ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶನಿಯ ಹಿಮ್ಮುಖ ಚಲನೆ; ಇನ್ನು 5 ತಿಂಗಳು ಮೀನ ಸೇರಿ 3 ರಾಶಿಯವರಿಗೆ ಹಣದ ಕೊರತೆ, ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಸಂಚಾರದ ಅಶುಭ ಫಲಗಳಿವು

ಶನಿಯ ಹಿಮ್ಮುಖ ಚಲನೆ; ಇನ್ನು 5 ತಿಂಗಳು ಮೀನ ಸೇರಿ 3 ರಾಶಿಯವರಿಗೆ ಹಣದ ಕೊರತೆ, ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಸಂಚಾರದ ಅಶುಭ ಫಲಗಳಿವು

ಶನಿ ಹಿಮ್ಮುಖ ಚಲನೆ (Saturn Retrograde 2024): ಇನ್ನು 5 ತಿಂಗಳು ಮೀನ ಸೇರಿ 3 ರಾಶಿಯವರಿಗೆ ಹಣದ ಕೊರತೆ ಕಾಡಲಿದೆ. ಆರೋಗ್ಯ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ ಸೇರಿ ಹಲವು ಸಂಕಷ್ಟಗಳು ಉಂಟಾಗಲಿವೆ. ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಸಂಚಾರದ ಅಶುಭ ಫಲಗಳಿವು.

ಶನಿಯ ಹಿಮ್ಮುಖ ಚಲನೆ; ಇನ್ನು 5 ತಿಂಗಳು ಮೀನ ಸೇರಿ 3 ರಾಶಿಯವರಿಗೆ ಹಣದ ಕೊರತೆ, ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಸಂಚಾರದ ಅಶುಭ ಫಲಗಳಿವು
ಶನಿಯ ಹಿಮ್ಮುಖ ಚಲನೆ; ಇನ್ನು 5 ತಿಂಗಳು ಮೀನ ಸೇರಿ 3 ರಾಶಿಯವರಿಗೆ ಹಣದ ಕೊರತೆ, ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಸಂಚಾರದ ಅಶುಭ ಫಲಗಳಿವು

ಶನಿ ಹಿಮ್ಮುಖ ಚಲನೆ (Saturn Retrograde 2024): ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆ ಶುರುವಾಗುತ್ತಿದ್ದು, ಇನ್ನು 5 ತಿಂಗಳ ಕಾಲ ಈ ಮೂರು ರಾಶಿಯವರಿಗೆ ಆರ್ಥಿಕ ಸಂಕಷ್ಟಗಳು ತಪ್ಪಿದ್ದಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚು ಸೂಕ್ತಿಯನ್ನು ಸದಾ ಸ್ಮರಿಸುತ್ತಿರುವುದು ಒಳಿತು. ಶನಿಗ್ರಹದ ಹಿಮ್ಮೆಟ್ಟುವಿಕೆ ಜೂನ್ 30 ರಿಂದ ನವೆಂಬರ್ 15ರ ತನಕ ಇರಲಿದೆ. ಶನಿಗ್ರಹದ ಹಿಮ್ಮೆಟ್ಟುವಿಕೆ ಎಂದರೆ ಶನಿಯು ವಿರುದ್ಧ ದಿಕ್ಕಿನಲ್ಲಿ ಚಲಿಸುವುದು.

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಗೆ ವಿಶೇಷ ಸ್ಥಾನವಿದೆ. ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಚಲನೆಯಲ್ಲಿರುವಾಗ, ಕೆಲವು ರಾಶಿ ಚಿಹ್ನೆಗಳ ಜನರು ತಮ್ಮ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ರಾಶಿಚಕ್ರದ ಜನರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ನಂಬಿಕೆಗಳ ಪ್ರಕಾರ, ಶನಿಯು ಅಶುಭವಾದಾಗ ವ್ಯಕ್ತಿಯ ಜೀವನದ ಮೇಲೂ ಅದು ತೀವ್ರವಾಗಿ ಪರಿಣಾಮ ಬೀರುತ್ತದೆ. ಶನಿಯ ಹಿಮ್ಮೆಟ್ಟುವಿಕೆಯಿಂದ ಯಾವ ರಾಶಿಚಕ್ರದ ಚಿಹ್ನೆಗಳ ಮೇಲೆ ಅಶುಭ ಫಲಗಳು ಉಂಟಾಗುತ್ತವೆ ಎಂಬುದನ್ನು ತಿಳಿಯೋಣ.

ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಸಂಚಾರದ ಅಶುಭ ಫಲಗಳಿವು

ಮಕರ ರಾಶಿ - ಈ ರಾಶಿಯ ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಜಾಗರೂಕರಾಗಿರಬೇಕು. ಹೊಸ ಜವಾಬ್ದಾರಿಗಳು ಬರಲಿವೆ. ಹಣಕಾಸಿನ ಪ್ರಯೋಜನಗಳು ಸಿಗಬಹುದು. ಆದರೆ ಕೆಲವು ಸಂದರ್ಭಗಳಲ್ಲಿ, ಹಣಕಾಸಿಗೆ ಸಂಬಂಧಿಸಿದ ನಿರ್ಧಾರಗಳನ್ನು ತಾತ್ಕಾಲಿಕವಾಗಿ ಮುಂದೂಡುವುದು ಉತ್ತಮ. ಶನಿಯು ಹಿಮ್ಮುಖ ಚಲನೆ ಶುರುಮಾಡಿದ ಬಳಿಕ ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಹೆಚ್ಚು ಶ್ರಮಪಡಬೇಕಾಗುತ್ತದೆ. ಕಿಬ್ಬೊಟ್ಟೆಯ ರೋಗಗಳು ಕಾಡಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ಕುಂಭ ರಾಶಿ- ಶನಿ ಹಿಮ್ಮೆಟ್ಟುವಿಕೆಯಿಂದಾಗಿ, ಕೆಲಸ ಮತ್ತು ವ್ಯವಹಾರ ಕ್ಷೇತ್ರದ ವಾತಾವರಣವು ಈ ರಾಶಿಯವರ ಮಟ್ಟಿಗೆ ಕಡಿಮೆ ಅನುಕೂಲಕರವಾಗಿರುತ್ತದೆ. ಹೊಸ ಯೋಜನೆಯನ್ನು ಪ್ರಾರಂಭಿಸಬೇಡಿ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಲಿವೆ. ವಿವಾದಗಳನ್ನು ತಪ್ಪಿಸಿ. ಮಾತಿನಲ್ಲಿ ಹಿಡಿತವಿರಲಿ. ಮಾತು ಮನೆ ಕೆಡಿಸಿತು. ತೂತು ಒಲೆ ಕೆಡಿಸಿತು ಎಂಬ ಗಾದೆ ಮಾತು ಸದಾ ನೆನಪಿನಲ್ಲಿರಲಿ. ವ್ಯಾಪಾರ ಪ್ರವಾಸವನ್ನು ಯೋಜಿಸಬಹುದು. ಹವಾಮಾನದಲ್ಲಿನ ಬದಲಾವಣೆಯು ಕುಟುಂಬದ ಒಬ್ಬರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಾಹನ ಚಾಲನೆ ಮತ್ತು ಯಂತ್ರೋಪಕರಣಗಳನ್ನು ಬಳಸುವಾಗ ಜಾಗರೂಕರಾಗಿರಿ.

ಮೀನ ರಾಶಿ - ಕೆಲಸ ಮತ್ತು ವ್ಯವಹಾರದಲ್ಲಿ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಸಂದರ್ಭಗಳು ನಿಮ್ಮ ಪರವಾಗಿಲ್ಲ. ನೀವು ವಿರಳವಾಗಿ ಅದೃಷ್ಟಶಾಲಿಯಾಗುತ್ತೀರಿ. ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವುದು. ವ್ಯಾಪಾರ ಲಾಭದಾಯಕವಾಗಿದೆ. ಆದರೆ ವೆಚ್ಚವೂ ಹೆಚ್ಚು. ವೃತ್ತಿ ಮತ್ತು ವ್ಯವಹಾರದಲ್ಲಿ ಬದಲಾವಣೆಗೆ ಅವಕಾಶವಿದೆ. ನೀವು ಭಾವನಾತ್ಮಕವಾಗಿ ಕುಗ್ಗಿರಬಹುದು. ಆರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಲಿವೆ. ವಾಹನ ಚಾಲನೆ ಮತ್ತು ಯಂತ್ರೋಪಕರಣಗಳ ಬಳಕೆಯಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ.

ಗಮನಿಸಿ

ಈ ಲೇಖನದಲ್ಲಿರುವ ಮಾಹಿತಿಯನ್ನು ನಂಬಬೇಕೆ ಅಥವಾ ಬೇಡವೇ ಎಂಬುದು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ. ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿ ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ಪ್ರವಚನಗಳು / ಧರ್ಮಗಳು / ಧರ್ಮಗ್ರಂಥಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಸರಳವಾಗಿ ಹೇಳಬೇಕು ಎಂದರೆ ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" (HT ಕನ್ನಡ) ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.