Aja Ekadashi: ಅಜ ಏಕಾದಶಿ ದಿನಾಂಕ, ಪಾರಣ ಸಮಯ, ಶುಭ ಮುಹೂರ್ತ: ಈ ದಿನ ಉಪವಾಸ ಮಾಡಿದರೆ ಸಕಲ ಪಾಪಗಳಿಂದ ಸಿಗುತ್ತದೆ ಮುಕ್ತಿ-rituals hindu festivals when is aja ekadashi know the date vrat paran and shubh muhurath arc ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Aja Ekadashi: ಅಜ ಏಕಾದಶಿ ದಿನಾಂಕ, ಪಾರಣ ಸಮಯ, ಶುಭ ಮುಹೂರ್ತ: ಈ ದಿನ ಉಪವಾಸ ಮಾಡಿದರೆ ಸಕಲ ಪಾಪಗಳಿಂದ ಸಿಗುತ್ತದೆ ಮುಕ್ತಿ

Aja Ekadashi: ಅಜ ಏಕಾದಶಿ ದಿನಾಂಕ, ಪಾರಣ ಸಮಯ, ಶುಭ ಮುಹೂರ್ತ: ಈ ದಿನ ಉಪವಾಸ ಮಾಡಿದರೆ ಸಕಲ ಪಾಪಗಳಿಂದ ಸಿಗುತ್ತದೆ ಮುಕ್ತಿ

Aja Ekadashi Vrata: ಹಿಂದೂ ಧರ್ಮದಲ್ಲಿ ಏಕಾದಶಿ ವ್ರತವು ಮಹಾವಿಷ್ಣುವಿಗೆ ಸಮರ್ಪಿತವಾದ ವ್ರತವಾಗಿದೆ. ಏಕಾದಶಿ ದಿನದಂದು ಉಪವಾಸ ಮಾಡುವುದರಿಂದ ಪಾಪಗಳಿಂದ ಮುಕ್ತಿ ಸಿಗುತ್ತದೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಈ ವರ್ಷದ ಅಜ ಏಕಾದಶಿಯನ್ನು ಯಾವಾಗ ಆಚರಿಸಲಾಗುತ್ತಿದೆ? ಮತ್ತು ವ್ರತಾಚರಣೆಯ ಸಮಯ ತಿಳಿಯೋಣ.

ಅಜ ಏಕಾದಶಿ ವ್ರತ
ಅಜ ಏಕಾದಶಿ ವ್ರತ (HT File Photo)

ಹಿಂದೂ ಧರ್ಮದಲ್ಲಿ ಏಕಾದಶಿ ವ್ರತಕ್ಕೆ ಬಹಳ ಮಹತ್ವವನ್ನು ನೀಡಲಾಗಿದೆ. ಒಂದು ವರ್ಷದಲ್ಲಿ ಒಟ್ಟು 24 ಏಕಾದಶಿ ವ್ರತಗಳನ್ನು ಆಚರಿಸಲಾಗುತ್ತದೆ. ಅಂದರೆ ಪ್ರತಿ ತಿಂಗಳು ಎರಡು ಏಕಾದಶಿಗಳು ಬರುತ್ತವೆ. ಶಾಸ್ತ್ರಗಳಲ್ಲಿ ಪ್ರತಿ ಮಾಸದಲ್ಲಿ ಬರುವ ಏಕಾದಶಿಗೆ ಇರುವ ಮಹತ್ವವನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಏಕಾದಶಿ ವ್ರತವು ಮಹಾವಿಷ್ಣುವಿಗೆ ಸಮರ್ಪಿತವಾದ ವ್ರತವಾಗಿದೆ. ಏಕಾದಶಿ ವ್ರತಾಚರಣೆಯ ಹಿಂದಿರುವ ಉದ್ದೇಶವೇನೆಂದರೆ ಮಹಾವಿಷ್ಣುವಿನ ಸಾನಿಧ್ಯ ಪಡೆಯುವುದಾಗಿದೆ. ಶ್ರಾವಣ ಮಾಸದ ಕೃಷ್ಣ ಪಕ್ಷದ ಏಕಾದಶಿಗೆ ವಿಶೇಷ ಮಹತ್ವವಿದೆ. ಶ್ರಾವಣ ಮಾಸದ ಈ ಏಕಾದಶಿಯನ್ನು ಅಜ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಅಜ ಏಕಾದಶಿಯ ಆಚರಣೆಯಿಂದ ಎಲ್ಲಾ ಪಾಪಗಳಿಂದ ವಿಮೋಚನೆ ಸಿಗುತ್ತದೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ಏಕಾದಶಿ ತಿಥಿ ಯಾವಾಗ?

ಏಕಾದಶಿ ತಿಥಿಯು ಆಗಸ್ಟ್‌ 29 ರಂದು ಬೆಳಿಗ್ಗೆ 01.19 ಕ್ಕೆ ಪ್ರಾರಂಭವಾಗಿ ಆಗಸ್ಟ್‌ 30 ರ ಬೆಳಿಗ್ಗೆ 01.37ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಅಜ ಏಕಾದಶಿ ವ್ರತವನ್ನು ಆಗಸ್ಟ್‌ 29 ರಂದು ಮಾಡಬೇಕು.

ಅಜ ಏಕಾದಶಿ ವ್ರತ ಪಾರಣ ಸಮಯ

ಅಜ ಏಕಾದಶಿ ವ್ರತ ಪಾರಣವನ್ನು ಆಗಸ್ಟ್‌ 30 ರಂದು ಆಚರಿಸಲಾಗುತ್ತದೆ. ವ್ರತ ಪಾರಣ ಸಮಯವು ಬೆಳಿಗ್ಗೆ 07.49 ರಿಂದ 08.31 ರವರೆಗೆ ಇರಲಿದೆ. ಪಾರಣ ತಿಥಿಯ ದಿನ ಹರಿ ವಾಸರ ಸಮಯವು ಬೆಳಿಗ್ಗೆ 7.49ಕ್ಕೆ ಮುಕ್ತಾಯಗೊಳ್ಳಲಿದೆ.

ಹರಿ ವಾಸರದಲ್ಲಿ ಏಕಾದಶಿ ವ್ರತವನ್ನು ಮುಗಿಸಬೇಡಿ

ಹರಿ ವಾಸರ ಸಮಯದಲ್ಲಿ ಏಕಾದಶಿ ಉಪವಾಸವನ್ನು ಮುಕ್ತಾಯಗೊಳಿಸಬಾರದು. ಏಕಾದಶಿ ಉಪವಾಸವನ್ನು ಆಚರಿಸುವ ಭಕ್ತರು ಉಪವಾಸವನ್ನು ಮುಗಿಸುವ ಮೊದಲು ಹರಿ ವಾಸರ ಮುಗಿಯುವವರೆಗೆ ಕಾಯಬೇಕು. ಹರಿ ವಾಸರ ಎಂದರೆ ದ್ವಾದಶಿ ತಿಥಿಯ ಪ್ರಾರಂಭದ ಮೊದಲ ಕಾಲುಭಾಗದ ಅವಧಿ. ಹರಿ ವಾಸರ ಸಮಯವು ಪಾರಣ ತಿಥಿಯಂದು ಬೆಳಿಗ್ಗೆ 07.49ಕ್ಕೆ ಕೊನೆಗೊಳ್ಳುತ್ತದೆ. ದ್ವಾದಶಿ ತಿಥಿ ಮುಗಿಯುವ ಮೊದಲು ಏಕಾದಶಿ ಉಪವಾಸವನ್ನು ಆಚರಿಸಬೇಕು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಸೂರ್ಯೋದಯಕ್ಕೆ ಮುನ್ನ ದ್ವಾದಶಿ ತಿಥಿ ಮುಗಿದರೆ, ಸೂರ್ಯೋದಯದ ನಂತರ ಏಕಾದಶಿ ವ್ರತ ಪಾರಣವು ಮುಗಿಯುತ್ತದೆ.

ಶುಭ ಮುಹೂರ್ತಗಳು

ಬ್ರಹ್ಮ ಮುಹೂರ್ತ - ಬೆಳಿಗ್ಗೆ 04:27 AM ರಿಂದ 05:12 AM

ಸಂಧ್ಯಾ - ಬೆಳಿಗ್ಗೆ 04:50 AM ನಿಂದ 05:57 AM

ಅಭಿಜಿತ್ ಮುಹೂರ್ತ - 11:55 AM ನಿಂದ 12:46 AM

ವಿಜಯ ಮುಹೂರ್ತ - 02:29 PM ನಿಂದ 03:20 PM

ಗೋಧೂಳಿ ಮುಹೂರ್ತ – 06.45 PM ನಿಂದ 07.07 PM

ಸಾಯಂಕಾಲದ ಮುಹೂರ್ತ – 6.20 PM ನಿಂದ 7.52 PM

ಅಮೃತ ಕಾಲ – 6.20 AM ನಿಂದ 7.59 AM

ನಿಶ್ಚಿತ ಮುಹೂರ್ತ – 11.59 PM ನಿಂದ ಆಗಸ್ಟ್‌ 30 ರ 12.43 PM

ಸರ್ವಾರ್ಥ ಸಿದ್ಧಿ ಯೋಗ - 04:39 PM ರಿಂದ ಆಗಸ್ಟ್‌ 30 ರ 05:57 PM ವರೆಗೆ ಇರಲಿದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.