Human Chalisa: ಹನುಮಾನ್ ಚಾಲೀಸಾದಲ್ಲಿದೆ ಅದ್ಭುತ ಮಾಂತ್ರಿಕ ಶಕ್ತಿ; ಇದನ್ನು ಪ್ರತಿನಿತ್ಯ ಪಠಿಸುವುದರಿಂದಾಗುವ ಪ್ರಯೋಜನಗಳಿವು
ಹನುಮಾನ್ ಚಾಲೀಸಾದ ಬಗ್ಗೆ ಹಿಂದೂಗಳಲ್ಲಿ ವಿಶೇಷ ನಂಬಿಕೆ ಇದೆ. ಶನಿದೋಷದಿಂದ ಉಂಟಾಗುವ ತೊಂದರೆಗಳಿಗೆ ಇದರಿಂದ ಪರಿಹಾರ ದೊರೆಯುತ್ತದೆ ಎಂದು ನಂಬಲಾಗಿದೆ. ಮಂಗಳದೋಷದಂತಹ ಸಮಸ್ಯೆಗಳಿಗೂ ಇದರಲ್ಲಿದೆ ಪರಿಹಾರ. ಹನುಮಾನ್ ಚಾಲೀಸಾದ ಶಕ್ತಿ ಹಾಗೂ ಅದನ್ನು ಪಠಿಸುವುದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಹಿಂದೂ ಧರ್ಮದಲ್ಲಿ ದೇವರು, ದೇವಾಲಯಗಳಲ್ಲಿ ಇರುವಷ್ಟೇ ಪ್ರಾಮುಖ್ಯ ಭಜನೆ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾಗಳಿಗಿದೆ. ಇವುಗಳನ್ನು ಪಠಿಸುವುದರಿಂದ ಸಕಲ ಕಷ್ಟಗಳು ದೂರವಾಗಿ, ದೇವರ ಅನುಗ್ರಹ ದೊರೆಯುತ್ತದೆ ಎಂದು ನಂಬಲಾಗಿದೆ.
ಹನುಮಾನ್ ಚಾಲೀಸಾವು ಅತ್ಯಂತ ಪವಿತ್ರವಾದುದು ಹಾಗೂ ಅದರಲ್ಲಿ ದೈವಿಕ ಮಾಂತ್ರಿಕ ಶಕ್ತಿ ಇದೆ ಎಂಬ ನಂಬಲಾಗುತ್ತದೆ. ಈ ನಂಬಿಕೆಯು ಗ್ರಹಗಳು ಹಾಗೂ ಅವು ನಮ್ಮ ಮೇಲೆ ಬೀರುವ ಪರಿಣಾಮಗಳ ಜೊತೆ ಹೆಣೆದುಕೊಂಡಿದೆ.
ಶನಿದೋಷ ಪರಿಹಾರ
ಜ್ಯೋತಿಷ್ಯದ ಪ್ರಕಾರ ಶನಿಯ ಕೆಟ್ಟದೃಷ್ಟಿ ನಮ್ಮ ಮೇಲೆ ಬಿದ್ದಾಗ ಹನುಮಾನ್ ಚಾಲೀಸಾ ಪಠಿಸಬೇಕು. ಸತತ 40 ದಿನಗಳ ಕಾಲ ತಪ್ಪದೇ ಹನುಮಾನ್ ಚಾಲೀಸಾ ಪಠಿಸುವುದರಿಮದ ಶನಿಗ್ರಹದ ದುಷ್ಪರಿಣಾಮಗಳಿಂದ ದೂರಾಗಬಹುದು ಎಂದು ಹೇಳಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಶನಿವಾರಗಳಂದು ಶನಿವಾರ ಪ್ರಭಾವ ಹೆಚ್ಚಿರುವ ಕಾರಣ ಈ ದಿನ ತಪ್ಪದೇ ಹನುಮಾನ್ ಚಾಲೀಸಾ ಪಠಿಸಬೇಕು. ಮಂಗಳದೋಷದಿಂದ ಪರಿಹಾರ ಪಡೆಯಲು ಕೂಡ ಹನುಮಾನ್ ಚಾಲೀಸ ಪಠಿಸುವುದು ಉತ್ತಮ. ಇದು ಮಂಗಳನ ಋಣಾತ್ಮಕ ಪರಿಣಾಮಗಳನ್ನು ತಗ್ಗಿಸುವುದರ ಜೊತೆಗೆ ಧೈರ್ಯವನ್ನು ತುಂಬುತ್ತದೆ ಎಂಬುದು ನಂಬಿಕೆ. ಇದಕ್ಕಾಗಿ ಮಂಗಳವಾರ ಹನುಮಾನ್ ಚಾಲೀಸಾ ಪಠಿಸಬೇಕು.
ಮನಸ್ಸಿಗೆ ಚೈತನ್ಯ ಸಿಗುತ್ತದೆ
ಹನುಮಾನ್ ಚಾಲೀಸಾದ ಒಂದು ಗಮನಾರ್ಹ ಅಂಶವೆಂದರೆ ಅದರ ಸರಳತೆ ಮತ್ತು ಸಂಕ್ಷಿಪ್ತ ಭಾವ. ಕೇವಲ 10 ನಿಮಿಷಗಳ ಕಾಲ ಹನುಮಾನ್ ಚಾಲೀಸಾ ಪಠಿಸುವುದರಿಂದ ಮನಸ್ಸು ಶುದ್ಧವಾಗುತ್ತದೆ. ದೇಹ, ಮನಸ್ಸಿನಲ್ಲಿ ಚೈತನ್ಯ ಹೆಚ್ಚುತ್ತದೆ. ಇದು ಮನಸನ್ನು ನಕಾರಾತ್ಮಕ ಪ್ರಭಾವಗಳಿಂದ ದೂರ ಇರುವಂತೆ ಮಾಡುತ್ತದೆ. ಇದು ಆಧ್ಯಾತ್ಮಿಕ ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತದೆ. ಹನುಮಾನ್ ಚಾಲೀಸಾ ಪಠಿಸುವುದನ್ನು ಅಭ್ಯಾಸ ಮಾಡಿದವರಿಗೆ ರಾಮನ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.
ಹನುಮಾನ್ ಚಾಲೀಸಾದ ಲಯಬದ್ಧ ಶಬ್ದಗಳು ಧನಾತ್ಮಕ ಕಂಪನಗಳನ್ನು ಉಂಟುಮಾಡುತ್ತವೆ. ಇದನ್ನು ಪಠಿಸುವುದರಿಂದ ಮಾನಸಿಕ ಸಂತೋಷ ದೊರೆಯುತ್ತದೆ. ಬದುಕಿನಲ್ಲಿ ಎದುರಾಗುವ ತೊಂದರೆ ವಿರುದ್ಧ ಗುರಾಣಿಯಾಗಿ ಕೆಲಸ ಮಾಡುತ್ತದೆ.
ಕತ್ತಲೆಯಲ್ಲಿ ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕು ಬರುವಂತೆ ಹನುಮಾನ್ ಚಾಲೀಸಾವನ್ನು ರಾತ್ರಿ ವೇಳೆ ಪಠಿಸುವುದರಿಂದ ಅದ್ಭುತ ಪ್ರಯೋಜನಗಳು ದೊರೆಯುತ್ತವೆ ಎನ್ನಲಾಗುತ್ತದೆ. ಇದು ಧಾರ್ಮಿಕ ಸಂಬಂಧದ ಹೊರತಾಗಿಯೂ, ಇದರ ಧನಾತ್ಮಕ ಪ್ರಭಾವವು ಜೀವನವನ್ನು ವೃದ್ಧಿಸುವ ಹಾಗೂ ಸವಾಲಿನ ಸಮಯದಲ್ಲಿ ಶಾಂತಿ, ಸಾಂತ್ವನ ಕಂಡುಕೊಳ್ಳುವ ಸಾಧನವೆಂದು ಪರಿಗಣಿಸಲಾಗಿದೆ. ಇದು ಏಕತೆ ಹಾಗೂ ಸಹಕಾರವನ್ನು ಬೆಳೆಸುವ ಗುಣಹೊಂದಿದೆ.
ಆಧ್ಯಾತ್ಮಿಕ ಬೆಳವಣಿಗೆಯನ್ನೂ ಮೀರಿ ಭವಿಷ್ಯವನ್ನು ಯೋಜಿಸಲು ಸೂಕ್ತ ಮಾರ್ಗದರ್ಶನ ನೀಡುತ್ತದೆ. ಇದರಲ್ಲಿ ಸಾಲುಗಳು ಜೀವನದಲ್ಲಿ ಎದುರಾಗುವ ವಿವಿಧ ಸವಾಲುಗಳನ್ನು ತಿಳಿಸುತ್ತವೆ. ಇದು ಆರೋಗ್ಯ ಮತ್ತು ಸಂತೋಷದ ಮಾರ್ಗವನ್ನು ಒದಗಿಸುತ್ತದೆ. ಒಟ್ಟಾರೆ ಇದು ಧಾರ್ಮಿಕ ಶಕ್ತಿಯ ಜೊತೆಗೆ ಮಾನಸಿಕ ಹಾಗೂ ದೈಹಿಕ ನೆಮ್ಮದಿಗೂ ಸಹಕಾರಿ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)