ. ಇದರಿಂದ ನಮ್ಮ ಒಟ್ಟಾರೆ ದೈಹಿಕ ಯೋಗಕ್ಷೇಮ ಸುಧಾರಿಸುತ್ತದೆ. ಇದರಿಂದ ದೇಹದಲ್ಲಿ ಉತ್ಪಾದಕತೆಯಲ್ಲೂ ಕ್ರಿಯಾಶೀಲವನ್ನು ಕಾಣಬಹುದಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.