Gomati Chakra: ಗೋಮತಿ ಚಕ್ರದ ಬಗ್ಗೆ ಎಂದಾದರೂ ಕೇಳಿದ್ದೀರಾ? ಮನೆಯಲ್ಲಿ ಇದನ್ನು ಇಟ್ಟು ಪೂಜಿಸುವುದು ಸರಿಯೋ ತಪ್ಪೋ?-religious news what is gomati chakra benefits significance of gomati chakra naga chakra vishnu chakra rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Gomati Chakra: ಗೋಮತಿ ಚಕ್ರದ ಬಗ್ಗೆ ಎಂದಾದರೂ ಕೇಳಿದ್ದೀರಾ? ಮನೆಯಲ್ಲಿ ಇದನ್ನು ಇಟ್ಟು ಪೂಜಿಸುವುದು ಸರಿಯೋ ತಪ್ಪೋ?

Gomati Chakra: ಗೋಮತಿ ಚಕ್ರದ ಬಗ್ಗೆ ಎಂದಾದರೂ ಕೇಳಿದ್ದೀರಾ? ಮನೆಯಲ್ಲಿ ಇದನ್ನು ಇಟ್ಟು ಪೂಜಿಸುವುದು ಸರಿಯೋ ತಪ್ಪೋ?

Gomati Chakra: ಗೋಮತಿ ಚಕ್ರಗಳನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ಇದನ್ನು ವಿಷ್ಣುಚಕ್ರ, ನಾಗಚಕ್ರ ಎಂದೂ ಕರೆಯುತ್ತಾರೆ. ವಿದ್ಯಾಭ್ಯಾಸದಲ್ಲಿ ಏಕಾಗ್ರತೆ, ಸಂತಾನಾಭಿವೃದ್ಧಿ, ಪತಿ ಪತ್ನಿ, ಪ್ರೇಮಿಗಳ ನಡುವಿನ ಕಲಹ ಸೇರಿದಂತೆ ಯಾವುದೇ ವಿಚಾರದಲ್ಲಿ ಸಮಸ್ಯೆಗಳಿದ್ದರೂ ಈ ಗೋಮತಿ ಚಕ್ರದಿಂದ ಪರಿಹಾರ ದೊರೆಯುತ್ತದೆ.

ಗೋಮತಿ ಚಕ್ರ
ಗೋಮತಿ ಚಕ್ರ

ಗೋಮತಿ ಚಕ್ರ: ದೇವರ ಕೋಣೆಯಲ್ಲಿ ದೇವರ ವಿಗ್ರಹಗಳು, ಗಂಧದ ಕಡ್ಡಿ, ಕರ್ಪೂರ ಸೇರಿದಂತೆ ಅನೇಕ ರೀತಿಯ ಪೂಜಾ ಸಾಮಗ್ರಿಗಳಿರುತ್ತವೆ. ನಮಗೇ ತಿಳಿದಿಲ್ಲದ ಎಷ್ಟೋ ಪೂಜಾ ಸಾಮಗ್ರಿಗಳಿವೆ. ಅವುಗಳಲ್ಲಿ ಗೋಮತಿ ಚಕ್ರ ಕೂಡಾ ಒಂದು. ಎಷ್ಟೋ ಜನರಿಗೆ ಗೋಮತಿ ಚಕ್ರ ಎಂದರೆ ಏನು ತಿಳಿದಿರುವುದಿಲ್ಲ. ಇವು ನೋಡಲು ಶಂಖದ ಹುಳುವಿನಂತೆ ಕಾಣುವ ಈ ಗೋಮತಿ ಚಕ್ರವು ಸಮುದ್ರ ತೀರದಲ್ಲಿ ಕಾಣಸಿಗುತ್ತವೆ. ಸಾಮಾನ್ಯವಾಗಿ ಗುಜರಾತ್‌ನಲ್ಲಿ ಇದು ಹೆಚ್ಚಿಗೆ ಕಂಡು ಬರುತ್ತವೆ.

ಇವು ಕೃಷ್ಣನ ಕೈಯಲ್ಲಿರುವ ಸುದರ್ಶನ ಚಕ್ರವನ್ನು ಹೋಲುತ್ತವೆ. ಅದಕ್ಕಾಗಿಯೇ ಅವುಗಳನ್ನು ನಾಗ ಚಕ್ರ ಮತ್ತು ವಿಷ್ಣು ಚಕ್ರ ಎಂದೂ ಕರೆಯುತ್ತಾರೆ. ಗೋಮತಿ ಚಕ್ರಗಳನ್ನು ಪೂಜೆಗಳಲ್ಲಿ ಬಳಸಲಾಗುತ್ತದೆ. ಇವುಗಳಿದ್ದರೆ ದುಷ್ಟ ಕಣ್ಣಿನಿಂದ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಇದೆ. ಅದಕ್ಕಾಗಿಯೇ ಅನೇಕ ಜನರು ಇದನ್ನು ಹಾರವಾಗಿ ಧರಿಸುತ್ತಾರೆ. ಕೆಂಪು ಗೋಮತಿ ಚಕ್ರಗಳನ್ನು ತಾಂತ್ರಿಕ ಅಧ್ಯಯನಗಳಲ್ಲಿ ಬಳಸಲಾಗುತ್ತದೆ. ಇವುಗಳಲ್ಲಿ 6 ಮತ್ತು 9 ಸಂಖ್ಯೆಗಳು ಅಡಗಿವೆ ಎಂದು ವಿದ್ವಾಂಸರು ಹೇಳುತ್ತಾರೆ.

ಗೋಮತಿ ಚಕ್ರಗಳನ್ನು ಮನೆಯಲ್ಲಿ ಇಡಬಹುದೇ?

ಶಾಸ್ತ್ರದ ಪ್ರಕಾರ 6 ಶುಕ್ರನಿಗೆ 9 ಸಂಖ್ಯೆ ಕುಜನಿಗೆ ಸೇರಿದೆ. ಕುಜ ಮತ್ತು ಶುಕ್ರರು ಜಾತಕದಲ್ಲಿ ಬಲಹೀನರಾಗಿದ್ದಾಗ ದಾಂಪತ್ಯ ಜೀವನದಲ್ಲಿ ಅಡೆತಡೆಗಳು, ಪ್ರೇಮಿಗಳ ನಡುವೆ ಕಲಹಗಳಂತಹ ಸಮಸ್ಯೆಗಳು ಎದುರಾಗುತ್ತವೆ. ಇವುಗಳನ್ನು ಹೋಗಲಾಡಿಸಲು ಗೋಮತಿ ಚಕ್ರಗಳನ್ನು ಧರಿಸಿದರೆ ಮಂಗಳ ಮತ್ತು ಶುಕ್ರರ ಸ್ಥಾನಗಳು ಬಲಗೊಳ್ಳುತ್ತವೆ ಎನ್ನುತ್ತಾರೆ ಪಂಡಿತರು. 

ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಪೂಜಾ ಕೋಣೆಯಲ್ಲಿ ಗೋಮತಿ ಚಕ್ರಗಳನ್ನು ಇರಿಸಲಾಗುತ್ತದೆ. ಇನ್ನು ಕೆಲವರು ಕೆಂಪು ಬಟ್ಟೆಯಲ್ಲಿ ಸುತ್ತಿ ಬೀರುವಿನಲ್ಲಿ ಹಾಕುತ್ತಾರೆ. ಹೀಗೆ ಮಾಡಿದರೆ ಹಣದ ಕೊರತೆಯಾಗದು ಎಂಬ ನಂಬಿಕೆ ಇದೆ. ಗೋಮತಿ ಚಕ್ರಗಳನ್ನು ಶ್ರೀ ಯಂತ್ರ ಅಥವಾ ಅಷ್ಟಲಕ್ಷ್ಮಿ ಯಂತ್ರದೊಂದಿಗೆ ಇರಿಸಲಾಗುತ್ತದೆ. ಇವುಗಳನ್ನು ಶುಕ್ರವಾರದಂದು ಪೂಜಿಸಲಾಗುತ್ತದೆ. ಗೋಮತಿ ಚಕ್ರಗಳನ್ನು ಶುಕ್ರ ಗ್ರಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮೊದಲ ಸಲ ಮನೆಗೆ ತಂದ ನಂತರ ಗಂಗಾಜಲ ಅಥವಾ ಅರಿಶಿನದ ನೀರಿನಿಂದ ಶುಭ್ರವಾಗಿ ತೊಳೆದು, ಶುಭ್ರವಾದ ಬಟ್ಟೆಯಿಂದ ಒರೆಸಿ ಪೂಜಾ ಕೋಣೆಯಲ್ಲಿ ಇಡಬಹುದು.

ಗೋಮತಿ ಚಕ್ರದ ಉಪಯೋಗಗಳು

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕುಡಿಯುವ ನೀರಿನಲ್ಲಿ ಗೋಮತಿ ಚಕ್ರವನ್ನು ಇಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ. ಅಲ್ಲದೆ ಇದನ್ನು ಲಾಕೆಟ್ ಆಗಿ ಧರಿಸುವುದರಿಂದ ನರಗಳ ದೌರ್ಬಲ್ಯ ಕಡಿಮೆಯಾಗುತ್ತದೆ. ಬಹಳ ದಿನಗಳಿಂದ ನಿಮ್ಮನ್ನು ಕಾಡುವ ಆರೋಗ್ಯ ಸಮಸ್ಯೆ ಕೂಡಾ ಮಾಯವಾಗುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಎರಡು ಗೋಮತಿ ಚಕ್ರಗಳನ್ನು ಬೀರುವಿನಲ್ಲಿ ಅಥವಾ ಹಣವನ್ನು ಇಡುವ ಸ್ಥಳದಲ್ಲಿ ಇರಿಸಿದರೆ, ಸಂಪತ್ತು ಹೆಚ್ಚಾಗುತ್ತದೆ. ಹಣದ ಕೊರತೆ ನಿಮ್ಮನ್ನು ಕಾಡುವುದಿಲ್ಲ. ಅಲ್ಲದೆ ಇವುಗಳನ್ನು ಹಾಸಿಗೆಯ ಕೆಳಗೆ ಅಥವಾ ದಿಂಬಿನ ಕೆಳಗೆ ಇಟ್ಟರೆ ಪತಿ-ಪತ್ನಿಯರ ನಡುವೆ ಸಾಮರಸ್ಯ ಏರ್ಪಡುತ್ತದೆ. ಅವರು ಯಾವುದೇ ಜಗಳವಿಲ್ಲದೆ ಪ್ರೀತಿಯಿಂದ ಇರುತ್ತಾರೆ ಎಂದು ನಂಬಲಾಗಿದೆ.

ಗೋಮತಿ ಚಕ್ರವನ್ನು ಕಂಕಣವಾಗಿ ಧರಿಸುವುದರಿಂದ ನಿಮ್ಮ ಸಂವಹನ ಕೌಶಲ್ಯವು ಸುಧಾರಿಸುತ್ತದೆ. ಇತರರನ್ನು ಸುಲಭವಾಗಿ ಆಕರ್ಷಿಸಬಹುದು. ಬೆಳೆಯ ಇಳುವರಿ ಕಡಿಮೆ ಆಗಿದ್ದರೆ ಗೋಮತಿ ಚಕ್ರಗಳನ್ನು ಹೊಲದಲ್ಲಿ ಹಾಕುವುದರಿಂದ ಅಥವಾ ಅವುಗಳ ಪುಡಿಯನ್ನು ಹೊಲಕ್ಕೆ ಹಾಕುವುದರಿಂದ ಹೆಚ್ಚು ಇಳುವರಿ ದೊರೆಯುತ್ತದೆ ಎಂದು ನಂಬಲಾಗಿದೆ. ಅದೇ ರೀತಿ ಮನೆ ನಿರ್ಮಾಣ ಸಮಯದಲ್ಲಿ ಗೋಮತಿ ಚಕ್ರಗಳನ್ನು ಭೂಮಿಯಲ್ಲಿ ಹೂಳುವುದರಿಂದ ಯಾವುದೇ ಅಡೆತಡೆ ಇಲ್ಲದೆ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ. ಮನೆಯಲ್ಲಿರುವವರು ದೀರ್ಘಾಯುಷ್ಯ, ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತಾರೆ. ವಾಹನಕ್ಕೆ ಕಟ್ಟುವುದರಿಂದ ನೀವು ಯಾವುದೇ ಅಪಘಾತಗಳಲ್ಲಿದೆ ಸುರಕ್ಷಿತವಾಗಿರುತ್ತೀರಿ.

ಸಂತಾನ ಲಾಭಕ್ಕಾಗಿ ಗೋಮತಿ ಚಕ್ರ

ಮಕ್ಕಳಿಲ್ಲದವರು, ಆಗಾಗ್ಗೆ ಗರ್ಭಪಾತವಾಗುವ ಮಹಿಳೆಯರು ತಮ್ಮ ಸೊಂಟಕ್ಕೆ ಐದು ಗೋಮತಿ ಚಕ್ರಗಳನ್ನು ಕಟ್ಟಬೇಕು. ಹೀಗೆ ಮಾಡುವುದರಿಂದ ಗರ್ಭವತಿಯರಾಗಬಹುದು. ವಿದ್ಯಾರ್ಥಿಗಳು ಓದುವ ಸ್ಟಡಿ ಟೇಬಲ್ ಬಳಿ ಐದು ಗೋಮತಿ ಚಕ್ರಗಳನ್ನು ಇಡಬಹುದು. ಈ ರೀತಿ ಮಾಡುವುದರಿಂದ ಅವರ ಏಕಾಗ್ರತೆ ಹೆಚ್ಚುತ್ತದೆ ಮತ್ತು ಅಧ್ಯಯನದಲ್ಲಿ ಮೇಲುಗೈ ಸಾಧಿಸುತ್ತಾರೆ.

  • ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದವರು ಶೀಘ್ರ ಗುಣಮುಖರಾಗಲು ರೋಗಿಯ ಹಾಸಿಗೆಗೆ ಆರು ಗೋಮತಿ ಚಕ್ರಗಳನ್ನು ಕಟ್ಟಬೇಕು. ಹೀಗೆ ಮಾಡುವುದರಿಂದ ಅವರ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.
  • 7 ಗೋಮತಿ ಚಕ್ರಗಳು ಮನೆಯಲ್ಲಿದ್ದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಇತರರೊಂದಿಗೆ ನಿಮ್ಮ ಸಂಬಂಧಗಳು ಸುಧಾರಿಸುತ್ತವೆ. ದಂಪತಿಗಳ ನಡುವಿನ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ.
  • 8 ಗೋಮತಿ ಚಕ್ರಗಳು ಅಷ್ಟಲಕ್ಷ್ಮಿಯ ಮೂರ್ತರೂಪವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಒಂಬತ್ತು ಚಕ್ರಗಳನ್ನು ಇಡುವುದರಿಂದ ಆಧ್ಯಾತ್ಮಿಕ ಭಾವನೆ ಹೆಚ್ಚಾಗುತ್ತದೆ. 
  • ನೀವು ಕೆಲಸ ಮಾಡುವ ಕಚೇರಿಯಲ್ಲಿ 10 ಚಕ್ರಗಳನ್ನು ಇರಿಸಿದರೆ, ನಿಮಗೆ ಒಳ್ಳೆಯ ಹೆಸರು ಬರುತ್ತದೆ. ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸುವಿರಿ.
  • ಮನೆ ಕಟ್ಟುವಾಗ 11 ಗೋಮತಿ ಚಕ್ರಗಳನ್ನು ತಳಪಾಯದಲ್ಲಿ ಇಡುವುದರಿಂದ ವಾಸ್ತು ದೋಷಗಳು ಇರುವುದಿಲ್ಲ.
  • ಶಿವನ ದೇವಸ್ಥಾನಕ್ಕೆ 13 ಗೋಮತಿ ಚಕ್ರಗಳನ್ನು ದಾನ ಮಾಡಿದರೆ ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ.
  • 27 ಗೋಮತಿ ಚಕ್ರಗಳನ್ನು ವ್ಯಾಪಾರ ಕಚೇರಿಯ ಹೊಸ್ತಿಲಲ್ಲಿ ಕಟ್ಟಬೇಕು ಆ ಬಾಗಿಲಿನ ಮೂಲಕ ಸಂಚರಿಸಿ ವ್ಯಾಪಾರ ಮಾಡುವವರು ಹೆಚ್ಚಿನ ಲಾಭ ಪಡೆಯುತ್ತಾರೆ.
  • ಕಾಳಸರ್ಪ ದೋಷ, ನಾಗದೋಷ ಇತ್ಯಾದಿ ಇರುವವರು ಗೋಮತಿ ಚಕ್ರಗಳನ್ನು ಧರಿಸಬಹುದು ಅಥವಾ ಪೂಜಿಸಬಹುದು. ಇವುಗಳನ್ನು ದಾನ ಮಾಡುವುದರಿಂದ ಒಳ್ಳೆಯ ಫಲ ಸಿಗುತ್ತದೆ. ಇದನ್ನು ಕುತ್ತಿಗೆಗೆ ಲಾಕೆಟ್ ಆಗಿಯೂ ಧರಿಸಬಹುದು.

ಇದನ್ನೂ ಓದಿ: ದಿಂಬು, ಆಭರಣ ಸೇರಿದಂತೆ ನೀವು ಬಳಸುವ ಈ ವಸ್ತುಗಳನ್ನು ಮತ್ತೊಬ್ಬರಿಗೆ ಕೊಟ್ಟು ಅದೃಷ್ಟ ಕಳೆದುಕೊಳ್ಳದಿರಿ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.