Naivedyam: ಯಾವ ದೇವರಿಗೆ ಯಾವ ನೈವೇದ್ಯ ಅರ್ಪಿಸಿದರೆ ಶ್ರೇಷ್ಠ? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Naivedyam: ಯಾವ ದೇವರಿಗೆ ಯಾವ ನೈವೇದ್ಯ ಅರ್ಪಿಸಿದರೆ ಶ್ರೇಷ್ಠ? ಇಲ್ಲಿದೆ ಮಾಹಿತಿ

Naivedyam: ಯಾವ ದೇವರಿಗೆ ಯಾವ ನೈವೇದ್ಯ ಅರ್ಪಿಸಿದರೆ ಶ್ರೇಷ್ಠ? ಇಲ್ಲಿದೆ ಮಾಹಿತಿ

ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇವರಿಗೂ ಅವರಿಗೆ ಪ್ರಿಯವಾದ ವಸ್ತುಗಳನ್ನೇ ನೈವೇದ್ಯ ರೂಪದಲ್ಲಿ ಅರ್ಪಿಸಬೇಕು ಎಂಬ ನಂಬಿಕೆಯಿದೆ. ಹಾಗಾದರೆ ಯಾವ ದೇವರಿಗೆ ಯಾವ ನೈವೇದ್ಯಗಳನ್ನು ಅರ್ಪಿಸುವುದು ಶ್ರೇಷ್ಠ? ಅನ್ನೋದಕ್ಕೆ ಸಂಪೂರ್ಣ ಮಾಹಿತಿ ಇಲ್ಲಿದೆ..

ಯಾವ ದೇವರಿಗೆ ಯಾವ ನೈವೇದ್ಯ ಅರ್ಪಿಸಿದರೆ ಶ್ರೇಷ್ಠ (pixabay)
ಯಾವ ದೇವರಿಗೆ ಯಾವ ನೈವೇದ್ಯ ಅರ್ಪಿಸಿದರೆ ಶ್ರೇಷ್ಠ (pixabay)

ಪ್ರತಿಯೊಂದು ಧರ್ಮದಲ್ಲಿಯೂ ದೇವತೆಗಳ ಆರಾಧನೆಗೆ ಅದರದ್ದೇ ಆದ ಮಹತ್ವವಿದೆ. ಹಿಂದೂ ಧರ್ಮದಲ್ಲಿಯೂ ಕೂಡ ದೇವರುಗಳನ್ನು ಆರಾಧಿಸಲು ಸಾಕಷ್ಟು ರೀತಿಯ ಸಂಪ್ರದಾಯಗಳಿವೆ. ಇವುಗಳಲ್ಲಿ ವಿಷ್ಣುವನ್ನು ಪೂಜಿಸುವ ಸಂಪ್ರದಾಯವನ್ನು ವೈಷ್ಣವ ಸಂಪ್ರದಾಯ ಎಂದು ಕರೆಯಲಾಗುತ್ತದೆ . ವಿಷ್ಣುವಿನ ದಶಾವತಾರಕ್ಕೆ ಸಂಬಂಧಿಸಿದ ಆರಾಧನೆಗಳಲ್ಲಿ ನೈವೇದ್ಯವನ್ನು ಅರ್ಪಿಸುವುದು ಕಡ್ಡಾಯವಾಗಿದೆ. ಹಾಗಾದರೆ ಯಾವ ದೇವತೆಗಳಿಗೆ ಯಾವ ರೀತಿಯ ನೈವೇದ್ಯಗಳನ್ನು ಅರ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ .

ಯಾವ ದೇವರಿಗೆ ನೈವೇದ್ಯ ರೂಪದಲ್ಲಿ ಏನನ್ನು ಅರ್ಪಿಸಬೇಕು ?

ಶೈವ ಸಂಪ್ರದಾಯದಲ್ಲಿ ದೇವತೆಗಳಿಗೆ ನೈವೇದ್ಯ ಅರ್ಪಣೆ ಮಾಡುವ ವಿಚಾರದಲ್ಲಿ ಸಾಕಷ್ಟು ಆಚರಣೆಗಳಿವೆ. ದೇವರಿಗೆ ಅರ್ಪಿಸುವ ನೈವೇದ್ಯ ಕೂಡ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ನಾವು ಭಕ್ತಿಯಿಂದ ಅರ್ಪಿಸುವ ಹೂವು, ತುಳಸಿ ನೀರು, ಹಾಲು ಇವೆಲ್ಲವೂ ದೇವರಿಗೆ ಪ್ರಿಯ ಎನಿಸಿಕೊಳ್ಳುತ್ತದೆ.

ಶಿವನಿಗೆ ನೈವೇದ್ಯ ರೂಪದಲ್ಲಿ ಖರ್ಜೂರ ಮತ್ತು ಕಲ್ಲು ಸಕ್ಕರೆ ಇಡಬಹುದು. ಆದರೆ ಶಿವನಿಗೆ ನೈವೇದ್ಯಕ್ಕಿಂತಲೂ ನೀರು, ಹಾಲು, ಜೇನುತುಪ್ಪ, ಕಲ್ಲುಸಕ್ಕರೆ, ಖರ್ಜೂರ, ಎಳನೀರು, ಮೊಸರು, ತುಪ್ಪ- ಹೀಗ ಈ ಯಾವುದೇ ಪದಾರ್ಥಗಳಿಂದ ಅಭಿಷೇಕ ಮಾಡಿದರೆ ತುಂಬಾ ಇಷ್ಟವಂತೆ. ವಿವಿಧ ಹಣ್ಣುಗಳ ರುದ್ರಾಭಿಷೇಕವೂ ಮಾಡಬಹುದು. ಶಿವನು ಅಭಿಷೇಕ ಪ್ರಿಯನಾಗಿರುವ ಹಿನ್ನೆಲೆಯಲ್ಲಿ ಆತನಿಗೆ ಯಾವುದೇ ಅಭಿಷೇಕ ಮಾಡಿದರೂ ಆತ ಭಕ್ತರ ಇಷ್ಟಾರ್ಥಗಳನ್ನು ಪೂರೈಸಿ ಒಳ್ಳೆಯದು ಮಾಡುತ್ತಾನೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ.

ಗೌರಿ ದೇವಿಗೆ ಪೊಂಗಲ್​​ ಹಾಗೂ ಲಕ್ಷ್ಮೀ ದೇವಿಗೆ ಕೋಸಂಬರಿಯನ್ನು ಅರ್ಪಿಸಬೇಕು ಎಂದು ಹೇಳಲಾಗುತ್ತದೆ. ವಿಷ್ಣುಮೂರ್ತಿಗೆ ಚಿತ್ರಾನ್ನ ಬಲುಪ್ರಿಯ. ಲಲಿತಾ ದೇವಿಗೆ ಅನ್ನದ ಕ್ಷೀರವನ್ನು ಅರ್ಪಿಸಬೇಕು. ಗಣೇಶನಿಗೆ ಮೋದಕ, ರವೆ ಉಂಡೆ, ಕಡುಬು ಮತ್ತು ಲಡ್ಡು ಇಷ್ಟ. ಇವನ್ನು ನೈವೇದ್ಯಕ್ಕೆ ಇಟ್ಟರೆ ಸಕಲ ಸಂಕಷ್ಟಗಳನ್ನು ನಿವಾರಿಸಿ ಸಕಲ ಸೌಭಾಗ್ಯಗಳನ್ನು ಕರುಣಿಸುತ್ತಾನೆ ಎಂಬ ನಂಬಿಕೆಯಿದೆ. ಚಂದ್ರನಿಗೆ ಅಕ್ಕಿಯ ಕ್ಷೀರ ಹಾಗೂ ಸೂರ್ಯದೇವನಿಗೆ ಪಾಯಸವನ್ನು ನೈವೇದ್ಯ ಮಾಡಬೇಕು.

ಪ್ರತಿ ದೇವರಿಗೂ ಹೂವು ಹಾಗೂ ದೀಪವೆಂದರೆ ಅತ್ಯಂತ ಪ್ರಿಯಕರ, ಲಲಿತಾ ದೇವಿಗೆ ದಾಳಿಂಬೆ ಕಾಳು ಹಾಗೂ ಜೇನುತುಪ್ಪವನ್ನು ಕಲಸಿ ನೈವೇದ್ಯ ಮಾಡಿದರೆ ಅದೃಷ್ಟ ನಮಗೆ ಒಲಿದು ಬರುತ್ತದೆ ಎಂಬ ನಂಬಿಕೆಯಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.