ಧನು ರಾಶಿ ಭವಿಷ್ಯ ಆಗಸ್ಟ್ 13: ಆರ್ಥಿಕವಾಗಿ ಇಂದು ಆಶಾದಾಯಕ ದಿನ, ಕಠಿಣ ಪರಿಶ್ರಮವು ಫಲ ನೀಡುವ ಸಮಯ ಬಂದಿದೆ
Sagittarius Daily Horoscope agust 13, 2024: ರಾಶಿಚಕ್ರದ 9 ನೇ ಚಿಹ್ನೆ ಧನು ರಾಶಿಯದ್ದು. ಜನನದ ಸಮಯದಲ್ಲಿ ಚಂದ್ರನು ಧನು ರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆಯೇ ಧನು ರಾಶಿ. ಆಗಸ್ಟ್ 13 ಧನು ರಾಶಿ ಭವಿಷ್ಯದ ಪ್ರಕಾರ, ಇಂದು ಹಣಕಾಸಿನ ವಿಚಾರವಾಗಿ ಉತ್ತಮ ದಿನ.
ಧನು ರಾಶಿಯವರ ಇಂದಿನ (ಆಗಸ್ಟ್ 13, ಮಂಗಳವಾರ) ದಿನ ಭವಿಷ್ಯದಲ್ಲಿ ನಿಮ್ಮ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಿ. ಜೀವನದಲ್ಲಿ ಹೊಸ ವೃತ್ತಿಜೀವನದ ಬೆಳವಣಿಗೆಯ ಅವಕಾಶಗಳ ಮೇಲೆ ಕಣ್ಣಿಡಿ. ನಿಮ್ಮ ಖರ್ಚುಗಳ ಮೇಲೆ ಸ್ವಲ್ಪ ಗಮನವಿರಲಿ. ಆರೋಗ್ಯವು ಸಾಮಾನ್ಯವಾಗಿರುತ್ತದೆ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ಧನು ರಾಶಿ ಪ್ರೇಮ ಜಾತಕ (Sagittarius Love Horoscope):
ನೀವು ಒಂಟಿಯಾಗಿದ್ದರೆ, ಇಂದು ನಿಮ್ಮ ಆಸಕ್ತಿಯನ್ನು ಕೆರಳಿಸುವ ಅನಿರೀಕ್ಷಿತ ಪ್ರಣಯ ನಿಮ್ಮಲ್ಲಿ ಹುಟ್ಟಬಹುದು. ಬಾಂಧವ್ಯವನ್ನು ಗಾಢವಾಗಿಸಲು ಇದು ಉತ್ತಮ ದಿನವಾಗಿದೆ. ನೀವು ಸದಾಕಾಲ ಓಪನ್ ಮೈಂಡೆಡ್ ಆಗಿರಿ ಆಗ ಮಾತ್ರ ನಿಮ್ಮ ಸಂಗಾತಿಗೂ ನಿಮ್ಮೊಡನೆ ಮಾತನಾಡಲು ಅನುಕೂಲವಾಗುತ್ತದೆ. ಇಂದು ನಿಮ್ಮಿಬ್ಬರ ಮಾತು ಕತೆ ಸರಳವಾಗಿ ಆಗುತ್ತದೆ. ಇದು ನಿಮ್ಮ ಪ್ರಯೋಜನಕ್ಕೆ ಬರುತ್ತದೆ. ನಿಮ್ಮ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸಿ. ಉತ್ತಮ ಸಮಯ ಕಳೆಯಿರಿ.
ಧನು ರಾಶಿ ವೃತ್ತಿ ಜಾತಕ (Sagittarius Professional Horoscope)
ವೃತ್ತಿಪರವಾಗಿ, ಇಂದು ಹೊಸ ಅವಕಾಶ ಮತ್ತು ಬೆಳವಣಿಗೆಯ ದಿನವಾಗಿದೆ. ನಿಮ್ಮ ಹೊಸ ಆಲೋಚನೆಗಳು ಮತ್ತು ಉತ್ಸಾಹವು ಉನ್ನತ ಅಧಿಕಾರಿಗಳ ಕಣ್ಣನ್ನು ಸೆಳೆಯುತ್ತದೆ. ನಿಮ್ಮ ಆಲೋಚನೆಗಳಿಗೆ ಧ್ವನಿ ನೀಡಲು ಮತ್ತು ಯೋಜನೆಗಳಲ್ಲಿ ಮುಂದಾಳತ್ವ ವಹಿಸಲು ಹಿಂಜರಿಯಬೇಡಿ. ಬೆಂಬಲ ಮತ್ತು ಸಲಹೆಗಾಗಿ ಸಹೋದ್ಯೋಗಿಗಳು ಮತ್ತು ಮಾರ್ಗದರ್ಶಕರನ್ನು ಸಂಪರ್ಕಿಸಿ. ನಿಮ್ಮ ಪ್ರವೃತ್ತಿಯನ್ನು ನಂಬಿರಿ ಮತ್ತು ನಿಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿಡಿ.
ಧನು ರಾಶಿ ಆರ್ಥಿಕ ಜಾತಕ (Sagittarius Money Horoscope):
ಆರ್ಥಿಕವಾಗಿ ಇಂದು ಆಶಾದಾಯಕವಾಗಿ ಕಾಣುತ್ತಿದೆ. ಹೊಸ ಹೂಡಿಕೆಯ ಅವಕಾಶವು ಸ್ವತಃ ನಿಮ್ಮನ್ನು ಪ್ರೇರೇಪಣೆ ಮಾಡುತ್ತದೆ. ನಿಮ್ಮ ಕಠಿಣ ಪರಿಶ್ರಮವು ಫಲ ನೀಡಲು ಪ್ರಾರಂಭಿಸುತ್ತಿದೆ ಮತ್ತು ಹಿಂದಿನ ಹೂಡಿಕೆಗಳ ಮೇಲೆ ನೀವು ಸ್ವಲ್ಪ ಲಾಭವನ್ನು ಕಾಣಬಹುದು. ಸ್ಥಿರತೆ ಮತ್ತು ವಿವೇಕವು ನಿಮ್ಮನ್ನು ಕಾಪಾಡುತ್ತದೆ. ಏನೇ ಮಾಡುವುದಾದರೂ ಯೋಚನೆ ಮಾಡಿ ಮಾಡಿ.
ಧನು ರಾಶಿ ಆರೋಗ್ಯ ಜಾತಕ (Sagittarius Health Horoscope):
ನೀವಿಂದು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ವ್ಯಾಯಾಮ ಮಾಡಿ ಅಥವಾ ನೃತ್ಯ ತರಗತಿಗೆ ಸೇರಿಕೊಳ್ಳಿ. ಮೈಂಡ್‌ಫುಲ್‌ನೆಸ್ ಮತ್ತು ವಿಶ್ರಾಂತಿ ಎರಡೂ ಕೂಡ ನಿಮಗೆ ಅಗತ್ಯವಿದೆ. ನಿಮ್ಮ ಮಾನಸಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ನೀವು ಸೇವಿಸುವ ಆಹಾರದ ಬಗ್ಗೆ ಗಮನವಿರಲಿ. ಹೆಚ್ಚು ನೀರು ಕುಡಿಯಿರಿ.
ಧನು ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಧನು ರಾಶಿಯ ಅಧಿಪತಿ: ಗುರು, ಧನು ರಾಶಿಯವರಿಗೆ ಶುಭ ದಿನಾಂಕಗಳು: 3, 5, 6 ಮತ್ತು 8. ಧನು ರಾಶಿಯವರಿಗೆ ಶುಭ ವಾರಗಳು: ಭಾನುವಾರ, ಬುಧವಾರ, ಶುಕ್ರವಾರ ಮತ್ತು ಗುರುವಾರ. ಧನು ರಾಶಿಯವರಿಗೆ ಶುಭ ವರ್ಣ: ನೀಲಿ, ಬಿಳಿ, ಕಿತ್ತಳೆ ಮತ್ತು ಕ್ರೀಂ. ಧನು ರಾಶಿಯವರಿಗೆ ಅಶುಭ ವರ್ಣ: ಕೆಂಪು, ಮುತ್ತು. ಧನು ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಈಶಾನ್ಯ. ಧನು ರಾಶಿಯವರಿಗೆ ಶುಭ ತಿಂಗಳು: ಆಗಸ್ಟ್ 15ರಿಂದ ಸೆಪ್ಟಂಬರ್ 14. ಧನು ರಾಶಿಯವರಿಗೆ ಶುಭ ಹರಳು: ಮಾಣಿಕ್ಯ, ಹವಳ, ಮುತ್ತು, ಕನಕ ಪುಷ್ಯರಾಗ. ಧನು ರಾಶಿಯವರಿಗೆ ಶುಭ ರಾಶಿ: ಮೀನ, ಮೇಷ ಮತ್ತು ಸಿಂಹ. ಧನು ರಾಶಿಯವರಿಗೆ ಅಶುಭ ರಾಶಿ: ಮಕರ, ಕುಂಭ, ಮಿಥುನ, ವೃಷಭ ಮತ್ತು ತುಲಾ.
ಧನು ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1) ಆದಿತ್ಯ ಹೃದಯ: ಪ್ರತಿದಿನ ಆದಿತ್ಯಹೃದಯ ಪಠಿಸುವುದರಿಂದ ಅಥವಾ ಕೇಳುವುದರಿಂದ ಹಿಡಿದ ಕೆಲಸಗಳು ಯಶಸ್ವಿಯಾಗಲಿದೆ.
2) ಈ ದಾನಗಳಿಂದ ಶುಭ ಫಲ: ಹೆಸರು ಬೇಳೆ ಮತ್ತು ಹಸಿರುಬಟ್ಟೆ ದಾನ ನೀಡುವುದರಿಂದ ಕೆಲಸ ಕಾರ್ಯಗಳಲ್ಲಿ ಜಯ ಲಭಿಸುತ್ತದೆ. ದಂಪತಿಗಳ ನಡುವೆ ಉತ್ತಮ ಸಾಮರಸ್ಯ ಏರ್ಪಡುತ್ತದೆ.
3) ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ದುರ್ಗಾಮಾತೆಯ ದೇವಾಲಯಕ್ಕೆ ಪೂಜಾಸಾಮಗ್ರಿಗಳನ್ನು ನೀಡುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಗುರುಪೂಜೆ ಮಾಡುವುದರಿಂದ ಮನದ ಆತಂಕ ದೂರವಾಗಲಿದೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು , ಕೇಸರಿ ಮತ್ತು ಬಿಳಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು,ಅಧ್ಯಾತ್ಮ,ದಿನ ಭವಿಷ್ಯ, ಗ್ರಹಗಳ ಸಂಚಾರ,ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ,ಹಬ್ಬ,ಸಂಸ್ಕೃತಿ,ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯವಿಭಾಗ ನೋಡಿ.