ವರಮಹಾಲಕ್ಷ್ಮಿ ಹಬ್ಬದ ಡೆಕೊರೇಷನ್‌ಗೆ ಕೊನೆ ಕ್ಷಣದ ಐಡಿಯಾಗಳಿವು, ಫಟಾಫಟ್ ಹೀಗೆ ಮಾಡಿ, ಹಬ್ಬದ ಮೆರುಗು ಹೆಚ್ಚಿಸಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವರಮಹಾಲಕ್ಷ್ಮಿ ಹಬ್ಬದ ಡೆಕೊರೇಷನ್‌ಗೆ ಕೊನೆ ಕ್ಷಣದ ಐಡಿಯಾಗಳಿವು, ಫಟಾಫಟ್ ಹೀಗೆ ಮಾಡಿ, ಹಬ್ಬದ ಮೆರುಗು ಹೆಚ್ಚಿಸಿ

ವರಮಹಾಲಕ್ಷ್ಮಿ ಹಬ್ಬದ ಡೆಕೊರೇಷನ್‌ಗೆ ಕೊನೆ ಕ್ಷಣದ ಐಡಿಯಾಗಳಿವು, ಫಟಾಫಟ್ ಹೀಗೆ ಮಾಡಿ, ಹಬ್ಬದ ಮೆರುಗು ಹೆಚ್ಚಿಸಿ

ಇಂದು ವರಮಹಾಲಕ್ಷ್ಮಿ ಹಬ್ಬ. ಹತ್ತಾರು ಕೆಲಸಗಳ ನಡುವೆ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಲು ಆಗಲಿಲ್ಲ ಎಂದು ಕೊರಗಬೇಡಿ. ಫಟಾಫಟ್ ಹೀಗೆ ಮಾಡಿ, ಹಬ್ಬದ ಮೆರುಗು ಹೆಚ್ಚಿಸಿ. ಕೊನೇಕ್ಷಣದ ಡೆಕೊರೆಷನ್ ಐಡಿಯಾಗಳು ಇಲ್ಲಿವೆ ನೋಡಿ.

ವರಮಹಾಲಕ್ಷ್ಮಿ ಹಬ್ಬಕ್ಕೆ ಕೊನೆಯ ಹಂತದಲ್ಲಿ ಡೆಕೊರೇಷನ್ ಐಡಿಯಾಗಳು ಇಲ್ಲಿವೆ.
ವರಮಹಾಲಕ್ಷ್ಮಿ ಹಬ್ಬಕ್ಕೆ ಕೊನೆಯ ಹಂತದಲ್ಲಿ ಡೆಕೊರೇಷನ್ ಐಡಿಯಾಗಳು ಇಲ್ಲಿವೆ.

ದೇಶದೆಲ್ಲೆಡೆ ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆ ವರಮಹಾಲಕ್ಷ್ಮಿ ಹಬ್ಬದವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಅದರಲ್ಲೂ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಅದ್ಧೂರಿಯಾಗಿಯೇ ಆಚರಿಸಲಾಗುತ್ತದೆ. ಈ ಬಾರಿ ಶ್ರಾವಣ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯ ದಿನವಾದ ಆಗಸ್ಟ್ 16 ರ ಶುಭ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹಬ್ಬದ ದಿನ ಭಕ್ತರು ಉಪವಾಸದ ವ್ರತವನ್ನು ಕೈಗೊಳ್ಳುತ್ತಾರೆ. ನೀವೇನಾದರೂ ಇನ್ನೂ ವ್ರತದ ಸಿದ್ಧತೆಗಳನ್ನು ಮಾಡಿಕೊಳ್ಳದಿದ್ದರೆ ವರಮಹಾಲಕ್ಷ್ಮಿ ಪ್ರತಿಷ್ಠಾನೆಗೆ ಕೊನೆ ಕ್ಷಣದಲ್ಲಿ ಹೇಗೆ ಡೆಕೋರೆಷನ್ ಮಾಡಬೇಕು, ಬ್ಯಾಕ್ ಡ್ರಾಪ್, ಲಕ್ಷ್ಮಿ ಪೀಠ, ಸೀರೆ ಉಡಿಸುವುದು, ಲೈಟ್ ಸೆಟಪ್, ಆಭರಣಗಳನ್ನು ತೊಡಸುವುದು ಹೇಗೆ ಎಂಬುದರ ಐಡಿಯಾಗಳನ್ನು ಇಲ್ಲಿ ತಿಳಿಯೋಣ.

ಕೆಲವರು ಸಿಂಪಲ್ ಆಗಿ, ಇನ್ನೂ ಕೆಲವರು ಅದ್ಧೂರಿಯಾಗಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತಾರೆ. ಕೊನೆ ಕ್ಷಣದಲ್ಲಿ ಹೇಗೆ ಡೆಕೊರೇಷನ್ ಮಾಡಬೇಕು ಅನ್ನೋದನ್ನು ನೋಡೊದಾದ್ರೆ, ವರಮಹಾಲಕ್ಷ್ಮಿಯನ್ನು ಕೂರಿಸುವ ಸ್ಥಳವನ್ನು ನಾನಾ ರೀತಿಯಲ್ಲಿ ಅಲಂಕರಿಸಲಾಗುತ್ತದೆ. ಸೇವಂತಿ, ಚೆಂಡು ಹೂವುಗಳು, ಸೀರೆ, ವೀಳ್ಯದೆಲೆ, ಹೂವು ಕುಂಡಗಳು ಬಳಸಿ ಅಲಂಕಾರ ಮಾಡಲಾಗುತ್ತದೆ.

ಮೊದಲಿಗೆ ಎಷ್ಟು ಗಾತ್ರದ ವರಮಹಾಲಕ್ಷ್ಮಿ ಪ್ರತಿಯನ್ನು ತರುತ್ತೀರಿ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಅದಕ್ಕೆ ಸರಿಯಾದ ಪೀಠವನ್ನು ಸಿದ್ದತೆ ಮಾಡಿಕೊಳ್ಳಬೇಕು. ಲಕ್ಷ್ಮಿಯನ್ನು ಕೂರಿಸುವ ಸ್ಥಳವನ್ನು ಬಾಳೆ ಎಳೆ, ವೀಳ್ಯದೆಲೆ, ವಿವಿಧ ಬಗೆಯ ಹೂವು, ಬಿಳಿ ಬಣ್ಣದ ಬಟ್ಟೆ ಅಥವಾ ನಾನಾ ಬಗೆಯ ಕಲರ್‌ಫುಲ್ ಸೀರೆಗಳಿಂದ ಅಲಂಕಾರವನ್ನು ಮಾಡಬಹುದು.

ತೆಂಗಿನ ಗರಿ, ಬಾಳೆ ಎಳೆ, ವೀಳ್ಯದೆಲೆ, ಬಟ್ಟೆ ಬ್ಯಾಕ್‌ ಡ್ರಾಪ್‌ಗೆ ಯಾವುದು ಬೆಸ್ಟ್?

ವರಮಹಾಲಕ್ಷ್ಮಿ ಪ್ರತಿಷ್ಥಾಪಿಸುವ ಹಿಂಭಾಗದಲ್ಲಿ ಬ್ಯಾಕ್ ಡ್ರಾಪ್‌ ಅನ್ನು ಸೀರೆ, ಬಿಳಿ ಪಟ್ಟೆ, ತೆಂಗಿನ ಗರಿ ಅಥವಾ ನಿಮಗೆ ಇಷ್ಟವಾಗುವ ವಸ್ತುಗಳನ್ನು ಬಳಸಿ ಅಲಂಕಾರ ಮಾಡಬಹುದು. ಬಾಳೆ ಎಳೆಗಳನ್ನು ಒಂದಂಕ್ಕೊಂದನ್ನು ಜೋಡಿಸಿ ಅವುಗಳಿಗೆ ಬಿಳಿ ಮತ್ತು ಕೆಂಪು ಬಣ್ಣದ ಹೂವುಗಳನ್ನು ಅಂಟಿಸಿ ಅಲಂಕಾರ ಮಾಡಬಹುದು. ಎರಡೂ ಬದಿಯ ಕೊನೆಯ ಗುಲಾಬಿ ಹೂಗಳ ಹಾರ ಹೆಚ್ಚು ಲುಕ್ ನೀಡುತ್ತದೆ. ಇದರ ಮಧ್ಯ ಭಾಗದಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಎರಡು ಬದಿಗಳಲ್ಲಿ ದೀಪಗಳು ಮುಂದೆ ಹಣ್ಣುಹಂಪಲು ಇಡಬಹುದು. ಕೊನೆ ಗಳಿಗೆಯಲ್ಲಿ ಹಬ್ಬ ಮಾಡುವವರು ಡೆಕೊರೇಷನ್‌ಗೆ ಯಾವುದು ಬೇಗ ಆಗುತ್ತೋ ಅಂತಹ ಅಲಂಕಾರದ ಆಯ್ಕೆಯನ್ನು

ಭತ್ತದ ತೋರಣದೊಂದಿಗೆ ವೀಳ್ಯದೆಲೆಯಿಂದ ಮಾಡುವ ಬ್ಯಾಕ್‌ ಡ್ರಾಪ್ ಕೂಡ ತುಂಬಾ ಸುಂದರವಾಗಿ ಕಾಣಲಿದ್ದು, ವರಮಹಾಲಕ್ಷ್ಮಿಯ ಅಂದವನ್ನು ಹೆಚ್ಚಿಸುತ್ತದೆ. ಲಕ್ಷ್ಮಿಯನ್ನು ಪ್ರತಿಷ್ಠಾಪಿಸುವ ಸ್ಥಳದಲ್ಲಿ ವೀಳ್ಯದೆಲೆಗಳನ್ನು ಒಂದಂಕ್ಕೊಂದನ್ನು ಜೋಡಿಸಿಬೇಕು. ಇದರ ಮುಭಾಗದಲ್ಲಿ ಒಂದು ಎತ್ತರದ ಪೀಠವನ್ನು ಇಟ್ಟು ಅದರ ಮೇಲೆ ಸೀರೆಯಿಂದ ಸಿಂಗಾರ ಮಾಡಿದ ಲಕ್ಷ್ಮಿಯನ್ನು ಕೂರಿಸಬಹುದು, ದೀಪದ ಕಂಬಗಳು, ಕಳಶ ಹಾಗೂ ಹಣ್ಣುಗಳನ್ನು ಇಡಬೇಕು.

ತೆಂಗಿನ ಗರಿಗಳಿಂದಲೂ ತುಂಬಾ ಸುಂದರವಾದ ಬ್ಯಾಕ್ ಡ್ರಾಪ್ ಮಾಡಬಹುದು. ಇದಕ್ಕೆ ಗರಿಗಳಿಂದ ಎಣಿದಿರುವಂತ ಚಾಪನೆಯನ್ನು ಸಿದ್ಧಮಾಡಿಕೊಳ್ಳಬೇಕು. ನೀವು ಲಕ್ಷ್ಮಿಯನ್ನು ಪ್ರತಿಷ್ಠಾಪಿಸುವ ಸ್ಥಳಕ್ಕೆ ಹೊಂದಿಕೆಯಾಗುವಂತೆ ತಯಾರಿಸಿಕೊಳ್ಳಬೇಕು ಅಥವಾ ಮಾರುಕಟ್ಟೆಯಿಂದ ಖರೀದಿಸಬೇಕು. ನಂತರ ಆ ಹಸಿರು ಗರಿ ಚಾಪೆಯನ್ನು ಹಿಂದೆ ಕಟ್ಟಿ ಅದಕ್ಕೆ ಅಲ್ಲಲ್ಲಿ ಹೂವುಗಳನ್ನು ಅಂಟಿಸಬಹುದು.

ಕೊನೆ ಕ್ಷಣದಲ್ಲಿ ಅತಿ ಸುಲಭವಾಗಿ ಡೆಕೊರೇಷನ್ ಮಾಡಬೇಕಾದರೆ ಹೂವಿನ ಅಲಂಕಾರ ಮಾಡಿ ಲಕ್ಷ್ಮಿಯನ್ನು ಪ್ರತಿಷ್ಠಾಪನೆ ಮಾಡಬಹುದು. ಅಥವಾ ಬಾಳೆ ತಿಂಡುಗಳನ್ನು ಕಟ್ಟಿ ಅವುಗಳಿಗೆ ಹೂವಿನ ಅಲಂಕಾರ ಮಾಡಿ ವರಮಹಾಲಕ್ಷ್ಮಿಯನ್ನು ಕೂರಿಸಬಹುದು. ಡೆಕೊರೇಷನ್ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಿ ಅಲಂಕಾರ ಮಾಡಬಹುದು. ಬಿಳಿ ಪಟ್ಟೆಯನ್ನು ಲಕ್ಷ್ಮಿಯ ಹಿಂದೆ ಕಟ್ಟಿ ಅದಕ್ಕೆ ಅಲ್ಲಲ್ಲಿ ಬಣ್ಣ ಬಣ್ಣದ ಹೂವುಗಳನ್ನು ಅಂಟಿಸಿ ಸುಲಭವಾಗಿ ಸಿಂಗಾರ ಮಾಡಬಹುದು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.