ಧನು ರಾಶಿ ವಾರದ ಭವಿಷ್ಯ; ಕೆಲಸದಲ್ಲಿ ಹೊಸ ಜವಾಬ್ದಾರಿ ಪಡೆಯುತ್ತೀರಿ, ಆದಾಯದ ಮೂಲಗಳಿಂದ ಹಣ ಬರುತ್ತೆ
Sagittarius Weekly Horoscope August 11 to 17, 2024: ರಾಶಿಚಕ್ರದ 9 ನೇ ಚಿಹ್ನೆ ಧನು ರಾಶಿಯದ್ದು. ಜನನದ ಸಮಯದಲ್ಲಿ ಚಂದ್ರನು ಧನು ರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆಯೇ ಧನು ರಾಶಿ. ಆಗಸ್ಟ್ 11 ರಿಂದ 17 ರವರೆಗೆ ಧನು ರಾಶಿಯವರ ವಾರದ ಭವಿಷ್ಯದ ಪ್ರಕಾರ, ಕೆಲಸದಲ್ಲಿ ಹೊಸ ಜವಾಬ್ದಾರಿ ಪಡೆಯುತ್ತೀರಿ, ಹೊಸ ಆದಾಯದ ಮೂಲಗಳಿಂದ ಹಣ ಬರುತ್ತೆ.
ಧನು ರಾಶಿಯವರ ವಾರ (ಆಗಸ್ಟ್ 11-17) ಭವಿಷ್ಯದಲ್ಲಿ ಹಣಕಾಸಿನ ವಿಷಯಗಳಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಆರೋಗ್ಯದ ಬಗ್ಗೆ ಗಮನ ಹರಿಸುವುದು ಅಷ್ಟೇ ಮುಖ್ಯವಾಗುತ್ತದೆ. ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಲು ಇದು ಉತ್ತಮ ದಿನ. ವೃತ್ತಿಪರ ಜೀವನದ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಿ. ಅಂದ ಹಾಗೆ, ಎಲ್ಲ ರಾಶಿಗಳದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ಧನು ರಾಶಿಯವರ ವಾರದ ಲವ್ ಜಾತಕ (Sagittarius Weekly Love Horoscope): ನಿಮ್ಮ ಪತ್ನಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಿ. ಅವರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ. ಇದು ಸಂಗಾತಿಯೊಂದಿಗಿನ ಸಂಬಂಧವನ್ನು ಬಲಪಡಿಸುತ್ತದೆ. ಮಾತುಕತೆ ಮೂಲಕ ಸಂಬಂಧದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ವಿವಾಹಿತರು ಕಚೇರಿಯಲ್ಲಿ ಸಹೋದ್ಯೋಗಿಯನ್ನು ಪ್ರೀತಿಗೆ ಯತ್ನಿಸುವುದು ಸರಿಯಲ್ಲ.
ಧನು ರಾಶಿಯವರ ವಾರದ ಭವಿಷ್ಯ ಆಗಸ್ಟ್ 11 ರಿಂದ 17; ಉದ್ಯೋಗ, ಆದಾಯ, ಆರೋಗ್ಯ
ಧನು ರಾಶಿಯವರ ವಾರದ ವೃತ್ತಿ ಜಾತಕ (Sagittarius Weekly Professional Horoscope): ಕೆಲಸದ ಸ್ಥಳದಲ್ಲಿ ನಿಮ್ಮ ನಿರ್ಧಾರಗಳನ್ನು ಮಹತ್ವವಾಗಿರುತ್ತವೆ. ಹೀಗಾಗಿ ಎಚ್ಚರಿಕೆಯಿಂದ ನಿರ್ಧರಿಸಿ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು ಈ ವಾರ ಉತ್ತಮ ಸಾಧನೆ ಮಾಡುತ್ತಾರೆ. ಮಾರುಕಟ್ಟೆ ಕ್ಷೇತ್ರದಲ್ಲಿರುವವರಿಗೆ ಸಂವಹನ ಮುಖ್ಯವಾಗಿರುತ್ತದೆ. ಸಾಧ್ಯವಾಷ್ಟು ಸಂವಹನವನ್ನು ಹೆಚ್ಚಿಸಿಕೊಳ್ಳಿ. ಈ ಸಮಯದಲ್ಲಿ ತಮ್ಮ ಸಂವಹನ ಕೌಶಲ್ಯಗಳ ಸಂಪೂರ್ಣ ಲಾಭವನ್ನು ಪಡೆಯಬೇಕು. ಉದ್ಯಮಿಗಳು ವ್ಯವಹಾರದ ಬೆಳವಣಿಗೆಗೆ ಹೊಸ ಅವಕಾಶಗಳಿಗೆ ಆದ್ಯತೆ ನೀಡಬೇಕು.
ಧನು ರಾಶಿಯವರ ವಾರದ ಆರ್ಥಿಕ ಜಾತಕ (Sagittarius Weekly Money Horoscope): ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಹೊಸ ಆದಾಯದ ಮೂಲಗಳಿಂದ ಹಣ ಬರುತ್ತದೆ. ವಾರದ ಕೊನೆಯ ವೇಳೆಗೆ ಹೆಚ್ಚಿನ ಹಣ ಖರ್ಚು ಮಾಡುವ ಸಾಧ್ಯತೆ ಇದೆ. ಆಸ್ತಿ ಮಾರಾಟ ಅಥವಾ ಖರೀದಿಗೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ.
ಧನು ರಾಶಿಯವರ ವಾರದ ಆರೋಗ್ಯ ಜಾತಕ (Sagittarius Weekly Health Horoscope): ಉತ್ತಮ ಆರೋಗ್ಯಕ್ಕಾಗಿ ಸರಿಯಾದ ಆಹಾರದ ಕ್ರಮವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ವ್ಯಾಯಾಮ ಮಾಡಬೇಕೆಂಬ ನಿಮ್ಮ ಯೋಚನೆ ಮತ್ತೊಂದು ವಾರ ಮುಂದಕ್ಕೆ ಹೋಗಬಹುದು. ಮಧುಮೇಹ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ಸಾಕಷ್ಟು ನೀರು ಕುಡಿಯಿರಿ. ಹೆಚ್ಚು ಹೆಚ್ಚು ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ. ಪ್ರತಿ ದಿನ ಕನಿಷ್ಠ ನಡೆಗೆಗೆ ಪ್ರಯತ್ನಿಸುತ್ತೀರಿ.
ಧನು ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಧನು ರಾಶಿಯ ಅಧಿಪತಿ: ಗುರು, ಧನು ರಾಶಿಯವರಿಗೆ ಶುಭ ದಿನಾಂಕಗಳು: 3, 5, 6 ಮತ್ತು 8. ಧನು ರಾಶಿಯವರಿಗೆ ಶುಭ ವಾರಗಳು: ಭಾನುವಾರ, ಬುಧವಾರ, ಶುಕ್ರವಾರ ಮತ್ತು ಗುರುವಾರ. ಧನು ರಾಶಿಯವರಿಗೆ ಶುಭ ವರ್ಣ: ನೀಲಿ, ಬಿಳಿ, ಕಿತ್ತಳೆ ಮತ್ತು ಕ್ರೀಂ. ಧನು ರಾಶಿಯವರಿಗೆ ಅಶುಭ ವರ್ಣ: ಕೆಂಪು, ಮುತ್ತು. ಧನು ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಈಶಾನ್ಯ. ಧನು ರಾಶಿಯವರಿಗೆ ಶುಭ ತಿಂಗಳು: ಆಗಸ್ಟ್ 15ರಿಂದ ಸೆಪ್ಟಂಬರ್ 14. ಧನು ರಾಶಿಯವರಿಗೆ ಶುಭ ಹರಳು: ಮಾಣಿಕ್ಯ, ಹವಳ, ಮುತ್ತು, ಕನಕ ಪುಷ್ಯರಾಗ. ಧನು ರಾಶಿಯವರಿಗೆ ಶುಭ ರಾಶಿ: ಮೀನ, ಮೇಷ ಮತ್ತು ಸಿಂಹ. ಧನು ರಾಶಿಯವರಿಗೆ ಅಶುಭ ರಾಶಿ: ಮಕರ, ಕುಂಭ, ಮಿಥುನ, ವೃಷಭ ಮತ್ತು ತುಲಾ.
ಧನು ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1)ಆದಿತ್ಯ ಹೃದಯ: ಪ್ರತಿದಿನ ಆದಿತ್ಯಹೃದಯ ಪಠಿಸುವುದರಿಂದ ಅಥವಾ ಕೇಳುವುದರಿಂದ ಹಿಡಿದ ಕೆಲಸಗಳು ಯಶಸ್ವಿಯಾಗಲಿದೆ.
2)ಈ ದಾನಗಳಿಂದ ಶುಭ ಫಲ: ಹೆಸರು ಬೇಳೆ ಮತ್ತು ಹಸಿರುಬಟ್ಟೆ ದಾನ ನೀಡುವುದರಿಂದ ಕೆಲಸ ಕಾರ್ಯಗಳಲ್ಲಿ ಜಯ ಲಭಿಸುತ್ತದೆ. ದಂಪತಿಗಳ ನಡುವೆ ಉತ್ತಮ ಸಾಮರಸ್ಯ ಏರ್ಪಡುತ್ತದೆ.
3)ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ದುರ್ಗಾಮಾತೆಯ ದೇವಾಲಯಕ್ಕೆ ಪೂಜಾಸಾಮಗ್ರಿಗಳನ್ನು ನೀಡುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಗುರುಪೂಜೆ ಮಾಡುವುದರಿಂದ ಮನದ ಆತಂಕ ದೂರವಾಗಲಿದೆ.
4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು , ಕೇಸರಿ ಮತ್ತು ಬಿಳಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.