ಈ 5 ರಾಶಿಯವರು ಸುಲಭವಾಗಿ ಯಾರನ್ನೂ ಕ್ಷಮಿಸುವುದಿಲ್ಲ, ನೋವು ಕೊಟ್ಟವರನ್ನು ಮರೆಯುವುದೂ ಇಲ್ಲ; ಇದ್ರಲ್ಲಿ ನಿಮ್ಮ ರಾಶಿ ಇದ್ಯಾ ನೋಡಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ 5 ರಾಶಿಯವರು ಸುಲಭವಾಗಿ ಯಾರನ್ನೂ ಕ್ಷಮಿಸುವುದಿಲ್ಲ, ನೋವು ಕೊಟ್ಟವರನ್ನು ಮರೆಯುವುದೂ ಇಲ್ಲ; ಇದ್ರಲ್ಲಿ ನಿಮ್ಮ ರಾಶಿ ಇದ್ಯಾ ನೋಡಿ

ಈ 5 ರಾಶಿಯವರು ಸುಲಭವಾಗಿ ಯಾರನ್ನೂ ಕ್ಷಮಿಸುವುದಿಲ್ಲ, ನೋವು ಕೊಟ್ಟವರನ್ನು ಮರೆಯುವುದೂ ಇಲ್ಲ; ಇದ್ರಲ್ಲಿ ನಿಮ್ಮ ರಾಶಿ ಇದ್ಯಾ ನೋಡಿ

ನಮ್ಮಲ್ಲಿ ಹಲವರು ಕ್ಷಮಯಾಧರಿತ್ರಿ ಗುಣವುಳ್ಳವರು, ಇವರು ಎಲ್ಲರನ್ನೂ ಸುಲಭವಾಗಿ ಕ್ಷಮಿಸುತ್ತಾರೆ. ಆದರೆ ಈ ಕೆಲವು ರಾಶಿಯವರು ಸುಲಭವಾಗಿ ಯಾರನ್ನೂ ಕ್ಷಮಿಸುವುದಿಲ್ಲವಂತೆ, ಅಲ್ಲದೆ ಇವರು ತಮಗೆ ನೋವು ನೀಡಿದವರನ್ನು ಎಂದಿಗೂ ಮರೆಯವುದೂ ಇಲ್ಲ. ಅಂತಹ ರಾಶಿಯವರು ಯಾರು ನೋಡಿ.

ಈ 5 ರಾಶಿಯವರು ಯಾರನ್ನೂ ಸುಲಭವಾಗಿ ಕ್ಷಮಿಸುವುದಿಲ್ಲ
ಈ 5 ರಾಶಿಯವರು ಯಾರನ್ನೂ ಸುಲಭವಾಗಿ ಕ್ಷಮಿಸುವುದಿಲ್ಲ

ಈ ಜಗತ್ತಿನಲ್ಲಿ ಎರಡು ಥರದ ವ್ಯಕ್ತಿಗಳು ಇರುತ್ತಾರೆ. ಅವರಲ್ಲಿ ಒಂದು ಎಲ್ಲರನ್ನೂ ಪ್ರೀತಿಸುವ ಗುಣವುಳ್ಳವರು, ಇನ್ನೊಂದು ದ್ವೇಷ ಮಾಡುವವರು. ಕೆಲವರು ಸುಲಭವಾಗಿ ಯಾರನ್ನೂ ಕ್ಷಮಿಸುವುದಿಲ್ಲ. ಜೊತೆಗೆ ಅವರು ಬೇರೆಯವರು ನೀಡಿದ ನೋವು, ದುಃಖವನ್ನು ಮರೆಯವುದೂ ಇಲ್ಲ. ಇದು ಸಹಜಗುಣ ನಿಜ. ಜ್ಯೋತಿಷ್ಯದ ಪ್ರಕಾರ ಈ ರಾಶಿಯವರು ದ್ವೇಷವನ್ನು ಸಾಧಿಸುತ್ತಾರಂತೆ. ಇವರು ಸುಲಭವಾಗಿ ಯಾರನ್ನೂ ಕ್ಷಮಿಸುವುದಿಲ್ಲ, ಜೊತೆಗೆ ಮರೆಯುವುದು ಕೂಡ ಇಲ್ಲವಂತೆ. ಅಂತಹ ರಾಶಿಗಳು ಯಾವುವು ನೋಡೋಣ.

ವೃಶ್ಚಿಕ ರಾಶಿ

ಈ ರಾಶಿಯವರು ಭಾವೋದ್ರಿಕ್ತ ವ್ಯಕ್ತಿಗಳು. ಇವರು ಕೋಪವನ್ನು ಮನಸ್ಸಿನಲ್ಲೇ ಇರಿಸಿಕೊಂಡಿರುತ್ತಾರೆ. ಕ್ಷಮೆ ವಿಚಾರಕ್ಕೆ ಬಂದರೆ ಇವರು ಕ್ಷಮಿಸಬೇಕೋ ಬೇಡವೋ ಎಂಬ ವಿಚಾರದಲ್ಲಿ ಸಾಕಷ್ಟು ಹೆಣಗಾಡುತ್ತಾರೆ. ಈ ರಾಶಿಯವರಿಗೆ ತಮಗೆ ನೋವು, ಕಷ್ಟ ನೀಡಿದ ವ್ಯಕ್ತಿಗಳನ್ನು ಕ್ಷಮಿಸುವುದು ಕಷ್ಟವಾಗುತ್ತದೆ. ಏಕೆಂದರೆ ಇವರು ಹಿಂದಿನ ನೋವುಗಳನ್ನು ಸುಲಭವಾಗಿ ಮರೆಯುವುದಿಲ್ಲ. ಪದೇ ಪದೇ ನೋವುಗಳನ್ನು ನೆನಪಿಸಿಕೊಳ್ಳುತ್ತಾರೆ.

ಮಕರ ರಾಶಿ

ಈ ರಾಶಿಯವರು ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಈ ಗುಣವು ಇವರಿಗೆ ಹಲವು ರೀತಿಯಲ್ಲಿ ಪ್ರಯೋಜನಕ್ಕೆ ಬರುತ್ತದೆ. ಆದರೂ ಕ್ಷಮಿಸುವ ಹಾಗೂ ಮರೆಯುವ ವಿಚಾರದಲ್ಲಿ ಇವರಿಗೆ ಸವಾಲು ಎದುರಾಗಬಹುದು. ಹಿಂದೆ ಅವರ ಜೀವನದಲ್ಲಿ ಆದ ತಪ್ಪುಗಳನ್ನು ಮರೆಯುವುದು ಇವರಿಗೆ ಕಷ್ಟವಾಗಬಹುದು. ಇವರು ಕ್ಷಮೆಯನ್ನು ಹೊಣೆಗಾರಿಕೆ ಹಾಗೂ ಜವಾಬ್ದಾರಿಯೊಂದಿಗೆ ಲಿಂಕ್‌ ಮಾಡುತ್ತಾರೆ.

ವೃಷಭ ರಾಶಿ

ವೃಷಭ ರಾಶಿಯವರು ಸ್ಥಿರವಾಗಿರುತ್ತಾರೆ. ಯಾವಾಗಲೂ ತಾವೇ ಮಾತ್ರ ಸರಿ ಎಂದು ಭಾವಿಸುವ ಮನೋಭಾವದವರು. ನಿಷ್ಠೆಯ ಮನೋಭಾವ ಹೊಂದಿರುವ ಕಾರಣ ಇವರಿಗೆ ಮರೆತು ಬಿಡಲು ಹಾಗೂ ಕ್ಷಮಿಸಲು ಕಷ್ಟವಾಗಬಹುದು. ಇವರು ತಮ್ಮ ತತ್ವಗಳ ಮೇಲೆ ನಿಂತಿರುವ ಕಾರಣ ಇವರಿಗೆ ಕ್ಷಮಿಸಲು ಕಷ್ಟವಾಗಬಹುದು.

ಕನ್ಯಾ ರಾಶಿ

ಈ ರಾಶಿಯವರು ತಮ್ಮ ವಿಶ್ಲೇಷಣಾ ಗುಣಗಳಿಂದ ಹೆಸರುವಾಸಿಯಾಗಿದ್ದಾರೆ. ಇವರು ಯಾವುದೇ ವಿಷಯವನ್ನು ಅತಿಯಾಗಿ ಯೋಚಿಸುವ ಕಾರಣದಿಂದ ಇನ್ನೊಬ್ಬರನ್ನು ಕ್ಷಮಿಸುವ ವಿಚಾರದಲ್ಲಿ ತೊಂದರೆ ಎದುರಿಸಬಹುದು. ತಮ್ಮ ಬದುಕಿನಲ್ಲಿ ಆದ ಘಟನೆಗಳನ್ನು ಇವರು ಆಗಾಗ ನೆನೆಯುತ್ತಿರುತ್ತಾರೆ. ಪ್ರತಿ ವಿವರವನ್ನು ವಿಶ್ಲೇಷಿಸುತ್ತಾರೆ. ಈ ವಿಶ್ಲೇಷಣಾತ್ಮಕ ಸ್ವಭಾವವು ಕನ್ಯಾ ರಾಶಿಯವರಿಗೆ ದ್ವೇಷವನ್ನು ಬಿಟ್ಟು ಮುಂದುವರಿಯಲು ಸವಾಲಾಗಬಹುದು.

ಕಟಕ ರಾಶಿ

ಈ ರಾಶಿಯವರು ತಮ್ಮ ಭಾವನೆಗಳು ಮತ್ತು ಪ್ರೀತಿಪಾತ್ರರೊಂದಿಗೆ ಆಳವಾದ ಸಂಪರ್ಕ ಹೊಂದಿರುತ್ತಾರೆ. ತಮಗೆ ಹತ್ತಿರವಾಗಿರುವ ವ್ಯಕ್ತಿಯು ನೋಯಿಸಿದಾಗ ಅವರನ್ನು ಕ್ಷಮಿಸುವುದು ಇವರಿಗೆ ಕಷ್ಟವಾಗಬಹುದು. ಭಾವನಾತ್ಮಕ ನೋವುಗಳು ಈ ರಾಶಿಯವರನ್ನು ಪದೇ ಪದೇ ಕಾಡುತ್ತದೆ. ಹೀಗಾಗಿ ಇವರು ಕ್ಷಮಿಸಲು ಸಾಧ್ಯವಾಗದೇ ಇರಬಹುದು. ಭಾವನೆಗಳಿಗೆ ಪೆಟ್ಟು ಬಿದ್ದರೆ ಈ ರಾಶಿಯವರು ಖಂಡಿತ ಕ್ಷಮಿಸುವುದಿಲ್ಲ.

ಕ್ಷಮೆಯು ಪ್ರತಿಯೊಬ್ಬರಿಗೂ ಭಿನ್ನವಾಗಿದೆ. ಈ ರಾಶಿಯವರು ಯಾರನ್ನೂ ಸುಲಭವಾಗಿ ಕ್ಷಮಿಸುವುದಿಲ್ಲ. ಅದಕ್ಕೆ ಅವರದ್ದೇ ಆದ ಕಾರಣಗಳೂ ಇವೆ. ಆದರೆ ಕೆಲವೊಮ್ಮೆ ಕ್ಷಮಿಸುವುದರಿಂದ ಸಂಬಂಧ ಉಳಿಯುವುದು ಸುಳ್ಳಲ್ಲ. ಹಾಗಂತ ಪದೇ ಪದೇ ಕ್ಷಮಿಸಲು ಸಾಧ್ಯವಾಗುವುದಿಲ್ಲ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.