Shankha: ದಕ್ಷಿಣಾಮೂರ್ತಿ ಶಂಖದ ಮಹತ್ವ, ಇದನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದಾಗುವ ಲಾಭವೇನು? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Shankha: ದಕ್ಷಿಣಾಮೂರ್ತಿ ಶಂಖದ ಮಹತ್ವ, ಇದನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದಾಗುವ ಲಾಭವೇನು? ಇಲ್ಲಿದೆ ಮಾಹಿತಿ

Shankha: ದಕ್ಷಿಣಾಮೂರ್ತಿ ಶಂಖದ ಮಹತ್ವ, ಇದನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದಾಗುವ ಲಾಭವೇನು? ಇಲ್ಲಿದೆ ಮಾಹಿತಿ

ಲಕ್ಷ್ಮೀದೇವಿಯು ಶಂಖದಲ್ಲಿ ನೆಲೆಸಿರುತ್ತಾಳೆ ಎಂಬುದು ಜ್ಯೋತಿಷ್ಯಶಾಸ್ತ್ರದ ನಂಬಿಕೆ. ಆದರೆ ಮನೆಯಲ್ಲಿ ಯಾವ ಶಂಖ ಇದ್ದರೆ ಒಳ್ಳೆಯದು, ದಕ್ಷಿಣಾಮೂರ್ತಿ ಶಂಖದ ಮಹತ್ವವೇನು? ಎಂಬ ಬಗ್ಗೆ ಖ್ಯಾತಿ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಶರ್ಮಾ ಅವರು ನೀಡಿದ ವಿವರಣೆ ಇಲ್ಲಿದೆ.

ದಕ್ಷಿಣಾಮೂರ್ತಿ ಶಂಖ
ದಕ್ಷಿಣಾಮೂರ್ತಿ ಶಂಖ

ʼಭಾರತೀಯ ಸಂಪ್ರದಾಯ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಶಂಖಕ್ಕೆ ವಿಶೇಷ ಸ್ಥಾನವಿದೆ. ನಮ್ಮ ಪುರಾಣಗಳಲ್ಲಿ ಭಗವಾನ್ ವಿಷ್ಣು ಶಂಖ ಚಕ್ರಗಳನ್ನು ಧರಿಸುತ್ತಾನೆ. ಶಿವನು ಸಹ ಹಲವು ಸಂದರ್ಭಗಳಲ್ಲಿ ಶಂಖ ಚಕ್ರಗಳನ್ನು ಧರಿಸುತ್ತಾನೆ. ಮಹಾಭಾರತದಲ್ಲಿ ಶ್ರೀಕೃಷ್ಣನು ಪಾಂಚಜನ್ಯ ಎಂಬ ಶಂಖವನ್ನು ಬಳಸಿದ್ದು ಶಂಖದ ಪ್ರಾಮುಖ್ಯತೆಯನ್ನು ತೋರಿಸುತ್ತದೆʼ ಎಂದು ಖ್ಯಾತ ಜ್ಯೋತಿಷಿಗಳಾದ ಚಿಲಕಮೃರ್ತಿ ಪ್ರಭಾಕರ ಶರ್ಮಾ ಹೇಳುತ್ತಾರೆ.

ಶಂಖದ ಮೂಲಕ ನೀರು ಸುರಿದು, ದೇವರಿಗೆ ಅಭಿಷೇಕ ಮಾಡುವುದರಿಂದ ಶುಭವಾಗುತ್ತದೆ ಎಂಬುದು ನಂಬಿಕೆ. ಶಂಖದಿಂದ ತೀರ್ಥವನ್ನೂ ನೀಡಲಾಗುತ್ತದೆ. ಶಂಖವು ಲಕ್ಷ್ಮೀದೇವಿಯ ಮೂರ್ತರೂಪ ಎಂದು ಪುರಾಣಗಳು ಹೇಳುತ್ತವೆ. ಶಂಖವು ಲಕ್ಷ್ಮೀದೇವಿಯ ಜೊತೆಗೆ ಪಾಲಸಮುದ್ರದಲ್ಲಿ ಕಾಣಿಸಿಕೊಂಡಿತ್ತು ಎಂಬ ಪುರಾಣ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಆದ್ದರಿಂದಲೇ ಶಂಖವನ್ನು ಲಕ್ಷ್ಮೀಯ ರೂಪವೆಂದು ಪರಿಗಣಿಸಲಾಗಿದೆ ಎನ್ನುತ್ತಾರೆ ಚಿಲಕಮರ್ತಿಗಳು.

ಪ್ರತಿದಿನ ಶಂಖ ಊದುವುದರಿಂದ ಉಸಿರಾಟದ ಕಾಯಿಲೆಗಳು ಗುಣವಾಗುತ್ತವೆ ಮತ್ತು ಆರೋಗ್ಯವು ಸುಧಾರಿಸುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಪೂಜೆಯ ವೇಳೆ ಮನೆಯಲ್ಲಿ ಶಂಖ ಊದುವುದರಿಂದ ದುಷ್ಟ ಶಕ್ತಿಗಳು ದೂರಾಗಿ ಸಕಾರಾತ್ಮಕ ಶಕ್ತಿ ಹರಡುತ್ತದೆ ಎಂಬ ನಂಬಿಕೆಯೂ ಇದೆ.

ಶಂಖದಿಂದಾಗುವ ಆರೋಗ್ಯ ಪ್ರಯೋಜನಗಳು

ಇಂದಿಗೂ ನಮ್ಮ ಧಾರ್ಮಿಕ ಜೀವನದಲ್ಲಿ ಶಂಖಕ್ಕೆ ಮಹತ್ವವಿದೆ. ಜನರು ಶಂಖವನ್ನು ಪೂಜಿಸುತ್ತಾರೆ. ಅರ್ಚನೆಯ ಸಮಯದಲ್ಲಿ ಶಂಖನಾದವನ್ನು ಹೊಮ್ಮಿಸಲಾಗುತ್ತದೆ. ಶಂಖರಾಜ ಎಲ್ಲರಿಗಿಂತ ದೊಡ್ಡವನು. ಇದರ ಒಳಭಾಗ ಮುತ್ತಿನಂತಿದೆ. ಕಿವಿಯ ಬಳಿ ಇಟ್ಟರೆ ಸಮುದ್ರದ ಅಲೆಗಳ ಸದ್ದು ಕೇಳಿಸುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ, ಶಂಖವು ಸುಣ್ಣದ ವಸ್ತುವಿನಿಂದ ಮಾಡಲ್ಪಟ್ಟಿದೆ. ಮಾನವನ ಆರೋಗ್ಯಕ್ಕೆ (ಮೂಳೆ ಬೆಳವಣಿಗೆಗೆ) ಕ್ಯಾಲ್ಸಿಯಂ ಅತ್ಯಗತ್ಯ. ವಾತ ಮತ್ತು ಪಿತ್ತ ದೋಷಗಳು ದೂರವಾಗುತ್ತವೆ. ಶಕ್ತಿಯು ಬೆಳಕನ್ನು ನೀಡುತ್ತದೆ.

ಶಂಖವನ್ನು ಯಾವಾಗ ಪೂಜಿಸಬೇಕು?

ಶಂಖದ ಮೂಲಕ ನೀಡಿದ ದೇವರ ತೀರ್ಥವನ್ನು ಸೇವಿಸುವವರು ಆರೋಗ್ಯವಂತರು. ತುಳಸಿ ಸಮೇತ ಸಾಲಿಗ್ರಾಮ ತೀರ್ಥವನ್ನು ಶಂಖದ ಮೂಲಕ ಸ್ವೀಕರಿಸಿದರೆ ಸಾಕು. ರೋಗಗಳು ಮಾಯವಾಗುತ್ತವೆ ಎಂದು ಪರಮ ಪುರುಷ ಸಂಹಿತೆ ಹೇಳುತ್ತದೆ. ದಕ್ಷಿಣಾಭಿಮುಖ ಶಂಖವಿರುವ ಮನೆಯಲ್ಲಿ ಲಕ್ಷ್ಮಿ ಅಪಾರ ಸಂಪತ್ತಿನಿಂದ ನೆಲೆಸುತ್ತಾಳೆ ಎನ್ನುವುದು ಚಿಲಕಮರ್ತಿಗಳ ಅಭಿಪ್ರಾಯ.

ಶುಭದಿನಗಳಂದು ಮನೆಯಲ್ಲಿ ಶಂಖವನ್ನು ಪೂಜಿಸಬೇಕು. ಶ್ರೀರಾಮನವಮಿ, ವಿಜಯದಶಮಿ, ಗುರು ಪುಷ್ಯಮಿ, ರವಿ ಪುಷ್ಯಮಿ ನಕ್ಷತ್ರಗಳು ಮತ್ತು ಪುಣ್ಯದಿನಗಳಂದು ಪೂಜೆ ಮಾಡಬೇಕು.

ವಿವಿಧ ಗಾತ್ರ ಹಾಗೂ ಆಕಾರದ ಶಂಖಗಳನ್ನು ಸಾತ್ವಿಕ ಪೂಜೆಗಳು ಮತ್ತು ಯಜ್ಞಗಳಲ್ಲಿ ಬಳಸಲಾಗುತ್ತದೆ. ಇದನ್ನು ಹೆಚ್ಚಾಗಿ ಬ್ರಾಹ್ಮಣರು ಬಳಸುತ್ತಾರೆ. ಕ್ಷತ್ರಿಯರು ಮತ್ತು ವೈಶ್ಯರು ಕೂಡ ಮನೆಯಲ್ಲ ಶಂಖ ಇರಿಸಿಕೊಂಡಿರುತ್ತಾರೆ. ಈ ಚಿಪ್ಪುಗಳು ಸಮುದ್ರದಲ್ಲಿ ಸುಲಭವಾಗಿ ತೇಲುತ್ತವೆ. ಬಿಳಿ ಬಣ್ಣದ ಶಂಖಗಳನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಬಲಕ್ಕೆ ತೆರೆದಿರುವ ಶಂಖವನ್ನು ದಕ್ಷಿಣಾಮೂರ್ತಿ ಶಂಖ ಎಂದು ಕರೆಯಲಾಗುತ್ತದೆ. ಗಾಳಿ ಬೀಸಿದಾಗ ಅದು ಒಳ್ಳೆಯ ಶಬ್ದವನ್ನು ಮಾಡುತ್ತದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಇದರ ಸ್ತುತಿಗಳಿವೆ.

ನಿತ್ಯ ಪೂಜೆ ಮತ್ತು ಹಬ್ಬ ಹರಿದಿನಗಳಲ್ಲಿ ಈ ಶಂಖವನ್ನು ಊದಿದರೆ ಆ ಶಬ್ದವು ಶುಭಕರ ಪರಿಗಣಿಸಲಾಗುತ್ತದೆ. ಈ ದಕ್ಷಿಣದ ಶಂಖಗಳು ಕನ್ಯಾಕುಮಾರಿಯಲ್ಲಿ ಕಂಡುಬರುತ್ತವೆ. ವಜ್ರದ ಶಂಖವು ಚಿಕ್ಕದಾಗಿದೆ ಮತ್ತು ಸರೋವರಗಳಲ್ಲಿ ಕಂಡುಬರುತ್ತದೆ. ಇದು ಮೇಲಿನಿಂದ ವಜ್ರದಂತೆ ಬಹಳ ಮೌಲ್ಯಯುತವಾಗಿದೆ. ಇದನ್ನು ಹುಡುಕುವುದು ತುಂಬಾ ಕಷ್ಟ. ಮನೆಯಲ್ಲಿ ಒಂದೇ ಶಂಖ ಇರಬೇಕು, ಎರಡು ಶಂಖ ಇರಬಾರದು ಅಂದು ಹಿರಿಯರು ಹೇಳುತ್ತಾರೆ. ಕೆಲವರು ಮನೆಯಲ್ಲಿ ಐದಾರು ಶಂಖ ಇರಿಸಿಕೊಳ್ಳಬಹುದು ಎಂದು ಹೇಳುತ್ತಾರೆ ಎಂದು ಚಿಲಕಮರ್ತಿಗಳು ಮಾಹಿತಿ ನೀಡುತ್ತಾರೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.